ಬೆಂಗಳೂರಿನಲ್ಲಿ ಶುರುವಾದ ಮೀಡಿಯಾ ಹಬ್ಬದಲ್ಲಿ ಎಫ್ ಎಂ ರೈನ್ ಬೊ ನಿರೂಪಕಿ, ಕವಯತ್ರಿ ಛಾಯಾ ಭಗವತಿ ಮೀಡಿಯಾ ಕಿಡ್ಸ್ ಎಂದೇ ಬಣ್ಣಿಸಲ್ಪಡುತ್ತಿರುವ ಈ ಜನಾಂಗಕ್ಕೆ ರೇಡಿಯೋ ಮಾಧ್ಯಮದ ಒಳ ಹೊರಗನ್ನು ಪರಿಚಯಿಸಿದರು.
ವಿಜಯನಗರ ಬಿಂಬ ದ ಒತ್ತಾಸೆಯಿಂದಾಗಿ ಮಕ್ಕಳು ಮಾಧ್ಯಮದ ಬಗ್ಗೆ ಒಂದಿಷ್ಟು ಹೆಚ್ಚೇ ಕಲಿತು ಹೆಜ್ಜೆ ಹಾಕುತ್ತಿದ್ದಾರೆ. ರೇಡಿಯೋ ಮಾಧ್ಯಮದ ಒಳ ಹೊರಗನ್ನು ಛಾಯಾ ಭಗವತಿಯರಿಂದಕಲಿತ ಮಕ್ಕಳು ಅವರಿಗೆ ರಾಶಿ ರಾಶಿ ಪ್ರಶ್ನೆಗಳನ್ನು ಕೇಳಿದರು. ಸಂವಾದ ನಡೆಯಿತು. ಛಾಯಾರವರ ಮಾರ್ಗದರ್ಶನದಲ್ಲಿ ಎಂಟು ತಂಡಗಳು ಎಂಟು ರೇಡಿಯೋ ಕಾರ್ಯಕ್ರಮಗಳನ್ನು ನಿರೂಪಿಸಿ ತೋರಿಸಿದರು.
ಈ ಕಾರ್ಯಕ್ರಮದ ಚಿಣ್ಣರ ಕಲರವ ನಿಮಗಾಗಿ
ಪೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :




ರೇಡಿಯೋ ಕಾರ್ಯಕ್ರಮವನ್ನು ನಿರ್ಮಿಸಿದರು ಚಿಣ್ಣರು. ರೆಕಾರ್ಡಿಂಗ್ ಸಹ ಮಾಡಿದರು. ಛಾಯಾ ಭಗವತಿ ಮೇಡಮ್ ಅವರು ಚೆನ್ನಾಗಿ ಮಕ್ಕಳ ಜೊತೆ ಸ್ಪಂದಿಸಿದರು.
nannanna tiddi teedi belesidde radio.