
ಖ್ಯಾತ ಸಾಹಿತಿ, ದಲಿತ,ಮಹಿಳಾಪರ ಚಿಂತಕಿ, ಸ್ತ್ರೀವಾದಿ ಹಾಗೂ ವಕೀಲರು ಆಗಿರುವ ಬಾನುಮುಷ್ತಾಕ್ ಅವರೊಂದಿಗೆ ಸಂದರ್ಶನ
ಸಂದರ್ಶನ ಮಾಡಿರುವವರು ಸುವರ್ಣ.ಸಿ.
ಈಚೆಗಂತೂ ಪ್ರತಿ ನಿತ್ಯವೂ ಮಾಧ್ಯಮಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರದ ಸುದ್ದಿ ಸಾಮಾನ್ಯವಾಗಿ ಬಿಟ್ಟಿದೆ. ಇತ್ತೀಚೆಗೆ ದೆಹಲಿಯಲ್ಲಿ ಬಸ್ ನೊಳಗೆ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವಂತೂ ಯಾರನ್ನೇ ಆಗಲೀ ಬೆಚ್ಚಿ ಬೀಳಿಸುವಂತಹ ಅತಿ ಘೋರ ಘಟನೆ. ಇಂತಹ ಅಮಾನುಷ ಕೃತ್ಯ ದಿನೇ ದಿನೇ ಹೆಚ್ಚುತ್ತಿರುವುದು ಅತ್ಯಂತ ಆತಂಕಕಾರಿ ಸಂಗತಿ. ಅತ್ಯಾಚಾರಿಗಳಿಗೆ ಮಹಿಳೆಯ ವಯಸ್ಸು ಮುಖ್ಯವಲ್ಲ ಆಗಷ್ಟೇ ಜನ್ಮ ತಾಳಿದ ಶಿಶುವಿನಿಂದ ಹಿಡಿದು ವೃದ್ಧೆಯವರೆಗೆ ಯಾರಾದರೂ ಅದೀತು ಇಂತಹ ಸ್ಥಿತಿ ಸಮಾಜದಲ್ಲಿ ಬಂದೊದಗಿದೆ.
ಸಾಮೂಹಿಕ ಆತ್ಯಾಚಾರ ಈಗ ಸಾರ್ವತ್ರಿಕವಾದ ವಿಕೃತ ಪಿಡುಗಾಗಿ ಪರಿಣಮಿಸುತ್ತಿದೆ. ಜಾತಿ, ಜನಾಂಗ, ವರ್ಗ , ಪ್ರದೇಶ , ವಯಸ್ಸು ಎಲ್ಲ ಬಗೆಯ ವ್ಯಾಪ್ತಿಯನ್ನೂ ಮೀರಿ ಈ ಬಗೆಯ ಹೇಯ ಕೃತ್ಯ ನಡೆಯುತ್ತಿದೆ.
ಶಾಲೆ, ಕಾರ್ಯಸ್ಥಳ, ಗದ್ದೆ, ಬಯಲು , ಪಾಳುಬಿದ್ದ ಕಟ್ಟಡ, ರೈಲು ಬೋಗಿಯ ಶೌಚಾಲಯ, ನಿರಾಶ್ರಿತರ ತಾಣ, ಕ್ಲಬ್ ಬಾರ್ ಹೀಗೆ ಎಲ್ಲೆಂದರಲ್ಲಿ ನಡೆಯುವ ಸಾಮೂಹಿಕ ಆತ್ಯಾಚಾರ ಮನುಷ್ಯನಲ್ಲಿ ಅಂತರ್ಗತವಾಗಿರುವ ಮೃಗೀಯತನಕ್ಕೆ ಸಾಕ್ಷಿಯಂತಿದೆ. ಇದರ ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ.
ಇಂತಹ ಸಂದರ್ಭದಲ್ಲಿ 80ರ ದಶಕದಿಂದಲ್ಲೂ ಮಹಿಳೆಯರ,ದಲಿತರ ಸಾಮಾಜಿಕ ಅಸಮಾನತೆ ಧಾರ್ಮಿಕ ಶೋಷಣೆಗಳ ವಿರುದ್ದ ಹೋರಾಟಗಳನ್ನು ಮಾಡುತ್ತಾ ಸ್ತ್ರೀಯರ ಧ್ವನಿಯಾಗಿ ಮಹಿಳೆಯರ ದುಃಖದುಮ್ಮಾನಗಳನ್ನು ಸಂಪ್ರದಾಯಶೀಲ ಸಮುದಾಯದ ಕಟ್ಟುಕಟ್ಟಲೆಗಳ ಸಂಕೋಲೆಯಲ್ಲಿ ಅವರ ಬದುಕು ಬವಳಿಕೆಗಳನ್ನು ಕಥಾರೂಪದಲ್ಲಿ ಹಿಡಿದಿಟ್ಟು ದಿಟ್ಟತೆ ಪ್ರದರ್ಶಿಸಿರುವ ಸ್ತ್ರೀವಾದಿ, ದಲಿತ,ಮಹಿಳಾಪರ ಚಿಂತಕಿ ಬಾನುಮುಷ್ತಾಕ್ ಅವರನ್ನು ಭೇಟಿ ಮಾಡಿ ಅಪ್ತವಾಗಿ ಸಮಾಲೋಚನೆ ನಡೆಸಿದಾಗ ಹೀಗೆಂದರು.

ದೆಹಲಿಯ ಪ್ರಕರಣ ಕುರಿತು ಏನು ಹೇಳಲು ಇಷ್ಟಪಡುತ್ತೀರಾ ?
ಉ: ದೆಹಲಿ ಪ್ರಕರಣ ಅತ್ಯಂತ ಅಮಾನೀಯವಾದದ್ದು. ಭಾರತೀಯ ಸಂಸ್ಕೃತಿಗೆ ಹಾಗೂ ಗಾಂಧಿಜೀಯವರ ಚಿಂತನೆಗಳಿಗೆ ವಿರೋಧವಾದುದು. ಇಡೀ ದೇಶದ ಜನತೆಯ ಆಕ್ರೋಶ ಅವರ ಮೇಲೆ ಮತ್ತು ಅವರಂತಹ ಹೀನ ಚಾರಿತ್ರದ ಮೇಲೆ ಇದೆ. ಅದರೆ ಭಾರತದ ಯುವಕರ ಮೇಲೆ ನನ್ನ ನಂಬಿಕೆ ಇದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಳಂಕದ ಕರಿಛಾಯೇಗೆ ಅವಕಾಶ ನೀಡಿರುವ ಅತ್ಯಾಚಾರಿಗಳಿಗೆ ತೀವ್ರವಾದ ಸಜೆ ಶೀಘ್ರವಾಗಿ ಆಗಬೇಕಿದೆ. ಅಕೆ ನಮ್ಮ ದೇಶದ ಇತಿಹಾಸದಲ್ಲೇ ಹೋರಾಟದ ಅದಮ್ಯ ಚೇತನವಾಗಿ ಮತ್ತು ಬದುಕಿನ ಭರವಸೆಯಲ್ಲಿ ಅಮರಳಾಗಿದ್ದಾಳೆ.
ಹಲವು ದಶಕಗಳಿಂದ ದಲಿತ ಮತ್ತು ಅಲ್ಪಸಂಖ್ಯಾತ ಮಹಿಳೆಯರ ಮೇಲೆ ನಿರಂತರ ಶೋಷಣೆ, ಆತ್ಯಾಚಾರ ದೌರ್ಜನ್ಯ ನಡೆಯುತ್ತಲೇ ಇದೇ ಆದರೆ ಈವರೆಗೆ ಯಾರೂ ಧ್ವನಿ ಎತ್ತಲಿಲ್ಲ ?ಅವರು ಮಹಿಳೆಯರಲ್ಲವೇ ?
ಉ: ಮಹಿಳೆಯ ನೋವು ಮತ್ತು ಸಂಕಷ್ಟಗಳನ್ನು ವಿಭಾಗಿಸಲು ಮತ್ತು ಪ್ರತ್ಯೇಕಿಸಲು ಸಾಧ್ಯವಿಲ್ಲ. ಜಾತಿ , ಮತ, ಧರ್ಮ ವರ್ಣ, ಬಣ್ಣ ಹಾಗೂ ದೇಶ ಎಂಬ ಎಲ್ಲಾ ಗೆರೆಗಳನ್ನೂ ಕೂಡ ಮೀರಿದಂತೆ ಆಕೆಯ ಯಾತನೆಸ್ಥಾಯಿಯಾಗಿದೆ. ದೆಹಲಿ ಪ್ರಕರಣದಲ್ಲಿ ಅಮಾಯಕಳಾದ ಹೆಣ್ಣುಮಗಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಜೊತೆಯಲ್ಲಿ ಪೊಲೀಸರು ಸಕಾಲದ ಸೂಕ್ತ ಕ್ರಮವನ್ನು ಜರುಗಿಸಲಿಲ್ಲವೆಂಬ ಅಸಹಾಯಕತೆಯ ಕೋಪಕೂಡ ಸೇರಿಕೊಂಡಿತು. ಸಹಜವಾಗಿಯೇ ಆಕೆಯ ಹಿನ್ನಲೆಯನ್ನು ಗಮನಿಸಿದರೆ ಕಲಿತವಳು ನಗರವಾಸಿ ಮಧ್ಯಮ ವರ್ಗದವಳು ಹಾಗೂ ಉಚ್ಚ ಜಾತಿಯವಳೂ ಇರಬಹುದು. ಕೆಳವರ್ಗದ ಮಹಿಳೆಯ ನೋವಿನ ಬಗ್ಗೆ ತೀವ್ರತೆಯಿಮದ ಸ್ಪಂದಿಸಲಿಲ್ಲವೆಂಬುದು ಉಳ್ಳ ಮಹಿಳೆಗೆ ನೋವಿಗೆ ನಾವು ಕೂಡ ಸ್ಪಂದಿಸಬಾರದೆಂಬ ವಾದ ಸರಿಯಲ್ಲ. ಆದರೆ ದೆಹಲಿಯ ಪ್ರಕರಣದಲ್ಲಿ ಸಿಕ್ಕಷ್ಟು ಪ್ರಚಾರ ದಲಿತ ಮತ್ತು ಅಲ್ಪಸಂಖ್ಯಾತ ಮಹಿಳೆಯರ ಮೇಲೆ ನಡೆಯುವ ಹೀನಕೃತ್ಯಗಳಿಗೆ ಸಿಗುತ್ತಿಲ್ಲ ಎನ್ನುವುದು ವಾಸ್ತವ. ಅದರ ಅರ್ಥ ಮಾಧ್ಯಮದವರು ಈ ಲೋಪವನ್ನು ಸರಿಪಡಿಸಿಕೊಳ್ಳಬೇಕು ಎಂಬುದಾಗಿದೆ. ಮತ್ತು ಎಲ್ಲಾ ಮಹಿಳೆಯರಿಗೂ ಕೂಡ ಅವರ ದೇಹದ ಮೇಲೆ ಅವರಿಗೆ ಇರುವ ಹಕ್ಕನ್ನು ಎತ್ತಿ ಹಿಡಿಯುವಂತಹ ಮತ್ತು ಅತ್ಯಾಚಾರದಿಂದ ರಕ್ಷಣೆ ಸಿಗುವಂತಹ ಸಮಾಜ ನಿಮರ್ಾಣವಾಗ ಬೇಕಾಗಿದೆ. ನಮ್ಮ ಮಹಿಳೆಯರಿಗೆ ಅತ್ಯಾಚಾರದ ಹಿಂಸೆ ಮತ್ತು ನೋವಿನಿಂದ ರಕ್ಷಣೆ ಸಿಗಬೇಕಾದಂತಹ ಸಂದಭೃದಲ್ಲಿಯೇ ನಮ್ಮ ಯುವಕರು ಅತ್ಯಾಚಾರಿಗಳಲ್ಲ ಎಂಬ ಹಾಗೂ ನಮ್ಮ ದೇಶವು ಸುರಕ್ಷಿತದೇಶ ಎಂಬ ವಾತವರಣ ನಿಮರ್ಾಣವಾಗಬೇಕಾದುದು ಅಗತ್ಯವಿದೆ.
ಈ ರಾಷ್ಟದಲ್ಲಿ ಮಹಿಳೆಯರಿಗೆ ಸುರಕ್ಷತೆ ಇದೆಯೇ ? ಹೇಗೆ ?
ಇದೆ. ಅತ್ಯಂತ ಹೀನವಾದ ಮತ್ತು ಕ್ರೌರ್ಯದಿಂದ ಕೂಡಿದ ಹಿಂಸಾತ್ಮಕ ಅತ್ಯಾಚಾರದ ಘಟನೆಗಳ ವಿವರಗಳು ದಿನಪತ್ರಿಕೆಯ ಮುಖಪುಟದಲ್ಲಿ ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ದಿನೇ ದಿನೇ ವರದಿಯಾಗುತ್ತಿರುವುದರಿಂದ ಈ ದೇಶದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಅನುಮಾನ ಮೂಡುವುದು ಸಹಜವಾಗಿದೆ. ಆದರೆ ದೇಶದ ಉದ್ದಗಲಕ್ಕೂ ಮಹಿಳೆಯರು ಒಂಟಿಯಾಗಿಯೇ ತಮ್ಮ ಕರ್ತವ್ಯಗಳಲ್ಲಿ ನಿರತರಾಗಿದ್ದಾರೆ. ಮತ್ತು ಚಲನಶೀಲರಾಗಿದ್ದಾರೆ.ಮಹಿಳೆ ಅಸುರಕ್ಷಿತಳು ಎಂಬ ವಾದವನ್ನು ಮುಂದೊಡ್ಡಿ ಆಕೆಯ ಚಲನಶೀಲತೆಯನ್ನು ನಿರ್ಬಂಧಿಸುವ ಅತ್ಯಂತ ಚಾಣಕ್ಷತನದಿಂದ ಕೂಡಿದ ಅಸಹ್ಯವಾದ ತಂತ್ರಗಾರಿಕೆಯೂ ಕೂಡ ಇದರ ಹಿಂದೆ ಅಡಗಿದೆ. ನಾನು ಮಹಿಳೆಯರ ಮೇಲೆ ನಡೆಯುವ ಅತ್ಯಂತ ಮತ್ತು ಇತರ ಹಿಂಸೆಗಳನ್ನು ಪಸರ್ೆಂಟೆಜ್ ಮೂಲಕ ಲೆಕ್ಕಹಾಕಿ ಅದು ನಗಣ್ಯವೆಂದು ಸಾಧಿಸಲು ಪ್ರಯತ್ನಿಸುವುದಿಲ್ಲ. ನಮ್ಮ ದೇಶದ ಕಟ್ಟಕಡೆಯ ನಿರ್ಗತಿಕ ಮಹಿಳೆಯೂ ಕೂಡ ಇಂತಹ ಹೀನಕೃತ್ಯಕ್ಕೆ ಬಲಿಯಾಗ ಕೂಡದು. ಅದಕ್ಕೆ ಅಗತ್ಯದ ಕಾನೂನು ನಮಗೆ ಇದೆ. ಆದರೆ ಅದರ ತಿದ್ದುಪಡಿಯಾಗಬೇಕಿದೆ. ಮತ್ತು ನ್ಯಾಯಾಲಯದಲ್ಲಿ ಅಕ್ರಮ ಕೃತ್ಯವನ್ನು ಸಾಬೀತುಪಡಿಸಬೇಕಾದ ಹೊಣೆಗಾರಿಕೆ ಪ್ರಕರಣದ ಶಿಕ್ಷೆ ಮೊದಲಾದ ಅನೇಕ ಅಂಶಗಳು ತಿದ್ದುಪಡಿಕೂಡ ಆಗಬೇಕಿದೆ.ಹಾಗೂ ನಮ್ಮ ವ್ಯವಸ್ಥೆಯೂ ಇದೊಂದು ತೀರ ಗಂಭೀರವಾದ ಕೃತ್ಯ ಇದನ್ನು ಈ ದೇಶ ಸಹಿಸುವುದಿಲ್ಲವೆಂಬ ಸಂದೇಶವನ್ನು ಸರ್ವರಿಗೂ ನೀಡಬೇಕಾಗಿದೆ.
ಅತ್ಯಾಚಾರಕ್ಕೆ ಒಳಗಾಗುವ ಮಹಿಳೆಯರಿಗೆ ಹಾಗೂ ಬಾಲಕಿಯರಿಗೆ ಅವರ ತಂದೆತಾಯಿಗಳಿಗೆ ಏನು ಹೇಳಲು ಬಯಸುತ್ತೀರಿ ?
ಯಾವ ಮಹಿಳೆ ಕೂಡ ಅತ್ಯಾಚಾರಕ್ಕೆ ಒಳಪಡಲು ಇಷ್ಟಪಡುವುದಿಲ್ಲ. ಹೀಗಾಗಿ ಅದನ್ನು ನಿರೀಕ್ಷಿಸಿ ಅದಕ್ಕೆ ಉಪದೇಶವನ್ನು ಕೊಡುವುದು ಸೂಕ್ತ ಕ್ರಮವಲ್ಲ. ಆದರೆ ಈಗಾಗಲೇ ಅತ್ಯಾಚಾರಕ್ಕೆ ಒಳಗಾಗಿರುವ ಮಹಿಳೆಯರಿಗೆ ಅಥವಾ ಮಕ್ಕಳಿಗೆ ಹೇಳುವುದೇನೆಮದರೆ ಅತ್ಯಾಚಾರವೆಂಬುದು ನಿಮ್ಮ ದೇಹ, ಮನಸ್ಸು ಮತ್ತು ಆತ್ಮದ್ ಮೇಲೆ ಎಸಗಿರುವ ಘೋರ ಅಪರಾಧವಷ್ಟೇ ಅಲ್ಲ .ಈ ದೇಶದ ಸಾಮಾಜಿಕ ವ್ಯವಸ್ಥೆಯ ಮೇಲೆ ಅದರಲ್ಲಿಯೂ ಶಾಸಕಾಂಗ, ನ್ಯಾಯಾಂಗ ಮತ್ತು ಕಾನೂನು ವ್ಯವಸ್ಥೆಯ ಮೇಲೆ ಎಸಗಿರುವ ಘೋರ ಅಪರಾಧ. ಇಂತಹ ಕೃತ್ಯಕ್ಕೆ ಒಳಗಾಗಿರುವ ಮಹಿಳೆಯರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ನೆರವು ನೀಡುವ ಅನೇಕ ಸಕರಾತ್ಮಕ ಅಂಶಗಳು ಮತ್ತು ವ್ಯಕ್ತಿಗಳು ನಮ್ಮ ದೇಶದಲ್ಲಿದ್ದಾರೆ. ಹೀಗಾಗಿ ಭರವಸೆ ಮತ್ತು ಆತ್ಮ ವಿಶ್ವಾಸದಿಂದ ಬದುಕನ್ನು ಕಟ್ಟಿಕೊಳ್ಳುವತ್ತ ಗಮನವನ್ನು ಕೇಂದ್ರಿಕರಿಸಿ ಅಷ್ಟೇ ಅಲ್ಲದೇ ಅತ್ಯಾಚಾರಕ್ಕೆ ಬಲಿಯಾದವರಿಗೆ ಸ್ಥೈರ್ಯ ನೀಡಲು ಮತ್ತು ಪುನರ್ವಸತಿ ಹಾಗೂ ಅತ್ಯಾಚಾರಕ್ಕೆ ಬಲಿಯಾದವರಿಗೆ ಪರಿಹಾರವನ್ನು ಕೊಡುವ ಕಲ್ಯಾಣ ಕಾರ್ಯ ಕ್ರಮಗಳು ಯಶಸ್ವಿಯಾಗಿ ಕಾರ್ಯಗತವಾಗಬೇಕಾಗಿದೆ.
ಸ್ತ್ರೀವಾದಿಗಳ ಧ್ವನಿ ಗಟ್ಟಿಯಾಗಬೇಕು ಅನಿಸಲಿಲ್ಲವೇ ?
ಕೇವಲ ಸ್ತ್ರೀವಾದಿಗಳ ಧ್ವನಿ ಮಾತ್ರ ಗಟ್ಟಿಯಾಗಬೇಕಾಗಿಲ್ಲ. ಮಾನವೀಯ ಅಂತಃಕರಣವುಳ್ಳ ಮತ್ತು ಮನುಷ್ಯ ಜೀವನ ಮೌಲ್ರಯವನ್ನು ಅರಿತಿರುವ ಹಾಗೂ ಮಹಿಳೆಯರು ತಮ್ಮ ವರೇ ಪರಕೀಯರಲ್ಲ ಎಂಬ ಮನೋಭಾವನೆ ಹೊಂದಿರುವ ಪ್ರತಿಯೊಬ್ಬ ಪುರುಷ ಮತ್ತು ಮಹಿಳೆಯರ ಧ್ವನಿ ಒಟ್ಟುಗೂಡಬೇಕಾಗಿದೆ.
ರಕ್ಷಣೆಯ ದೃಷ್ಠಿಯಿಂದ ಮಹಿಳೆಯರು ಮನೆಯಲ್ಲಿಯೇ ಇರುವುದು ಸೂಕ್ತ ಎಂದು ಆರ್ ಎಸ್ ಎಸ್ ಮೋಹನ್ ಭಾಗವತ್ ಹೇಳಿದ್ದಾರೆ ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ?
ಯಾರು ಇದನ್ನು ಹೇಳಿದ್ದಾರೆಯೋ ಅವರು ಮನೆಯಲ್ಲಿಯೇ ಇರುವುದು ಸೂಕ್ತ.





ಅತ್ಯಾಚಾರ ನಡೆದಿರುವುದು ಮಹಿಳೆಯ ಮೇಲೆ.
ಹಾಗಾಗಿ ಇದು ಮಹಿಳೆಯರು ಮತ್ತು ಪುರುಷರ ನಡುವಿನ ಸಮರ ಅನ್ನುವ ರೀತಿಯಲ್ಲಿಯೇ ಬಿಂಬಿಸುವ ಲೇಖನಗಳು, ಸಂದರ್ಶನಗಳೆಲ್ಲಾ ಈ ಸಮಾಜದ ಧ್ರುವೀಕರಣಕ್ಕೆ ನಾಂದಿಹಾಡುತ್ತವೆ ಎಂದು ನನ್ನ ಅನಿಸಿಕೆ.
ಅತ್ಯಾಚಾರ ಯಾರ ಮೇಲೆ, ಯಾವ ವರ್ಗದ ವಿರುದ್ಧ ನಡೆದಿದೆ ಎನ್ನುವುದನ್ನು ಬದಿಗಿಟ್ಟು, ಮಾನವೀಯತೆಯನ್ನು ನಾಶಪಡಿಸುತ್ತಿರುವ ಈ ಅತ್ಯಾಚಾರವನ್ನು ಒಕ್ಕೊರಲಿನಿಂದ ಖಂಡಿಸಬೇಕು.
ಮಾನವೀಯತೆಯನ್ನು ಪೋಷಿಸಿ ಬೆಳೆಸುವತ್ತ ಗಮನ ನೀಡಬೇಕು.
ಸ್ತ್ರೀವಾದ ಅನ್ನುವುದೇ ಅಸಮಂಜಸ.
ಸಮಾನತೆಯನ್ನು ಸಾರುವವರು ಸ್ತ್ರೀ ಮತ್ತು ಪುರುಷರ ಭೇದ ಮರೆತು ಮನುಜವಾದವನ್ನು ಎತ್ತಿ ಹಿಡಿಯಬೇಕು.
ಮಾನವೀಯತೆಯನ್ನು ಮೆರೆಸಬೇಕು.
ರಾಕ್ಷಸೀ ಮನೋಭಾವ ಹೊಂದಿರುವ ಮಾನಸಿಕ ಅಸ್ವಸ್ಥರ ವಿರುದ್ಧ ಸಮರ ಸಾರಬೇಕು.
ಅಂಥವರ ವಿರುದ್ಧದ ಸಮರದಲ್ಲಿ ಮಾನವೀಯತೆಯ ಗೆಲುವಿಗಾಗಿ, ಉಳಿವಿಗಾಗಿ ಪಣತೊಡಬೇಕು.
ಮೋಹನ್ ಭಾಗವತರ ಹೇಳಿಕೆಯನ್ನೇ ತಿರುಚಿದುದಕ್ಕಾಗಿ ಓರ್ವ ಪತ್ರಕರ್ತೆ ಕೆಲಸದಿಂದ ವಜಾಗೊಂಡಿರುವ ನಂತರವೂ, ಇನ್ನೋರ್ವ ಪತ್ರಕರ್ತೆ ಆ ತಿರುಚಿದ ಹೇಳಿಕೆಯನ್ನು ಬಳಸಿದುದಕ್ಕಾಗಿ ಕ್ಷಮೆ ಕೇಳಿದ ನಂತರವೂ, ಈ ತಿರುಚಿದ ಹೇಳಿಕೆಯನ್ನು ಇಲ್ಲಿ ಉಲ್ಲೇಖಿಸಿರುವುದು ಅಸಂಬದ್ಧ ಎನಿಸಿತು.
ಯಾಕೆ ಓರ್ವ ಪುರುಷನ ಸಂದರ್ಶನ ನಡೆಸುವುದಿಲ್ಲ ಯಾರೂ?