ಮಾಲಾ ಮ ಅಕ್ಕಿಶೆಟ್ಟಿ
**
ಕಾದ ತವೆಯ ಬೇಸಿಗೆ
ಸುಳಿದಾಡುವ ಬಿಸಿ ಹವೆ
ಸ್ವಲ್ಪವೂ ಅಲ್ಲಾಡದ ಎಲೆಗಳು
ನೆರಳೂ ನೆರಳಂತೆ ಇಲ್ಲದ
ತಾಮ್ರದ ಕೊಡದಲ್ಲಿಯ ನೀರು
ಬಿಸಿ ನೀರ ಬುಗ್ಗೆ
ಕಣ್ಣು, ತಲೆ, ಕೈ, ಕಾಲು
ನರಗಳಲ್ಲಿ ಬಿಸಿ ಉರಿತ
ಅಬ್ಬಾ ಬಿಸಿಲೇ!

ಸೇರದ ಫ್ರಿಡ್ಜ್ ನೀರು
ಫ್ಯಾನ್ ಏಸಿಯೂ
ತನುಗೆ ಸಹಕರಿಸದ
ಬೇಕೇ ಬೇಕು
ಒಂದು ಬೇಸಿಗೆ ಮಳೆ
ಪ್ರಾರ್ಥಿಸುವ ಎಲ್ಲರ ಕೈಗಳು
ಕಾಮಣ್ಣನ ಸುಟ್ಟು
ಹೋಳಿ ಆಡಿ, ಕಡಲೆ ತಿಂದು,
ಹೋಳಿಗೆ ಸಾರು ಉಂಡು
ಕಾಮಣ್ಣನ ಕಣ್ಣೀರೆಂದು
ಬೇಸಿಗೆ ಮಳೆಗೆ ಮೊರೆಹೋಗುವ
ಕೇಳಿಸಿಕೊಂಡನೋ!
ಧೋ ಧೋ ಮಳೆ
ಮಿಂಚು ಗುಡುಗು
ತಣಿಸಿ ಗಿಡಮರಗಳ
ಇಳೆ ತಂಪೆನಿಸಿ
ಸುವಾಹಿತ ಮಣ್ಣು
ಎಲೆಗಳಲಿ ಜೀವ ತುಂಬಿ
ಕಣ್ಣೀರ ಕಾಲುವೆ
ಹರಿಸಿ, ಮನುಷ್ಯನೆದೆಯನು
ತಣ್ಣಗಾಣಿಸಿ






0 Comments