ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೇಮಿಚಂದ್ರ ಎಂಬ 'ಚಿತ್ರದುರ್ಗ ಎಕ್ಸ್ ಪ್ರೆಸ್'

ನೇಮಿಚಂದ್ರ ರ ಜೊತೆ ಮಾತನಾಡುವುದು ಎಂದರೆ ಕನಸುಗಳಿಗೆ ನಾವೇ ರೆಕ್ಕೆ ಕಟ್ಟಿಕೊಂಡಂತೆ. ನಿರರ್ಗಳವಾಗಿ ಗಂಟೆಗೂ ಹೆಚ್ಚು ಕಾಲ ‘ಫಿಶ್ ಮಾರ್ಕೆಟ್’ ನಲ್ಲಿ ಕೇಳುಗರನ್ನು ತಮ್ಮ ಲೋಕಕ್ಕೆ ಕರೆದೊಯ್ದ ನೇಮಿ ಪ್ರತಿಯೊಬ್ಬರಲ್ಲೂ ಇರುವ ಕನಸುಗಳಿಗೆ ನೀರೆರೆದರು. ಪೆರುವಿನ ಕಣಿವೆಯಲ್ಲಿ ಅಡ್ಡಾಡಿದ್ದು, ಒಂದು ಕನಸಿನ ಪಯಣ ನಡೆಸಿದ್ದು, ವ್ಯಾನ್ ಗೋ ನ ನೋವಿಗದ್ದಿದ ಕುಂಚವನ್ನು ಹೊರತಂದದ್ದು, ನೋವಿನಲ್ಲೇ ಮುಳುಗಿದ್ದ ಫ್ಲೇವಿಯಾ ಬದುಕು ರೂಪಿಸಿಕೊಂಡಿದ್ದು, ಗೋರಿಪಾಳ್ಯದ ಒಂದು ಸಮಾಧಿ ಯಿಂದಾಗಿ ಪ್ಯಾಲೆಸ್ತೀನ್ ವರೆಗೂ ಮುಟ್ಟಿದ್ದು ಅದೇ ಮುಂದೆ ‘ಯಾದ್ ವಶೇಮ್’  ಕಾದಂಬರಿಯಾದದ್ದು ಎಲ್ಲವನ್ನೂ ಬಿಡಿಸಿಟ್ಟರು.
ಯಾದ್ ವಶೇಮ್ ಕೃತಿಯಿಂದ ಮನಕಲಕುವ ಅಧ್ಯಾಯವನ್ನು ವಾಚಿಸಿದರು.
ಚಿತ್ರದುರ್ಗ, ತುಮಕೂರು, ಬೆಂಗಳೂರು ಮೂಲಕ ಈ ಎಕ್ಸ್ಪ್ರೆಸ್  ದೇಶದ ಗಡಿಗಳನ್ನು ಅಳಿಸಿಹಾಕುವಂತೆ ಓಡಾಡಿದೆ. ಇದು ಎಲ್ಲರಿಗೂ ಒಂದು ಒಳ್ಳೆಯ ಓದಿಗೆ ಕಾರಣವಾಗಿದೆ.




‍ಲೇಖಕರು avadhi

17 August, 2008

6 Comments

  1. minchulli

    ಅವತ್ತು ಫಿಶ್ ಮಾರ್ಕೆಟ್ ಗೆ ನೆಮಿಯವರು ಬಂದಾಗ ನಾನು ಬರಲಾಗಲಿಲ್ಲ.. ಈಗ ಮತ್ತೆ ಮತ್ತೆ ಅದೇ ಚಿತ್ರ ಅದೇ ವಿಷಯ ಹಾಕಿ ಯಾಕೆ ಹೊಟ್ಟೆ ಉರಿಸುತ್ತೀರೋ ಅರಿಯೆ…

  2. malathi S

    Congrats to Nemichandra ma’am, the winner of the Karnataka Sahithya Academy award for ಯಾದ್ ವಶೇಮ್.
    🙂
    ms

  3. ರೋಹಿತ್ ರಾಮಚಂದ್ರಯ್ಯ

    ಇದ್ಯಾವತ್ ನಡ್ದಿದ್ದು ….

  4. ಕೆ. ಉಷಾ ಪಿ. ರೈ

    ಯಾದ್ ವಶೇಮ್ ಕೃತಿಗೆ ಕನಾ೯ಟಕ ಸಾಹಿತ್ಯ ಅಕಾಡೆಮಿ ಬಹುಮಾನ ಬ೦ದುದಕ್ಕೆ ಹಾಧಿ೯ಕ ಅಭಿನ೦ದನೆಗಳು.ಈ ಭಾವಚಿತ್ರಗಳು ಯಾವಾಗಿನದ್ದು?

  5. Uday Itagi

    Congrats Neimichandra Mam. ಮೊನ್ನೆ ತಾನೆ ನಿಮ್ಮ “ಯಾದ್ ವಶೇಮ್” ಓದಿದೆ. ತುಂಬಾ ಚನ್ನಾಗಿದೆ.

  6. Thippanna M.S.Jamadagni

    Srimathi Nemichandraravare,Abhinandanegalu,Yad vashem odide.
    adondu kevala pusthakavagiralilla nanage.Ondu edee samudayada novina,manasika tholalatada chithranave edurige bandanthagitthu.Kannadadalli heegondu prathi putadallu kuthoohala huttisuva,charithrika vasthavamshagalannulla kathanaka(?)vannu odi bahala dinagalagitthu.Inthaha aparoopada apoorva pusthakavannu kannadigara munditta nimage anantha dhanyavadagalu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading