ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನೋಹರ ಡಿಸೈನ್

exhibition-copy3.jpg

ಮನೋಹರ್ ಆಚಾರ್ಯ ಹೊಸ ಸಾಹಸಕ್ಕೆ ಸಜ್ಜಾಗಿದ್ದಾರೆ. ಇದೇ ಮೊದಲ ಬಾರಿಗೆ ಡಿಸೈನ್, ಟೈಪೋಗ್ರಫಿ, ಕ್ಯಾಲಿಗ್ರಫಿ ಕುರಿತ ಪ್ರದರ್ಶನಕ್ಕೆ ಅಣಿಯಾಗಿದ್ದಾರೆ. ಸುಧಾದಲ್ಲಿ ಹಿರಿಯ ಕಲಾವಿದರಾದ ಮನೋಹರ್ ಅವರ ಅಕ್ಷರಗಳನ್ನು ನೋಡುವುದೇ ಒಂದು ಚಂದ. ಕುಸುರಿ ಕೆಲಸದಂತಿರುತ್ತದೆ. ಅಣ್ಣ ಚಂದ್ರನಾಥ್ ಸಹಾ ಅಕ್ಷರ ಕಲೆಯಂತೆ  ಇರಬೇಕಾದರೆ ಮನೋಹರ್ ಬೆಸ್ಟ್ ಎಂದ ನೆನಪು ಹಲವರಿಗಿದೆ.

ಈಗ ಮನೋಹರ್ ತಮ್ಮ ಅದೇ ಹೆಗ್ಗುರುತನ್ನು ಜನರ ಮುಂದಿಡುತ್ತಿದ್ದಾರೆ. ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿ ಇದಕ್ಕೆ ವೇದಿಕೆ ಒದಗಿಸಿ ಕೊಡುತ್ತಿದೆ. ತಮ್ಮ ಚಂದದ ಅಕ್ಷರ, ವಿನ್ಯಾಸ ಎಲ್ಲವನ್ನೂ ಅಲ್ಲಿಡುತ್ತಿದ್ದಾರೆ. ಮನೋಹರ್ ಇ ಮೈಲ್: k_manohar_achar@yahoo.co.in

‍ಲೇಖಕರು avadhi

11 March, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading