ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೌಢ್ಯದ ವಿರೋಧಿ ಕಾನೂನು- ನಿಮ್ಮ ಸಲಹೆ ಕೊಡಿ

​ಗೆಳೆಯರೆ
ರಾಷ್ಟ್ರೀಯ ಕಾನೂನು ಶಾಲೆಯ ‘ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ ‘ ಮೂಢನಂಬಿಕೆ ವಿರೋಧಿ ಕಾನೂನನ್ನು ರಚಿಸಲು ಬೇಕಾದ ಒಂದು ಪರಿಕಲ್ಪನಾ ಟಿಪ್ಪಣಿಯನ್ನು ತಯಾರಿಸಿದೆ. ಇದನ್ನು ಆಧಾರವಾಗಿ ಇಟ್ಟುಕೊಂಡು ತಜ್ಞರು ಕಾನೂನು ರಚಿಸುವುದಕ್ಕೆ ಬೇಕಾದ ಕರಡನ್ನು ತಯಾರಿಸಿ ಸರ್ಕಾರದ ಅವಗಾಹನೆಗೆ ಕಳುಹಿಸಲಾಗುವುದು.
ಈ ಪರಿಕಲ್ಪನಾತ್ಮಕ ಟಿಪ್ಪಣಿಯನ್ನು ​ಈಗ ತಮ್ಮ ಅವಗಾಹನೆಗಾಗಿ ಕಳ್ಹುಸುತ್ತಿದ್ದೇವೆ. ಇದರ ಬಗ್ಗೆ ತಮ್ಮ ಸಲಹೆ-ಸೂಚನೆ , ವಿಮರ್ಶೆ ಗಳನ್ನು ಅಕ್ಟೋಬರ್ ೧೧ರ ಒಳಗೆ ನಮಗೆ ಕಳುಹಿಸಬೇಕಾಗಿ ಕೋರಿಕೆ.
ಇಂತಿ
ತಮ್ಮ ವಿಶ್ವಾಸಿಗಳಾದ
ಎಸ್. ಜಾಫೆಟ್
ವಿ. ಎಸ್. ಶ್ರೀಧರ

ಮೌಢ್ಯದ ವಿರೋಧಿ ಕಾನೂನು ರಚನೆ – ಒಂದು ಉಪಕ್ರಮ

ನಮ್ಮ ಸಮಾಜವನ್ನು ಕಾಡುತ್ತಿರುವ ಮೂಢನಂಬಿಕೆಗಳು, ಕಂದಾಚಾರಗಳು ಹಾಗೂ ಅವುಗಳ ಕಾರಣದಿಂದಾಗಿ ಅತ್ಯಂತ ಅಸಹನೀಯವಾದ ಸಮಸ್ಯೆಗಳಿಗೆ ಸಿಲುಕುತ್ತಿರುವ ಜನರ ಬಗ್ಗೆ ವಿಚಾರವಾದಿಗಳು ಬಹು ಹಿಂದಿನಿಂದಲೂ ಗಂಭೀರ ಚಿಂತನೆಯಲ್ಲಿ ತೊಡಗಿದ್ದಾರೆ. ಭಾರತದ ಸಂವಿಧಾನದ 42ನೆಯ ತಿದ್ದುಪಡಿಯೂ ಸಹ ವೈಚಾರಿಕ ಚಿಂತನೆ, ಪ್ರಶ್ನಿಸುವ ಮನೋಭಾವ ಮತ್ತು ಮಾನವತಾವಾದ ಹಾಗೂ ಸುಧಾರಣೆಗಳ ಅಗತ್ಯವನ್ನು ಒತ್ತಿ ಹೇಳಿದೆ. ಜತೆಗೆ, ಆಧುನಿಕ ಕಾಲದಲ್ಲಿ ಎಲ್ಲರ ಅನುಭವಕ್ಕೂ ಬರುವ ಹಾಗೆ ವಿಜ್ಞಾನ ಕ್ಷೇತ್ರದಲ್ಲಿ ಹಿಂದೆ ಅನೂಹ್ಯವಾಗಿದ್ದ ಹಲವು ಸಾಧ್ಯತೆಗಳು ಆವಿಷ್ಕಾರಗೊಳ್ಳುತ್ತಿವೆ. ಇಷ್ಟಾದರೂ ನಮ್ಮ ಸಮಾಜ ಇನ್ನೂ ಅಂಧಶ್ರದ್ಧೆಯ ಹಿಡಿತದಿಂದ ದೂರವಾಗಿಲ್ಲ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪ್ರಖ್ಯಾತ ವಿಚಾರವಾದಿ ಡಾ|| ನರೇಂದ್ರ ದಭೋಲ್ಕರ್ ಅವರ ಚಳುವಳಿ ಅರ್ಥಪೂರ್ಣವಾಗಿತ್ತು. 2013ರ ಆಗಸ್ಟ್ 22ರಂದು ನಡೆದ ಅವರ ಕೊಲೆ ದೇಶವನ್ನೇ ಬೆಚ್ಚಿಬೀಳಿಸಿತು. ಅದಕ್ಕೆ ತಕ್ಷಣದ ಪ್ರತಿಕ್ರಿಯೆಯೆಂಬಂತೆ ಮಹಾರಾಷ್ಟ್ರದ ಸಕರ್ಾರ ಅಂಧ ಶ್ರದ್ಧೆಯನ್ನು ನಿಷೇಧಿಸುವ ಶಾಸನವೊಂದನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಿತು. ಇಂಥದೇ ಪ್ರಯತ್ನವನ್ನು ಕನರ್ಾಟಕ ಸಕರ್ಾರವೂ ಕೈಗೆತ್ತಿಕೊಳ್ಳಬೇಕೆಂದು ಎಲ್ಲ ಪ್ರಗತಿಪರರು ಒತ್ತಾಯಿಸುತ್ತಿರುವುದರಿಂದ ನಮ್ಮ ರಾಜ್ಯದ ಸಕರ್ಾರವೂ ಸಹ ಈ ದಿಕ್ಕಿನಲ್ಲಿ ಯೋಚಿಸುತ್ತಿದೆ ಮತ್ತು ಆ ರೀತಿಯ ಕಾನೂನನ್ನು ಜಾರಿಗೊಳಿಸುವ ತನ್ನ ಬದ್ಧತೆಯನ್ನು ವ್ಯಕ್ತಪಡಿಸಿದೆ.
ಆದರೆ, ನೇರವಾಗಿ ಜನರ ಬದುಕಿಗೆ ಮತ್ತು ನಂಬಿಕೆಗಳಿಗೆ ಸಂಬಂಧಪಟ್ಟ ವಿಷಯ ಇದಾದ್ದರಿಂದ, ಈ ಸಂದರ್ಭದಲ್ಲಿ ತುಂಬ ಯೋಚಿಸಿ, ವ್ಯಾಪಕವಾಗಿ ಚಚರ್ಿಸಿ ಬಹಳ ಜಾಗರೂಕತೆಯಿಂದ ಮುಂದಿನ ಹೆಜ್ಜೆಗಳನ್ನಿಡಬೇಕಾಗಿದೆ. ಹಾಗಾಗಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ‘ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ’ದ ಆಶ್ರಯದಲ್ಲಿ ಇಂಥ ಪ್ರಯತ್ನವೊಂದು ಆರಂಭವಾಗಿದೆ. ರಾಜ್ಯ ಸಕರ್ಾರಕ್ಕೆ ಈ ಪ್ರಯತ್ನದ ಬಗ್ಗೆ ಅರಿವಿದೆ. ಕಾನೂನು ಇಲಾಖೆಯು ಈ ಉಪಕ್ರಮದಿಂದ ಹೊರಹೊಮ್ಮುವ ನಿರ್ಣಯಗಳ ಬಗ್ಗೆ ಆಸಕ್ತಿಯನ್ನು ತಳೆದಿದೆ. ಈ ಉಪಕ್ರಮದ ಮೊದಲಿನ ಹೆಜ್ಜೆಯಾಗಿ ಒಂದು ಸಮಿತಿ ರಚನೆಗೊಂಡಿದ್ದು ಸಾಹಿತಿಗಳು, ಚಿಂತಕರು, ಮಾನವ ಹಕ್ಕು ಕಾರ್ಯಕರ್ತರು, ವಿಚಾರವಾದಿಗಳು ಹೀಗೆ ಸಮಾಜದ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುವವರು ಅದರ ಸದಸ್ಯರಾಗಿದ್ದಾರೆ. ಈಗಾಗಲೇ ಕೆಲವು ಸುತ್ತುಗಳ ಚಚರ್ೆಗಳು ನಡೆದಿದ್ದು, ಅಂಧ ಶ್ರದ್ಧೆಯ ವಿರೋಧಿ ಕಾನೂನಿನ ಅವಶ್ಯತೆಯನ್ನು ಆ ಕಾನೂನಿನ ರೂಪುರೇಷೆಗಳನ್ನು ಪತ್ರಿಕಾ ಮಾಧ್ಯಮದ ಮೂಲಕ ವಿವರಿಸಿ, ಅದರ ಬಗ್ಗೆ ಸಮಾಜದಲ್ಲಿ ವ್ಯಾಪಕವಾಗಿ ಚಚರ್ೆ ನಡೆದು, ನಂತರವಷ್ಟೇ ಒಂದು ಕಾನೂನು ರಚನೆಯಾಗಬೇಕೆಂಬುದು ಈ ಸಮಿತಿಯ ಅಭಿಪ್ರಾಯ.
‘ವಿಜಯ ಕನರ್ಾಟಕ’ವು ಈ ಪ್ರಯತ್ನದಲ್ಲಿ ತನ್ನ ಪಾಲಿನ ಹೊಣೆಯನ್ನೂ ನಿರ್ವಹಿಸಲು ಸಜ್ಜಾಗಿದೆ. ಸಮಿತಿಯ ಎರಡೂ ಸಭೆಗಳ ಚಚರ್ೆಯನ್ನು ಅದು ಪ್ರಕಟಿಸಿದೆ ಹಾಗೂ ಕರಡು ಪರಿಕಲ್ಪನಾತ್ಮಕ ಟಿಪ್ಪಣಿಯನ್ನು ಪ್ರಕಟಿಸಲು ಮುಂದೆ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಕೆಳಗಿನ ಹಲವು ಅಂಶಗಳನ್ನು ನಿಮ್ಮ ಗಮನಕ್ಕೆ ತರುತ್ತಾ, ಮುಂದಿನ ದಿನಗಳಲ್ಲಿ ಅವುಗಳಿಗೆ ಸಂಬಂಧಪಟ್ಟಂತೆ ಕನರ್ಾಟಕದ ಜನತೆಯ ಪ್ರತಿಕ್ರಿಯೆಯನ್ನೂ ನಿರೀಕ್ಷಿಸಲಾಗಿದೆ.

ಭಾರತದ ಸಂವಿಧಾನವು ನಮ್ಮ ದೇಶದಲ್ಲಿ ಪ್ರಜಾ ತಾಂತ್ರಿಕ, ಧರ್ಮನಿರಪೇಕ್ಷ, ಸಮಾಜವಾದಿ ವ್ಯವಸ್ಥಯೊಂದು ಅಸ್ತಿತ್ವದಲ್ಲಿರಬೇಕೆಂಬ ಆಕಾಂಕ್ಷೆ ಹೊಂದಿದ್ದು, ಅಂಥ ಆಶಯಗಳಿಗೆ ಪೂರಕವಾಗುವಂಥ ಹಲವು ಮಾರ್ಗದಶರ್ಿ ಸೂತ್ರಗಳನ್ನು ವಿಧಿಗಳನ್ನು ಒಳಗೊಂಡಿದೆ. ನಮ್ಮ ದೇಶಕ್ಕೆ ಬಹುದೀರ್ಘ ವೈಚಾರಿಕ ಪರಂಪರೆ ಇದ್ದರೂ ಸಹ, ಹಲವು ಅವೈಚಾರಿಕ ಚಿಂತನೆಗಳಿಗೆ, ಆಚಾರಗಳಿಗೆೆ ತುತ್ತಾಗಿರುವ ಸಮಾಜ ನಮ್ಮದು. ಅದಕ್ಕೆ ಇಲ್ಲಿನ ಸಾಮಾಜಿಕ, ಆಥರ್ಿಕ ವ್ಯವಸ್ಥೆ, ಅಧಿಕಾರಸ್ಥರ ಸ್ವಾರ್ಥಪರತೆ ಮುಂತಾದವು ಕಾರಣವಾಗಿದ್ದು ಅವುಗಳ ವಿರುದ್ಧದ ಯಾವುದೇ ದನಿಯು ಹೆಚ್ಚು ಪರಿಣಾಮಕಾರಿಯಾಗಲು ಸಾಧ್ಯವಾಗಿಲ್ಲ. ಈ ವ್ಯವಸ್ಥೀಕೃತ ನಂಬಿಕೆಗಳು, ಆಚರಣೆಗಳಿಂದಾಗಿ ಅವುಗಳಿಗೆ ತುತ್ತಾಗಿರುವ ಜನರೂ ಸಹ ಸ್ವತಂತ್ರವಾಗಿ ವಿಚಾರ ಮಾಡುವ ಧೋರಣೆಯನ್ನೇ ತಳೆಯದೆ, ಶೋಷಣೆಯನ್ನು ಅನುಭವಿಸುತ್ತಲೇ ಬದುಕುತ್ತಿದ್ದಾರೆ. ಇಂಥ ಕಂದಾಚಾರಗಳು ಮತ್ತು ಶೋಷಣೆ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ. ವೈಚಾರಿಕತೆಯನ್ನು ಮೈಗೂಡಿಸಿಕೊಳ್ಳದ, ಸ್ಥಾಪಿತ ಹಿತಾಸಕ್ತಿಗಳನ್ನು ಪ್ರಶ್ನಿಸದ ಎಲ್ಲ ಧರ್ಮದವರೂ ಈ ವ್ಯವಸ್ಥೆಯಲ್ಲಿ ಬಲಿಪಶುಗಳಾಗುತ್ತಿದ್ದಾರೆ. ದೇಶವನ್ನು ಪ್ರಗತಿಯೆಡೆಗೆ ನಡೆಸಬೇಕಾದ ಕರ್ತವ್ಯವನ್ನು ಒಪ್ಪಿರುವ ರಾಜ್ಯವು, ಈ ದಿಕ್ಕಿನಲ್ಲಿ ಚಿಂತನೆನಡೆಸಿ, ಪ್ರಗತಿಗೆ ಧಕ್ಕೆ ತರುವ ಎಲ್ಲ ಶಕ್ತಿಗಳನ್ನು ನಿರೋಧಿಸುವ ಮಾರ್ಗಗಳನ್ನು ಹುಡುಕಬೇಕಿದೆ. ಈಗ ಯೋಚನೆ ಮಾಡಲಾಗುತ್ತಿರುವ ಮೂಢನಂಬಿಕೆ, ಆಚಾರಣೆಗಳ ವಿರೋಧಿ ಕಾನೂನು ಅಂಥ ಪ್ರಯತ್ನಗಳಲ್ಲೊಂದು.
ಸಂವಿಧಾನದ ವಿಧಿ 51ಎ(ಹೆಚ್)ನಲ್ಲಿ ವೈಚಾರಿಕ ಮನೋಭಾವ, ಧರ್ಮನಿರಪೇಕ್ಷತೆ, ಮಾನವತಾವಾದ ಮತ್ತು ಪ್ರಶ್ನಿಸುವ ಗುಣ ಹಾಗೂ ಸುಧಾರಣಾ ಮನೋಭಾವಗಳನ್ನು ಮೂಲಭೂತ ಕರ್ತವ್ಯಗಳಾಗಿ ಗುರುತಿಸಲಾಗಿದೆ. ಇಂಥ ವ್ಯವಸ್ಥೆಯ ನಿಮರ್ಾಣಕ್ಕೆ ಪೂರಕವಾದ ವಾತಾವರಣವನ್ನು ಕಲ್ಪಿಸುವುದು ಮತ್ತು ಈ ಕರ್ತವ್ಯ ನಿರ್ವಹಣೆಯಲ್ಲಿ ಸಮಸ್ಯೆಗಳನ್ನೆದುರಿಸುವ ವ್ಯಕ್ತಿಗಳ ರಕ್ಷಣೆಗೆ ನಿಲ್ಲುವುದು ರಾಜ್ಯದ ಹೊಣೆ. ಆ ದಿಕ್ಕಿನಲ್ಲಿ ಏನೂ ಪ್ರಯತ್ನವನ್ನೂ ಮಾಡದೆ, ಕೇವಲ ಹೇಳಿಕೆಗಳನ್ನು ನೀಡಿದರೆ ಅದು ಆಶಯಗಳ ಭಾವುಕ ಅಭಿವ್ಯಕ್ತಿ ಮಾತ್ರವಾಗಿರುತ್ತದೆ.
ಮೌಢ್ಯವು ಕೇವಲ ಅನಕ್ಷರಸ್ಥರಲ್ಲಿ ಮಾತ್ರವಲ್ಲದೆ, ಅಕ್ಷರಸ್ಥರಲ್ಲಿ, ಸುಶಿಕ್ಷಿತರಲ್ಲಿಯೂ ಮನೆ ಮಾಡಿರುವುದು ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಮೂಲಕ, ಅದರಲ್ಲಿಯೂ ಖಾಸಗಿ ದೂರದರ್ಶನ ವಾಹಿನಿಗಳ ಮೂಲಕ, ಸ್ಪಷ್ಟವಾಗುತ್ತಿದೆ. ಸುಶಿಕ್ಷಿತರೆನಿಸಿಕೊಂಡವರೇ ಈ ಮೌಢ್ಯಕ್ಕೆ ದಾಸರಾಗಿರುವಾಗ, ಅಂಥವರನ್ನು ಮಾದರಿಯಾಗಿ ಸ್ವೀಕರಿಸುವ ಅನಕ್ಷಸ್ಥರನ್ನೂ, ಅನನುಭವಿಗಳನ್ನು ತಪ್ಪು ಹಿಡಿಯುವ ಹಾಗಿಲ್ಲ. ಆದರೆ ಅದೇ ಸಮಯದಲ್ಲಿ ಈ ಅಂಧ ಶ್ರದ್ಧೆ ಮತ್ತು ಅಂಧಾನುಕರಣೆಗಳ ದುಷ್ಪರಿಣಾಮಗಳನ್ನು ಕಂಡು ಸುಮ್ಮನಿರುವ ಹಾಗೂ ಇಲ್ಲ.
ವೈಚಾರಿಕ ಮನೋಭಾವವೆಂದರೆ ಬದುಕಿಗೆ ಸಂಬಂಧಪಟ್ಟ, ವಿಷಯವನ್ನು ಕಾರ್ಯಕಾರಣಗಳ ತಳಹದಿಯ ಮೇಲೆ ವಿಶ್ಲೇಷಿಸಿ, ಅಥರ್ೈಸಿಕೊಂಡು ಅಲ್ಲಿ ಉಂಟಾಗುವ ಸಮಸ್ಯೆಗಳಿಗೆ ನಮ್ಮಲ್ಲಿ, ಅಥವಾ, ನಮ್ಮ ವ್ಯವಸ್ಥೆಯಲ್ಲಿ ಪರಿಹಾರಗಳನ್ನು ಹುಡುಕುವುದು. ಮಾನವತಾವಾದವು ಮನುಷ್ಯರು ಎದುರಿಸುವ ಸಮಸ್ಯೆಗಳನ್ನು ಧಾಮರ್ಿಕ ತಳಹದಿಯಲ್ಲಿ ಅಲ್ಲದೆ ವಿಚಾರದ ಆಧಾರದಲ್ಲಿ ಅಥರ್ೈಸುತ್ತದೆ; ಮತ್ತು ಯಾವುದೇ ಸಮಸ್ಯೆಗೆ ಪರಿಹಾರವನ್ನು ನಮ್ಮ ಬುದ್ಧಿಯ ಮೂಲಕ ಕಂಡು ಹಿಡಿಯುತ್ತದೆ. ಖ್ಯಾತ ಚಿಂತಕ ಬಟ್ರಂಡ್ ರಸಲ್ ಹೇಳುವಂತೆ, ಮಾನವತಾವಾದವೆಂದರೆ ಒಬ್ಬ ವ್ಯಕ್ತಿ ಇತರರ ಘನತೆಯನ್ನು ಗುರುತಿಸಿ, ಅವರ ಒಳಿತಿನ ಬಗ್ಗೆ ಕಾಳಜಿಯನ್ನು ಹೊಂದಿದ್ದು, ಎಲ್ಲರನ್ನೂ ಸಮಾನರಾಗಿ ಕಾಣುವ ಮನೋಧರ್ಮ. ಸಾರ್ವಜನಿಕ ಜೀವನದಲ್ಲಿ ಧರ್ಮದ ಮಧ್ಯಪ್ರವೇಶವಿಲ್ಲದಿರುವುದು, ಮತ್ತು ಮುಖ್ಯವಾಗಿ ಆಡಳಿತದಲ್ಲಿ ಯಾವುದೇ ಧರ್ಮಕ್ಕೂ ಪ್ರಾಮುಖ್ಯತೆಯನ್ನು ನೀಡದೆ ಎಲ್ಲ ಧರ್ಮಗಳಿಂದಲೂ ಸಮಾನ ಅಂತರವನ್ನು ಕಾಯ್ದುಕೊಳ್ಳುವುದು ಧರ್ಮ ನಿರಪೇಕ್ಷತೆಯ ತಿರುಳು. ಸಮಾಜದಲ್ಲಿ ಪ್ರಚಲಿತವಾಗಿರುವ ಕಂದಾಚಾರಗಳನ್ನು ಅನಿಷ್ಟ್ಟಗಳನ್ನು ಗುರುತಿಸಿ ಅವುಗಳನ್ನು ಕೊನೆಗೊಳಿಸಿ, ಎಲ್ಲರ ಸುಖ ಸಂತೋಷಗಳನ್ನು ಗುರಿಯಾಗಿಟ್ಟುಕೊಂಡು ದುಡಿಯುವುದು ಸುಧಾರಣೆ ಎನ್ನಬಹುದು.
ಸಂವಿಧಾನದ ಈ ಆಶಯಗಳನ್ನು ದೃಷ್ಟಿಯಲ್ಲಿರಿಸಿಕೊಂಡು, ನಮ್ಮ ಸಮಾಜವು ನಿಜವಾದ ಅರ್ಥದಲ್ಲಿ, ಕೇವಲ ಆಥರ್ಿಕ ವಿಚಾರಗಳಲ್ಲಿ ಮಾತ್ರವಲ್ಲದೆ, ಸವರ್ಾಂಗೀಣ ಪ್ರಗತಿಯನ್ನು ಸಾಧಿಸಲು, ಸಾಮಾಜಿಕ ಜೀವನದಲ್ಲಿ ಹಾಸುಹೊಕ್ಕಾಗಿರುವ ಮೌಢ್ಯಮೂಲದ ಅನಿಷ್ಟಗಳನ್ನು ಹೋಗಲಾಡಿಸುವುದು ಅಗತ್ಯ. ಇದಕ್ಕೆ ಅವಶ್ಯಕವಾಗಿ ಬೇಕಾಗಿರುವ ವೈಚಾರಿಕ ಜಾಗೃತಿಯನ್ನು ಪಾಶ್ಚಿಮಾತ್ಯ ಸಂಸ್ಕೃತಿಯ ಕೊಡುಗೆ ಎಂದು ಹಳಿಯುವುದುಂಟು. ಆದರೆ ಭಾರತದ ಪರಂಪರೆಯ ಭಾಗವಾಗಿರುವ ಸಾಂಖ್ಯ, ವೈಶೇಷಿಕ, ಚಾವರ್ಾಕ ದರ್ಶನಗಳು, ಬುದ್ಧ, ಬಸವಣ್ಣ ಮುಂತಾದವರ ಬೋಧನೆಗಳು, ಹಲವರು ಸಮಾಜ ಸುಧಾರಕರ ಪ್ರಯತ್ನಗಳು ನಮ್ಮ ಪರಂಪರೆಯ ಭಾಗ ಎನ್ನುವುದು ವಾಸ್ತವ. ಉದಾಹರಣೆಗೆ, ಕಾಳಿದಾಸನಂಥ ಮಹಾಕವಿಯು ‘ಕೇವಲ ಹಳೆಯದಾದ ಮಾತ್ರಕ್ಕೂ ಯಾವುದೂ ಸಾಧುವಲ್ಲ, ಅಥವಾ ಹೊಸತು ಎನ್ನುವುದರಿಂದಾಗಿ ತಿರಸ್ಕರಿಸಬಹುದಾದ್ದಲ್ಲ; ಬುದ್ಧಿವಂತರು ಎಲ್ಲವನ್ನು ಸ್ವತ: ಪರಿಶೀಲಿಸಿ ಒಪ್ಪುತ್ತಾರೆ, ಮೂಢರು ಇತರರ ಅಭಿಪ್ರಾಯಗಳನ್ನು ಆಧರಿಸುತ್ತಾರೆ’ ಎಂದು ತನ್ನ ‘ಮಾಳವಿಕಾಗ್ನಿ ಮಿತ್ರ’ದಲ್ಲಿ ಹೇಳಿರುವುದು ಪ್ರಾಜ್ಞರಿಗೆ ತಿಳಿದ ವಿಷಯ. ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದು ಅದರ ವೈಚಾರಿಕ ತಳಹದಿಯಿಂದ ಆಕಷರ್ಿತರಾಗಿ. ನೆಹರುರವರ ವೈಚಾರಿಕತೆಯ ಬಗೆಗಿನ ಒಲವು. ಕುವೆಂಪು ಮುಂತಾದವರ ಪ್ರಖರ ವೈಚಾರಿಕ ಮನೋಭಾವ ನಮ್ಮ ನಡುವೆ ಇಂಥ ಆರೋಗ್ಯಪೂರ್ಣ ಬೌದ್ಧಿಕ ವಾತಾವರಣಕ್ಕೆ ಕೊರತೆ ಇಲ್ಲವೆಂದು ತೋರಿಸುತ್ತವೆ.
ಸಮಾಜದಲ್ಲಿ ವೈಚಾರಿಕ ಮನೋಧರ್ಮವನ್ನು ಬೆಳೆಸಿ ಪೋಷಿಸುವಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದು. ಶಿಕ್ಷಣವು ಕೇವಲ ಮಾಹಿತಿಗೆ, ಪದವಿಗಳನ್ನು ಪಡೆಯುವುದಕ್ಕೆ, ಉದ್ಯೋಗವನ್ನು ಸಂಪಾದಿಸುವುದಕ್ಕೆ (ಇವೆಲ್ಲವೂ ಮುಖ್ಯವೇ) ಸೀಮಿತವಾಗಿರಬಾರದು. ವಿಷಯಗಳನ್ನು ವಸ್ತು ನಿಷ್ಠ ವಿಮಶರ್ೆಗೆ, ವಿಶ್ಲೇಷಣೆಗೆ ಗುರಿಪಡಿಸಿ ನಂತರವೇ ನಿಧರ್ಾರಗಳನ್ನು ತೆಗೆದುಕೊಳ್ಳುವ ಮನೋಧರ್ಮವನ್ನು ಬೆಳೆಸುವುದೇ ಶಿಕ್ಷಣದ ಪ್ರಮುಖ ಗುರಿಯಾಗಿರಬೇಕು. 1986ರ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ವಿಜ್ಞಾನಕ್ಕೆ, ವೈಚಾರಿಕ ಚಿಂತನೆಗೆ ಪ್ರಾಮುಖ್ಯತೆಯನ್ನು ನೀಡಲಾಗಿದ್ದು ಅಂಥ ಮನೋಧರ್ಮವನ್ನು ಜೀವನದ ಎಲ್ಲ ರಂಗಗಳಲ್ಲಿಯೂ ಅಳವಡಿಸಿಕೊಳ್ಳುವುದರ ಮೂಲಕ ಪ್ರಗತಿಯನ್ನು ಸಾಧಿಸಬೇಕೆಂದು ಘೋಷಿಸಲಾಗಿದೆ. ಆದರೆ ವೈಚಾರಿಕತೆಯು ಶಿಕ್ಷಿತರಿಗೆ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಮಾತ್ರ ಸಂಬಂಧಿಸಿರಬೇಕಾದ ವಿಷಯವಲ್ಲ. ಹಾಗೆ ನೋಡಿದರೆ, ಹಲವರು ಸುಶಿಕ್ಷಿತರೂ ಸಹ ವೈಚಾರಿಕತೆಯನ್ನು ತಮ್ಮ ವ್ಯಕ್ತಿತ್ವದ ಭಾಗವನ್ನಾಗಿಸಿ ಕೊಳ್ಳದಿರುವುದನ್ನು, ಅದನ್ನು ವಿರೋಧಿಸುವುದನ್ನು ಕಾಣುತ್ತೇವೆ. ಮಾನವನು ವಿಕಾಸಗೊಂಡ ಬಗೆಯನ್ನು ವೈಜ್ಞಾನಿಕವಾಗಿ ವಿವರಿಸಿ, ಅಥರ್ೈಸುವುದರ ಮೂಲಕ ಜಗತ್ತನ್ನು ಅರಿಯಬಹುದು ಎಂಬುದು ಸುಶಿಕ್ಷಿತರು, ಅಶಿಕ್ಷಿತರೆಲ್ಲರಿಗೂ ತಿಳಿಹೇಳಬೇಕಾಗಿದೆ.
ಸಾಮಾನ್ಯವಾಗಿ ಮೂಢನಂಬಿಕೆಯನ್ನು ‘ವಿಚಾರದ ಆಧಾರವಾಗಲಿ, ವೈಜ್ಞಾನಿಕ ತಳಹದಿಯಾಗಲಿ ಇಲ್ಲದ’ ನಂಬಿಕೆ ಎಂದು ತಿಳಿಯಲಾಗುತ್ತದೆ. ಅಂದರೆ ‘ಯಾವುದೇ ಪುರಾವೆ ಇಲ್ಲದೆಯೂ ನಂಬುವುದು, ಅಥವಾ ಒಂದು ವಿಷಯದ ವಿರುದ್ಧವಾಗಿ ಸಾಕಷ್ಟು ಪುರಾವೆಗಳಿದ್ದರೂ ಅದನ್ನು ನಂಬುವುದು. ಇಂಥ ಮನೋಧರ್ಮವು, ಈಗಾಗಲೇ ತಿಳಿಸಿರುವಂತೆ, ಯಾವುದೇ ಒಂದು ಧರ್ಮಕ್ಕೆ ಸೀಮಿತವಲ್ಲ. ಧರ್ಮ ಮತ್ತು ಧಾಮರ್ಿಕ ಆಚರಣೆಗಳು ವ್ಯಾಪಾರೀಕರಣಗೊಂಡಾಗ ಈ ರೀಯ ಧೋರಣೆಗಳು ಧಾಳಾಗಿ ಕಾಣುತ್ತವೆ. ಶಿಕ್ಷಣದ ಮೂಲಕ ಸಮಾಜದ ಎಲ್ಲ ಜನರಲ್ಲಿಯೂ ವೈಚಾರಿಕತೆಯನ್ನು ಬೆಳೆಸುವಲ್ಲಿ ಶಿಕ್ಷಣ ರಂಗವು ಸಾಕಷ್ಟು ಹೆಣಗಬೇಕಾಗಿದೆ ಮತ್ತು ಆ ದಿಕ್ಕಿನಲ್ಲಿ ಅತಿರೇಕದ ಸಂದರ್ಭಗಳಲ್ಲಿ ಕಾನೂನಿನ ಬಳಕೆಯೂ ಆಗಬಹುದು. ನಂಬಿಕೆಯ ಸ್ವಾತಂತ್ರ್ಯ, ಪರಂಪರೆ, ಸಂಸ್ಕೃತಿ ಮುಂತಾದ ಪರಿಕಲ್ಪನೆಗಳನ್ನು ಗಣನೆಗೆ ತೆಗೆದುಕೊಂಡೇ ಅವುಗಳಲ್ಲಿನ ಜನವಿರೋಧಿಯಾಗಿರುವ ಆಚರಣೆಗಳ ವಿರುದ್ಧ ಕಾನೂನನ್ನು ಸಿದ್ಧ ಪಡಿಸುವ ಅಗತ್ಯವಿದೆ. ಪ್ರಗತಿಪರವಾಗಿ ಯೋಚಿಸಿ, ಅಂಧಶ್ರದ್ಧೆಯನ್ನು ಟೀಕಿಸಿದಾಕ್ಷಣ ‘ನಮ್ಮ ಮನಸ್ಸಿಗೆ, ಭಾವನೆಗಳಿಗೆ ನೋವುಂಟು ಮಾಡಲಾಗಿದೆ’ ಎಂದು ಗುಲ್ಲೆಬ್ಬಿಸುವವರ ದೊಡ್ಡ ದಂಡೇ ನಮ್ಮ ನಡುವೆ ಇದೆ. ಆದರೆ ಭಾವನೆಗಳಿಗೆ ಧಕ್ಕೆ ಉಂಟುಮಾಡದೆ ಯಾವ ಬದಲಾವಣೆಯೂ ಯಾವ ಸಮಾಜದಲ್ಲಿಯೂ ಉಂಟಾಗಿಲ್ಲವೆನ್ನುವುದು ಚಾರಿತ್ರಿಕ ಪತ್ಯ, ಮಡೆಸ್ನಾನ, ಅಜಲು ಪದ್ಧತಿ, ಪಂಕ್ತಿಭೇದಗಳನ್ನು ವಿರೋಧಿಸಿದಾಗಲೂ ಇಂಥ ಪ್ರತಿಕ್ರಿಯೆಯೇ ಬಂದಿದ್ದನ್ನು ನೆನೆಯಬಹುದು. ಅಸ್ಪೃಶ್ಯತೆ, ದೇವದಾಸಿ ಪದ್ಧತಿ, ಬೆತ್ತಲೆಸೇವೆ, ಬಾಲ್ಯವಿವಾಹಗಳೇ ಮುಂತಾದ ಜನವಿರೋಧಿ ಆಚರಣೆಗಳನ್ನು ನಿಷೇಧಿಸುವ ಸಂದರ್ಭದಲ್ಲಿಯೂ ಕೆಲಪಟ್ಟ ಭದ್ರ ಹಿತಾಸಕ್ತಿಗಳಿಗೆ ನೋವಾಗಿಯೇ ಇರುತ್ತದೆ. ಮನುಷ್ಯನ ಘನತೆಗೆ ಧಕ್ಕೆ ತರುವ, ಆಥರ್ಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಶೋಷಣೆ ಮಾಡಲು ಸಹಕಾರಿಯಾಗುವ ಆಚರಣೆಗಳು ಮತ್ತು ಶಾಸ್ತ್ರಗಳೆಂದೂ, ಅವುಗಳಿಗೆ ವಿಜ್ಞಾನದ ತಳಹದಿ ಇದೆ ಎಂದೂ ಹೇಳಿ ಅವುಗಳ ಮೂಲಕ ಜನರನ್ನು ತಪ್ಪುದಾರಿ ಗೆಳೆಯುತ ಫಲಜ್ಯೋತಿಷ, ವಾಸ್ತು ಮುಂತಾದವುಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ ಅಗತ್ಯವಿದೆ. ಮಹಾರಾಷ್ಟ್ರದ ಮಸೂದೆಯಲ್ಲಿ ಈ ಪ್ರಯತ್ನವನ್ನು ಕಾಣಬಹುದು. ಕನರ್ಾಟಕದ ಸಂದರ್ಭದಲ್ಲಿ, ಇಲ್ಲಿನ ಅಂಧಾಚರಣೆಗಳನ್ನು ಗುರುತಿಸುವ ಕೆಲಸ ಆಗಬೇಕಿದೆ. ಬಾನಾಮತಿ, ಸಿಡಿ, ಮಕ್ಕಳ ಆರೋಗ್ಯವೃದ್ಧಿಗಾಗಿ ಚಿತ್ರಹಿಂಸೆ ನೀಡುವುದು, ಮಕ್ಕಳಾಗುತ್ತವೆಂದು ನಂಬಿಸಿ ಮಹಿಳೆಯರನ್ನು ಲೈಂಗಿಕ ಶೋಷಣೆಗೆ ಒಳಪಡಿಸುವುದು, ದೆವ್ವ, ಭೂತ ಬಿಡಿಸಲು ದೈಹಿಕ ಹಿಂಸೆ ಮುಂತಾದವು ಆಚರಣೆಯಲ್ಲಿವೆ. ಇವುಗಳಲ್ಲದೇ ಇನ್ನೂ ಹಲವು ಇಂಥ ಆಚರಣೆಗಳನ್ನು ಗುರುತಿಸಬೇಕಾಗಿದೆ.
ಇವೆಲ್ಲವನ್ನೂ ಕೂಲಂಕಷವಾಗಿ ಚಚರ್ಿಗೆ ಒಳಪಡಿಸಿ, ಸಾಮಾಜಿಕ ನ್ಯಾಯ, ನೀತಿಗಳ ದೃಷ್ಟಿಯಿಂದ ಮಾತ್ರವಲ್ಲ, ಕಾನೂನಿನ ದೃಷ್ಟಿಯಿಂದಲೂ ಸಹ ಸಮರ್ಪಕವಾದ, ಅನುಷ್ಠಾನ ಸಾಧ್ಯವಾದ ಮೌಢ್ಯತೆಯ ವಿರೋಧಿ ಕಾನೂನೊಂದನ್ನು ರಚಿಸುವ ಈ ಪ್ರಯತ್ನದಲ್ಲಿ, ಆರೋಗ್ಯಕರವಾಗಿ ಯೋಚಿಸುವವರೆಲ್ಲರೂ ಕೈಜೋಡಿಸಬೇಕೆಂದು ವಿನಂತಿಸಲಾಗುತ್ತಿದೆ. ಸಮಾಜದ ಎಲ್ಲ ವರ್ಗಗಳಿಂದ ಬರುವ ಪ್ರತಿಕ್ರಿಯೆಗಳು, ಸಲಹೆಗಳನ್ನು ಆಧರಿಸಿ ಕಾನೂನು ತಜ್ಞರ ಜತೆ ಚಚರ್ಿಸಿ ಒಂದು ಸಮಗ್ರವಾದ ಕಾನೂನನ್ನು ಜಾರಿಗೆ ತರುವುದು ಈ ಪ್ರಯತ್ನದ ಗುರಿಯಾಗಿದೆ.
ಮೇಲಿನ ಉದ್ದೇಶವನ್ನು ಹೊಂದಿರುವ, ರಾಷ್ಟ್ರೀಯ ಕಾನೂನು ಶಾಲೆಯ ಉಪಕ್ರಮದ ಭಾಗವಾಗಿ ರಚಿತಗೊಂಡಿರುವ ಸಮಿತಿಯಲ್ಲಿ ಈ ಕೆಳಕಂಡವರು ಸದಸ್ಯರಾಗಿದ್ದಾರೆ.
1)ಡಾ||ಜಿ.ರಾಮಕೃಷ್ಣ (ಅಧ್ಯಕ್ಷರು) 2) ಡಾ||ವಿ.ಎಸ್.ಶ್ರೀಧರ್ (ಸಂಚಾಲಕರು) 3) ಡಾ||ಸಿದ್ದಲಿಂಗಯ್ಯ 4)ಡಾ|| ಕೆ.ಮರುಳಸಿದ್ದಪ್ಪ 5) ಡಾ||ಸಿ.ಎಸ್.ಹನುಮಂತಪ್ಪ 6) ಡಾ||ಎಸ್.ಜಾಫೆಟ್ 7)ಡಾ||ಜಿ.ಎಸ್.ವಿಶ್ವನಾಥ್ 8) ಶ್ರೀಮತಿ ಬಿ.ಟಿ.ಲಲಿತಾನಾಯಕ್ 9) ಶ್ರೀ.ಆರ್.ನಿತಿನ್ 10)ಡಾ||ಎಂ.ಎನ್.ಕೇಶವರಾವ್ 11) ಡಾ||ವಿ.ಪಿ.ನಿರಂಜನಾರಾಧ್ಯ 12) ಶ್ರೀ.ಎ.ಎಸ್.ನಟರಾಜ್
13) ಶ್ರೀ.ನಗರಗೆರೆ ರಮೇಶ್ 14) ಶ್ರೀ ಶಿವಸುಂದರ್ 15) ಶ್ರೀ ನಗರಿ ಬಾಬಯ್ಯ
16)ಡಾ|| ಬಾಲಗುರುಮೂತರ್ಿ 17) ಸಿ.ಎಸ್.ದ್ವಾರಕಾನಾಥ್ 18)ಶ್ರೀ.ಕುಮಾರ್ ಶೃಂಗೇರಿ
19) ಶ್ರೀ ಜಿ.ಸತೀಶ್ ಕುಮಾರ್ 20) ಕುಮಾರಿ ಸಾಕ್ಷಿ
 
 

‍ಲೇಖಕರು G

4 October, 2013

9 Comments

  1. ಬಸೂ

    ನಡೆಯುತ್ತಿರುವ ಕೆಲಸದ ಬಗ್ಗೆ ಯಾವ ತಕರಾರು ಇಲ್ಲ.. ಆದರೆ ಸಮಿತಿ ? ಬೆಂಗಳೂರ ಎಂದರೆ ಕರ್ನಾಟಕ ಎಂದುಕೊಂಡಂತಿದೆ. ಜ್ಞಾನವೂ ಬರೀ ಬೆಂಗಳೂರಿನಲ್ಲೇ ಇರುವುದು ಎಂದುಕೊಂಡಿದ್ದಾರೆ ಪಾಪ

  2. ಸೀಮಾ ಹೊಸಮನೆ

    ಸಂಪ್ರದಾಯದ ಬಳುವಳಿ ಆಗಿ ಬಂದ ನಂಬಿಕೆ ಆಚರಣೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಅಲೆಯುವುದು ತರವಲ್ಲ ಅಂತ ನನ್ನ ಅಭಿಪ್ರಾಯ. ಕಾನೂನಿಗೂ ಮಿತಿ ಇರಬೇಕು. ಅದು ತನ್ನ ವ್ಯಾಪ್ತಿಯನ್ನು ಮೀರಿದರೆ ಅದರಿಂದ ಒಳಿತಿಗಿಂತ ಕೆಡುಕು ಹೆಚ್ಚಾಗುತ್ತದೆ.

  3. ish

    Point 1. ‘ವಿಜಯ ಕನರ್ಾಟಕ’ವು ಈ ಪ್ರಯತ್ನದಲ್ಲಿ ತನ್ನ ಪಾಲಿನ ಹೊಣೆಯನ್ನೂ ನಿರ್ವಹಿಸಲು ಸಜ್ಜಾಗಿದೆ. ಸಮಿತಿಯ ಎರಡೂ ಸಭೆಗಳ ಚಚರ್ೆಯನ್ನು ಅದು ಪ್ರಕಟಿಸಿದೆ ಹಾಗೂ ಕರಡು ಪರಿಕಲ್ಪನಾತ್ಮಕ ಟಿಪ್ಪಣಿಯನ್ನು ಪ್ರಕಟಿಸಲು ಮುಂದೆ ಬಂದಿದೆ. ಈ ಹಿನ್ನೆಲೆಯಲ್ಲಿ ಈ ಕೆಳಗಿನ ಹಲವು ಅಂಶಗಳನ್ನು ನಿಮ್ಮ ಗಮನಕ್ಕೆ ತರುತ್ತಾ, ಮುಂದಿನ ದಿನಗಳಲ್ಲಿ ಅವುಗಳಿಗೆ ಸಂಬಂಧಪಟ್ಟಂತೆ ಕನರ್ಾಟಕದ ಜನತೆಯ ಪ್ರತಿಕ್ರಿಯೆಯನ್ನೂ ನಿರೀಕ್ಷಿಸಲಾಗಿದೆ.
    Point 2. ಮನುಷ್ಯನ ಘನತೆಗೆ ಧಕ್ಕೆ ತರುವ, ಆಥರ್ಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಶೋಷಣೆ ಮಾಡಲು ಸಹಕಾರಿಯಾಗುವ ಆಚರಣೆಗಳು ಮತ್ತು ಶಾಸ್ತ್ರಗಳೆಂದೂ, ಅವುಗಳಿಗೆ ವಿಜ್ಞಾನದ ತಳಹದಿ ಇದೆ ಎಂದೂ ಹೇಳಿ ಅವುಗಳ ಮೂಲಕ ಜನರನ್ನು ತಪ್ಪುದಾರಿ ಗೆಳೆಯುತ ಫಲಜ್ಯೋತಿಷ, ವಾಸ್ತು ಮುಂತಾದವುಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ ಅಗತ್ಯವಿದೆ.
    Point 3. http://vijaykarnataka.indiatimes.com/astrology/10738518.cms

  4. Prashanth Bhadravathi

    ಮೌಢ್ಯಗಳನ್ನು ತಡೆಯಲು ಕಾನೂನು ಕ್ರಮಕ್ಕೆ ಮುಂದಾಗಿರುವುದು ಒಂದು ಉತ್ತಮ ಬೆಳವಣಿಗೆ.ಸಂಪ್ರದಾಯಿಗಳು ಇದನ್ನು ವಿರೋಧಿಸಲು ದಾರಿ ಮಾಡಕೊಡದೆ ಉತ್ತಮ ರೀತಿಯಲ್ಲಿ ಜಾರಿಗೊಳಿಸುವುದು ಅವಶ್ಯಕವಾಗಿದೆ.ಆದ್ದರಿಂದ ಕರಡು ಪ್ರತಿಯಲ್ಲಿ ಮೊದಲು ಮೌಢ್ಯಗಳ ಬಗ್ಗೆ ಅರಿವು ಮೂಡಿಸುವ ನಾಲ್ಕು ಸಾಲುಗಳಿರಲಿ.ಜೊತೆಗೆ ‘ಮಡೆ ಸ್ನಾನ’ವನ್ನು ತೆಗೆದುಕೊಂಡರೆ,ಅದರಲ್ಲಿನ ನಕಾರಾತ್ಮಕ ವಿಷಯಗಳ ಬಗ್ಗೆ ಮೊದಲು ತಿಳಸಿ ನಂತರ ಅದನ್ನು ನಿಷೇಧಿಸುವ ಕ್ರಮದ ಬಗ್ಗೆ ವಿವರ ಇದ್ದರೆ ಸೂಕ್ತವಾಗಿರುತ್ತದೆ.
    ಸದ್ಯಕ್ಕೆ ಕಾನೂನಿನ ಮೊರೆ ಹೋಗುವುದು ಒಳಿತಾಗಿದ್ದರೂ,ಕಾನೂನು ಕ್ರಮಕ್ಕಿಂತ ಶಿಕ್ಷಣ ಕ್ರಮ ಬದಲಾಗಬೇಕು.ಏಕೆಂದರೆ,ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಈ ಅಂಧ ಆಚರಣೆಗಳ ಬಗ್ಗೆ ಅರಿವು ಮೂಢಿಸಿದರೆ ಇದನ್ನು ಸಂಪೂರಣವಾಗಿ ತಡೆಯಬಹುದು.ವಿ.ಕ.ಪತ್ರಿಕೆಯಲ್ಲೂ ನಾನು ಇದನ್ನೇ ಪ್ರತಿಪಾದಿಸಿದ್ದೆ.

  5. samyuktha

    Olleya, sakalika alochane!

  6. ಅರುಣ್ ಜೋಳದಕೂಡ್ಲಿಗಿ

    ಬಸೂ ಅವರ ಪ್ರಶ್ನೆ ಸರಿಯಾಗಿದೆ.ಎಲ್ಲವನ್ನೂ ಬೆಂಗಳೂರಿಗರೆ ನಿರ್ಧರಿಸುವ ಬೌದ್ಧಿಕ ಯಾಜಮಾನಿಕೆಯೂ ಇದರ ಹಿಂದೆ ಕೆಲಸಮಾಡಿದೆ. 20 ಜನರ ಸಮಿತಿಯಲ್ಲಿ ನೆಪಕ್ಕೆಂಬಂತೆ ಇಬ್ಬರು ಮಹಿಳೆಯರು ಮಾತ್ರ ಇರುವುದು ಕೂಡ, ಪುರುಷ ನೆಲೆಯ ಚಿಂತನೆಯೇ ಮೌಢ್ಯವಿರೋದಿ ನಿಲುವಾಗುವ ಅಪಾಯವಿದೆ. ಈ ಬಗ್ಗೆ ಸಮಿತಿಯ ಸದಸ್ಯರು ಆಲೋಚಿಸಬೇಕಿದೆ.

  7. Anonymous

    ಆಚರಣೆಗಳ ಬಗ್ಗೆ ಯೋಚಿಸುವಾಗ ಬರೀ ಮಡೆ ಸ್ನಾನ, ಅಜಲು ಪದ್ಧತಿ, ಪಂಕ್ತಿಬೇಧ… ಬರೀ ಮೇಲ್ಜಾತಿಯ ಆಚರಣೆ ಬಗ್ಗೆ ಮಾತ್ರ ಯೋಚಿಸಬೇಡಿ. ಪ್ರಾಣಿ ಬಲಿ, ಹೆಣ್ಣು ಮಕ್ಕಳು ಬಹಿಷ್ಠೆಯರಾದಾಗ ಊರಾಚೆ ಗುಡಿಸಲು ಕಟ್ಟಿ ಕೂರಿಸುವುದು…. ಮುಂತಾದವುಗಳ ನಿಷೇಧದ ಕುರಿತೂ ಗಮನಿಸಿ. ಹೆಣ್ಣುಮಕ್ಕಳ ಮೇಲೆ ಹೇರಿರುವ ದೇವರು, ಧಮಱದ ಹೆಸರಿನ ನಂಬಿಕೆಗಳು ಮೌಢ್ಯಗಳನ್ನು ಬೇರೆಯಾಗಿಯೇ ಯೋಚಿಸುವ ಅಗತ್ಯವಿದೆ.

  8. yash

    ವಿಷಯಗಳನ್ನು ವಸ್ತು ನಿಷ್ಠ ವಿಮಶರ್ೆಗೆ, ವಿಶ್ಲೇಷಣೆಗೆ ಗುರಿಪಡಿಸಿ ನಿಧರ್ಾರಗಳನ್ನು ತೆಗೆದುಕೊಳ್ಳುವ ಮನೋಧರ್ಮವನ್ನು ಬೆಳೆಸುವುದೇ ಶಿಕ್ಷಣದ ಪ್ರಮುಖ ಗುರಿಯಾಗಿರಬೇಕು. ಕಾನೂನಿನ ಮೊರೆ ಹೋಗುವುದು ಒಳಿತಾಗಿದ್ದರೂ,ಕಾನೂನು ಕ್ರಮಕ್ಕಿಂತ ಶಿಕ್ಷಣ ಕ್ರಮ ಬದಲಾಗಬೇಕು.ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ ಅಗತ್ಯವಿದೆ.

  9. prashanth

    1. To which postal address one can send? 2. Is there any email ID to which one can send his/her opinion? 3. Representation from various parts of the state is inevitable for a comprehensive legislation. otherwise, after enactment of the legislation, state has to witness series of amendments instead of constructive and progressive results. 4. In long term, the legislation can’t sustain the social attitudes. Instead only scientific education can do the task. 5. It seams the Vijaya Karnataka is trying to take advantage of the moment. If the paper is really concerned about the issue, then they should revisit it’s religion section. Otherwise, it would be paradoxical to observe the nurturing of disbelieves and fight against the same on the same publication. [Opinions are personal]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading