ವಿಶ್ವಾರಾಧ್ಯ ಸತ್ಯಂಪೇಟೆ
ಇದೆ ಜೂನ್ ೧೮ ರಂದು ನಮ್ಮ ಊರು ಸತ್ಯಂಪೇಟೆಯಲ್ಲಿ ವಿಶೇಷವಾದೊಂದು ಕಾರ್ಯಕ್ರಮ ಜರುಗಿತು. ಇಲ್ಲಿ ನಡೆದ ಚರ್ಚೆಗಳು ನಾಡಿನ ಇಂದಿನ ದಿಕ್ಕುಗೆಟ್ಟ ರಾಜಕಾರಣಕ್ಕೆ ಜನತೆಗೆ ದಿಕ್ಕು ಎನ್ನುವಂತೆ ಇವೆ. ಈ ಸಭೆಯಲ್ಲಿ ಹಂಪಿ ವಿಶ್ವವಿದ್ಯಾಲಯದ ಪ್ರಾದ್ಯಾಪಕ ಶ್ರೀ.ಟಿ. ಆರ್. ಚಂದ್ರಶೇಖರ, ಗದುಗಿನ ತೋಂಟದ ಸಿದ್ಧಲಿಂಗಸ್ವಾಮಿಗಳು, ಭಾಲ್ಕಿಯ ಬಸವಲಿಂಗಪಟ್ಟದ್ದೇವರು , ಹುಬ್ಬಳ್ಳಿ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಜಯಪ್ರಕಾಶ ಪಾಟೀಲ ಮುಂತಾದವರು ಭಾಗವಹಿಸಿದ್ದರು.
ಸತ್ತ ದಿನವನ್ನು ಕೆಟ್ಟ ದಿನವೆಂದು ತಿಳಿದುಕೊಳ್ಳುವ ಸಂದರ್ಭದಲ್ಲಿ ನಾವು ಅದನ್ನು ಮರಣವೇ ಮಹಾನವಮಿ ಎಂದು ಆಚರಿಸುತ್ತೇವೆ. ಪ್ರತಿ ವರ್ಷವೂ ಬಸವ ತತ್ವ ಸಮಾವೇಶವನ್ನು ನಡೆಸುತ್ತೇವೆ. ಅನುಭವ ಮಂಟಪ ರೀತಿಯಲ್ಲಿ ಚರ್ಚೆಗಳು ನಡೆಯುತ್ತವೆ. ಕಲ್ಯಾಣ ಮಹೋತ್ಸವಗಳು ಜರುಗುತ್ತವೆ. ಜಾವಳ , ತೊಟ್ಟಿಲು ಕಾರ್ಯಕ್ರಮವೂ ನಡೆಯುತ್ತದೆ.
ತಂದೆ- ತಾಯಿಗಳು ವೃದ್ಧರಾಗುತ್ತಲೆ ಅವರನ್ನು ಆಶ್ರಮಕ್ಕೆ ಸೇರಿಸಿ ತಮ್ಮ ಕರ್ತವ್ಯದಿಂದ ತಪ್ಪಿಸಿಕೊಳ್ಳಬೇಕು ಎಂಬ ದಿನಮಾನಗಳಲ್ಲಿ ಅವರ ಬಗೆಗೆ ಪ್ರೀತಿ – ವಿಶ್ವಾಸ ಗೌರಗಳಿಂದ ನಡೆದುಕೊಳ್ಳಬೇಕು ಎಂದು ಹೇಳುವ ಸಭೆಗಳನ್ನು ಯಾವ ಸಂಘ ಸಂಸ್ಥೆಗಳ ನೆರವಿಲ್ಲದೆ ನಡೆಸಿಕೊಂಡು ಬರುತ್ತಿದ್ದೇವೆ. ಇದು ಎಲ್ಲರಿಗೂ ಮಾದರಿಯಾಗಲಿ.







0 Comments