ಮೈಸೂರಿನಲ್ಲಿ ʼಮಹಾಭಾರತ ಪದ್ಮವ್ಯೂಹ’

`ವೀರ ಅಭಿಮನ್ಯು’ ಆಧಾರಿತ ‘ಮಹಾಭಾರತ ಪದ್ಮವ್ಯೂಹ’ ನಾಟಕ ಪ್ರದರ್ಶನವನ್ನು ಮೈಸೂರಿನ ಕಲಾಮಂದಿರದ ಆವರಣದಲ್ಲಿರುವ ಕಿರುರಂಗ ಮಂದಿರದಲ್ಲಿ ಆಯೋಜಿಸಲಾಗಿದೆ.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಸಮುರಾಯ್‌ ಥಿಯೇಟರ್ ಈ ನಾಟಕವನ್ನು ರಂಗಕ್ಕೇರಿಸಿದ್ದು ವಾಮನ ಮಾಸ್ತರರ ಕೃತಿಯನ್ನು ಆಧರಿಸಿದೆ.

ಡಿಸೆಂಬರ್ 23 ರಂದು ಸಂಜೆ 7 ಗಂಟೆಗೆ ಈ ನಾಟಕ ಪ್ರದರ್ಶನವಿದೆ.

ಈ ರಂಗಪ್ರಯೋಗದ ಪರಿಕಲ್ಪನೆ ಹಾಗೂ ನಿರ್ದೇಶನ ಸಾಲಿಯಾನ್‌ ಉಮೇಶ್ ನಾರಾಯಣ ಹಾಗೂ ರಾಘು ಪುರಪ್ಪೆಮನೆ. ರಂಗಸಜ್ಜಿಕೆ ಮತ್ತು ಪರಿಕರ-ಕಿರಣ್‌ಕುಮಾರ್, ಕೆ. ಉದಯ್, ಬೆಳಕು-ತಿಪ್ಪೇಸ್ವಾಮಿ ಆರ್, ಸಂಗೀತ-ಸರ್ವೇಶಆಚಾರ್ಯ, ಅವರದು. ವಸ್ತ್ರಾಲಂಕಾರ-ಪ್ರಿಯಾಂಕಾ, ವಿನೂತನ, ದಿಲೀಪ್.

ನಾಟಕದ ಬಗ್ಗೆ ಜಗತ್ತಿನ ಪ್ರಾಚೀನ ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತವು ತನ್ನ ಪಾತ್ರ ಪ್ರಪಂಚದ ವಿಸ್ತಾರ, ಪ್ರತಿಮಾಲೋಕದ ಸೃಷ್ಟಿ ಮತ್ತು ಅಪೂರ್ವ ಧ್ವನಿಸಾಧ್ಯತೆಯ ಕಾರಣದಿಂದಾಗಿ ಭಿನ್ನವಾಗಿ ನಿಲ್ಲುವ ಅಪೂರ್ವ ಕೃತಿ. ಇದು ಮನೆ ಮನೆಯ ಕತೆ ಕೂಡ ಹೌದು. ಇದು ಮೌಲ್ಯಗಳ ಸಂಘರ್ಷದ ಕಥನ ಬದುಕಿನ ಅರ್ಥವನ್ನು ಶೋಧಿಸುವ ಕೈಗನ್ನಡಿ.

ಈ ನಾಟಕದ ಕತೆ ಬುಡಕಟ್ಟಿನ ಬೇಟೆಯೊಂದರಿಂದ ಪ್ರಾರಂಭವಾಗಿ ಮಹಾಭಾರತದ ಪರೀಕ್ಷಿತನ ಕತೆಗೆ ಹೆಣೆದುಕೊಂಡು ದ್ಯೂತ ಪ್ರಸಂಗ, ಅಭಿಮನ್ಯು ಚಕ್ರವ್ಯೂಹ ಪ್ರಸಂಗ ಮತ್ತು ಕೊನೆಗೆ ದುರ್ಯೋಧನ ಅವಸಾನದ ಪ್ರಸಂಗದೊಂದಿಗೆ ಪರಿಸಮಾಪ್ತಿಗೊಳ್ಳುತ್ತದೆ.

‍ಲೇಖಕರು Admin

December 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: