ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾರ್ಕ್ವೆಜ಼್ ನೆನಪಿನಲ್ಲಿ ರೋಸಿ ಡಿಸೋಜ಼ ಬರೆದ ಒಂದು ಕವಿತೆ

ರೋಸಿ ಡಿಸೋಜ

(ಮಾರ್ಕ್ವೆಜ಼್ ನ ‘Of Love and other Demons’ ಓದುವಾಗ ಬರೆದದ್ದು)

 

ದೆಲೌರಾನ ಕನಸು
ಮಂಜು ಮುಸುಕಿದ ಬಯಲು,
ವಿಸ್ತಾರಕ್ಕೆ
ಗಾಜು ಕಿಟಕಿಯ ತಿಟ್ಟು,
ಸಿಯಾರ್ವ ಮಾರಿಯಾ
ಉಡಿಯ ತುಂಬಾ
ಎಂದೂ ಖಾಲಿಯಾಗದ ದ್ರಾಕ್ಷಿ ಗೊಂಚಲು.
ತಣ್ಣನೆ ಬೆರಳುಗಳಿಂದ
ಮಿಡಿಯುತ್ತಾ
ಕಿತ್ತು ಬಾಯಿಗಿಟ್ಟಂತೆಲ್ಲಾ
ಅದೇ ತೊಟ್ಟಿನಲ್ಲಿ ಮತ್ತೆ
ಇನ್ನೊಂದು ಹಣ್ಣು.
ಧಾವಂತವಿಲ್ಲ ಸಿಯಾರ್ವ ಮಾರಿಯಾ
ದ್ರಾಕ್ಷಿ ಗೊಂಚಲಿನ ಕೊನೆಯ ಹಣ್ಣಿನಲ್ಲಿ
ಇರುವುದು
ಸಾವು.
 

‍ಲೇಖಕರು G

21 April, 2014

4 Comments

  1. Anonymous

    ಧಾವಂತವಿಲ್ಲ ಸಿಯಾರ್ವ ಮಾರಿಯಾ
    ದ್ರಾಕ್ಷಿ ಗೊಂಚಲಿನ ಕೊನೆಯ ಹಣ್ಣಿನಲ್ಲಿ
    ಇರುವುದು
    ಸಾವು.

  2. Uma Rao

    Wonderful!

  3. ಜಿ.ಎನ್ ನಾಗರಾಜ್

    ಕವಿ ಹೃದಯದ ಕಾದಂಬರಿಕಾರನಿಗೆ ಕಾವ್ಯ ಸ್ಪಂದನ.

  4. mmshaik

    uttama kavite..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading