ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೋದಿಯವರು ಭಾಷಣದಲ್ಲಿ ಹೇಳಿದ ವಿಚಾರಗಳ ಆಕಾರ..

 

 

ಚುಕ್ಕಿ ಚುಕ್ಕಿ ಸೇರಿಸಿದಾಗ ಬರುವ ಆಕಾರ?!!!
– – – – – – – – – – –

ರಾಜಾರಾಂ ತಲ್ಲೂರು 

 

 

 

ಈವತ್ತು ಧರ್ಮಸ್ಥಳದಲ್ಲಿ ಮೋದಿಯವರು ತಮ್ಮ ಭಾಷಣದಲ್ಲಿ ಹೇಳಿದ ಮೂರು ನಾಲ್ಕು ವಿಚಾರಗಳನ್ನು ಮತ್ತು ಅವರ ಸರಕಾರದ ನೀತಿಯನ್ನು ಒಟ್ಟಾಗಿ ಒಂದು ಗೆರೆಯಲ್ಲಿ ಜೋಡಿಸಿ, ಅದು ತಳೆಯಬಹುದಾದ ಆಕಾರವನ್ನು ಊಹಿಸುವ ಪ್ರಯತ್ನ ಇದು.

ನೆನಪಿಡಿ- ಕೇವಲ ಊಹೆ.

೧. 2022ರ ಹೊತ್ತಿಗೆ ಈ ಭಾಗದಲ್ಲಿ ಯೂರಿಯಾ ರಸಗೊಬ್ಬರ ಬಳಕೆಯನ್ನು ಅರ್ಧಕ್ಕಿಳಿಸಬೇಕು.

೨. ನೀರಿನ ಬಳಕೆಯ ಮೇಲೆ ನಿಯಂತ್ರಣ ಸಾಧಿಸಿ, ಹನಿ ನೀರಾವರಿಗೆ ಆದ್ಯತೆ ನೀಡಬೇಕು ಮತ್ತು ಪ್ರತೀ ಹನಿಗೆ ಹೆಚ್ಚು ಬೆಳೆ (ಪರ್ ಡ್ರಾಪ್ ಮೋರ್ ಕ್ರಾಪ್) ಬೆಳೆಯುವಂತಾಗಬೇಕು.

೩. ಕರಾವಳಿಯಲ್ಲಿ ಸಮುದ್ರ ಸಸ್ಯಗಳ ಕ್ರಷಿ ಆರಂಭಿಸಿ, ಅವನ್ನು ಇಲ್ಲಿನ ಮಣ್ಣಿನ ಜೊತೆ ಬೆರೆಸಿ, ಅವುಗಳ ನೀರು ಹಿಡಿದಿಟ್ಟುಕೊಳ್ಳುವ ಗುಣದ ಲಾಭ ಪಡೆಯಬೇಕು. (ಇದೇನೂ ಹೊಸದಲ್ಲ. ತಮಿಳುನಾಡು, ಕೇರಳಗಳಲ್ಲಿ ಈಗಾಗಲೇ ಚಾಲ್ತಿ ಇದೆ)

ಈ ಮೂರು ಅಂಶಗಳು ಅವರ ಭಾಷಣದ ಭಾಗ.

ಇನ್ನೊಂದೆಡೆ ಕೇಂದ್ರ ಸರಕಾರ ಪ್ರಬಲವಾಗಿ ಕಾರ್ಪೋರೇಟ್ ಫಾರ್ಮಿಂಗ್ ಪರ ಬ್ಯಾಟಿಂಗ್ ಮಾಡುತ್ತಿದ್ದು, ಭೂಮಿ ಬ್ಯಾಂಕ್ ಗಳನ್ನು ರೂಪಿಸಿ, ರೈತರೆಲ್ಲ ತಮ್ಮ ಭೂಮಿಯನ್ನು ಅಲ್ಲಿ ಅಡವಿಟ್ಟು, ಕ್ರಷಿ ಕೆಲಸಗಳಿಗೆ ಕಾರ್ಪೋರೇಟ್ ಗಳನ್ನು ಬಿಡಬೇಕು ಮತ್ತು ತಾವು ನಿಶ್ಚಿಂತೆಯಿಂದ ಅವರ ಫಾರ್ಮಿನಲ್ಲಿ ಉದ್ಯೋಗ ಪಡೆದು ದುಡಿಯಬೇಕು ಇದರಿಂದ ಬೆಳೆನಾಶ, ಕ್ರಷಿ ಸಾಲದ ಸಮಸ್ಯೆಗಳೆಲ್ಲ ಮಾಯ ಆಗಲಿವೆ ಎಂದು ಯೋಜಿಸುತ್ತಿದೆ. ನೀತಿ ಆಯೋಗ ಈ ಬಗ್ಗೆ ಈಗಾಗಲೇ ಕೆಲಸ ಆರಂಭಿಸಿದ್ದು, ಕಳೆದ ಬಜೆಟ್ಟಿನಲ್ಲಿ ಹಣಕಾಸು ಸಚಿವರು ಇದಕ್ಕೆ ಸೂಕ್ತ ಪ್ರಾವಧಾನಗಳನ್ನೂ ಆರಂಭಿಸಿ ಆಗಿದೆ.

ಈಗ ಇದನ್ನೆಲ್ಲ ಮೊದಲಿನಿಂದ ಮತ್ತೊಮ್ಮೆ ಓದಿಕೊಳ್ಳಿ.
ನಿಮ್ಮ ತಲೆಯಲ್ಲಿ ಏನು ಚಿತ್ರ ಮೂಡಿತು?!!!

‍ಲೇಖಕರು avadhi

29 October, 2017

8 Comments

  1. Harsha

    ಕಲ್ಪನೆ ಭೀಕರ. ನಿಂದನೆ ತೀರ ಅತಿಯಾದರೆ ಭೀಕರ ಕಲ್ಪನೆಗಳು ಬರುವುದು ಸಹಜ.

  2. Dr N A Madhyastha

    ಒಲ್ಲದ ಗಂಡನಿಗೆ ಮೊಸರಲಲ್ಲಿ ಕಲ್ಲುಕಂಡಂತೆ.

  3. sadaask

    ಮೋದಿಯವರು ಏನ್ ಮಾಡಿದ್ರು, ಮಾತಾಡಿದ್ರೂ ಅದರಲಿ ತಪ್ಪು ಹುಡುಕುವ ನಿಮ್ಮ ಚಿಂತನಾ ಶೈಲಿಯ ವೈಚಿತ್ರ್ಯ ಮೂಡಿತು.

  4. Shrinivas Karkala

    ಮೋದಿಯವರ ನುಡಿ ಮತ್ತು ನಡೆಯ ನಡುವೆ ಅಗಾಧ ಅಂತರವಿದೆ. ಕೈ ಉತ್ಪನ್ನಗಳ ಬಗೆಗಿನ ಅವರ ನೀತಿಯೊಂದೇ ಸಾಕು ಇದನ್ನು ಅರ್ಥಮಾಡಿಕೊಳ್ಳಲು. ಪಿ ಸಾಯಿನಾಥ್ ಹೇಳಿದ ಹಾಗೆ massive deskilling is taking place in India. ಇನ್ನೊಂದೆಡೆ ಕೌಶಲಾಭಿವೃದ್ಧಿ ಮಾಡ್ತಾರಂತೆ !!

  5. Wilfred Dsouza

    ಚುಕ್ಕಿ ಸೇರಿಸಿದರೆ ಕಾಣುವುದು ರೈತರ, ಬಡವರ, ದಲಿತರ, ಅಲ್ಪಸಂಖ್ಯಾತರ, ಮಹಿಳೆಯರ ಹೆಣಗಳನ್ನು ಕುಕ್ಕುತ್ತಿರುವ ರಣ ಹದ್ದಿನ ಚಿತ್ರ. ಪಕ್ಕದಲ್ಲಿ ಅಂಬಾನಿ, ಅದಾನಿಯಂತಹ ಲಾಭಕೋರ ವ್ಯಾಪಾರಿಗಳು ರಾಷ್ಟ್ರ ಧ್ವಜಕ್ಕೆ ಸೆಲ್ಯೂಟ್ ಮಾಡುತ್ತಿದ್ದಾರೆ.

  6. Raviraj ajri

    ಚೀನಾದಲ್ಲಿ ಕಾರ್ಪೊರೇಟ್ ಫಾರ್ ಮಿಂಗ್ ಓದಿದ ನೆನಪು. ನಿಮಗೆ ಇದರ ಬಗ್ಗೆ ಮಾಹಿತಿ ಇರಬಹುದು. ನಮ್ಮ ಕರಾವಳಿಯಲ್ಲಿ ಈಗಿನ ಭತ್ತದ ನಾಟಿಯ ಅವ್ಯವಸ್ಥೆ ನೋಡಿದಾಗ ಈ ಬಂದರೆ ಉತ್ತಮವೆಂದು ಅನ್ನಿಸುತ್ತದೆ.

  7. Kiran

    If someone tries too hard to demonize a well-meaning leader accepted and supported by the masses with loads of prejudice and paranoia you are bound to summon nightmarish images!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading