ಮಾಲಗತ್ತಿ ಅಮಾನತು: ಸ್ಪಷ್ಟನೆ ಹಾಗೂ ಪ್ರತಿಕ್ರಿಯೆ

ಅರವಿಂದ ಮಾಲಗತ್ತಿ, ಮಹೇಶ್ ಗುರು ರವರ ಅಮಾನತಿನ ಬಗ್ಗೆ ನಡೆಯುತ್ತಿರುವ ಚರ್ಚೆಗೆ ಪ್ರತಿಕ್ರಿಯೆ-

ದೇಶದ ಪ್ರತಿಯೊಬ್ಬ ಪ್ರಜೆಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಸರ್ಕಾರಿ ನೌಕರರಿಗೂ, ಪೋಲೀಸರಿಗೂ. ಅವರಿಗೆ ರಾಜಕೀಯ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕೂ ಇದೆ. ಆಳುವ ಪಕ್ಷಗಳು ತಮ್ಮ ಮೂಗಿನ ನೇರಕ್ಕೆ ಕಾನೂನು ಮಾಡಿಕೊಂಡರೆ ಅದನ್ನು ವಿರೋಧಿಸಬೇಕೇ, ಒಪ್ಪಬೇಕೇ,

ಇನ್ನು ವಿವಿಗಳ ಸ್ವಾಯತ್ತತೆ ಪ್ರಜಾಪ್ರಭುತ್ವದ ಅಡಿಪಾಯಗಳಲ್ಲೊಂದು. ಕೋಮುವಾದ ವಿರೋಧಿಸುವುದು ಒಂದು ಸಂವಿಧಾನ ಬದ್ಧ ಕರ್ತವ್ಯ. ಅದನ್ನು ವಿವಿ ಆಡಳಿತ ಶ್ಲಾಘಿಸಬೇಕು.

ಎಲ್ ಎನ್ ಮುಕುಂದ್ ರಾಜ್ ಅವರು ಅಕಾಡೆಮಿಕ್ ವಲಯವೇ ಇದನ್ನು ಒಪ್ಪಿಕೊಳ್ಳುತ್ತಿಲ್ಲವಲ್ಲಾ ಎಂದುದಕ್ಕೆ ಪ್ರತಿಕ್ರಿಯೆ-

ನಮ್ಮ ದೇಶದ ದೊಡ್ಡ ದುರಂತ ಎಂದರೆ ಪ್ರಜಾಪ್ರಭುತ್ವದ ಮೂಲಾಧಾರ ತತ್ವಗಳ ಬಗ್ಗೆ ಅಪಾರ ಅಜ್ಞಾನ. ಇದಕ್ಕೆ ನಮ್ಮ ಸ್ವಾತಂತ್ರ್ಯ ಚಳುವಳಿಯಲ್ಲಿ ಬ್ರಿಟಿಷರನ್ನು ತೊಲಗಿಸಬೇಕು ಎಂಬುದಷ್ಟೇ ಗುರಿಯಾಗಿ ಪ್ರಜಾಪ್ರಭುತ್ವದ ಬಗ್ಗೆ ಯಾವ ಚರ್ಚೆಯೂ ನಡೆಯದೇ ಹೋದದ್ದು ಮತ್ತು ನಂತರ ಸಂವಿಧಾನ ಸಭೆ ರೂಪುಗೊಂಡ ರೀತಿ ,ಅಂಗೀಕಾರವಾದ ರೀತಿ , ನಂತರದ ಆಳುವ ಪಕ್ಷದ ನಡವಳಿಕೆಗಳು ಕಾರಣ.

ನಮ್ಮ ಅಕಾಡೆಮಿಕ್ ವಲಯದಲ್ಲಿಯೂ ಈ ಬಗೆಗೆ ಇರುವ ಅಜ್ಞಾನ ಖೇದಕರ. ನಮ್ಮ ಎಷ್ಟು ವಿವಿಗಳಲ್ಲಿ ನಮ್ಮ ಸಂವಿಧಾನ ಸಭೆ ರಚಿತವಾದ ರೀತಿ ಮತ್ತು ಅಂಗೀಕಾರವಾದ ರೀತಿ ಪ್ರಜಾಪ್ರಭುತ್ವಕ್ಕೆ ಅನುಗುಣವಾದುದಲ್ಲ.

ಅಂಬೇಡ್ಕರ್ ಸಂವಿಧಾನ ಸಭೆಯ ಮುಂದಿಟ್ಟ ಮನವಿಯನ್ನು ಕಣ್ಣೆತ್ತಿಯೂ ನೋಡಲಿಲ್ಲ ಎಂಬ ಬಗ್ಗೆ ಚರ್ಚೆ ನಡೆದಿದೆ.

ಎಷ್ಟು ಜನ ಪ್ರಾಧ್ಯಾಪಕರಿಗೆ ಇದು ಗೊತ್ತಿದೆ ? ಪಠ್ಯಗಳಲ್ಲಿ ಪ್ರಜಾಪ್ರಭುತ್ವದ ಮೂಲ ತತ್ವಗಳ ಬಗ್ಗೆ ಅದರ ಉಗಮ, ಬೆಳವಣಿಗೆ ನಂತರ ಪ್ರಜಾಪ್ರಭುತ್ವದ ತತ್ವಗಳನ್ನು ವಿಶ್ವದ ಪ್ರಜಾಪ್ರಭುತ್ವಗಳು ಗಾಳಿಗೆ ತೂರಿದ್ದು ಇವೆಲ್ಲಾ ಸೇರಿದೆಯೇ ?

ವಿಶ್ವವಿದ್ಯಾಲಯದ ಸ್ವಾಯತ್ತತೆ ಎಂದರೇನು? ಅದರೆಲ್ಲಾ ಆಯಾಮಗಳು, ಅದರ ಅಡಿಪಾಯ, ಪ್ರಜಾಪ್ರಭುತ್ವ ಮತ್ತು ಅದರ ಸಂಬಂಧ ಈ ಬಗ್ಗೆಯಾದರೂ ಚರ್ಚೆ ನಡೆಯುತ್ತವೆಯೇ ?

-ಜಿ ಎನ್ ನಾಗರಾಜ್

‍ಲೇಖಕರು avadhi

April 28, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: