ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೌನವೇ ಸಂಭ್ರಮ..

-ಸುರೇಶ ತಂಗೋಡ

ಪರಿಶುದ್ಧ ಪ್ರೀತಿ

ನಿರ್ಜನ ಪ್ರದೇಶದಲ್ಲಿ ನಿಂತು
ನಿನ್ನ ಹೆಸರು ಕೂಗುವೆ
ಜನಜಂಗುಳಿಯೊಳಗಿನ
ನಿನ್ನ ಮನಕ್ಕೆ
ಏನೋ ಹೇಳೊದಿದೆ.

ನಾನು ಮೊಬೈಲ್ ನಲ್ಲಿ
ಗಂಟಗಟ್ಟಲೆ ಚಾರ್ಟ್ ಮಾಡುವವನಲ್ಲ
ಕಾಲ್ ಮಾಡಿ ಕಾಡುವವನು ಅಲ್ಲ
ಗಿಡ ಮರ ಸುತ್ತುವ ಗೋಜಿಗೆ
ನಾವು ಹೋಗೆ ಇಲ್ಲ

ಮುಖಾಮುಖಿಯಾದಾಗ
ಮೌನವೇ ಸಂಭ್ರಮ
ಕಣ್ಣೊಳಗಿನ ಸನ್ನೆಯೇ ಮಾತು
ಸಮುದ್ರದೊಡನೆಯ ಅಲೆಯ ಪ್ರೀತಿ
ಮೊಗ್ಗು ಹೂವಾಗುವ ಪರಿ
ರೆಕ್ಕೆ ಬಿಚ್ಚಿ ಹಾರುವ ಪಕ್ಷಿಯ ಗರಿ.

ನಿನಗೆ ಎಂದು ಐ ಲವ್ ಯೂ ಹೇಳಿಲ್ಲ
ಹೇಳುವುದೂ ಇಲ್ಲ
ಕಾರಣ
ನನ್ನದೂ ಫಾರೆನ್ ಲವ್ ಯೇ?…
ಪಕ್ಕಾ ದೇಶೀಯ ತಳಿಯ ರೀತಿ
ಅಪ್ಪಟ ಪರಿಶುದ್ಧ ಪ್ರೀತಿ.

‍ಲೇಖಕರು Admin

18 December, 2025

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading