ಪಂಡಿತಾರಾಧ್ಯ
ರಾಜ್ಯದ ಊರುಗಳ ಹೆಸರುಗಳ ಕನ್ನಡೀಕರಣಕ್ಕೆ
ಕೇಂದ್ರ ಸರಕಾರ ಅನುಮೋದನೆ ನೀಡಿರುವುದು ಸಂತೋಷದ ಸಂಗತಿ.
ಸಂಬಂಧಪಟ್ಟವರೆಲ್ಲರಿಗೂ ಹಾರ್ದಿಕ ಅಭಿನಂದನೆಗಳು.
ಅದರಲ್ಲಿ ಮೈಸೂರಿನ ಕಾಗುಣಿತ ಮಾತ್ರ ಎಡವಟ್ಟಾಗಿದೆ.
ಕನ್ನಡ ಹೆಸರುಗಳನ್ನು ಇಂಗ್ಲಿಷ್ ವರ್ಣಮಾಲೆಯಲ್ಲಿ ಬರೆಯುವಾಗ
ಸಾಮಾನ್ಯ ಧ್ವನಿ ಬರವಣಿಗೆಯ ಕ್ರಮವನ್ನು ಅನುಸರಿಸಲಾಗಿದೆ.
ಅಂದರೆ ಕನ್ನಡದ ಹ್ರಸ್ವ, ದೀರ್ಘ, ಅಲ್ಪಪ್ರಾಣ, ಮಹಾಪ್ರಾಣ, ದ ಡ, ನ ಣ, ಲ ಳ ಗಳ
ವ್ಯತ್ಯಾಸಗಳನ್ನು ಪರಿಗಣಿಸದಿರುವುದು ಸ್ವಾಗತಾರ್ಹ.
ಅದರೆ ಮೈಸೂರಿನ ಹೆಸರು ಬರೆಯುವಾಗ ಮಾತ್ರ ಇಂಗ್ಲಿಷ್ ಭಾಷೆಯ
ಕಾಗುಣಿತ ಕ್ರಮವನ್ನು ಅನುಸರಿಸಿರುವುದು ಭಾಷಾವಿಜ್ಞಾನದ ತತ್ತ್ವಗಳಿಗೆ ವಿರುದ್ಧವಾಗಿದೆ.
ಇದರಿಂದ ಕನ್ನಡ ಗೊತ್ತಿಲ್ಲದವರು ಗೊಂದಲಕ್ಕೆ ಗುರಿಯಾಗುತ್ತಾರೆ.

ಮೈಸೂರು ಪದದಲ್ಲಿರುವ ಮೈ ಎನ್ನುವುದು ಮ್ (ವ್ಯಂಜನ)ಐ (ಸ್ವರ)ಸೇರಿ ಆಗಿದೆ.
ಅದನ್ನು ಇಂಗ್ಲಿಷ್ ವರ್ಣಮಾಲೆಯಲ್ಲಿ ಬರೆಯುವಾಗ ಎಂ ವೈ ಎಂದು ಬರೆದರೆ
ಮ್ಯ್ ಎಂದಾಗುವುದರಿಂದ ಅದನ್ನು ಉಚ್ಚರಿಸಲಾಗುವುದಿಲ್ಲ.
ಮ್ ವ್ಂಜನವನ್ನು ಐ ಸ್ವರ ಸಹಿತ ಎಂಎಐ ಎಂದೇ ಬರೆಯಬೇಕು.
ನಾವು ಬಳಸುತ್ತಿರುವುದು ಇಂಗ್ಲಿಷ್ ವರ್ಣಮಾಲೆಯನ್ನು ಮಾತ್ರ.
ಇಂಗ್ಲಿಷ್ ಭಾಷೆಯ ಕಾಗುಣಿತವನ್ನಲ್ಲ.
ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಎಂವೈ ಗಳನ್ನು ಮೈ ಎಂದು ಓದಬಹುದು,
ಹ್ರಸ್ವ ಸ್ವರವನ್ನು ಎರಡು ಬಾರಿ ಬರೆದರೆ ಅದು ದೀರ್ಘವಾಗಬಹುದು.
ಅದರೆ ಇಂಗ್ಲಿಷ್ ಭಾಷೆಯ ಬರವಣಿಗೆ ಅವೈಜ್ಞಾನಿಕವಾಗಿರುವುದರಿಂದ
ಹ್ರಸ್ವ ಒ ಅನ್ನು ಎರಡು ಬಾರಿ ಬರೆದರೆ ದೀರ್ಘ ಓ ಮಾತ್ರವಲ್ಲ ಊ ಕೂಡ ಆಗುತ್ತದೆ
ಉದಾ:ಓ -door, ಊ -fool.
ಅದನ್ನು ಕುರುಡಾಗಿ ಅನುಸರಿಸಿmysuru, mysooru ಎಂದೆಲ್ಲ ಬರೆಯುವುದು ತಪ್ಪು.
ಅದು ಕನ್ನಡವನ್ನು ಇಂಗ್ಲಿಷ್ ಭಾಷೆಯ ಕಾಗುಣಿತದಲ್ಲಿ ಬರೆದ ಹಾಗೆ , ಅವೈಜ್ಞಾನಿಕ.
ಕನ್ನಡ ಮೈ ಅನ್ನು ಇಂಗ್ಲಿಷ್ ಲಿಪಿಯಲ್ಲಿ ಬರೆಯುವಾಗ
ಮ್ ಮತ್ತು ಐ ಗಳನ್ನು ಎಂಎಐ ಎಂದು ಬರೆದಾಗ ಮಾತ್ರ ಓದಲು ಸಾಧ್ಯ.
ಮುಂಬೈ, ಚೆನ್ನೈಗಳನ್ನು ಇಂಗ್ಲಿಷಿನ ಲಿಪಿಯಲ್ಲಿ ಬರೆಯುವಾಗ ಐ ಅನ್ನು ಎಐ ಅಕ್ಷರಗಳಲ್ಲಿ ಬರೆಯುತ್ತಾರೆ.
ಅದ್ದರಿಂದ mumbai, chennai ಇರುವ ಹಾಗೆ maisuru ಎಂದೇ ಬರೆಯಬೇಕು.






an excellent observation and suggestion.
just remember how GYM is spelled and spoken..
Hope our state Gov will consider this.