ಹನುಮಂತ ಅನಂತ ಪಾಟೀಲ
ಎಂದಿನಂತೆ ಮುಂಜಾನೆ ಇಂದಿನ ದಿನ ಪತ್ರಿಕೆಯ ಮುಖಪುಟ ಅವಲೊಕಿಸಿದಾಗ ಅಗ್ರ ಪುಟದ ಸೌಭಾಗ್ಯ ಪಡೆದ ಮೋದಿಯ ಕೋರಿಯಾ ದೇಶದ ಭೇಟಿ ಜೊತೆಗೆ ದ್ವಿತೀಯ ಪೀಯೂಸಿ ಪರೀಕ್ಷೆಯ ಫಲಿತಾಂಶಗಳ ಸುದ್ದಿಗಳ ಮಧ್ಯೆ ಇಬ್ಬರು ಅಮಾಯಕ ಹೆಣ್ಣು ಮಕ್ಕಳ ಸುದ್ದಿ ಸ್ಥಾನ ಪಡೆದುದು ಒಂದು ರೀತಿಯ ಅಚ್ಚರಿಯ ಸುದ್ದಿ ಎನಿಸಿತು. ಒಂದು ದ್ವಿತೀಯ ಪಿಯೂಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ ಗೌತಮಿಯ ಸುದ್ದಿಯಾದರೆ ಇನ್ನೊಂದು ಅತ್ಯಾಚಾರ ಸಂತ್ರಸ್ಥೆ 67 ವರ್ಷ ವಯಸ್ಸಿನ ಅರುಣಾ ಶಾನಬಾಗ ದೀರ್ಘ ಕಾಲದ ಯಾತನೆಯಿಂದ ಮುಕ್ತಳಾಗಿ ಇಹಲೋಕ ತ್ಯಜಿಸಿದ ಸುದ್ದಿ. ಆದರೆ ಪ್ರಥಮ ದಜೇಯಲ್ಲಿ ಪಾಸಾದ ಸಂತಸ ಅನುಭವಿಸಲು ಆಕೆಯೆ ಇಂದು ಬದುಕಿಲ್ಲ, ಕಳೆದ ಮಾರ್ಚ 31 ರಂದು ಬೆಂಗಳೂರಿನ ರೆಸಿಡೆನ್ಸಿಯಲ್ ಪಿಯೂ ಕಾಲೇಜಿನ ಅಟಂಡರ್ ಮಹೇಶನ ಗುಂಡಿಗೆ ಬಲಿಯಾಗಿ ಬಿಟ್ಟಿದ್ದಾಳೆ. ಇವೆರಡೂ ಸ್ವಲ್ಪವಾದರೂ ಹೃದಯವಂತಿಕೆ ಇರುವವರ ಮನ ಕಲಕದೆ ಇರಲಾರವು. ಇಂದಿಗೂ ಪ್ರಿಂಟ್ ಮೇಡಿಯಾಗಳು ತಮ್ಮ ಬದ್ಧತೆಯನ್ನು ಆಗಾಗ ಮೆರೆಯುತ್ತವೆ ಎನ್ನುವುದಕ್ಕೆ ಸಾಕ್ಷಿ ಇವೆರಡು ಸುದ್ದಿಗಳು..
ಸೂಕ್ಷ್ಮವಾಗಿ ಗಮನಿಸಿದರೆ ಈ ಎರಡೂ ಸಾವುಗಳಲ್ಲಿ ಕೆಲವು ಸ್ಥೂಲ ಸಾಮ್ಯತೆಗಳು ಕಂಡು ಬರುತ್ತವೆ. ಇಬ್ಬರೂ ಸಾಮಾನ್ಯ ಕುಟುಮಬದಿಂದ ಬಂದವರಾಗಿದ್ದರು ಜೊತೆಗೆ ಅನ್ಯಾಯವನ್ನು ಪ್ರತಿಭಟಿಸುವವರಾಗಿದ್ದರು ಎನ್ನುವುದರ ಜೊತೆಗೆ ಅವರಿಬ್ಬರೂ ಮಹಿಳೆಯರಾಗಿದ್ದರು ಎನ್ನುವುದು ಗಮನಿಸ ಬೇಕಾದ ಸಂಗತಿ. ಗೌತಮಿ ಬೆಮಗಳೂರಿನ ಮಹಿಳಾ ಹಾಸ್ಟೆಲ್ ವಿದ್ಯಾರ್ಥಿನಿಯಾಗಿದ್ದು ಪದೆ ಪದೆ ಹೊತ್ತಲ್ಲದ ಹೊತ್ತಿನಲ್ಲಿ ಆ ಹಾಸ್ಟೆಲ್ಗೆ ಬಂದು ಅಲ್ಲಿನ ವಿದ್ಯಾರ್ಥಿನಿಗಳ ಜೊತೆಗೆ ಅಸಭ್ಯತೆಯಿಂದ ವರ್ತಿಸುವುದು ದುರಹಂಕಾರದ ವರ್ತನೆ ತೋರುವುದು ಮಾಡುತ್ತಿದ್ದ ಅಟೆಂಡರ್ ವರ್ತನೆಯನ್ನು ಪ್ರತಿಭಟಿಸಿದ ಗೌತಮಿಗೆ ದೊರೆತದ್ದು ಆತನಿಂದ ಗುಂಡಿನ ದಾಳಿ .ಆ ಪರಿಣಾಮದಿಂದಾದ ಸಾವು. ಇನ್ನೊಬ್ಬಾಕೆ ಅರುಣಾ ಶಾನಭಾಗಳ ಈ ದುರಂತಮಯ ಸಾವಿಗೆ ಕಾರಣನಾದಾತ ಸಹ ಅವಳು ಕೆಲಸ ಮಾಡುತ್ತಿದ್ದ ಮೂಬೈನ ಕೆಇಎಂ ಆಸ್ಪತ್ರೆಯ ವಾರ್ಡ ಬಾಯ್ ಸೋಹನಲಾಲ್ ವಾಲ್ಮಿಕಿ ಎನ್ನುವಾತ. ಆತನದು ಸಹ ಹೆಚ್ಚು ಕಡಿಮೆ ಮಹೇಶನ ಮನಸ್ಥಿತಿಯಂತಹವನೆ. ಇವರ ಇಂತಹ ಕ್ರೂರ ಮನಸ್ಥಿತಿಗೆ ಕಾರಣವೇನು ಬಾಲ್ಯದಲ್ಲಿ ಅವರ ಮನೆಂಗಳಲ್ಲಿ ಮತ್ತು ಅವರು ಬದುಕುತ್ತಿದ್ದ ಪರಿಸರಗಳಲ್ಲಿ ನೈತಿಕ ನಡವಳಿಕೆಯ ಕೊರತೆಯೆ, ಅವರ ಗುಣ ಸ್ವಭಾವಗಳೆ ನೈತಿಕ ಮತ್ತು ಸಾಮಾಜಿಕ ಮೌಲ್ಯಗಳ ಬಗೆಗಿನ ಉಡಾಪೆಯೆ ಇವಲ್ಲದೆ ಬೇರೆ ಏನಾದರೂ ಕಾರಣಗಳೀವೆಯೆ. ಈ ಬಡಪಾಯಿ ಬಲಿಪಶುಗಳು ಪ್ರತಿಸ್ಟಿತ ಸಾಮಾಜಿಕ ಜವಾಬ್ದಾರಿಯುಳ್ಳ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಗಳಲ್ಲಿ ಕೆಲಸ ನಿರ್ವಸಹಿಸುತ್ತಿದ್ದರು ಅದೇ ರೀತಿ ಅವರ ಸಾವುಗಳಿಗೆ ಕಾರಣಕರ್ತರಾದವರೂ ಸಹ ಅದೇ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರು ಎನ್ನುವುದು ಬಹಳ ಖೇದದ ಸಂಗತಿ. ಇಂತಹ ಪಾತಕ ಮನಸ್ಥಿತಿಯ ಕ್ರಿಮಿನಲ್ ಮನಸ್ಥಿತಿಯವರ ಬಗೆಗೆ ಒಂದಿನಿತೂ ಕಾಳಜಿ ವಹಿಸದ ಆ ಸಂಸ್ಥೆಗಳ ಆಡಳಿತ ಮಂಡಳಿ ಮತ್ತು ಮುಖ್ಯಸ್ಥರು ಕಾರಣರಾಗುತ್ತಾರೆ.
ಇತ್ತೀಚೆಗೆ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ ಎನ್ನುವುದು ಸಾರ್ವಜನಿಕರ ಮತ್ತು ಸಾಮಾಜಿಕ ವಿಶ್ಲೇಷಕರ ಅಭಿಮತ. ಇದು ಬರಿ ಕೆಳಸ್ಥರದ ಜನರ ವರ್ತನೆ ಮಾತ್ರವಲ್ಲ ಎಲ್ಲ ದೊಡ್ಡವರೂ ಮತ್ತು ಅಧಿಕಾರಸ್ಥರು ಸಾರ್ವಜನಿಕರು ,ರಾಜಕಾರಣಿಗಳು, ಸ್ವಾಮಿಗಳು ಮತ್ತು ಸನ್ಯಾಸಿಗಳು ಸಹ ಇದ್ದಾರೆ. ಇದು ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಕಲಾರಂಗ ಮತ್ತು ಕ್ರೀಡಾರಂಗ ಮುಂತಾದವು ಸಹ ಹೊರತಲ್ಲದಿರುವುದು ಆತಂಕ ಹುಟ್ಟಿಸುತ್ತಿರುವ ಸಂಗತಿ. ಗೌತಮಿಯ ಕೊಲೆ ಕುರಿತು ಮಾತನಾಡುವ ಆರೋಪಿ ಮಹೇಶ ಆಕೆ ತನಗೆ ಬೆಲೆ ಕೊಡುತ್ತಿರಲಿಲ್ಲ ಅವಮಾನಿಸುತ್ತಿದ್ದಳು ಎನ್ನುವ ಕಾರಣಕ್ಕಾಗಿ ತಾನು ಮಾಡಿದ ಕೊಲೆಯನ್ನು ಸಮರ್ಥಿಸಿ ಕೊಳ್ಳುವ ಪ್ರಯತ್ನ ಮಾಡಿದರೆ ತನ್ನ ತಪ್ಪುಗಳ ಬಗೆಗೆ ಆತನಿಗೆ ಆತ್ಮ ಶೋಧನೆ ಎನ್ನುವುದೆ ಇಲ್ಲ ಎನಿಸುತ್ತದೆ. ಇನ್ನೋದು ಪ್ರಕರಣದ ಆರೋಪಿ ಆಸ್ಪತ್ರೆಯ ವಾರ್ಡ ಬಾಯ್ ಸೋಹನ್ಲಾಲ್ ವಾಲ್ಮಿಕಿಯು ಅರುಣಾ ಈತನ ಕರ್ತವ್ಯ ಚ್ಯುತಿಯ ಬಗೆಗೆ ಪ್ರತಿಭಟನೆಯ ಜೊತೆಗೆ ಖಂಡಿಸುತ್ತಿದ್ದುದು ಮತ್ತು ಮೇಲಾದಿಕಾರಿಗಳ: ಗಮನಕ್ಕೆ ತಂದುದರಿಂದ ಕೆರಳಿದ ಆತ ಆಕೆಯ ಮೇಲೆ ಅತ್ಯಾಚಾರ ಮಾಡಿ ನಾಯಿಗೆ ಕಟ್ಟುವ ಸರಪಳಿಯಿಂದ ಆಕೆಯ ಕುತ್ತಿಗೆಗೆ ಬಿಗಿದುದು ಆ ಕಾರಣದಿಂದಾಗಿ ಆಕೆಯ ಮೆದುಳಿಗೆ ಹಾನಿಯಾಗಿ ಶಾಶ್ವತ ಕೋಮಾಕ್ಕೆ ಜಾರಿದ ಆಕೆ ಇಂದು ಅದೇ ಸ್ಥಿತಿಯಲ್ಲಿ ಮರಣ ಹೊಂದಿದ್ದಾಳೆ. ಈ ಪ್ರಕರಣದಲ್ಲಿ ಆರು ವರ್ಷ ಶಿಕ್ಷೆ ಯನ್ನು ಅನುಭವಿಸಿ ಅದೇ ಆಸ್ಪತ್ರೆಗೆ ಮರಳಿ ಬಂದು ಕೆಲಸ ಕೇಳುವ ಆತನ ಅಸೂಕ್ಷ್ಮ ಮನಸ್ಥಿತಿ ಎಂಹದು ಎಂಬುದು ಮನವರಿಕೆಯಾಗುತ್ತದೆ. ಇಂತಹ ಅಮಾನವೀಯ ಮನಸ್ಥಿತಿಯ ಜನಗಳ ಮಧ್ಯೆ ಅವಲ ದೀರ್ಘ ಕಾಲದ ಬದುಕಿನುದ್ದಕ್ಕೂ ಆಕೆಯ ಶುಶ್ರೂಷೆ ಮಾಡಿದ ಆ ಆಸ್ಪತ್ರೆಯ ಸುಶ್ರೂಷಾ ಸಿಬ್ಬಂದಿ ಜೊತೆಗೆ ಆಕೆಯ ಆರೋಗ್ಯ ಸುಧಾರಿಸಿ ಆಕೆ ನೈಜ ಸ್ಥಿತಿಗೆ ಬರಬಹುದು ಎಂದು ಆಶಾಭಾವದಿಂದ ನಾಲ್ಕು ವರ್ಷಗಳ ಕಾಲ ಕಾದ ಆಕೆಯ ಫಿಯಾನ್ಸಿ ಅದೇ ಆಸ್ಪತ್ರೆಯ ಡಾ. ಸಂದೀಪ ಸರದೇಸಾಯಿ ನಂತರ ಹಿರಿಯರ ಒತ್ತಡಕ್ಕೆ ಮಣಿದು ಬೇರೆ ಮದುವೆಯಾದರೂ ಆಕೆಯ ಕೊನೆಯ ಕ್ಷಣದವರೆಗೂ ಆಕೆಯ ನೆರಳಾಗಿ ನಿಂತ ಆತನ ವರ್ತನೆ ಇಂದಿನ ಜನತೆಗೆ ಒಂದು ಮಾದರಿ ಎನ್ನಬಹುದು.
ಇವೆರಡು ಸುದ್ದಿಗಳ ಮಧ್ಯೆ ಮುಂಬೈನ ಕಿರು ತೆರೆಯ ನಟಿಯೊಬ್ಬಳನ್ನು ಸಿನಿಮಾದಲ್ಲಿ ನಟಿಸಲು ಅವಕಾಶ ಮಾಡಿ ಕೊಡುವುದಾಗಿ ನಂಬವಿಸಿ ಬೆಂಗಳೂರಿಗೆ ಕರೆಸಿಕೊಂಡು ಪಾನಿಯದಲ್ಲಿ ಮತ್ತು ಪದಾರ್ಥ ಬೆರೆಸಿ ಆಕೆಯು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿ ಹೆದರಿಸಿದ ಕಾಮುಕರ ಮೇಲೆ ಆಕೆ ದೂರು ದಾಖಲಿಸಿ ಅವರುಗಳು ನ್ಯಾಯಾಲಯದ ಕಟ ಕಟೆಗೆ ಬರುವಂತೆ ಮಾಡಿದ ಆಕೆಯ ಧೈರ್ಯವನ್ನು ಮೆಚ್ಚಲೆ ಬೇಕು. ಮೊದಲಿಗೆ ಮರ್ಯಾದೆಗೆ ಅಂಜಿ ಇಂತಹ ಪ್ರಕರಣಗಳ ದಾಖಲೆಗೆ ಬಲಿಪಶುಗಳಾದ ಹೆಣ್ಣುಮಕ್ಕಳು ಬರುತ್ತಿರಲಿಲ್ಲ, ಈಗ ಮಹಿಳೆ ಬದಲಾಗಿದ್ದಾಳೆ, ಧೈರ್ಯದಿಂದ ಪ್ರಕರಣ ದಾಖಲಿಸಲು ಮುಂದೆ ಬರುತ್ತಿದ್ದಾಳೆ ಆರೋಪಿಗಳು ಶಿಕ್ಷೆಗೆ ಒಳ ಪಡದೆ ಬೇರೆ ದಾರಿ ಇಲ್ಲ. ಈ ಪ್ರತಿಭಟನೆಯ ಮನಸ್ಥಿತಿ ಅತ್ಯಾಚಾರ ದೌರ್ಜನ್ಯಕ್ಕೊಳಗಾದ ಮಹಿಳೆಯರಲ್ಲಿ ಬರುವುದರ ಜೊತೆಗೆ ಸಾಕ್ಷಿಗಳು ಬಲವಾದ ಸಾಕ್ಷ್ಯ ನೀಡಿ ಆರೋಪಿಗಳು ಶಿಕ್ಷೆಗೆ ಒಳಪಡುವಂತೆ ಮಾಡಿದರೆ ಮಾತ್ರ ಕಾಮ ಪಿಪಾಸಿಗಳ ವರ್ತನೆಗೆ ಕಡಿವಾಳ ಹಾಕಲು ಸಾಧ್ಯ. ಇದರ ಜೊತೆಗೆ ಜೈಲಿಗೆ ಹೋಗಿ ಬಂದವರ ಕುರಿತ ವೈಭವೀಕರಣ ಅವರನ್ನು ಮೆರೆಸುವುದು ನಿಲ್ಲಬೇಕು. ಅದರಂತೆ ಇಂತಹ ಆರೋಪಿತರನ್ನು ತುಚ್ಛವಾಗಿ ಕಾಣುವ ವಾತಾವರಣ ನಿರ್ಮಾನವಾಗಬೇಕು ಅಂದಾಗ ಮಾತ್ರ ಬದಲಾವಣೆ ಸಾಧ್ಯವೇನೋ. ತಾವು ನಂಬಿದ ತತ್ವಗಳಿಗಾಗಿ ಜೀವ ತೆತ್ತ ಆ ಆತ್ಮಗಳಿಗೆ ಶಾಂತಿ ದೊರಕಲಿ ಎನ್ನು ಸದಾಶಯದೊಂದಿಗೆ..







ಸಕಾಲಿಕ ಚಿಂತನಶೀಲ ಬರಹ. ಮಾನವನ ತಾಮಸ ಗುಣಗಳ ರೌದ್ರತೆಯ ಪರಾಕಾಷ್ಠೆಗೆ ಬಲಿ ಅರುಣಾ. ದುಷ್ಟರ ಕೈಗೆ ನಲುಗುವ ನೂರಾರು ನತದೃಷ್ಟ ಜೀವಗಳನ್ನು ಸಂಕೇತಿಸುವ ಗೌತಮಿಯಂಥವರ ಕರುಣಾಪೂರಿತ ನೆನಕೆಗಳನ್ನು ಓದುವಾಗ ಮನಮುದುಡಿತು. ಯಾಕೆ ಹೀಗೆ ನಾವೆಲ್ಲ. ಇದಕ್ಕೆ ತಕ್ಕ ಶಾಸ್ತಿರೂಪದ ಕಾನೂನುಗಳ ಪರಿಪಾಲನೆಯಾಗುವುದೂ, ಶಾಲಾ ಪಥ್ಯಗಳಲ್ಲಿ ಈ ದೇಶದ, ಈ ನೆಲದ ಸಂಸ್ಕೃತಿಯ ಆಳ ಬೇರುಗಳನ್ನು ಮನಗಾಣಿಸುವ ಕ್ರಿಯೆ ಕೂಡ ಇವುಗಳನ್ನು ತಡೆಯುವ ಮಾರ್ಗಗಳೆಂದೆನಿಸುತ್ತದೆ ಈ ಕ್ಷಣ. ಒಂದೊಳ್ಳೆಯ ಬರಹ ಸರ್.
ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು ನನ್ನ ಬರಹ ಕುರಿತಂತೆ ತಾವು ಬರೆದ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು.
ತುಂಬಾ ಒಳ್ಳೆಯ ಲೇಖನ. ಆದರೆ ಕೆಲವು ಪದಗಳು ತಪ್ಪು ತಪ್ಪಾಗಿವೆ.
ಅಕ್ಕಿಮಂಗಲ ಮಂಜುನಾಥರವರಿಗೆ ವಂದನೆಗಳು
ತಮ್ಮ ಅನಿಸಿಕೆ ಸರಿ ಸರಿಯಾಗಿಯೆ ಬರಳಚ್ಚು ಮಾಡಿರುತ್ತೇನೆ ಆದರೆ ಬೆರಳಚ್ಚು ಕ್ರಿಯೆಯಲ್ಲಿ ಮಗ್ನವಾಗಿರುವಾಗ ಕರ್ಸರ್ ಪಾಯಿಂಟ್ ಎಲ್ಲಿಯೋ ಹೋಗಿ ಏನನ್ನೋ ಎಡವಟ್ಟು ಮಾಡಿ ಬಿಟ್ಟಿರುತ್ತೆ ನನ್ನ ಬರಹ ಸರಿಯಾಗಿದೆ ಎಂಬ ಭ್ರಮೆಯಲ್ಲಿ ನಾನಿರುತ್ತೆನೆ ಸೇವ್ ಮಾಡಿದಾಗ ಅದು ಮಾಡಿದ ಕಿತಾಪತಿ ಗೊತ್ತಾಗುತ್ತದೆ ಮತ್ತೆ ಸರಿಪಡಿಸುವ ತಪ್ಪುಗಳು ಹಾಗೆಯೆ ಉಳಿದು ಬಿಡುತ್ತವೆ ಓದುಗರಿಗೆ ಕಿರಿ ಕಿರಿಯಾಗುತದೆ ನಿಜ, ಇನ್ನು ಮುಂದೆ ಬರಹ ಹಾಕುವಾಗ ಕಾಳಜಿ ವಹಿಸುವೆ, ಪ್ರತಿಕ್ರಿಯೆಗೆ ಧನ್ಯವಾದಗಳು.