ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೋಡ ಮುಂಗುರುಳಿಗೆ ದಣಿವೆಂಬುದೇ ಇಲ್ಲ..

ನಾಗರಾಜ್ ಹರಪನಹಳ್ಳಿ. ಕಾರವಾರ.

ಮುಂಗಾರು ಮೋಡಗಳು

ನಿನ್ನ ಸುತ್ತಲೇ ಸುತ್ತುತ್ತಿರುವಾಗ
ಇಲ್ಲಿ ಮಳೆ ಕಾಣೆಯಾಗಿದೆ
ಸ್ವಲ್ಪ ಕಳಿಸು
ಕೆನ್ನೆಗೆ ಮುದ್ದಿಸಿದ್ದು ಸಾಕು

ಅವು ನಿನ್ನ ಹಣೆಯ ಮೇಲೆ ಆಟವಾಡುತ್ತಾ ಆಡುತ್ತಾ ತುಂಟಾಟ
ಮಾಡುತ್ತಿವೆ
ಈ ಮೋಡ ಮುಂಗುರುಳಿಗೆ ದಣಿವೆಂಬುದೇ ಇಲ್ಲ

ಇಲ್ಲಿ ಮೋಡಗಳಿಲ್ಲದೇ
ಮುಂಗಾರು ಮರೆಯಾಗಿದೆ
ದಂಡೆ ವಿರಹಿಯಾಗಿದೆ

ಸ್ವಲ್ಪ ಕನಿಕರಿಸು
ಮೋಡಗಳಿಗೇನು ಕೆಲಸ
ಸ್ವಲ್ಪವೂ ನಾಚಿಕೆಯಿಲ್ಲದೇ
ಹೆಗಲೇರಿ ಕುಳಿತಿವೆ
ತುಂಬಾ ಸಲಿಗೆ ನೀನೆಂದರೆ ಮೋಡಗಳಿಗೆ

ನಿನ್ನ ಸಹವಾಸದಲ್ಲಿ ಕರ್ತವ್ಯ ಮರೆತಿವೆ

ನಿನ್ನ ಸಾನಿಧ್ಯದಲ್ಲಿ
ಅಂತ ಮೋಹಕತೆ ಇರಬೇಕು
ಒಂಟಿ‌ ದಂಡೆ , ಒಬ್ಬಂಟಿ ಭೂಮಿ ಬಿಟ್ಟು ಸತಾಯಿಸುವುದು
ಸ್ವಲ್ಪವೂ ಸೊಗಸಲ್ಲ

ಹೋಗಲಿ ಬಿಡು
ಮೋಡಗಳ ಹೊದ್ದವಳೇ
ನೀ ಮೋಡಗಳ ಜೊತೆಯಾಗಿ
ಬಂದು ಬಿಡು…ಈ ವಿರಹ ಸಾಕಾಗಿದೆ
ಮೋಡಗಳಿಲ್ಲದೆ….

‍ಲೇಖಕರು admin

11 June, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading