ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಮಿಳ್ಳೆ’ ಕಾದಂಬರಿ ಬಿಡುಗಡೆ ಹೀಗಾಯ್ತು

ನಾಗರಾಜ್ ಹೆತ್ತೂರು

ದೇವಪ್ಪ ಹಾಸನ್ ರಚಿತಗೊಂಡ ಮಿಳ್ಳೆ ಕಾದಂಬರಿಯನ್ನು ಕಥೆಗಾರರು ಮತ್ತು ಅಂಕಣಕಾರರು ಅಬ್ದುಲ್ ರಶೀದ್ ಬಿಡುಗಡೆಗೊಳಿಸಿದರು. ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಾಗಭೂಮಿ ವಿವಿದ್ದೋದ್ದೇಶ ಸಂಸ್ಥೆ ಮತ್ತು ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ದೇವಪ್ಪ ಹಾಸನ್ ಅವರ ಮಿಳ್ಳೆ ಕಾದಂಬರಿ ಬಿಡುಗಡೆಗೊಳಿಸಿ ನಂತರ ಮಾತನಾಡಿದ ಅವರು, ಮನುಷ್ಯನು ತಾನು ಬರೆಯುವ ಬರವಣಿಗೆ, ಸಂಗೀತ, ಚಿತ್ರ, ನೃತ್ಯ ಎಲ್ಲಾವು ತನ್ನಿಂದ ತನ್ನ ಬಿಡುಗಡೆಗಾಗಿ ಮಾಡಲಾಗುತ್ತದೆ. ಆದರೇ ಒಬ್ಬ ವ್ಯಕ್ತಿಯ ಹಿಂದೆ ಹೆಸರು ನಮೋದಿಸುವಾಗ ಖ್ಯಾತ ಎಂಬ ಪದ ಬಳಸಬಾರದು ಅದಕ್ಕೆ ಬಹಿಷ್ಕಾರ ಹಾಕಬೇಕೆಂದು ಹೇಳಿದರು. ಸರಳ, ಸುಲಲಿತವಾಗಿ ಬರೆದಂತಹ ಬರಹ ಆಗಿರಬೇಕು ಅಂತಹ ಪ್ರಯತ್ನವನ್ನು ಮೊದಲ ಕೃತಿಯಲ್ಲಿಯೇ ದೇವಪ್ಪ ಹಾಸನ್ ನೀಡಿದ್ದಾರೆ ಎಂದು ಶ್ಲಾಘಿಸಿದರು. ಬೆಳಕಿನಲ್ಲಿ ಪ್ರಪಂಚ ಬೆಳಗುವಂತೆ ಪುಸ್ತಕ ಓದುವ ಹವ್ಯಾಸದ ಮೂಲಕ ತನ್ನ ಜ್ಞಾನ ವೃದ್ಧಿ ಬೆಳೆಯುತ್ತದೆ ಎಂದು ಸಲಹೆ ನೀಡಿದರು. ದೇವಪ್ಪ ಹಾಸನ್ ಮಿಳ್ಳೆ ಎಂಬ ಕಾದಂಬರಿಯಲ್ಲಿ ಮನುಷ್ಯನನ್ನು ಹೋಲಿಸಿ ಬರೆದಿದ್ದಾರೆ. ನಿವೃತ್ತ ಶಿಕ್ಷಕರಾಗಿ ಚೊಚ್ಚಲ ಕೃತಿಯಲ್ಲಿ ಸರಳ ಭಾಷೆಯನ್ನು ಒಗ್ಗಿಸಿದ್ದಾರೆ ಎಂದು ಹೇಳಿದರು. ಪ್ರತಿ ಹಂತದಲ್ಲೂ ಕುತುಹಲ ಕೆರಳಿಸುವ ಬರಹ ಅದ್ಭೂತವಾಗಿದೆ ಎಂದರು.


ಜೀವನದ ಅನುಭವ ಇರುವ ಲೇಖಕರಿಗೆ ಥಿಯೇರಿಯ ಅಗತ್ಯತೆ ಇರುವುದಿಲ್ಲ. ಬರವಣಿಗೆ ಮೂಲಕ ತನಗೆ ತಾನೆ ಕಲಿಕೆಯಾಗುತ್ತದೆ. ಇಂತಹ ಕಾದಂಬರಿಯು ಇವರ ಕೈ ಬರಹದಲ್ಲಿ ಇನ್ನು ಹೆಚ್ಚು ಹೆಚ್ಚು ಬರಲಿ ಎಂದು ಶುಭ ಹಾರೈಸಿದರು ಕಾರ್ಯಕ್ರಮಕ್ಕೆ ಮೊದಲು ಮೈಸೂರಿನ ಚಿಂತನ್ ವಿಕಾಸ್ ಮತ್ತು ತಂಡದವರಿಂದ ಹಾಡುಗಾರಿಕೆ ನಡೆಸಿಕೊಟ್ಟರು. ಇದೆ ವೇಳೆ ಅಂತರಾಷ್ಟ್ರೀಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್, ಜಯದೇವ್ ಇತರರು ಇದ್ದರು. ಕವಿಗಳು ಸುಬ್ಬು ಹೊಲೆಯರ್ ಪ್ರಾಸ್ತವಿಕ ನುಡಿ ಹಾಗು ಸ್ವಾಗತಿಸಿದರು. ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಗರಾಜ್ ಹೆತ್ತೂರ್ ನಿರೂಪಿಸಿದರು.
ಪುಸ್ತಕ ಬಿಡುಗಡೆಯ ಕೆಲವು ಫೋಟೋಗಳು ನಿಮಗಾಗಿ :

 

‍ಲೇಖಕರು avadhi

12 February, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading