ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೆಹೆಂದಳೆ ಅವರ ‘ಕಾಮನಬಿಲ್ಲು’ ಗೆ ಪ್ರಶಸ್ತಿ

ಶ್ರೀ ರುದ್ರಗೌಡ ಪಾಟೀಲ್ ಪ್ರತಿಷ್ಠಾನ ಮತ್ತು ಆಕ್ಸ್ಫರ್ಡ್ ಫೌಂಡೆಷನ್ ಜಂಟಿಯಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಮುಕ್ತ ಕಥಾ ಸ್ಪರ್ಧೆ ಫಲಿತಾಂಶ ಪ್ರಕಟಗೊಂಡಿದ್ದು ಉ.ಕ.ಜಿಲ್ಲೆಯ ಸಂತೋಷಕುಮಾರ ಮೆಹೆಂದಳೆ ಅವರ ʼಕಾಮನ ಬಿಲ್ಲುʼ ಕಥೆ ೧೫ ಸಾವಿರ ರೂ.ಗಳ ಪ್ರಥಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ದಾದಾಪೀರ್ ಜೈಮನ್ ಅವರ ‘ಆವರಣ’ಕತೆ ದ್ವಿತೀಯ ೧೦ ಸಾವಿರ ರೂ. ಮತ್ತು ಡಾ. ನಂದೀಶ್ವರ ದಂಡೆ ಅವರ ‘ಕಾಲದ ಕಟ್ಟಳೆ ಮೀರಬಲ್ಲದೆ’ ಕತೆ ತೃತೀಯ ೫ ಸಾವಿರ ರೂ. ಬಹುಮಾನವನ್ನು ಪಡೆದಿವೆ.

ಡಾ. ಅಮರೇಶ ನುಗಡೋಣಿ ಮತ್ತು ಡಾ. ವಿಠ್ಠಲರಾವ ಗಾಯಕವಾಡ ಈ ಕಥಾಸ್ಪರ್ಧೆಯ ತೀರ್ಪುಗಾರರಾಗಿದ್ದರು. ಹಾಗೆಯೇ ಡಾ.ಕೊಳ್ಚಪ್ಪೆ ಗೋವಿಂದ ಭಟ್. ಮುಂಬೈ ಅವರ ಊರಿಗೆ ಬಂದ ಕರಿಬಂಡೆ, ಶೇಖರಗೌಡ ಕೊಪ್ಪಳ ಅವರ ಜನನಿ ಜನ್ಮ ಭೂಮಿಶ್ಚ, ಮಂಜುನಾಥ್ ಮಣಿಪಾಲ ಅವರ ಪಿಣಿಯ ಮತ್ತು ಡೋಲು, ಸುಧಾಕರ ದೇವಾಡಿಗ ಅವರ ಆಳಕ್ಕಿಳಿದ ಬೇರುಗಳು, ಕಾಶೀಮ ಸಾಬ್ ಬೈರಾಪುರ ಅವರ ಕಾರ್ಗತ್ತಲ ಮಾಯೆ ಕತೆಗಳು ತಲಾ ೨೫೦೦ ರೂ. ಪುರಸ್ಕಾರಕ್ಕೆ ಆಯ್ಕೆಯಾಗಿವೆ.

ಇದರ ಜೊತೆಗೆ ಉತ್ತಮ ಎಂದು ಪರಿಗಣಿಸಲಾದ ಇನ್ನೂ ಎಂಟು ಕತೆಗಳನ್ನು ಸಂಕಲನದಲ್ಲಿ ಬಳಸಿಕೊಳ್ಳಲು ಆಯ್ಕೆ ಮಾಡಲಾಗಿದ್ದು, ಬರುವ ೨೮ ಫೆಬ್ರುವರಿ ರಂದು ಸಿಂಧನೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಮತ್ತು ಆಯ್ಕೆಯಾದ ಇತರ ಇಪ್ಪತ್ತು ಕತೆಗಳ ಸಂಕಲನ ಬಿಡುಗಡೆ ಆಗಲಿದೆ ಎಂದು ಪ್ರಧಾನ ಸಂಪಾದಕ ದೇವೆಂದ್ರ ಹೂಡಾ. ಸಿಂಧನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‍ಲೇಖಕರು Avadhi

13 February, 2021

1 Comment

  1. ವಿಜಯಾ ಎಸ್. ಪಿ

    ಅಭಿನಂದನೆಗಳು ಮೆಹಂದಳೆಯವರೇ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading