ಮೊನ್ನೆ ಭಾನುವಾರ ಬೆಳಗಿನ ಜಾವ ನಾಲ್ಕಕ್ಕೆಲ್ಲ ಕ್ಯಾಮೆರಾ ಏರಿಸಿಕೊಂಡು ಯಾರಿಗೂ ಹೇಳದೆ ಸೋಮನಾಥಪುರಕ್ಕೆ ಹೊರಟುಬಿಟ್ಟೆ. ಕಳೆದವಾರ ಬಿಡುಗಡೆಯಾದ ಷ. ಶಟ್ಟರ್ ಅವರ ‘ಸೋಮನಾಥಪುರ’ ಪುಸ್ತಕ ಓದಿ ತುಂಬಾ ಪ್ರಭಾವಿತನಾಗಿ ಮಾಡಿದ ಕೆಲಸವಿದು.
ಬೆಂಗಳೂರಿನಿಂದ ಮದ್ದೂರು ಮಾರ್ಗವಾಗಿ ಕೊಳ್ಳೇಗಾಲಕ್ಕೆ ಹೋಗುವ ಸಾಕಸ್ಟು ಬಸ್ಸುಗಳು ಮಳವಳ್ಳಿಯಲ್ಲಿ ನಿಲ್ಲಿಸುತ್ತವೆ. ಮಳವಳ್ಳಿಯಿಂದ ಬನ್ನೂರಿಗೆ 20 ಕಿ.ಮೀ ಪ್ರಯಾಣ. ಬನ್ನೂರಿನಿಂದ ಸೋಮನಾಥಪುರ 8 ಕಿಲೋಮೀಟರ್. ಆ ರಸ್ತೆಗಳಲ್ಲಿ ಸ್ವಲ್ಪ ಬಸ್ಸಿನ ಪ್ರಯಾಣ ಕಷ್ಟವಾದರೂ ಸಹಿಸಿಕೊಂಡು ಒಂಬತ್ತು ಗಂಟೆಗೆಲ್ಲ ಸೋಮನಾಥಪುರ ತಲುಪಿದ್ದೆ.

+++
ಕೃಷ್ಣನ ನಾಲಗೆ ತಡವರಿಸಿತು...
ಕುರುಕ್ಷೇತ್ರ ಯುದ್ಧದಲ್ಲಿ ಕೃಷ್ಣನಿದಿರು ಬಂದ ಭೀಷ್ಮ ಹೇಳಿದರು : ‘ದುಷ್ಟ ಶಿಕ್ಷಣ-ಶಿಷ್ಟ ರಕ್ಷಣ ಅಂತ ಹೇಳುವ ನೀನು, ಸಣ್ಣ ಪ್ರಾಯದಲ್ಲೇ ಅಷ್ಟೆಲ್ಲಾ ದುಷ್ಟರನ್ನು ಕೊಂದರೂ ಇನ್ನೂ ಅದೆಷ್ಟು ಜನ ಉಳಿದುಕೊಂಡಿದ್ದಾರೆ ದೇವರೇ?!’
ಕೃಷ್ಣನ ನಾಲಗೆ ತಡವರಿಸಿತು.
ಸಂಪೂರ್ಣ ಓದಿಗೆ- ಭೇಟಿ ಕೊಡಿ: ಚಂಪಕಾವತಿ






super