ಇದ್ದಕ್ಕಿದ್ದಂತೆ ಬೆಂಗಳೂರಿನ ಮರಗಳನ್ನು ಅಪ್ಪಿ ನಿಂತವರಾರು? ಮರ ಕಡಿದರೆ ಹುಷಾರ್ ಎನ್ನುತ್ತಿದ್ದಾರೋ? ಅಥವಾ ಮರ ಅಪ್ಪಿ ನಿಂತಿದ್ದೇವೆ, ಕತ್ತರಿಸಿ ನಮ್ಮನ್ನೂ ಬೇಕಾದರೆ ಎನ್ನುತ್ತಿದ್ದಾರೋ? ರಸ್ತೆ ಅಗಲ ಆಗುವುದಾದರೆ ನಮ್ಮನ್ನು ಕಡಿದುರುಳಿಸಿದ ನಂತರವೇ ಎನ್ನುತ್ತಿದ್ದಾರೋ?
ಈ ಎಲ್ಲಾ ಪ್ರಶ್ನೆ ದಿಢೀರ್ ತಲೆ ಎತ್ತುವಂತೆ ಮಾಡಿದ್ದು ಅನಿಮಿಷ ನಗನೂರ್. ಎಕನಾಮಿಕ್ ಟೈಮ್ಸ್ ನಲ್ಲಿ ಕಲಾವಿದರಾಗಿರುವ ಅನಿಮಿಷ ಬೆಂಗಳೂರಿನ ವೈಭವಕ್ಕೆ ಮರಗಳು ಜೀವ ಕಳೆದುಕೊಳ್ಳಬೇಕಾಗಿ ಬಂದಿರುವುದನ್ನು ಬಿಂಬಿಸಿದ್ದು ಹೀಗೆ.
ತಮ್ಮ ವಿಭಿನ್ನ ಕಲಾಪ್ರದರ್ಶನದ ಮೂಲಕ ಸುಂದರಲಾಲ್ ಬಹುಗುಣ ಅವರ ಚಿಪ್ಕೋ ಚಳವಳಿಯನ್ನು ನೆನಪಿಸಿದರು. ಅಲ್ಲಿ ಜನರೇ ಮರಗಳನ್ನು ತಬ್ಬಿ ಕೊಡಲಿಗಳು ಹಿಂದೆ ಸರಿಯುವಂತೆ ಮಾಡಿದರೆ, ಕಲಾವಿದ ಅನಿಮಿಷ ಇಲ್ಲಿ ಮಾನವಾಕೃತಿಗಳು ಮರ ತಬ್ಬುವಂತೆ ಮಾಡಿದ್ದರು. ಕಾಗದದ ಮನುಷ್ಯರು ಮರ ತಬ್ಬಿ ನಿಂತಿರುವಂತೆ ಅಂಟಿಸಿದ್ದರು. ಪ್ರತಿಯೊಬ್ಬ ವ್ಯಕ್ತಿಯ ಮೇಲೂ ಹಸಿರು ಉಳಿಸುವ ಬಗ್ಗೆ ಮಹಾನ್ ಚಿಂತಕರ ಮಾತುಗಳನ್ನು ಬರೆದಿದ್ದರು.
ಸದಾಶಿವನಗರ ಪೋಲಿಸ್ ಸ್ಟೇಷನ್ನಿಂದ ಬಿ ಇ ಎಲ್ ರಸ್ತೆಯ ಉದ್ದಕ್ಕೂ ಅಂಟಿಸಿದ್ದ ಈ ಕಲಾಕೃತಿಗಳು ಓದುಗರು ಒಂದು ಕ್ಷಣ ನಿಂತು ಪರಿಸರ ಪ್ರಜ್ಞೆಯನ್ನು ಹೆಕ್ಕಿಕೊಂಡು ಹೊರಡುವಂತೆ ಮಾಡಿತ್ತು.


ಮರಗಳನ್ನು ಅಪ್ಪಿ ನಿಂತವರಾರು?
ನಿಮಗೆ ಇವೂ ಇಷ್ಟವಾಗಬಹುದು…





0 Comments