ಮೇಘನಾ ಸುಧೀಂದ್ರ ಅಂಕಣ: ಇವಷ್ಟು ಪ್ರಶ್ನೆಗಳು ಅವಳು ಕೇಳಿದ್ದು ಸರಿ


ಎಲೆನಾ ಅರೆಬರೆ ಕೋಪದೊಂದಿಗೆ ಹುಡುಗಿ ಹತ್ತಿರ ಮಾತಾಡುತ್ತಿದ್ದಳು. ‘ಏತಿ ಅಂದರೆ ಪ್ರೇತಿ’ ಎನ್ನುವ ಇವರಿಬ್ಬರ ಗೆಳೆತನ ಕೆಲವು ಕಷ್ಟದ ಪ್ರಶ್ನೆಗಳನ್ನ ಒಬ್ಬರಿಗೊಬ್ಬರು ಕೇಳಲು ಅನುವು ಮಾಡಿಕೊಡುತ್ತಿತ್ತು. ಒಮ್ಮೊಮ್ಮೆ ಅದು ತಾನು ಅದನ್ನ ಸಂಪೂರ್ಣವಾಗಿ ನಂಬದಿದ್ದರೂ ತನ್ನ ದೇಶದಲ್ಲಿ ಅದು ಪ್ರಚಲಿತ ವಿದ್ಯಮಾನ. ಹುಡುಗಿ ಮತ್ತು ಎಲೆನಾಳಿಗೆ ಬಹಳ ಚರ್ಚೆಯಾಗುತ್ತಿದ್ದ ವಿಷಯ
“ಭಾರತದಲ್ಲಿನ ಜಾತಿ, ಯುರೋಪಿನ ರೇಸಿಸಮ್” ಇದರ ಬಗ್ಗೆ ಅವರಿಬ್ಬರೂ ನಂಬದಿದ್ದರೂ ಅವರ ಸಮಾಜ ಅದನ್ನ ಬಹಳ ಆಳವಾಗಿ ನಂಬಿತ್ತು. ಒಬ್ಬ ಮನುಷ್ಯ ತನ್ನ ಹಾಗಿಲ್ಲದವನ್ನನ್ನ ಯಾವ ಯಾವ ಭಾವನೆಗಳಲ್ಲಿ ನೋಡಬಹುದು ಲೆಕ್ಕ ಹಾಕಿ. ಒಂದು ನನ್ನ ಹಾಗಿಲ್ಲ ಎಂದು ಹಾಸ್ಯ ಮಾಡಬಹುದು, ಅವನ ನ್ಯೂನತೆಯನ್ನು ಆಡಿಕೊಳ್ಳಬಹುದು, ಇಲ್ಲ ಅವನನ್ನ ಇಷ್ಟಪಡಬಹುದು, ಇಲ್ಲ ಅವನ್ನನ್ನ ನೋಡಿದರೆ ಕೋಪ ಬರಬಹುದು, ಇಲ್ಲ ಭಯವಾಗಬಹುದು ಅಥವಾ ದ್ವೇಷ ಬರಬಹುದು. ಹುಚ್ಚು ಕೆರಳಿದರೆ ಸಾಯಿಸಲೂ ಬಹುದು. ಮನುಷ್ಯನಿಗೆ ಅನ್ಯರನ್ನ ತಾಳಿಕೊಳ್ಳುವ ಸಹನೆ ಮುಂಚಿಂದ ಕಡಿಮೆಯೇ ಅದಕ್ಕೆ ತನ್ನದೇ ದೇವರು, ಜಾತಿ, ಮತ, ಪಂಥ ಸೃಷ್ಠಿ ಮಾಡಿ ತನ್ನ ಹಾಗಿಲ್ಲದವರನ್ನ ಎತ್ತಿ ಝಾಡಿಸಿ ಒದೆಯುವುದರಲ್ಲಿ ಅವನಿಗೆ ಸಂತೋಷ. ಅದರ ಜೊತೆಗೆ ಈ ಬುಡಕಟ್ಟು/ ಜನಾಂಗ (ರೇಸ್) ಮೇಲಂತೂ ಅಪಾರವಾದ ಪ್ರೀತಿ. ಆಮೇಲೆ ಈ ಚರ್ಮದ ಬಣ್ಣದ ಬಗ್ಗೆಯೂ ಅತೀವವಾದ ಮೋಹ. ಈ ಜಾತಿ, ಧರ್ಮ, ಮೈ ಬಣ್ಣ ಮತ್ತು ರೇಸ್ ಎಲ್ಲವೂ ತಾವಾಗಿ ತಾವೇ ಹುಡುಕಿಕೊಂಡು ಮಾಡಿಕೊಂಡಿರುವುದಲ್ಲ ಹಾಗೆ ಅದರಲ್ಲಿ ಹುಟ್ಟಿದ್ದಾರೆ ಅದನ್ನ ಅವರು ಡಿಫೆಂಡ್ ಮಾಡಿಕೊಂಡೋ ಅಥವಾ ವಿರೋಧಿಸಿಕೊಂಡೋ ಬದುಕಬೇಕಾದ ಆವಶ್ಯಕತೆ ಯಾರಿಗೂ ಇಲ್ಲ. ಇದೆಲ್ಲವೂ ಒಬ್ಬ ಮನುಷ್ಯನ ಸಕ್ಸಸ್ ಅಥವಾ ಅವನ ಗುಣವಾಚಕಗಳೇನೂ ಅಲ್ಲ. ಆದರೆ ಪ್ರಪಂಚದ ದೊಡ್ಡ ದೊಡ್ಡ ರಾಷ್ಟ್ರಗಳ ರಾಜಕಾರಣ ನಿಂತಿರುವುದು ಇದರಲ್ಲಿಯೇ.
ಯುರೋಪಿನಲ್ಲಿ ಚರ್ಮದ ಬಣ್ಣ ಬಹಳ ಮುಖ್ಯವಾದ ವಿಷಯ. ಅಂದರೆ ಅವನು ಆ ದೇಶದವನಾ, ಆ ದೇಶದವನ ಹಾಗೆ ಕಾಣುತ್ತಾನಾ, ಅವನು ಬಿಳಿಯನಾ ಎಂದು. ಕಂದು ಬಣ್ಣದವರೆಂದರೆ ಸರ್ವೀಸ್ ಇಂಡಸ್ಟ್ರಿಯವರು, ಮಂಗೋಲಿಯನ್ನರು ಸ್ವಲ್ಪ ಕಿರಿಕ್ ಪಾರ್ಟಿಸ್, ಕಪ್ಪು ಬಣ್ಣದವರಂತೂ ದೊಡ್ಡ ಡ್ರಗ್ ಗ್ಯಾಂಗ್ ಎಂದು ಈಗಲೂ ಗೂಗಲ್ ಬಂದು, ಜನರಿಗೆ ಇದೆಲ್ಲ ಸುಳ್ಳು ಎಂದು ಹೇಳಿದರೂ, ವರ್ಷಕ್ಕೆ ಸಾಕಷ್ಟು ನೊಬೆಲ್ ಪ್ರಶಸ್ತಿ ಬಂದರೂ ಅದೇ ನಂಬಿಕೆಯಲ್ಲಿದ್ದಾರೆ. ಎಲೆನಾ ಕತಲನ್ನರು ಕತಲನ್ನರು ಎಂದು ಹೇಳುವವರಿಗೆ ಮಾತ್ರ ಕತಲೂನ್ಯಾ ದೇಶವಾ ಅಥವಾ ೧೦೦ ವರ್ಷದಿಂದ ಅಲ್ಲೇ ಇರುವ ಮೊರಕ್ಕನ್ನರು, ಸ್ಲೇವರಿಗೆ ಕರೆದುಕೊಂಡು ಬಂದು ಶತಮಾನಗಳಿಂದ ಅಲ್ಲೇ ಇರುವ ಆಫ್ರಿಕನ್ನರು, ಅರ್ಧಂಬರ್ಧ ಡಚ್, ಅರ್ಧಂಬರ್ಧ ಸ್ಪೇನಿನವರು ಯಾವುದೋ ಕಾಲದಲ್ಲಿ ಭಾರತವರಾಗಿದ್ದ ಸುರಿನಾಮಿಗಳದ್ದಾ ಅಥವಾ ಭಾರತದಿಂದ ಹಾಡು ಹಾಡಿಕೊಂಡು ಬಂದು ಇಲ್ಲಿ ಜಿಪ್ಸಿಗಳಾಗಿ ಬಂದವರದ್ದಾ ಎಂಬ ಪ್ರಶ್ನೆಯನ್ನು ಮುಂದಿಟ್ಟಳು ಹುಡುಗಿ. ಒಂದು ಪ್ರಾಂತ್ಯದ ಒಳಗಿದ್ದಾಗ ಅಲ್ಲಿನವರಿಗೆಲ್ಲಾ ಸ್ವಾತಂತ್ರ್ಯವಾ ಎಂಬ ಪ್ರಶ್ನೆಗೆ ಕಣ್ಣು ಕಣ್ಣುಬಿಟ್ಟು ನೋಡುತ್ತಿದ್ದಳು ಎಲೆನಾ.
ಬಾರ್ಸಿಲೋನಾದ ರಾಂಬ್ಲಾಸ್ ನ ಗಲ್ಲಿಗೆ ಹೋದರೆ ನಿಮಗೇ ಭಾರತವೋ ಅಥವಾ ಪಾಕಿಸ್ತನವೋ ಅನ್ನಿಸುತ್ತದೆ. ಅಲ್ಲಿ ಎಷ್ಟು ಸೌಹಾರ್ದತೆ ಇದೆಯೋ ಅಷ್ಟು ಕಳ್ಳತನವೂ ಇದೆ. ನಮ್ಮ ಪರ್ಸ್, ಪಾಸ್ ಪೋರ್ಟ್, ಹಣ ಎಲ್ಲವೂ ಜಾಸ್ತಿ ಕಳ್ಳತನವಾಗೋದು ಅಲ್ಲಿ. ಅಲ್ಲಿನ ಅಷ್ಟೂ ಭಾರತದ ಹೋಟೆಲ್ಲುಗಳನ್ನು ನಡೆಸೋದು ಪಾಕಿಸ್ತಾನಿಗಳು. ಅದೇ ಪಂಜಾಬ್, ಸಿಂಧ್, ಗುಜರಾತ್, ಮರಾಠಾ. ಮುಂಚೆ ಸ್ಪೇನಿನಲ್ಲಿ ಕೆಲಸಕ್ಕೆ ಜನ ಬೇಕೆಂದು ೧೦ ವರ್ಷ ಹೇಗೋ ಹಾಗೋ ಮಾಡಿ ಇದ್ದವರಿಗೆ ಪೌರತ್ವ ಕೊಟ್ಟಿರುವ ಪರಿಣಾಮ ಅವರೆಲ್ಲ ಈ ಜಾಗದ ಬಹುಸಂಖ್ಯಾತರು. ಇಲ್ಲಿ ದೀಪಾವಳಿಗೆ ದೀಪ ಬೆಳಗುತ್ತಾರೆ , ದಸರಾಗೆ ರಸ್ತೆ ಮುಚ್ಚಿ ದಾಂಡಿಯಾ ಆಡುತ್ತಾರೆ. ಅವರಲ್ಲಿ ಒಬ್ಬರಿಗೆ ಕಷ್ಟಬಂದರೆ ಇಡೀ ಏರಿಯಾನೆ ಮುಚ್ಚಿಸೋವಷ್ಟು ಬಲಶಾಲಿ.
ಬ್ಯಾರಿಯೋ ಸಿನೋ ಎಂದು ಲೋಕಲ್ ಸ್ಲಾಂಗಾಗಿ ಬಳಸುವ ರೆಡ್ ಲೈಟ್ ಏರಿಯಾಗಳು ಚೈನೀಸ್ ಜನರ ಕೈಯಲ್ಲಿದೆ. ಇದು ಎಲ್ ರವಾಲ್ ಎಂಬ ಜಾಗದಲ್ಲಿ ಜಾಸ್ತಿ. ಚೈನಾ ಟೌನ್ ಆರ್ಕ್ ದಿ ಟ್ರಯಾಂಫ್ , ರವಾಲ್, ರಾಂಬ್ಲಾಸಿನಲ್ಲಿ ಸಿಗುತ್ತದೆ. ಅಲ್ಲಿ ಚೈನಾದ ಜನರ ಜೀವನ ಜಾಸ್ತಿ. ಚೈನಾದ ಹೊಸ ವರ್ಷಕ್ಕೆ ಅಲ್ಲಿ ದೊಡ್ಡ ಸಂಭ್ರಮ ಮತ್ತು ಅವರಿಗೆ ಬೇಕಾದ ಹಾಗೆ ಆ ವರ್ಷ ಯಾವ ಪ್ರಾಣಿಯ ವರುಷವೂ ಅದರ ದೊಡ್ಡ ಕಟೌಟ್ ಹಾಕುವಷ್ಟು ಸ್ವಾತಂತ್ರ್ಯ.

ಇನ್ನು ಸ್ಪೇನಿಗೆ ಒಂದು ಸಮುದ್ರದ ಅಂತರದಲ್ಲಿರುವ ಮೊರಕ್ಕೋ ಟಾಮ್ ಆಂಡ್ ಜೆರ್ರಿ ಹಾಗೆ ಆಟವಾಡುವ ದೇಶ.. ಬಾರ್ಸಾ ಮೇಲೆ  ಧರ್ಮದ ದಾಳಿ ಮಾಡಿದವರು. ಈಗಲೂ ಮೊರಾಕ್ಕನ್ನರನ್ನ ಓಡಿಸಿದ ದಿನವನ್ನ ದಿಗ್ವಿಜಯವನ್ನಾಗಿ ಆಚರಿಸುತ್ತಾರೆ. ಅವರಿಗೆ ಅವರ ಹಾಗೆ ಇದ್ದರೂ ಧರ್ಮ ಬೇರೆ ಬೇರೆ ಎಂಬ ಅಳಕು. ಇವರನ್ನ ಕತಲನ್ನರನ್ನ ಪಕ್ಕದಲ್ಲಿ ನಿಲ್ಲಿಸಿದರೆ ವ್ಯತ್ಯಾಸವೇನೂ ಗೊತ್ತಾಗುವುದಿಲ್ಲ. ಆದರೆ ಅವರಿಗೆ ಧರ್ಮದ ತಿಕ್ಕಾಟವಿದೆ. ದೊಡ್ಡ ದೊಡ್ಡ ಹೊಟೆಲ್ಲುಗಳ ಸರ್ವಿಂಗ್ ಸ್ಟಾಫ್ ಅವರೇ. ಅವರದ್ದೇ ಹಬ್ಬ , ಆಚರಣೆಗಳನ್ನ ಅವರೂ ಬಿಟ್ಟಿಲ್ಲ.
ಇನ್ನು ಇಡೀ ಯೂರೋಪಿನಲ್ಲಿ ತುಂಬಿರುವ ಆಫ್ರಿಕನ್ನರು ಅರ್ಧ ಲೀಗಲ್ ಮೈಗ್ರೆಂಟ್ಸ್ ಮಿಕ್ಕರ್ಧ ಇಲ್ಲೀಗಲ್ ಮೈಗ್ರೆಂಟ್ಸ್. ಶತಮಾನಗಳಿಂದ ಇಲ್ಲಿನ ಆಳುಗಳಾಗಿ ಕೆಲಸ ಮಾಡಿದ ಅನುಭವ. ಅವರದ್ದು ಜೀತವಾಗಿಯೇ ಇದೆ. ಅದೆಷ್ಟೋ ಪೀಳಿಗೆ ಇನ್ನೂ ಬರಿ ಎಂಥಥದ್ದೋ ಕೆಲಸ ಮಾಡಿಕೊಂಡು ಇದೆ. ಅವರೂ ಕತಲನ್ ಮಾತಾಡುತ್ತಾರೆ.
ಇನ್ನು ಐಸ್ ಐಸ್ ಯುದ್ಧದಲ್ಲಿ ಸಿಕ್ಕಾಪಟ್ಟೆ ಸಿರಿಯನ್ನರು ದೋಣಿಯಲ್ಲಿ ಈ ದೇಶಕ್ಕೆ ಇಲ್ಲೀಗಲ್ಲಾಗಿ ಬಂದಿದ್ದಾರೆ. ಇಡೀ ಯುರೋಪು ಬಾಗಿಲು ಮುಚ್ಚಿದ್ದಾಗ ಸ್ಪೇನ್ ಮಾತ್ರ ಬಾಗಿಲು ತೆಗೆದು ಅವರನ್ನ ಬರಮಾಡಿಕೊಂಡಿದೆ. ಆದರೆ ಅಲ್ಲಿನವರಿಗೆ ಯಾವ ಸವಲತ್ತುಗಳನ್ನು ಕೊಡಬಾರದು ಎಂದು ಒಂದು ದೊಡ್ಡ ಮೂವ್ಮೇಂಟೇ ಇಲ್ಲಿ ನಡೆಯುತ್ತಿದ್ದೆ.
“ಇವರೆಲ್ಲರಿಗೂ ಮುಂದೆ ಸರ್ವ ಸ್ವತಂತ್ರ್ಯ ಮತ್ತು ಸ್ವಾಯತ್ತ ಕತಲೂನ್ಯಾದಲ್ಲಿ ಅವಕಾಶವಿದೆಯಾ ಅಥವಾ ಅದರಲ್ಲೂ ಒಂದೇ ಧರ್ಮ , ಒಂದೇ ಭಾಷೆ ಎಂದು ಅವರನ್ನ ನಿಮ್ಮವರನ್ನಾಗಿ ಮಾಡಿಕೊಳ್ಳುತ್ತೀರೋ ಅಥವಾ ಮತ್ತೆ ಕತಲನ್ನರಲ್ಲೂ ಇವರು ಪ್ಯೂರ್ ಕತಲನ್ನರು, ಇವರು ಇಮ್ಪ್ಯೂರ್  ಎಂದು ಅವರಿಗೆ ಭಾಷೆ, ಧರ್ಮದ ಟೆಸ್ಟ್ ತೆಗೆದುಕೊಂಡು ನಿಮ್ಮವರನ್ನಾಗಿ ಮಾಡಿಕೊಳ್ಳುತ್ತೀರೋ ” ಎಂದು ಹುಡುಗಿ ಸುಮ್ಮನೆ ಕಿಚಾಯಿಸಿದಳು.
ಎಲೆನಾಗೆ ಈ ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಗೊತ್ತಾಗಲ್ಲಿಲ್ಲ. ಇಷ್ಟು ದಿವಸ ತನ್ನ ಭಾಷೆಯ ಪ್ರಾಂತ್ಯಕ್ಕೆ ಮಾತ್ರ ಸ್ವಾಯತ್ತತೆ ಬೇಕು ಎಂದು ಗಲಾಟೆ ಮಾಡುತ್ತಿದ್ದವಳಿಗೆ ಈಗ ಅಕಸ್ಮಾತ್ ಈ ಭಾಷೆಯನ್ನು ಮಾತಾಡದೇ ಅವರ ಅರ್ಧ ಜೀವನವನ್ನು ಕಳೆದಿದ್ದರೆ ಅಂಥವರನ್ನು ಏನು ಮಾಡಬೇಕು, ಅರೆಭಾಷೆ ಮಾತಾಡುವವರಿಗೆ ಈ ಭಾಷೆಯನ್ನು ಕಲಿಸಿ ಅವರ ಭಾಷೆಯನ್ನು ಅಳಿಸೋದಾ ಅಥವಾ ಸ್ಪೇನಿನವರ ಹಾಗೆ ಇಲ್ಲಿ ಇದ್ದರೆ ಈ ಭಾಷೆ ಮಾತಾಡಬೇಕು ಎಂದು ಹೇರಿಕೆ ಮಾಡೋದಾ ಎಂಬ ಯಾವ ಪ್ರಶ್ನೆಗೂ ಉತ್ತರ ಸಿಕ್ಕಿರಲ್ಲಿಲ್ಲ.
“ಕರ್ನಾಟಕದಲ್ಲಿ ಕನ್ನಡ ಮಾತಾಡುವವನು ಹೇಗೆ ಕರ್ನಾಟಕದವನೋ ಹಾಗೆ ತುಳು, ಕೊಂಕಣಿ, ಬ್ಯಾರಿ , ಕೊಡವ ಮತ್ತಿತ್ತರ ಭಾಷೆ ಮಾತಾಡುವವರು ಕರ್ನಾಟಕದವರೇ ಅಷ್ಟೊಂದು ಹೃದಯ ವೈಶಾಲ್ಯತೆ ನಿಮಗಿದೆಯಾ ಸರ್ವ ಜನಾಂಗ, ಧರ್ಮದವರೂ ಭಾರತೀಯರು ಎಂದು ಹೇಳುವಷ್ಟು ತಾಳ್ಮೆ ನಿಮ್ಮಲಿದೆಯಾ ?” ಎಂದು ಹುಡುಗಿ ಕುಟುಕಿ ಕುಟುಕಿ ಕೇಳುತ್ತಿದ್ದಳು.
“ಅದು ಸರಿ ನೀವು ಸ್ಪೇನಿನ ಹಾಗೆ ಆಗೋದಿಲ್ಲ ಅಂತೀರಲ್ಲ, ನಿಮ್ಮ ಸಂವಿಧಾನದಲ್ಲೂ ರಾಷ್ಟ್ರ ಧರ್ಮವನ್ನು     ಪ್ರತಿಪಾದಿಸುತ್ತೀರಾ, ನಿಮ್ಮ ರಾಜ ಮನೆತನದವರನ್ನು ತಲೆ ಮೇಲೆ ಎತ್ತಿ ಕೂಡಿಸಿಕೊಳ್ಳುತ್ತೀರಾ, ಒಂದು ಫ್ಯಾಮಿಲಿಗೆ ಆಡಳಿತ ಚುಕ್ಕಾಣಿ ಕೊಟ್ಟು ದಿನಾ ಕಷ್ಟ ಅನುಭವಿಸುತ್ತೀರಾ, ಅಥವಾ ಅಲ್ಲಿ ಇರುವಷ್ಟು ಭ್ರಷ್ಟಾಚಾರವನ್ನ ನೀವು ಮೈಗೂಡಿಸಿಕೊಳ್ಳುತ್ತೀರಾ, ಇನ್ನು ಪರ ಧರ್ಮ ಸಹಿಷ್ಣುಗಳಾಗದೇ ನಿಮ್ಮ ಧರ್ಮವನ್ನ ಹೇರುತ್ತೀರಾ, ಅಥವಾ ಸೆಕ್ಯುಲರ್ ಆಗುತ್ತೀರಾ, ಬೇರೆ ಅರೆ ಭಾಷೆಗಳನ್ನ ಕತಲನ್ನಿನ ಹಾಗೆ ಕಾಪಾಡಿಕೊಳ್ಳುತ್ತೀರಾ ಹೇಗೆ” ಎಂದೆಲ್ಲಾ ಹುಡುಗಿ ಪ್ರಶ್ನೆ ಕೇಳಿ ಕೇಳಿ ಸುಸ್ತು ಮಾಡಿಸಿದಳು ಎಲೆನಾಗೆ.
ಎಲೆನಾಳಿಗೆ ತನ್ನ ಕನಸು ನನಸಾಗುತ್ತಿದ್ದ ಸಂದರ್ಭದಲ್ಲಿ ಇದ್ಯಾವುದೋ ಹುಚ್ಚಿ ತನ್ನನ್ನು ಬಹಳ ಕಾಡುತ್ತಿದ್ದಾಳೆ ಎಂದು ಕೋಪಿಸಿಕೊಂಡೇ ನೋಡುತ್ತಿದ್ದಳು. ಎಲೆನಾಳ ತಾಯಿ ಮಾತ್ರ, “ಇವಷ್ಟು ಪ್ರಶ್ನೆಗಳು ಅವಳು ಕೇಳಿದ್ದು ಸರಿ, ಅವಳ ದೇಶದಲ್ಲಿ ಸರ್ವಧರ್ಮ ಸಹಿಷ್ಣುತೆ ಇದೆ ಅದಿಕ್ಕೆ ಇವೆಲ್ಲವನ್ನ ಕೇಳಿದ್ದಾಳೆ.” ಎಂದು.
ಎಲೆನಾ ಲೈಬ್ರರಿಗೆ ಹೋದಳು.

‍ಲೇಖಕರು avadhi

May 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: