ಮಲೆಗಳಲಿ ಮದುಮಗಳು ಆಗಾಗ ಮಳೆ ಹನಿಗಳಲಿ ಮದುಮಗಳೂ ಆದದ್ದುಂಟು. ರಂಗ ಕ್ಷೇತ್ರದಲ್ಲಿ ಉತ್ತಮ ಚೇತರಿಕೆ ಕಂಡುಕೊಂಡ ಮದುಮಗಳನ್ನು ನೋಡಲು ಸ್ವತಹ ವರುಣನಿಗೂ ಕಾತರ. ಕೊನೆಯ ಮಜಲುಗಳನ್ನು ನಾನೇಕೆ ನೋಡಬಾರದೆಂಬಂತೆ ಭರಗುಟ್ಟಿದ ಧರೆಗೆ.
ಆದರೆ ಪ್ರೇಕ್ಷಕರು ? ಅಡ್ಡಿಯಿಲ್ಲ. ಮಳೆಬಂದರೇನಂತೆ , ನಮ್ಮ ಬಳಿ ಕೊಡೆಗಳಿವೆ. ಹೆಲ್ಮೆಟ್, ಜರ್ಕಿನ್ ಎಲ್ಲಾ ಉಂಟು. ನಾವು ಮದುಮಗಳನ್ನು ನೋಡಬೇಕಷ್ಟೆ. ಎಂಬ ನಿಲುವಿಗೆ ನಿಂತದ್ದು ಮದುಮಗಳ ಹೆಗ್ಗಳಿಕೆ. ಪ್ರದರ್ಶನ ಮುಂದೂಡಿದ್ದಾಯಿತು. ಆದರೂ ಪ್ರೇಕ್ಷಕರ ಉತ್ಸಾಹವನ್ನು ಮುಂದೂಡಲಾಗದು. ಆ ಮಟ್ಟಿಗೆ ಮದುಮಗಳು ಪ್ರೇಕ್ಷಕರ ಮನಸೂರೆಗೊಂಡಿದ್ದಾಳೆ.
ಮಳೆಯಿಂದಾಗಿ ಮದುಮಗಳ ಪ್ರದರ್ಶನದಲ್ಲಿ ನಡೆದ ಕೆಲವು ಕ್ಷಣಗಳು ನಿಮಗಾಗಿ…
ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಫೋಟೋ : ಸುರೇಶ್ ಕುಮಾರ್
0 ಪ್ರತಿಕ್ರಿಯೆಗಳು