ಮಾಲೆ ದೀರ್ಘವಾದಷ್ಟು..

-ಸುಷ್ಮಿತಾ ಶೆಟ್ಟಿ 
ಹೂವಿನ ಮಧ್ಯದಲ್ಲಿ ಹೊಗುವುದಕ್ಕೆ ದಾರಿ ಹೊಟ್ಟೆಯೊಳಗಿಂದ ಇಲ್ಲ
ಎದೆಯೊಳಗಿಂದಲೊ ಉತ್ತರಿಸಲು ದಾರಗಳೆನೆಳೆದು ಮುಗಿಸಿದ ಕೈ
ತತ್ವದ ಬದಿಯರಿವನ್ನೂ ಬಲ್ಲದ್ದಲ್ಲ
ಒಡನಾಡುವ ಸೂಜಿ ಮೊಂಡುತನ ತೋರದಂತೆ ಒಲಿಸುವುದು
ಒಲುಮೆಗಿಳಿಸುವುದೊಂದೇ ಕಾರ್ಯ
ಹೆಕ್ಕಿ ತರುವವು ಪತ್ರೆಗಳೋ ಪಾತ್ರಗಳೋ
ಮಾಲೆ ದೀರ್ಘವಾದಷ್ಟು ಹರಿತ ಸರಳವಲ್ಲವೇ
ಯಾವ ನೆಪಬಂದಿಯೂ ಆಗದೆ ಹೂವಾರಿಸಿದ
ಆತ್ಮವ ಹನಿ ಹನಿ ಉದುರಿಸಿ ಹಸಿಯಿಟ್ಟಿರುವ
ಉರಿಯಲ್ಲೂ ಅರಳಿದ್ದು ಉರುಳದು
ನೇಯುವುದು ಹೊಟ್ಟೆತುಂಬಿದರೂ ಮುಗಿಯದು
ಅದೊಂದು ಹಿಡಿತ ಬದುಕ ಪೂರ್ತಿ ಕಟ್ಟುವಾಗ
ಒಂದು ಪಕಳೆಯೂ ಉದುರಬಾರದೆನ್ನಲಾದೀತೇ
ಎಂತ ನೈಪುಣ್ಯತೆಯ ಗಂಟೂ ತಿರುವಿನಲ್ಲೆಲ್ಲೋ
ಬಿಡಿಸಿ ಹೋಗುವುದ ಜೋಡಿಸಿರಲಾರದೆನ್ನಿ
ಅಂತಾದರೂ ಹೂವ ಕಟ್ಟಿ ಹೂವಾಗುವ ಬೆರಳಿಗೆ
ಇನ್ನೇನು ಮುಗಿದೇ ಹೋಗುವ ತ್ರಾಣದ ತುತ್ತ
ತುದಿಯಲ್ಲೂ ಕಟ್ಟುವುದೇ ತತ್ವ ಕೆಡವುದಲ್ಲ

‍ಲೇಖಕರು avadhi

May 26, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: