ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೂಷಿಕ ಸಂಹಾರ!

ಎಸ್.ಜಿ.ಶಿವಶಂಕರ್

ಕಣ್ಣಿಗೆ ಕಂಡಿದ್ದು ನಂಬಲಾಗಲಿಲ್ಲ! ಕನಸಿರಬೇಕೆನ್ನಿಸಿತು..ಮೈ ಚಿವುಟಿಕೊಂಡೆ! ನೋವಾಯಿತು! ಕಂಡಿದ್ದು ಕನಸಾಗಿರಲಿಲ್ಲ!ವಿಶ್ವ ಸೊಂಪಾಗಿ ನಿದ್ರಿಸುತ್ತಿದ್ದ! ಅದೂ ಹಾಡುಹಗಲೇ, ಕಾರ್ಾಖಾನೆಯ ಒಳಗೆ ತನ್ನ ಚೇಂಬರಿನಲ್ಲಿಯೇ! ಅವನ ಭಂಡತನಕ್ಕೆ ನನಗೇ ಹೆದರಿಕೆಯಾಯಿತು! ಭುಜ ಹಿಡಿದು ಅಲ್ಲಾಡಿಸಿದೆ..ಏಳಲಿಲ್ಲ! ಇನ್ನೂ ಜೋರಾಗಿ ಅಲುಗಾಡಿಸಿದೆ..ಉಹುಂ! ಹೆಸರು ಹಿಡಿದು ಕೂಗಿದೆ..ಆಗಲೂ ಇಲ್ಲ! ವಿಧಿಯಿಲ್ಲದೆ ಅವನ ಟೇಬಲ್ಲಿನ ಮೇಲಿದ್ದ ಲೋಟದಿಂದ ಒಂದಿಷ್ಟು ನೀರು ಮುಖಕ್ಕೆ ಪಟ್ಟನೆ ಎರಚಿದೆ.ಬಹಳ ಪ್ರಯಾಸದಿಂದ ವಿಶ್ವ ಕಣ್ಬಿಟ್ಟ!’ಓ..ನೀನಾ..? ಯಾಕೆ ಎಬ್ಬಿಸಿದೆ..?’ ತೊದಲಿದ..ಅರೆನಿದ್ರೆಯಲ್ಲಿ.’ಎಲ್ಲಿದ್ದೀಯಾಂತ ಎಚ್ರ ಇದೆಯೇನೋ..? ಇದು ಫ್ಯಾಕ್ಟರಿ! ಇದು ವರ್ಕಿಂಗ್ ಟೈಮು ..ನಿನ್ನಂತಾ ಸೀನಿಯರ್ ಪೊಸಿಷನ್ನಲ್ಲಿ ಇರೋನು ಹೀಗೆ ನಿದ್ರೆ ಮಾಡಿದ್ರೆ..? ವಿಜಿಲೆನ್ಸ್ ನೋಡಿದ್ರೇನೋ ಗತಿ..?”ಯಾವೋನಾದ್ರೂ ನೋಡ್ಕೊಳ್ಳಲಿ..ಏನಾದ್ರೂ ಹಾಳಾಗ್ಲಿ..ನಾನೀಗ ನಿದ್ರೆ ಮಾಡ್ಬೇಕು..!’ ವಿಶ್ವ ಅಸ0ಬದ್ಧವಾಗಿ ಅರೆನಿದ್ರೆಯಲ್ಲಿ ನುಡಿದ.’ನಿದ್ರೆ ಬೇಕಾದ್ರೆ ಮನೆಗೆ ಹೋಗಿ ಮಾಡು..”ಅಲ್ಲೆಲ್ಲಿ ನಿದ್ರೆ ಮಾಡೋಕಾಗುತ್ತೆ..?’ ಒಗಟಿನಂತಿತ್ತು ವಿಶ್ವನ ಮಾತು!ಮನೆಯಲ್ಲಿ ನಿದ್ರೆ ಮಾಡೋಕಾಗೊಲ್ಲಾ ಅ0ದ್ರೇನರ್ಥ..? ನನಗೆ ಅರ್ಥವಾಗಲಿಲ್ಲ!

ಕಾಫಿ ತರಿಸಿ ತೂಕಡಿಸುತ್ತಿದ್ದ ವಿಶ್ವನಿಗೆ ಬಲವಂತವಾಗಿ ಕುಡಿಸಿದೆ. ಸ್ವಲ್ಪ ವಾಸಿ ಎನ್ನಿಸಿತು. ‘ಬಾಸಿಗೆ ಫೋನು ಮಾಡಿ ಪರ್ಮಿಶನ್ ತಗೋ..ನಾನು ನಿನ್ನ ಮನೆಗೆ ಬಿಟ್ಟು ಬರ್ತೀನಿ..ಅಲ್ಲಿ ನಿದ್ರೆ ಮಾಡುವಿಯಂತೆ!”ನಾನು ಹೇಳಿದ್ದು ನಿಂಗೆ ಅರ್ಥವಾಯ್ತಾ..? ಇಲ್ಲಾ ಬೇರೆ ಬಾಷೇಲಿ ಹೇಳ್ಬೇಕ..? ಮನೇಲಿ ನಿದ್ರೆ ಮಾಡೋಕಾಗೊಲ್ಲ! ಗೊತ್ತಾಯ್ತಾ..? ಇನ್ನು ಇದಕ್ಕೆ ಆ ಕೆಟ್ಟ ಬಾಸಿನ ಸುಟ್ಟ ಪರ್ಿಮಶನ್ ಬೇರೆ..?’ವಿಶ್ವನ ಪಿತ್ತ ನೆತ್ತಿಗೇರಿದಂತಿತ್ತು!’ನಿನ್ನ ಮಾತೇ ನಂಗರ್ಥವಾಗ್ತಿಲ್ಲ..! ಮನೇಲಿ ಯಾಕೆ ನಿದ್ರೆ ಮಾಡೋಕಾಗೊಲ್ಲ ?’ ಅರ್ಥವಾಗದೆ ಕೇಳಿದೆ!’ಅದು ಸ್ವಲ್ಪದ್ರಲ್ಲಿ ಹೇಳೋಕಾಗೊಲ್ಲ..ಈಗೊಂದ್ಕೆಲ್ಸ ಮಾಡ್ತೀನಿ..ತುಂಬಾ ಇರುಸುಮುರುಸು ಅಂತ ಮೆಡಿಕಲ್ ಸೆಂಟರಿಗೆ  ಹೋಗ್ತೀನಿ..ಡಾಕ್ಟರು ನಮ್ಮ ಮಂಗ್ಳೂರು ಮಾಮ ಒಂದರ್ಧ ಗಂಟೆ ಮಲಗಿ ರಿಲ್ಯಾಕ್ಸ್ ಮಾಡ್ಕೊಂಡು ಹೋಗಿ ಅಂತಾರೆ..ಆಮೇಲೆ ಮನೆ ವಿಷಯ ಹೇಳ್ತೀನಿ!’ ವಿಶ್ವ ನನ್ನನ್ನು ಗೊಂದಲದಲ್ಲಿ ಸಿಕ್ಕಿಸಿ ಎದ್ದು ಆಕಳಿಸಿ, ಮೆಡಿಕಲ್ ಸೆಂಟರಿನತ್ತ ನಡೆದ. ನಾನೂ ಜೊತೆಯಲ್ಲಿ ಹೆಜ್ಜೆ ಹಾಕಿದೆ; ಅಕಸ್ಮಾತ್ ನಿದ್ರೆಯಲ್ಲಿ ಬಿದ್ದರೆ ಎಂದು!

ಮೆಡಿಕಲ್ ಸೆಂಟರ್ ಮಂಗ್ಳೂರು ಮಾಮ ಧೀರ್ಘವಾಗಿ ಒಮ್ಮೆ ಸಿಗರೇಟಿನ ಹೊಗೆ ಎಳೆದು ವಿಶ್ವನತ್ತ ಪರೀಕ್ಷಾರ್ಥಕವಾಗಿ ನೋಡಿದರು. ಬಹಳ ತಮಾಷೆಯ ವೈದ್ಯರು ಶಣೈ. ನಾವೆಲ್ಲಾ ಆತ್ಮೀಯತೆಯಿಂದ ಮಂಗ್ಳೂರು ಮಾಮ ಎಂದೇ ಕರೆಯುವುದು. ಎಲ್ಲರಿಗೂ ಸಿಗರೇಟು ಸೇದಬೇಡಿ ಎಂದು ಉಪದೇಶಿಸುವ ಶಣೈ ಚೈನ್ ಸ್ಮೋಕರ್! ಎಣ್ಣೆ, ತುಪ್ಪ ತಿನ್ನಬೇಡಿ, ಕರಿದ ಪದಾರ್ಥ ಸೇವಿಸಬೇಡಿ, ಮದ್ಯ ಸೇವಿಸಬೇಡಿ ಎನ್ನುವ ಡಾಕ್ಟರು ತಾವು ಉಪದೇಶಿಸುವುದನ್ನ ತಾವು ಮಾತ್ರ ಪಾಲಿಸರು!’ಮನೆಯಲ್ಲಿ ಮಹಾಭಾರತವಾಯಿತೋ..?’ ವಿಶ್ವನನ್ನು ಪ್ರಶ್ನಿಸಿದರು.’ಜಗಳವೂ ಇಲ್ಲ ಮಣ್ಣಾಂಗಟ್ಟಿಯೂ ಇಲ್ಲ!’ ‘ಮತ್ತೆ ಈ ಅನೀಜಿನೆಸ್ ಎಂತಾಕ್ಕೆ..?’ ‘ಅದನ್ನ ನೀವು ಹೇಳ್ಬೇಕು ಡಾಕ್ಟರೇ..”ಇದು ಬಹುಶಃ ಒತ್ತಡ ಇರಬಹುದಲ್ಲವೋ..? ಬಾಸು ಕೂಡ ಜಗಳ ಆಡಿದ್ದು ಉಂಟೋ..?”ಬಾಸಿನ ಜೊತೆ ಜಗಳ ಆಡದೆ ಇದ್ದ ದಿನವೇ ಇಲ್ಲ..! ಇವತ್ತೇನು ಹೊಸತಲ್ಲ..’ವಿಶ್ವ ಊಹಿಸಿದಂತೆ ಮಂಗ್ಳೂರು ಮಾಮ ವಿಶ್ವನನ್ನು ಎರಡು ಗಂಟೆ ಮಲಗಿದ್ದು ರಿಲ್ಯಾಕ್ಸ್ ಮಾಡಲು ಹೇಳುತ್ತಿದ್ದಾಗ ನನ್ನ ಮೊಬೈಲು ರಿಂಗಾಯಿತು!’ಸಾರ್ ಎಲ್ಲಿದ್ದೀರಾ..? ನೀವು ಇಲ್ಲ.. ವಿಶ್ವ ಸಾರೂ ಸೀಟಲ್ಲಿ ಇಲ್ವಂತೆ…ಬಾಸು ಗರಂ ಆಗಿದ್ದಾರೆ..’ ನನ್ನ ಪಿ.ಎ ಪಿಸುಗುಟ್ಟಿತು!’ಮೆಡಿಕಲ್ ಸೆಂಟರ್ನಲ್ಲಿದ್ದೀನಿ ಹತ್ನಿಮಿಷದಲ್ಲಿ ಬರ್ತೀನಿ..’ ಎಂದು ಹೇಳಿ ವಿಶ್ವನತ್ತ ತಿರುಗಿದೆ.’ಯಾರೋ..ಅದು..? ಆ ಬಾಸಾ..? ಐ ವಿಲ್ ಸೆಂಡ್ ಹಿಮ್ ಫಾರ್ ಎ ಟಾಸ್’ ವಿಶ್ವ ಗುಡುಗಿದ.ಮಂಗ್ಳೂರು ಮಾಮ ಪಕಪಕನೆ ನಕ್ಕಿತು! ‘ಇಲ್ಲಿ ಉಂಟಲ್ಲ ಮಾರಾಯ್ರೇ ನಿಮ್ಮ ಕಿರಿಕಿರಿಗೆ ರೂಟ್ಕಾಸು..ಅದು ನಿಮ್ಮ ಬಾಸು..ಇರಲಿ ಕೊಂಚ ರಿಲ್ಯಾಕ್ಸ್ ಆಗಿ’ ಆಮೇಲೆ ಭೇಟಿ ಮಾಡೋಣ ಎಂದು ವಿಶ್ವನಿಗೆ ಹೇಳಿ ಡಿಪಾಟ್ಮರ್ೆಂಟಿನತ್ತ ಧಾಪುಗಾಲು ಹಾಕಿದೆ.

ವರ್ಕ್ಷಶಾಪಿನಲ್ಲಿ  ಕೆಲಸಕ್ಕೆ ತೊಡಗಿಸಿಕೊಂಡರೆ ಸಮಯ ಹೋಗುವುದೇ ತಿಳಿಯುವುದಿಲ್ಲ. ಹತ್ತಾರು ಕೆಲಸಗಾರರು ತರುವ ಸಮಸ್ಯೆಗಳಿಗೆ ಪರಿಹಾರ ಹೇಳುತ್ತಾ ಅವರ ಕೆಲಸವನ್ನು ವೀಕ್ಷಿಸುತ್ತಾ ನಿಂತರೆ ಊಟದ ಸಮಯವೇ ಬಂದುಬಿಡುತ್ತದೆ.ವಿಶ್ವ ವಕ್ಷರ್ಾಪಿನ ಬಾಗಿಲಲ್ಲಿ ನಿಂತು ಲಂಚಿಗೆ ಹೋಗೋಣ ಅಂದು ಸನ್ನೆ ಮಾಡಿದ. ನನ್ನ ಅಸಿಸ್ಟೆಂಟಿಗೆ ಹೇಳಿ ವಿಶ್ವನ ಜೊತೆ ಕ್ಯಾಂಟೀನು ಸೇರಿದೆ.ಊಟದ ತಟ್ಟೆಗಳನ್ನು ಮುಂದಿಟ್ಟುಕೊಂಡಾಗ ಅದುವರೆಗೂ ಮೌನದಿಂದಿದ್ದ ವಿಶ್ವ ಬಾಯಿಬಿಟ್ಟ.’ಇವತ್ತು ಬಾಸ್ ತಲೆಗೆ ಬಿಸಿ ನೀರು ಸುರಿದೆ’ ತಮಿಳು ಸಿನಿಮಾದ ಖಳನಟನಂತೆ ಗಹಗಹಿಸಿ ನಕ್ಕ!’ಏನ್ಮಾಡಿದೆಯೋ..?’ ಗಾಬರಿಯಿಂದ ಕೇಳಿದೆ.’ನನ್ನ ಪಿ.ಎ ಕೈಯಲ್ಲಿ ನೀವು ವಿಶ್ವನಾಥ್ ಮೇಲೆ ರೇಗಿದ್ದಕ್ಕೆ ಅವರು ಅಪ್ಸೆಟ್ ಅಗಿ ಎದೆನೋವು ಬಂದು ಮೆಡಿಕಲ್ ಸೆಂಟರ್ಗೆ ಹೋಗಿದಾರೆ..ನಿಮ್ಮ ಹಿಂಸೆ ಜಾಸ್ತಿಯಾಗಿ ನೆನ್ನೆಯಿಂದ ನಿದ್ರೆ ಮಾಡಿಲ್ಲ ಅಂತ ಹೇಳಿಸಿದೆ’ ಗುಟ್ಟು ಹೇಳುವವನಂತೆ ಹೇಳಿದ.’ಅದು ಸುಳ್ಳಲ್ಲವಾ..?”ಹೌದು..ನಿಜವಾದ ವಿಷ ಬೇರೆ..’ನನ್ನ ಕುತೂಹಲ ಕೆರಳಿತ್ತು! ಎರಡು ಬಾರಿ ವಿಶ್ವ ಹೇಳಿದ್ದ, ಮನೆಗೆ ಹೋದರೆ ನಿದ್ರೆ ಮಾಡೋದಕ್ಕೆ ಆಗೋದಿಲ್ಲ ಅಂತ..! ಅದೇನು ಕಾರಣ..? ನನಗೆ ಈ ವಿಶಯದಲ್ಲಿ ಆಸಕ್ತಿ ಮೂಡಿದೆ ಎಂದರೆ ವಿಶ್ವ ಹೇಳಲಿರುವುದನ್ನು ಇನ್ನಷ್ಟು ಮುಂದೆ ಹಾಕುತ್ತಾನೆ ಎಂದು ತಿಳಿದಿದ್ದರಿಂದ ಸುಮ್ಮನಾದೆ.’ಈ ಚಪಾತಿ ಕೈಯಲ್ಲಿ ಹರಿಯೋದಕ್ಕಾಗೊಲ್ಲ..ಕತ್ತರೀನೇ..ಬೇಕು..ಮ್ಯಾನೇಜ್ಮೆಂಟಿಗೆ ಈ ಸಜೆಷನ್ ಕೊಡಬೇಕು’ ಎಂದು ವಿಶ್ವ ಚಪಾತಿಯನ್ನು ಎರಡೂ ಕೈಗಳಿಂದ ತುಂಡು ಮಾಡುವ ಪ್ರಯತ್ನ ಮಾಡಿದ.’ಮೂರು ದಿವಸದಿಂದ ನಾನು ನಿದ್ರೆ  ಮಾಡಿಲ್ಲ..”ಯಾತಕ್ಕೆ…?”ಅದು ದೊಡ್ಡ ಕತೆ..”ಸಣ್ಣದಾಗಿ ಹೇಳು” ಈ ಸಾಂಬಾರಿನ ಟೇಸ್ಟು ವಿಚಿತ್ರವಾಗಿದೆ ಅಲ್ವಾ..?’ ವಿಶ್ವ ಉದ್ಗರಿಸಿದ.

ನನಗೆ ಅವನ ನಿದ್ರಾಹೀನತೆ ಕಾರಣ ಬೇಕಾಗಿತ್ತು, ಸಾಂಬಾರಿನ ವಿಶಯವಲ್ಲ! ‘ಕ್ಯಾಂಟೀನಿನ ಆಚೆ ಒಂದು ಮರ ಇದೆಯಲ್ಲ..? ಅದರಲ್ಲಿ ಎಲೆ ಇತ್ತಾ ನಾವು ಬರೋವಾಗ..?”ಯಾಕೆ..?”ಅದನ್ನೆ ತರಿದು ಸಾಂಬಾರಿಗೆ ಹಾಕಿದಾನೇನೋ ಅಂತ ಅನುಮಾನ…ವಿಚಿತ್ರವಾಗಿದೆ ಟೇಸ್ಟು..ಅದ್ರೂ ಒಂಥರಾ ಇದೆ..’  ಚಪ್ಪರಿಸಿದ ವಿಶ್ವ!’ಮನೇಲಿ ನಿದ್ರೆ ಬರೊಲ್ಲಾಂತ ಬಡ್ಕೋತಾ ಇದ್ದೀಯ..ಅದು ಹೇಳೋದು ಬಿಟ್ಟು ಸಾಂಬಾರಿನ ಮೇಲೆ ಕಮೆಂಟರಿ ಹೊಡೀತಾ ಇದ್ದೀಯ..”ಓ..ಅದಾ..ಹೇಳ್ತೀನಿ..ಮೂರು  ದಿನದ ಹಿಂದೆ ಗಡದ್ದು ನಿದ್ರೆಯಲ್ಲಿದ್ದೆ. ವಿಶಾಲೂ ಮಾಮೂಲಿನ ಹಾಗೆ ಟಿವಿ ಚಾನಲ್ಲಿನವರು ಪ್ರಸಾರ ನಿಲ್ಲಿಸೋವರೆಗೂ ನೋಡಿ ಮಲಗೋಕೆ ಬಂದವಳು ನನ್ನನ್ನು ಎಬ್ಬಿಸಿದಳು. ಕಷ್ಟಪಟ್ಟು ನಿದ್ರೆಯಿಂದ ಎದ್ದು ಯಾಕೆ ನಿದ್ರೆ ಹಾಳುಮಾಡಿದೆ  ಅಂತ ಕೇಳಿದೆ. ಹುಶ್..ಸದ್ದು ಮಾಡಾಬೇಡಿ ಕೇಲಿಸ್ಕೊಳ್ಳಿ ಎಂದು ಪಿಸುಗುಟ್ಟಿದಳು. ಏನೂ ಕೇಳಿಸಲಿಲ್ಲ ಅಂದೆ. ಸರಿಯಾಗಿ ಕೇಳಿಸ್ಕೊಳ್ಳಿ ಅಂತ ಗದರಿಸಿದಳು, ನಾನು ಹೆದರಿದೆ! ನಿದ್ರೆ ಹಾರಿ ಹೋಗಿತ್ತು! ಕಳ್ಳ ಬಂದಿರಬಹುದೂಂತ ಗಾಬರಿಯಾಯ್ತು. ಕಣ್ಮುಂದೆ ದೊಣ್ಣೆ, ಗರುಡ, ಹೊಯ್ಸಳ, ಅಂಬುಲೆನ್ಸು ಎಲ್ಲ ಕುಣಿದವು. ಆದರೂ ನನಗೆ ಯಾವ ಶಬ್ದವೂ ಕೇಳಿರಲಿಲ್ಲ!”ಏನೂ ಕೇಳಿಸ್ತಿಲ್ಲವಲ್ಲೆ..?’ ಎಂದು ಪುನರುಚ್ಚರಿಸಿದ್ದೆ.’ಕರ್ಮ..ಕರ್ಮ’ ಹಣೆ ಚಚ್ಚಿಕೊಂಡಳು ವಿಶಾಲೂ.’ನಿನ್ನ ಹಣೇಗೆ ನೀನೇ ಯಾಕೆ ಬಾರಿಸ್ಕೋತಿದ್ದೀಯಾ..? ಬ್ರಹ್ಮನ ಬರಹ ಎಲ್ಲಾ ಅಳಿಸಿಹೋದೀತು”ಅಲ್ರೀ ಅಟ್ಟದ ಮೇಲೆ ಅಷ್ಟು ಚೆನ್ನಾಗಿ ಕೇಳ್ತಿದೆ..ಏನೂ ಇಲ್ಲಾಂತೀರಲ್ಲ..ಇದು ನನ್ನ ಕರ್ಮ ಅಲ್ಲದೆ ಇನ್ನೇನು..?’ಶ್..ಅಂತ ಮತ್ತೆ ಸುಮ್ಮನಿರಿಸಿದಳು. ನನ್ನ ಗಮನವನ್ನೆಲ್ಲಾ ಆಟ್ಟದ ಕಡೆಗೆ ತಿರುಗಿಸಿದೆ…ಹೌದು..ಏನೋ ಶಬ್ದ!’ಏನೋ.. ಕೆರಿಯೋ ಶಬ್ದ! ಯಾರೋ ಕೆರೀತಿದ್ದಾರೆ..ಎಷ್ಟೋ  ವರ್ಷದಿಂದ ಸ್ನಾನ ಮಾಡಿಲ್ಲದೆ ಇರೋರು ಮೈಕೆಕರ್ೋತಿರೋಹಾಗಿದೆ!

”ಯಾರೋ..ಅಲ್ಲ..ಇಲಿ..ಇಲೀರೀ..’ ಹುಲಿಗೂ ಇಷ್ಟು ಹೆದರಿಸಲಾರರು ಆ ರೀತಿಯಲ್ಲಿ ಹೆದರಿಸಿದಳು ವಿಶಾಲೂ! ‘ಬರೀ ಇಲಿ..ಹುಲಿ ಅಲ್ವಲ್ಲ..?’ ನಾನು ಪಕಪಕನೆ ನಕ್ಕಿದ್ದಕ್ಕೆ ವಿಶಾಲೂ ತಲೆ ಮೇಲೆ ಮೊಟಕಿದಳು.’ಹುಲಿ ಆದ್ರೆ ಸುಲಭ..ಹಿಡಿಯೋಕೆ ಫಾರೆಸ್ಟ್ ಡಿಪಾಟ್ಮರ್ೆಂಟಿನೋರು ಬತರ್ಾರೆ! ಇಲಿ ಹಿಡಿಯೋಕೆ ಯಾರು ಬತರ್ಾರೆ..?’ ವಿಶಾಲೂ ಪ್ರಶ್ನಿಸಿದಳು.’ಪ್ರಾಣಿ ದಯಾಸ0ಘದವರು..?”ಇದುವರೆಗೂ ಇಲಿ ಮೇಲೆ ದೌರ್ಜನ್ಯದ ಕೇಸು ದಾಖಲಾಗಿಲ್ಲ! ಇಲಿ ಅವರ ಪಟ್ಟಿಯಲ್ಲಿ ಇಲ್ಲ. ಈಗ ಏಳಿ..ಇಲೀನ ಹೊಡೀಬೇಕು!”ಅಂದ್ರೆ..? ಮರ್ಡರ್..?”ಹೌದು ಮರ್ಡರ್..ತಗೊಳ್ಳಿ ದೊಣ್ಣೆ..ಹತ್ತಿ ಅಟ್ಟ’ ವಿಶಾಲೂ ಅವಸರಿಸಿದಳು.’ವಿಶಾಲೂ ಮಾತಿಗೆ  ನನ್ನ ಮೂಡ್ ಆಫ್ ಆಯಿತು. ಮೊದಲಿಗೆ ಸೊಂಪಾಗಿ ಅಡರಿದ್ದ ನಿದ್ರೆ ಹೋಗಿತ್ತು! ಈಗ ಅಟ್ಟ ಹತ್ತಿ ಆ ಇಲಿ ಬೇಟೆ ಬೇರೆ! ಸಾಕಪ್ಪಾ ಈ ಮನುಷ್ಯ ಜನ್ಮ ಅನ್ನಿಸಿಬಿಡ್ತು”ಮತ್ತೇನು ಮಾಡಿದೆ..?”ಇಷ್ಟೊತ್ತಲ್ಲಿ ಅಟ್ಟ ಹತ್ತಿ ಇಲಿ ಹೊಡಿಯೋದು ಆಗದ ಮಾತು ಬೆಳಿಗ್ಗೆ ನೋಡೋಣ ಅಂತ ತಾರಮ್ಮಯ್ಯ ಆಡಿಸಿದೆ”ಬೆಳಿಗ್ಗೆ ಹೊತ್ತಿಗೆ ಅದೆಷ್ಟು ದಾಂಧಲೆ ಮಾಡಿರುತ್ತೆ ಗೊತ್ತಾ..? ಎಂದು ಪ್ರಶ್ನೆ ಹಾಕಿದಳು. ವಿಶಾಲೂ ಪ್ರಶ್ನೆಗೆ ಉತ್ತರ ಬಹುಶಃ ಆ ಇಲೀಗೂ ಗೊತ್ತಿರಲಾರದು”ಏಳ್ರೀ ಮೊದ್ಲು, ಎಂತಾ ಸೋಂಭೇರಿ..ಫ್ಯಾಕ್ಟರೀಲಿ ಅದೇನು ಕಡೀತೀರೊ…ದೇವರಿಗೇ ಗೊತ್ತು, ಇದಕ್ಕೆ ನಿಮಗೆ ಪ್ರಮೋಷನ್ನುಗಳು ಬೇರೆ..”ವಿಶಾಲೂ ಅಣಕಕ್ಕೆ ಬೆದರಿ ನಾನು ಅಡಿಗೆ ಮನೆಯೊಳಗೆ ನಿಂತೆ! ವಿಶಾಲೂ ತಕ್ಷಣ ಅಡಿಗೆ ಮನೆ ಬಾಗಿಲು ಹಾಕಿ ಇಲಿಗೆ ದಿಗ್ಭಂಧನ ಹಾಕಿ ತಾನು ಹೊರಗೆ ನಿಂತಳು! ಒಂದು ಸ್ಟೂಲು ಹಾಕಿಕೊಂಡು ಅಟ್ಟದ ಮೇಲೆ ಒಂದು ಸಾರಿ ಅವಲೋಕನ ಮಾಡಿದೆ. ಯಾವುದೇ ರೀತಿಯ  ಪ್ರತಿಕ್ರಿಯೆಯೂ ಕಾಣಲಿಲ್ಲ. ಇಲಿ ಅಟ್ಟದಲ್ಲಿರುವುದಕ್ಕೆ ಯಾವುದೇ ರೀತಿಯ ಸೂಚನೀಯೂ ಇರಲಿಲ್ಲ.ಆದರೆ ವಿಶಾಲೂ ನಂಬಬೇಕಲ್ಲ..? ಇಲಿ ಅಲ್ಲಿದೆ ಅಂತಲೇ ಅವಳ ವಾದ”ಈಗ ಆಡಿಗೆ ಮನೆ ಬಾಗಿಲು ಹಾಕಿ ಮಲಗಿಬಿಡೋಣ, ಬೆಳಿಗ್ಗೆ ಎದ್ದ ತಕ್ಷಣ ಅಟ್ಟ ಹತ್ತಿ ಇಲೀನ ಬಡಿದು ಹಾಕೋಣ’ ಎಂದು ವಿಶಾಲೂ ನಂಬಿಸುವಲ್ಲಿ ಯಶಸ್ವಿಯಾಗಿದ್ದೆ.

ಬಹಳ ಹಿಂದೆ ಇಂತಾದ್ದೇ ಒಂದು ಸಂದರ್ಭದಲ್ಲಿ ಇಲಿ ಪಾಷಾಣ ತಂದಿತ್ತು ವಿಶಾಲೂ ನೆನಪಿಸಿದಳು! ಅದನ್ನು ಹುಡುಕಿ ತೆಗೆದು ಅದಕ್ಕೆ ಒಂದಿಷ್ಟು ಅನ್ನ ಬೆರಸಿ ಅಟ್ಟದ ಮೇಲಿಟ್ಟು ಮಲಗುವಾಗ ಬೆಳಗಿನ ಝಾವ ಮೂರು ಗಂಟೆಯಾಗಿತ್ತು! ಈಗ ಗೊತ್ತಾಯ್ತಾ..ಮನೇಲಿ ಮಲಗೋಕೆ ಆಗೊಲ್ಲ ಅಂದಿದ್ದು”ಕಾರಣ ಗೊತ್ತಾಯ್ತು…ರಾತ್ರಿ ಪಾಷಾಣ ತಿಂದ ಇಲಿ ಸತ್ತು ಬಿದ್ದಿತ್ತಾ..?’ಕುತೂಹಲದಿಂದ ಕೇಳಿದೆ.’ಅರ್ಧ ಪಾಷಾಣ ತಿಂದಿತ್ತು..ಆದ್ರೆ ಸತ್ತಿದ್ದು ಗೊತ್ತಿಲ್ಲ..! ಅದು ಸತ್ತಿರುತ್ತೆ ಅಂತಾ ವಿಶಾಲೂ ನನ್ನ ಪುಸಲಾಯಿಸಿ ಅಟ್ಟಾ ಹತ್ತಿಸೋಕೆ ಪ್ರಯತ್ನಿಸಿದಳು. ನಾನು ಛೇರ್ಮನ್ ವಿಸಿಟ್ಟಿದೆ ಅಂತ ತಪ್ಪಿಸಿಕೊಂಡೆ ಬಂದೆ’ ಅಪಾಯದಿಂದ ತಪ್ಪಿಸಿಕೊಂಡಂತೆ ವಿಶ್ವ ನಿಟ್ಟುಸಿರು ಬಿಟ್ಟ!’ರಾತ್ರಿ ನಿದ್ದೆಗೆಟ್ಟಿದ್ದೀಯ..ಇಲ್ಲಿ ತೂಕಡಿಸಿದರೆ ಚೆನ್ನಾಗಿರೊಲ್ಲ..ಮನೇಗಿ ಹೋಗಿ ಮಲಕ್ಕೋ..’ ಅವನ ಸ್ಥಿತಿಗೆ ಕನಿಕರಿಸಿ ಹೇಳಿದೆ.’ನೀನು ನನ್ನ ಸ್ನೇಹಿತ ಅಂದ್ಕೊಂಡಿದ್ದೆ’ ಗುರಾಯಿಸಿದ ವಿಶ್ವ.’ಅಂತಾದ್ದೇನು ಮಾಡಿದೆ ನಾನು..?’ ಗಾಬರಿಯಿಂದ ಕೇಳಿದೆ. ‘ಮನೆಗೆ ಹೋದ್ರೆ ಮಲಗೋಕೆ ಆಗೊಲ್ಲ! ಅಟ್ಟ ಹತ್ತಬೇಕಾಗುತ್ತೆ! ನೀನು ಯಾವುದೋ ಜನ್ಮದಲ್ಲಿ ವಿಶಾಲೂ ಅಣ್ಣನೋ ತಮ್ಮನೋ ಆಗಿದ್ದೆ ಅನ್ನಿಸುತ್ತೆ’

ವಿಶ್ವನ ಬ್ರಹ್ಮಾಸ್ತ್ರಕ್ಕೆ ಹೆದರಿ ಬಾಯಿಮುಚ್ಚಿಕೊಂಡೆ. ಇಬ್ಬರೂ ಕ್ಯಾಂಟೀನಿನಿಂದ ಹೊರಬಂದು ನಮ್ಮ ಡಿಪಾಟ್ಮರ್ೆಂಟಿನತ್ತ ನಡೆದುವು.

ಮಧ್ಯಾನ್ಯ ಸುಮಾರು ಮೂರು ಗಂಟಯ ಸಮಯದಲ್ಲಿ ಇಂಟರ್ಕಾಮ್ ರಿಂಗಣಿಸಿತು. ‘ಸಾರ್..ಬಾಸು..’ ಫೋನಿನಲ್ಲಿ ಪಿ.ಎ ದನಿ ಕೇಳಿತು.’ಕನೆಕ್ಟ್”ರೀ..ನಿಮ್ಮ ಫ್ರೆಂಡಿಗೆ ಸ್ವಲ್ಪಾನೂ ಮಾನ ಮಯರ್ಾದೆ ಇಲ್ಲ..’ ಬಾಸು ಅಲವತ್ತುಗೊಂಡಿತು.’ಯಾಕ್ಸಾರ್..ಏನಾಯ್ತು..?”ನಾನೇದ್ರೂ ಬುದ್ದಿ ಮಾತು ಹೇಳಿದ್ರೆ ಫ್ಯಾಕ್ಟ್ರಿ ತುಂಬಾ ನಾನು ಹಿಟ್ಲರ್ ಅಂತ ಸುದ್ದಿ ಹರಡ್ತಾರೆ..!”ಏನಾಯ್ತು ಸಾರ್..?”ಬೆಳ್ಳಂಬೆಳಿಗ್ಗೆ ಛೇಂಬರಿನಲ್ಲಿ ನಿದ್ರೆ ಹೊಡೀತಿದ್ದಾರಲ್ರೀ… ಏನಾದ್ರೂ ಮಾಡೀಪ್ಪಾ..ಪ್ಲೀಸ್..’ಬಾಲ್ಡಿ ಬಾಸ್ ಬಿಶ್ವಾಸ್ ಹಲುಬಿತು.ಕನರ್ಾಟಕದಲ್ಲಿನ ಎಲ್ಲಾ ಫ್ಯಾಕ್ಟರಿಗಳಲ್ಲಿರುವಂತೆ ನಮ್ಮಲ್ಲೂ ಅನ್ಯಭಾಷಿಗರೇ ಹೆಚ್ಚು! ಬಿಶ್ವಾಸ್ ತಾತ ್ಪ ಕನರ್ಾಟಕದ ಜನರ ಹೃದಯ ವೈಶಾಲತೆ ಮತ್ತು ಪೆದ್ದುತನ ಕಂಡು ಬೆಂಗಳೂರಿನಲ್ಲಿ ತಳ ಊರಿದ ಬೆಂಗಾಲೀ ಕುಳ.’ನಾನು ಹೋಗಿ ನೋಡ್ತೀನಿ ಸಾರ್..ನೀವೇನೂ ಯೋಚ್ನೆ ಮಾಡಬೇಡಿ’ ಆಶ್ವಾಸನೆ ಕೊಟ್ಟು ವಿಶ್ವನ ಆಫೀಸಿಗೆ ದೌಡಾಯಿಸಿದೆ.

ಬಿಶ್ವಾಸ್ ಮಾತು ಸತ್ಯವಾಗಿತ್ತು. ವಿಶ್ವ ಬಿಂದಾಸ್ ಆಗಿ ಗೊರಕೆ ಕೊಚ್ಚುತ್ತಿದ್ದ. ತಲೆ ಎದೆಯ ಮೇಲೊರಗಿತ್ತು. ಕೈಗಳು ಇಳಿಬಿದ್ದು ಪೂರ್ಣ ವಿಶ್ರಾಂತಿಯ ಸ್ಥಿತಿಯಲ್ಲಿದ್ದವು. ನಾನು ಗಾಬರಿಯಿಂದ ಎಚ್ಚರಿಸಿದೆ.’ಅಟ್ಟದ ಮೇಲೆ ಇಲಿ ಇಲ್ಲಾ ವಿಶಾಲೂ..ನನ್ನ ಪ್ರಾಣ ಯಾಕೆ ತೆಗೀತಿದೀಯಾ..?’ ವಿಶ್ವ ನಿದ್ರೆಯಲ್ಲಿ ಗೊಣಗಿದ.’ಏನೋ ವಿಶ್ವ ನಿನ್ನ ಕತೆ?’ಕಷ್ಟಪಟ್ಟು ವಿಶ್ವನನ್ನು ಎಬ್ಬಿಸಿದೆ. ‘ನನ್ನ ಕತೆಯಲ್ಲ…ಇಲಿ ಕತೆ”ಬಿಶ್ವಾಸ್ ಫೋನ್ ಮಾಡಿ ನೀನು ಗೊರೆಕೆ ಹೊಡೀತಿರೋ ವಿಷಯ ಹೇಳಿದ”ಬಾಸು..ಎಲೆಕೋಸು! ಅವನ ತಲೆಗೊಂದು ದಿನ ಬಿಸಿನೀರು ಸುರೀದಿದ್ದರೆ ನನ್ನ ಹೆಸರು ಬದಲಾಯಿಸ್ಕೋತೀನಿ..’ ವಿಶ್ವ ರೇಗಿದ.’ಹೀಗೇ..ಎಷ್ಟು ದಿನಾಂತ ಆಫೀಸಲ್ಲಿ ನಿದ್ರೆ ಮಾಡ್ತೀಯ..?”ಆ ಇಲಿ ಸತ್ತು ಬೀಳೋವರೆಗೂ..”ಅದು ಯಾವಾಗ ಸತ್ತು ಬೀಳುತ್ತೆ..?”ಹೋಗಿ ಆ ಇಲೀನ ಕೇಳು..!’ ವಿಶ್ವ ಕವಕ್ಕನೆ ರೇಗಿದ.’ವಿಶ್ವ ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ ತೀರಿಸಬೇಡ..ಹೀಗೆ ರೇಗೋ ಹಾಗಿದ್ದರೆ..ನಾನು ಹೋಗ್ತೀನಿ..ಏನೋ..ಸ್ನೇಹಿತಾಂತ ಹೇಳೋಕೆ ಬಂದೆ..ಇನ್ನು ನೀನುಂಟು ಬಿಶ್ವಾಸ್ ಉಂಟು’ ಬಾಗಿಲಿನತ್ತ ನಡೆದೆ.’ನಿಲ್ಲೋ ದೊಡ್ಡಾ ಮನುಷ್ಯಾ..! ನನ್ನ ಹಿತೈಷಿಯಂತೆ..! ಹಿತೈಷಿಯಾದರೆ  ಆ ಇಲೀನ ಸಾಯಿಸು ನೋಡೋಣ..!’ ಸವಾಲೆಸೆದ ವಿಶ್ವ.’ಅದು ನಿನ್ನ ಮನೆ ಇಲಿ!”ಆದ್ರೂ ಇಲಿ ತಾನೆ..? ನನ್ಮನೇಲಿದ್ರೂ ಇಲಿ..ನಿನ್ನ ಮನೇಲಿದ್ರೂ ಇಲೀ! ಎಲ್ಲಾದ್ರೂ ಅದು ಮಾಡೋದು ಒಂದೇ ಕೆಲಸ..! ಸ್ನೇಹಿತನಂತೆ ? ಹಿತೈಷಿಯಂತೆ..? ಬಿಶ್ವಾಸ್ ನನ್ನ ಬೈದಿದ್ದನ್ನು ಕೇಳಿಸ್ಕೊಂಡು ಬಂದಿದ್ದೀಯ!’ ವಿಶ್ವ ತಲೆಕೆಟ್ಟವನಂತೆ ಮಾತಾಡುತ್ತಿದ್ದ.’ಇನ್ನೇನು ಮಾಡ್ಬೇಕಿತ್ತು..?”ತಲೆ ಮೇಲೆ ಮೊಟಕಬೇಕಿತ್ತು!”ವಿಶ್ವಾ ನಿಂಗೆ ನಿದ್ರೆಯಿಲ್ಲದೆ ತಲೆಕೆಟ್ಟಿದೆ! ಅವ್ನು ಜನರಲ್ ಮ್ಯಾನೇಜರ್!”ನಿನ್ಕೈಲಿ ಇಲಿ ಸಯಿಸೋಕಾಗುತ್ತೇನೋ..?’ ವಿಶ್ವ ಚಾಲೆಂಜ್ ಮಾಡಿದ.’ಆಗುತ್ತೆ..ಆದ್ರೆ..?”ಆದ್ರೆ..ಗೀದ್ರೆ…ಇಲ್ಲಾ! ನೀನು ಸೋತರೆ..? ಏನು ಬೆಟ್ಟಿಂಗ್..?”ನಂಗೆ ಈ ಚಾಲೆಂಜೆಲ್ಲಾ ಬೇಡ”ಆದ್ರೆ ನಂಗ್ಬೇಕು!

ಇಪ್ಪತ್ನಾಲ್ಕು ಗಂಟೇಲಿ ಇಲಿ ಸತ್ತರೆ ನಾನು ತಲೆ ಬೋಳಿಸ್ಕೋತೀನಿ…ಇಲ್ದಿದ್ರೆ ನೀನು!”ಅದೆಲ್ಲಾ..ನನಗೆ ಬೇಡ..’ ನನು ತೊದಲಿದೆ_ಮಾತು ಅಡ್ಡದಾರಿ ಹೀಡಿಯಿತಲ್ಲಾಂತ!’ಹೇಡಿ..ರಣ ಹೇಡಿ…ಕವಿ, ಲೇಖಕ, ಸಾಮಾಜಿಕ ಕಳಕಳಿಯ ಚಿಂತಕ!’ ವಿಶ್ವ ಅಣಕಿಸಿದ.’ಸರಿ ಒಪ್ಪಿದೆ!’ ನನಗೂ ತಲೆ ಕೆಟ್ಟಂತಾಗಿತ್ತು!’ಇಪ್ಪತ್ನಾಲ್ಕು ಗಂಟೇಲಿ ನನ್ನ ಮನೇಲಿ ಇಲಿ ಸತ್ತು ಬಿದ್ದಿರಬೇಕು..ಇಲ್ಲಾಂದ್ರೆ ನಿನ್ನ ತಲೆ ಬೋಳು’ಸಶಬ್ದದೊಂದಿಗೆ ವಿಶ್ವ ಘೋಷಿಸಿದ_ಯುದ್ಧವನ್ನು ಘೋಷಿಸುವಂತೆ!’ಆಯ್ತಲ್ಲ..ನಡಿ ಇನ್ನು ಷಾಪಿಗೆ..ಪ್ರೊಡಕ್ಷನ್ ಗತಿ ಏನಾಗಿದೆ ನೋಡೋಣ’ ಎಂದು ಷಾಪಿನತ್ತ ಹೆಜ್ಜೆ ಹಾಕಿದೆ.ವಿಶ್ವನದು ಕೆಟ್ಟ ಹಟ! ಚಾಲೆಂಝ್ ತೆಗೆದುಕೊಂಡ ಮೇಲಂತೂ ಮುಗಿದೇ ಹೋಯಿತು! ಅವನ ಅಮ್ನೆ ಇಲಿ ಒಂದ್ವೇಳೆ ಸಯದೆ ಇದ್ದರೆ ತಾನೇ ರೇಜರ್ ತಂದು ನನ್ನ ತಲೆ ಬೋಳಿಸಲೂ ಹೇಸುವವನಲ್ಲ! ಇಲಿ ಚಿಂತೆಯನ್ನು ನನ್ನ ತಲೆಗೆ ವಗರ್ಾಯಿಸಿ ನಿಶ್ಚಿಂತನಾಗಿದ್ದ.ಮಧ್ಯಾನ್ಹ ಲಂಚ್ ಸಮಯದಲ್ಲಿ ತನ್ನ ಷಾಪಿನ ಸಹೋದ್ಯೋಗಿಗಳ ಜೊತೆ ಜೋರಾಗಿ ಮಾತಾಡುತ್ತಾ, ನಗುತ್ತಾ ಊಟ ಮಾಡುತ್ತಿದ್ದ. ನನ್ನನ್ನು ನೋಡುತ್ತಲೇ ತಲೆಯ ಮೇಲೆ ರೇಜರ್ ಆಡಿಸುವಂತೆ ಮೈಮ್ ಮಾಡಿದ.ವಿಶ್ವನ ಮನೆ ಹೊಕ್ಕಿರುವ ಇಲಿಯನ್ನು ಸಾಯಿಸುವ ಬಗೆಗೆ ನನು ಗಂಭೀರವಾಗಿ ಯೋಚಿಸಲೇಬೇಕಾಗಿತ್ತು! ಯೋಚನೆ ತೀವ್ರವಾಗುತ್ತಲೇ ಉಪಾಯ ಹೊಳೆಯಿತು_ಪವನ ಮತ್ತು ಪಿಂಕಿ! ವಿಶ್ವನ ಇಬ್ಬರು ಮಕ್ಕಳು! ಅವರನ್ನು ಉಪಯೋಗಿಸಿಕೊಂಡು ಮೂಷಿಕ ಸಂಹಾರ ಮಾಡಬಹುದು!ಸಂಜೆ ಮನೆಗೆ ಹಿಂದಿರುಗುತ್ತಲೇ ಪಿಂಕಿ ಮತ್ತು ಪವನನ್ನು ಮನೆಗೆ ಕರೆಸಿಕೊಂಡು ಯೋಜನೆಯನ್ನು ಹೇಳಿ, ಅದನ್ನು ಹೇಗೆ ಮಾಡಬೇಕು, ಯಾವ ಸಮಯದಲ್ಲಿ ಮಾಡಬೇಕು ಎಂದೆಲ್ಲಾ ವಿವರಿಸಿ ಅವರ ಅಶ್ವಾಸನೆ ತೆಗೆದುಕೊಂಡು ಕಳಿಸಿದೆ.ರಾತ್ರಿ ಎಂಟರ ಹೊತ್ತಿಗೆ ವಿಶ್ವ ಸಾಮಾನ್ಯವಾಗಿ ಕ್ಲಬ್ಬಿನಲ್ಲಿ ಕಳೆಯುವುದು. ಆ ಸಮಯದಲ್ಲಿ ವಿಶ್ವನ ಮನೆಗೆ ಹೋಗಿ ಪಿಂಕಿ ಮತ್ತು ಪವನ ನನ್ನ ಯೋಜನೆಯನ್ನು ಕಾರ್ಯಗತಗೊಳಿಸುವ ಖಾತ್ರಿ ಮಾಡಿಕೊಂಡು ಬಂದೆ.’ನೀವ್ಯಾಕೆ ಇಷ್ಟೊಂದು ತಲೆ ಕೆಡಿಸ್ಕೋತೀರಿ..’ ವಿಶ್ವನ ಮಡದಿ ವಿಶಾಲೂ ಹೇಳಿದರೂ ಕೇಳಿಸಿಕೊಳ್ಳದೆ ಮನಗೆ ಹಿಂತಿರುಗಿದೆ.ರಾತ್ರಿ ನಿದ್ರೆ ಏರುಪೇರಾಯಿತು! ಇಲಿ ಬೋನಿಗೆ ಬಿತ್ತೋ ಇಲ್ಲವೋ..?’ಯಾಕೆ ಹೀಗೆ ಒದ್ದಾಡ್ತೀರಿ..? ಫ್ಯಾಕ್ಟ್ರೀಲಿ ಏನಾದ್ರೂ ಆಯ್ತಾ..?’ ಮಡದಿ ಅಲವತ್ತುಗೊಂಡಿದ್ದಳು!ಬೆಳಗಿನ ಝಾವದಲ್ಲೊಂದು ಕನಸು. ಇಲಿ ಬೋನಿನಲ್ಲಿರಲಿಲ್ಲ! ವಿಶ್ವ ರೇಜರ್ ಹಿಡಿದು ನನ್ನ ತಲೆ ಬೋಳಿಸಲು ಬರುತ್ತಿದ್ದ! ಗಾಬರಿಯಾಗಿ ಎದ್ದೆ! ಬೆಳಿಗ್ಗೆ ಐದಾಗಿತ್ತು!ವಿಶ್ವನ ಮನೆಗೆ ಫೋನಾಯಿಸುವ ಮನಸ್ಸಾಯಿತು! ಇಷ್ಟು ಬೇಗನೆ ಬೇಡ ಎಂದು ವಾಕಿಂಗ್ ಹೊರಟೆ.ಆರೂವರೆಗೆ ಮನೆಗೆ ಹಿಂದಿರುಗಿದಾಗ ಫೋನು ರಿಂಗಣಿಸಿತು. ‘ಕಂಗ್ರಾಟ್ಸ್ ಅಂಕಲ್!’ ಪವನನ ದ್ವನಿ ಕೇಳಿ ಅಚ್ಚರಿಯಾಯಿತು.’ಏನೋ ಪವನ ಎಕ್ಸಾಮ್ ರಿಸಲ್ಟ್ ಬಂತಾ..?”ಇಲ್ಲ..ಇಲಿ ರಿಸಲ್ಟ್ ಬಂತು! ವಿಷಾನೂ ತಿಂದು  ಬೋನಿನೊಳಗೆ ಹೋಗಿ ಸತ್ತಿದೆ’ಅಬ್ಬಾ..! ನಿಟ್ಟುಸಿರುಬಿಟ್ಟೆ..! ತಲೆ ಕೂದಲು ಉಳೀತೆಂದು ಸಂತೋಷವಾಯಿತು! ತಲೆಕೂದಲ ಮೇಲೆ ಕೈಯಾಡಿಸಿಕೊಂಡೆ!
ಫ್ಯಾಕ್ಟರಿಯಲ್ಲಿ ವಿಶ್ವನ ಬೋಳು ತಲೆ ನೋಡುವ ಕುತೂಹಲದಿಂದಿದ್ದೆ. ಆದರೆ ಬೆಳಿಗಿನ ಹತ್ತು ಗಂಟೆಯಾದರೂ ವಿಶ್ವ ಪತ್ತೆ ಇರಲಿಲ್ಲ! ತಲೆ ಬೋಳಿಸ್ಕೋಬೇಕೂಂತ ಹೀಗೆ ಬಂಡಾಟ ಮಾಡುತ್ತಿರಬಹುದೆಂದು ಊಹಿಸಿದೆ.ಹನ್ನೊಂದು ಗಂಟೆಗೆ ಕುತೂಹಲ ತಾಳಲಾರದೆ ವಿಶ್ವನ ಮನೆಗೆ ಫೋನಾಯಿಸಿದೆ. ವಿಶ್ವನ ಮಡದಿ ವಿಶಾಲೂ ದನಿ ಅತ್ತಲಿಂದ ಕೇಳಿಸಿತು!’ವಿಶ್ವ ಫ್ಯಾಕ್ಟ್ರಿಗೆ ಬಂದಿಲ್ಲ..?’ಅನುಮಾನಿಸುತ್ತಾ ಕೇಳಿದೆ.’ಅವ್ರು ನೆನ್ನೆ ರಾತ್ರೀನೇ ತಿರುಪತಿಗೆ ಹೋದ್ರಲ್ಲಾ..?’ ವಿಶಾಲೂ ಹೇಳಿದ್ದು ನಂಬಲಾಗಲಿಲ್ಲ!’ಯಾಕೆ..?”ಹರಕೆಯಿತ್ತು! ಪಿಂಕಿಗೆ ಗಂಡು ಗೊತ್ತಾದ್ರೆ ಮುಡಿ ಕೊಡ್ತೀನೀಂತ ಹರಸ್ಕೊಂಡಿದ್ದರು! ನಿಮಗೆ ಹೇಳ್ಲಿಲ್ಲವಾ..?”ಮತರ್ುಹೋಗಿತ್ತು’ ಎಂದು ಫೋನಿಟ್ಟೆ.ವಿಶ್ವ ನನಗೆ ಚಳ್ಳೆ ಹಣ್ಣು ತಿನ್ನಿಸಿದ್ದ! ಸ್ವಾಮಿ ಕಾರ್ಯ, ಸ್ವಕಾರ್ಯ ಎರಡನ್ನೂ ಸಾಧಿಸಿಬಿಟ್ಟಿದ್ದ!

‍ಲೇಖಕರು avadhi

5 November, 2011

1 Comment

  1. vijayaraghavan

    ಇಪ್ಪತ್ತು ರೂಪಾಯಿಗೆ ಒಂದು ಲೀಟರು ಅಂದ. ಅದು ನಿಜಕ್ಕೂ ತಯಾರಿಸಿದವನಿಗೇ ಗೊತ್ತಿರುವ ಅಳತೆ. ಬಹಳ ವರ್ಷಗಳ ಹಿಂದೆ ಒಂದು ಸರ್ಕಾರಿ ಜೀಪಲ್ಲಿನ ಓಡೋಮೀಟರು ೯೦೦ ಮೀಟರಿಗೆ ಒಂದು ಕಿಲೋಮೀಟರು ತಿರುಗುತ್ತಿತ್ತು. ಇದೂ ಅಂತದೆ. ಆದರೂ ತಗೊಂಡೆ, ಚಪಲ. ಅದನ್ನು ಇಟ್ಟುಕೊಂಡು ಮೂಷಿಕ ಸಂಹಾರ ಓದುತ್ತಿದ್ದೆ. ಹೊಸಾ ಹಸಿ ಕಳ್ಳೇ ಕಾಯಿ ತಿಂತಿದ್ದರೆ, ಲೇಖನ ಮುಗಿದದ್ದೇ ಗೊತ್ತಾಗಲಿಲ್ಲ. ಆದರೆ ಮಹರಾಯರೆ, ಇದರಲ್ಲಿ ಎಷ್ಟೊಂದು ಪ್ರೂಫಿಂಗ್‌ ತಪ್ಪುಗಳು? ಅವಧಿಯಲ್ಲಾದರೂ ಇವನ್ನು ಸರಿಮಾಡಿಸಿ.
    R.vijayaraghavan

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading