ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮರಳು ಕಾಡಿನಲಿ ಮಮತೆಯ ಕಂದೀಲು

ಸಹ್ಯಾದ್ರಿ ನಾಗರಾಜ್

ಜೀವನ್ಮುಖಿ

ಚಿತ್ರ: Father (Pedar)

* ನಿರ್ದೇಶಕ  : ಮಜಿದ್ ಮಜೀದಿ

ಪುಟಾಣಿ ತೊರೆಗೆ ಚಾಚಿಕೊಂಡು ಸತ್ತನೋ ಎಂಬಂತೆ ನಿಶ್ಚಲವಾಗಿ ಅಂಗಾತ ಬಿದ್ದಿದ್ದ ಪೋಲೀಸಿನವನ ಕೈಬೆರಳು,ರೆಪ್ಪೆ ಮೆದುವಾಗಿ ಕಂಪಿಸಿ ಮಮತೆಯ ಜೀವಂತಿಕೆಯನ್ನು ಸಾರುತ್ತವೆ.ಆತನ ಅಂಗಿಯ ಜೇಬಿನಿಂದ ಗ್ರೂಪ್ ಫೋಟೋವೊಂದು ಹರಿವಿಗೆ ಸೇರಿಕೊಳ್ಳುತ್ತದೆ. ನೋಡು,ಈ ಫೋಟೋಕ್ಕೆ ಮತ್ತು ಇನ್ನಷ್ಟು ಮಧುರ ಕ್ಷಣಗಳಿಗೆ ನೀನೊಬ್ಬನೇ ಬಾಕಿ ಎನ್ನುವಂತೆ ಆ ಫೋಟೋ ಮೆಹ್ರೊಲ್ಲಾನ ಮುಖಕ್ಕೆ ಮುತ್ತಿಕ್ಕಿದ ಕ್ಷಣ ನೋಡುಗರ ಮನ ಪುಳಕಿತವಾಗುತ್ತದೆ.ಹುಡುಗ ನೋಡುತ್ತಾನೆ;ತನ್ನ ಪ್ರೀತಿಯ ಅಮ್ಮ,ತಂಗಿಯಂದಿರು ಮತ್ತು ಆ ಪೋಲೀಸಿನವ ಫೋಟೋದಲ್ಲಿದ್ದಾರೆ.ಅವನ ಮುಖ ಅಲ್ಲಿಯವರೆಗಿನ ತನ್ನ ಹುಡುಗಾಟಿಕೆಗೆ,ಅನಗತ್ಯ ವರ್ತನೆಗಳಿಗೆ,ಅನವಶ್ಯಕ ಕಾಲಕ್ಷೇಪಕ್ಕಾಗಿ ಮರುಕಗೊಂಡ ಬೆನ್ನಲ್ಲೇ ಅವೆಲ್ಲವನ್ನೂ ತ್ಯಜಿಸಿ ಬದುಕಿನ ಹೊಸಮಾರ್ಗ ಹೊಕ್ಕ ನಗು ಮೊಗದ ತುಂಬಾ ಕಂಗೊಳಿಸುತ್ತದೆ.ಈ ಸೂಕ್ಷ್ಮತೆಯನ್ನು ಕ್ಲೋಸಪ್ನಲ್ಲಿ ಹಿಡಿದಿಟ್ಟು ದಿಢೀರನೆ ಚಿತ್ರ ಮುಗಿಸಿಬಿಡ್ತಾನೆ ನಿದರ್ೆಶಕ ಮಜಿದ್ ಮಜೀದಿ.

1996ರ ಈ ಇರಾನಿಯನ್ ಚಿತ್ರ ಇವತ್ತಿಗೂ ಜೀವಂತ ಎನ್ನಿಸಲು ಹಲವು ಕಾರಣಗಳಿವೆ.ಎಳೆಯ ಹರೆಯದ ಮೆಹ್ರೊಲ್ಲಾ ತಂದೆಯ ಮರಣಾನಂತರ ಹತ್ತಿರದ ಪೇಟೆ ಸೇರಿ ದುಡಿಯಲಾರಂಬಿಸಿರುತ್ತಾನೆ.ಅದೊಂದು ದಿನ ತನ್ನ ಅಮ್ಮ ಮತ್ತು ತಂಗಿಯರಿಗಾಗಿ ಬಗೆಬಗೆಯ ವಸ್ತುಗಳನ್ನು ಕೊಂಡು,ಒಂದಷ್ಟು ಹಣವನ್ನೂ ಹೊಂದಿಸಿಕೊಂಡು ಊರಿಗೆ ಬಂದವನಿಗೆ ಗೆಳೆಯ ಲತೀಫ್ನಿಂದ ಗೊತ್ತಾದ ಸುದ್ದಿ ದಂಗುಬಡಿಸುತ್ತದೆ.ಅವನ ಅಮ್ಮ ಪೋಲೀಸ್ ಅಧಿಕಾರಿಯೋರ್ವನನ್ನು ಮದುವೆಯಾಗಿರುತ್ತಾಳೆ.ಇದಿಷ್ಟನ್ನು ಚಿತ್ರದ ಮಧ್ಯೆ-ಮಧ್ಯೆ ಪ್ಲ್ಯಾಶ್ಬ್ಯಾಕ್ ತಂತ್ರದಲ್ಲಿ ಕಟ್ಟಿಕೊಡುವ ನಿದರ್ೆಶಕ ಅತ್ಯಂತ ಚಿಕ್ಕ-ಚಿಕ್ಕ ಅವಧಿಯ ಶಾಟ್ಗಳಲ್ಲೇ ಸೂಕ್ಷ್ಮಸಂವೇದನೆಯನ್ನು ಮೇಳೈಸುತ್ತಾನೆ.ಪೋಲೀಸಿನವನ ವಿರುದ್ಧ ತಿರುಗಿಬೀಳುವ ಮೆಹ್ರೊಲ್ಲಾ ತನ್ನ ಮನಃಪರಿವರ್ತನೆಯ ಕಡೆಯ ಕ್ಷಣದವರೆಗೂ ಆತನನ್ನು ದ್ವೇಷಿಸುತ್ತಲೇ ಇರುತ್ತಾನೆ.

ಈ ಮಧ್ಯೆ ಆರೋಗ್ಯ ಸರಿಯಿಲ್ಲದಂತಾಗಿ ಮತ್ತೆ ಪೋಲೀಸಿನವನ ಮನೆಯಲ್ಲೇ ತನ್ನಮ್ಮನಿಂದ ಶುಶ್ರೂಷೆಗೊಳಗಾಗುವ ಮೆಹ್ರೊಲ್ಲಾ ಬದಲಾಗಿಬಿಟ್ಟ ಬಿಡು ಅಂದುಕೊಳ್ಳುವಷ್ಟರಲ್ಲಿ,ಅಲ್ಲಿಂದ ಪಿಸ್ತೂಲು ಕದ್ದುಕೊಂಡು ಗೆಳೆಯ ಲತೀಫ್ನೊಟ್ಟಿಗೆ ಮತ್ತೆ ಪಟ್ಟಣ ಸೇರುವುದು ಹಾಗೂ ಸಿವಿಲ್ ಡ್ರೆಸ್ನಲ್ಲೇ ಮೆಹ್ರೊಲ್ಲಾನನ್ನು ಹುಡುಕಲು ಹೊರಡುವುದು ಚಿತ್ರದಲ್ಲಿನ ಮಹತ್ವದ ತಿರುವು.

ಹೆಚ್ಚೂ ಕಡಿಮೆ ಚಿತ್ರದ ಮಧ್ಯಭಾಗದವರೆಗೂ ಲಾಂಗ್ಶಾಟ್ ಹಾಗೂ ಕ್ಲೋಸಪ್ ದೃಶ್ಯಗಳಲ್ಲೇ ಕಥೆ ಮುಂದುವರಿಯುತ್ತದೆ.ಅಲ್ಲಲ್ಲಿ ಅಪರೂಪಕ್ಕೆಂಬಂತೆ ಮಿಡ್ಶಾಟ್,ಒಂದರೊಳಗೊಂದು ಮಿಳಿತಗೊಳ್ಳುವ ಡಿಸಾಲ್ವ್ ಶಾಟ್ಗಳು ಯಥೇಚ್ಛವಾಗಿ ಬಳಕೆಯಾಗುವುದು ಚಿತ್ರ ಅಂತ್ಯದತ್ತ ಹೊರಟಾಗ.ಹರಸಾಹಸಪಟ್ಟು ಮೆಹ್ರೊಲ್ಲಾನನ್ನು ಹಿಡಿಯುವ ಪೋಲೀಸಿನವ ಆತನ ಕೈಗೆ ಬೇಡಿ ಹಾಕಿ,ತನ್ನ ಕೈಗೂ ಹಾಕಿಕೊಂಡು ಈಗ ನಾನೆಲ್ಲಿ ಹೋದರೂ ನೀನು ಜೊತೆ ಬರ್ಬೇಕು ಅನ್ನೋ ಮಾತು ಆ ಕ್ಷಣಕ್ಕೆ ಕೇವಲ ಸಾಂದಭರ್ಿಕ ಅನ್ನಿಸಿದರೂ ಮುಂದಿನ ಘಟನೆಗಳ ಹಿನ್ನೆಲೆಯಲ್ಲಿ ವಿಶೇಷ ಅರ್ಥ ಧ್ವನಿಸುತ್ತದೆ.

ಮೆಹ್ರೊಲ್ಲಾನನ್ನು ಬಂಧಿಸಿದಾಗಲಾಗಲೀ ಅಥವಾ ಅದಕ್ಕೂ ಹಿಂದಿನ ಯಾವುದೇ ಸನ್ನಿವೇಶಗಳಲ್ಲಾಗಲೀ ಪೋಲೀಸಿನವ ಅವನ ಬಗ್ಗೆ ಕೋಪಿಸಿಕೊಂಡದ್ದು ಕಡಿಮೆ.ಕೋಪಿಸಿಕೊಂಡದ್ದು ಹೌದಾದರೂ ಅದರ ಬೆನ್ನಲ್ಲೇ ಮಮತೆಯೂ ಇತ್ತೆಂಬುದು ಸ್ಪಷ್ಟ.ಹಾಗೆ ಕೋಪಿಸಿಕೊಳ್ಳುವ ಬಹುತೇಕ ಸಂದರ್ಭಗಳಲ್ಲಿ ಮಸ್ಜೀದಿ ಮಿಡ್ಶಾಟ್ನಲ್ಲೇ ಸೈಡ್ಅಪ್ ಕೊಟ್ಟು ಅವನಲ್ಲಿನ ಸಿಟ್ಟು ಹೆಚ್ಚೇನಿಲ್ಲಎಂದು ದೃಶ್ಯೀಕರಿಸುವ ಜಾಣ್ಮೆ ಗಮನಸೆಳೆಯುತ್ತದೆ.ಕೋಪ ಇಳಿದು ಸಾವಧಾನದ ಸ್ಥಿತಿಗೆ ಬಂದೊಡನೆ ಕ್ಲೋಸಪ್ ದೃಶ್ಯಸಂಯೋಜನೆಯನ್ನು ಬಳಸುವ ನಿದರ್ೆಶಕ ಪೋಲೀಸಿನವನ ಒಳಗಿನ ತಂದೆತನವನ್ನು ಅದ್ಭುತವಾಗಿ ನಿರೂಪಿಸಿದ್ದಾನೆ.ಚಿತ್ರದ ಗೆಲುವಿರುವುದೇ ಅಲ್ಲಿ.

ಮಾಮೂಲು ಭೂಮಿಯಲ್ಲೇ ಮುಂದಿನ ಅಂತಿಮ ದೃಶ್ಯಗಳನ್ನು ಸಂಯೋಜಿಸಬಹುದಾದ ಸುಲಭ ಮಾರ್ಗ ಎದುರಿದ್ದರೂ,ಮಜೀದಿ ಮರಳುಗಾಡನ್ನು ರೂಪಕವಾಗಿ ಬಳಸಿಕೊಳ್ಳುವ ಆಯ್ಕೆಯತ್ತ ಹೊರಳುತ್ತಾನೆ.ಅಪ್ಪ-ಮಗ ದಾರಿಯಲ್ಲಿ ವಾಪಾಸು ಬರುತ್ತಾ ಬುತ್ತಿ ಖಾಲಿಯಾಗ್ತದೆ,ಮೋಟಾರ್ ಸೈಕಲ್ ಕೈ ಕೊಡ್ತದೆ,ಪ್ರಕೃತಿ ಮುನಿಸಿಕೊಳ್ತದೆ,ಕಡೆಗೆ ದೇಹವೂ ನಿತ್ರಾಣವಾಗಿ ದಿಕ್ಕುತಪ್ಪಿ ಮರಳುಗಾಡಿನ ಯಾವುದೋ ಮೂಲೆಯಲ್ಲಿ ಅಲೆಯುವ ದೃಶ್ಯಗಳು ಇರಾನಿಯನ್ನರ ರಾಜಕೀಯ ಇತಿಹಾಸದ ವಿಚಿತ್ರ ಏರುಪೇರುಗಳನ್ನು ಬಿಂಬಿಸುತ್ತದೇನೋ ! ಆದರೆ ಅಂತಿಮವಾಗಿ ಮಜೀದಿ ಬೆರಳು ತೋರುವುದು ಮತ್ತದೇ ಮಮತೆಯತ್ತ.

ಮರಳುಗಾಡಿನಲ್ಲಿ ದಿಕ್ಕುತಪ್ಪಿ ನಡೆಯುವ ಹೊತ್ತಿನಲ್ಲಾಗಲೀ ಪೋಲೀಸಿನವ ಒಮ್ಮೆಯೂ ಮಗನೇ ಎಂದಾಗಲೀ,ಮೆಹ್ರೊಲ್ಲಾ ಪೋಲೀಸಿನವನನ್ನು ಅಪ್ಪಾಎಂದಾಗಲೀ ಸಂಭೋದಿಸುವುದಿಲ್ಲ.ಆದರೆ ಆ ಭಾವ,ತೊಳಲಾಟ ಎದೆಯೊಳಗಿರುತ್ತದೆ ಎಂಬುದನ್ನು ಅವರಿಬ್ಬರ ಮುಖಭಾವದ ಕ್ಲೋಸಪ್ ದೃಶ್ಯಗಳು ಮತೆ-ಮತ್ತೆ ಪಿಸುಗುಡುತ್ತವೆ.ಪೋಲೀಸಿನವ ನಿಶ್ಚಲವಾಗಿ ಬಿದ್ದಾಗ ಮೆಹ್ರೊಲ್ಲಾ ಆತನನ್ನು ಸಣ್ಣ ಕುರುಚಲು ಗಿಡದ ನೆರಳಿಗೆ,ಅಲ್ಲಿಂದ ಅನತಿ ದೂರದ ತೊರೆಯವರೆಗೂ ಕಷ್ಟಪಟ್ಟು ಎಳೆದೊಯ್ಯುವುದನ್ನು ಮತ್ತು ಚಿತ್ರದ ಆ ಅಂತಿಮ ದೃಶ್ಯವನ್ನು ಮಜೀದಿ ಅತ್ಯಪರೂಪವೆಂಬಂತೆ ಸೆರೆಹಿಡಿದಿದ್ದಾನೆ.ಚಿತ್ರದುದ್ದಕ್ಕೂ ಅಲ್ಲಲ್ಲಿ ಇಣುಕುವ ಸಣ್ಣ ಅವಧಿಯ ಸೌಂಡ್ಟ್ರ್ಯಾಕ್ಗಳು ಒಂದೂವರೆ ಗಂಟೆಯ ಈ ಚಿತ್ರದ ಮೆರುಗು.ಅಪ್ಪನ ಮೇಲೆ ವಿನಾಕಾರಣ ಮುನಿಸಿಕೊಳ್ಳುವ ಮತ್ತು ದ್ವೇಷಸಾಧಿಸುವ ಯುವಕರೆಲ್ಲಾ ಒಮ್ಮೆ ನೋಡಲೇಬೇಕಾದ ಚಿತ್ರವಿದು

 

‍ಲೇಖಕರು G

18 June, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading