ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೈಸೂರಿನಲ್ಲಿ ‘ಅಯೋಧ್ಯ ಕಾಂಡ’

ವಾಲ್ಮೀಕಿ ರಾಮಾಯಣ ಆಧಾರಿತ ನಾಟಕ ‘ಅಯೋಧ್ಯ ಕಾಂಡ’ ನಾಟಕವು ದಿನಾಂಕ 12-6-2022ರ ಭಾನುವಾರ ಸಂಜೆ 7 ಗಂಟೆಗೆ ಮೈಸೂರಿನ ಕುವೆಂಪುನಗರದಲ್ಲಿರುವ ಗಾನಭಾರತಿ ಸಭಾಂಗಣದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕವು ಜೂನ್ 5 ರಿಂದ ಪ್ರತಿ ಭಾನುವಾರ ಸಂಜೆ 7 ಕ್ಕೆ ಪ್ರದರ್ಶನಗೊಳ್ಳಲಿದೆ.

ಈ ನಾಟಕವನ್ನು ಹಿರಿಯ ರಂಗನಿರ್ದೇಶಕರಾದ ಪ್ರಸನ್ನ ಅವರು ರಚಿಸಿ  ನಿರ್ದೇಶಿಸಿದ್ದು, ಅನುಶ್ಶೆಟ್ಟಿ ಸಂಗೀತ ಸಂಯೋಜಿಸಿದ್ದಾರೆ, ವಸ್ತ್ರಾಲಂಕಾರ ನಂದಿನಿ.ಕೆ.ಆರ್ ಹಾಗೂ ಪ್ರಸಾದನ ಬಿ.ಎಮ್. ರಾಮಚಂದ್ರ ನಿರ್ವಹಿಸಲಿದ್ದಾರೆ. ಮುಖ್ಯ ಪಾತ್ರದಲ್ಲಿ ರಂಗಾಯಣದ ಹಿರಿಯ ನಟರಾದ  ಪ್ರಶಾಂತ್ ಹಿರೇಮಠ್, ರಾಷ್ಟ್ರೀಯ ನಾಟಕ ಶಾಲೆಯ ಪದವೀಧರೆ ಪದ್ಮಶ್ರೀ.ಸಿ.ಆರ್, ಮುನ್ನ, ರಾಜಲಕ್ಷ್ಮೀ ಹಾಗೂ ವಿಶ್ವಾಸ್ ಅಭಿನಯಿಸಲಿದ್ದಾರೆ.

ಜೂನ್ ತಿಂಗಳ ಈ ಪ್ರದರ್ಶನಗಳು ನಾಟಕದ ಮರು ಪ್ರದರ್ಶನವಾಗಿದ್ದು, ಮೇ ತಿಂಗಳಲ್ಲಿ ನಾಲ್ಕು ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ. ಇದೊಂದು ಸಂಗೀತಮಯ ನಾಟಕವಾಗಿದ್ದು, ಸಂಗೀತಾಭಿಮಾನಿಗಳಲ್ಲಿ ಆಸಕ್ತಿ ಕೆರಳಿಸಿದೆ. ನಾಡಿನ ಹಲವು ಲೇಖಕರು, ರಂಗಕರ್ಮಿಗಳು ಹಾಗೂ ಸಂಗೀತ ವಿಮರ್ಶಕರು ನಾಟಕದ ಕುರಿತು ಈಗಾಗಲೇ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‍ಲೇಖಕರು Admin

12 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading