ಭವ್ಯ ಕಬ್ಬಳಿ
ಕಡಲ ತೀರದಲ್ಲೊಂದು ದಿನ
ಮೀನಿನೊಂದಿಗೆ ಹಕ್ಕಿಯದು
ಮುಗಿಯಲಾರದ ಚರ್ಚೆ
ಮಾತಿನ ಮಧ್ಯೆ,
ಹಾರಲಾರದ ನಿನಗೆ ರೆಕ್ಕೆಯೇಕೆ
ಬೇಕೆಂದಿತು ಹಕ್ಕಿ
ಈಜಲಾಗದ ಮೇಲೆ ನಿನಗೇಕೆ
ರೆಕ್ಕೆಯೆಂದಿತು ಮೀನು
ಇಬ್ಬರ ಕಾದಾಟವೂ ತಣ್ಣಗಾಗದೆ
ದಡದ ಸ್ವಲ್ಪ ದೂರದಲ್ಲಿ
ಹಗುರ ಮನಸ್ಸಿನಿಂದ ಬರೆದ
ಸಾಲುಗಳಿಗೆ ರೆಕ್ಕೆಕಟ್ಟುತ್ತ
ಕುಳಿತಿದ್ದ ಕವಿಯನ್ನು ಕರೆದು,
ತಮ್ಮತಮ್ಮ ವಾದವನ್ನು ಮುಂದಿಟ್ಟರು,
ನನಗೆ ಹಗುರವಾಗಿ ಹಾರಬೇಕೆಂದಿತು ಮೀನು
ನನಗೆ ಹಗುರವಾಗಿ ಈಜಬೇಕೆಂದಿತು ಹಕ್ಕಿ

ರೆಕ್ಕೆ ಕಟ್ಟಿಕೊಳ್ಳುವುದೆಂದರೆ,
ಇದ್ದ ಹಾಗೆ ಇದ್ದು ಬಿಡುವುದು
ದಾರಿ ಮರೆತಂತೆ ಬದುಕಿಬಿಡುವುದು
-ನನ್ನ ಸಾಲುಗಳಂತೆ,
ಎಂದ ಕವಿಯ ಮಾತುಗಳೂ
ಇವರ ಹಟಕ್ಕೆ ಸೋತವು
ಕವಿ, ರೆಕ್ಕೆಗಳನ್ನು ಅದಲು ಬದಲು ಮಾಡುತ್ತಲೆ
ಸ್ವಲ್ಪ ಹೊತ್ತು ಮೂವರದ್ದೂ ಹಗುರ ಮನಸ್ಸು..
ಇನ್ನೂ ಏರುತ್ತಲೇ ಹಾರುತ್ತಲೇ
ಇರುವ ಬಯಲ ಮೀನು
ರೆಕ್ಕೆ ಕೊಟ್ಟ ಹದ್ದಿಗೀಗ ತೆರೆದ ಬಾನು,
ಈಜುತ್ತಲೇ ತೇಲಿಹೋದ
ನೀರ ಹಕ್ಕಿ
ಯಾವುದೋ ತಿಮಿಂಗಿಲದ
ನಾಲಗೆಗೆ ಸಿಕ್ಕಿ

ಎಲ್ಲವೂ ಹಗುರವಾಗುತ್ತಲೆ
ಸಡಿಲ ರೆಕ್ಕೆಯ ಹಗುರ ಕವಿತೆಯೂ
ಹಾರಲಾಗದೆ ನಿಂತುಹೋಯಿತು
ಕ್ಷಮಿಸಿ..
ಮೇಲಿನದಾವುದೂ ನಡೆದೇ ಇಲ್ಲ
ಏಕೆಂದರೆ,
ಕವಿ ಹೃದಯ ಸದಾ ಭಾರವಂತೆ
ಕವಿತೆಗಳನ್ನು ತುಂಬಿಸಿಕೊಂಡು
ಇಲ್ಲವೆ ಖಾಲಿಯಾಗಿಸಿಕೊಂಡು,
ಸಾಲುಗಳಿಗೆ ರೆಕ್ಕೆ ಕಟ್ಟಿ
ಸ್ವತಂತ್ರವಾಗಿ ಹಾರಲು ಬಿಟ್ಟು
ತಾನು ನೆಲದ ಮೇಲೆಯೆ ಉಳಿದುಕೊಂಡು






Bhavya avre, I follow your poem with a keen interest and what I like about you is your maturity and the way you use apt words to express your deepest emotions.. you have a gift! Keep writing such meaningful poems. Olledaagli !! Shubha haaraikegalu
Thank You Sachin 🙂
Nice
Thank You Dakshyani Ma’am 🙂
ಚೆನ್ನಾದ ಕವಿತೆ
Thank you Shravana Kumari avre 🙂
nice medam…..
Thank You Girish Avra 🙂
ನಿಮ್ಮ ಕಲ್ಪನೆ ಅದ್ಭುತ.