ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನೋರಂಜನ್ ಅವರ ಆತ್ಮಕತೆ…

ಫೇಸ್ ಬುಕ್ ನಿಂದ..

ಸುಭಾಷ್‌ ರಾಜಮಾನೆ

ದಲಿತ ಲೇಖಕ ಮನೋರಂಜನ್ ಬ್ಯಾಪಾರಿ ಅವರು ಈ ಬಾರಿಯ ಬೆಂಗಾಲ್ ಚುನಾವಣೆಯಲ್ಲಿ MLA ಸ್ಥಾನಕ್ಕೆ TMC ಪಕ್ಷದಿಂದ ಗೆದ್ದಿರುವುದು ಬದ್ಧತೆಯ ಸಾಹಿತ್ಯಕ್ಕೆ ದೊರಕಿದ ಜಯವಾಗಿದೆ. ರಿಕ್ಷಾ ಚಾಲಕರಾಗಿದ್ದ ಮನೋರಂಜನ್ ಅವರು ಮಹಾಶ್ವೇತಾ ದೇವಿ ಅವರಿಂದ ಪ್ರೇರಿತರಾಗಿ ಬರವಣಿಗೆಯ ಲೋಕಕ್ಕೆ ಬಂದವರು.

ಹಲವು ವರ್ಷಗಳಿಂದ ದಲಿತ ಚಳುವಳಿಯಲ್ಲಿ ಸಕ್ರಿಯರಾಗಿದ್ದಾರೆ. ಅವರ ‘Interrogating My Chandal Life’ ಆತ್ಮಕತೆಯು ಬೆಂಗಾಲಿಯಲ್ಲಿ ಹೊಸ ಸಂಚಲನೆ ಮೂಡಿಸಿದೆ. ಇಂಗ್ಲೀಷಿಗೂ ಅನುವಾದಗೊಂಡು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಅನೇಕ ಚರ್ಚೆಗಳು ಕೂಡ ನಡೆದವು.

ಹಲವು ಕೃತಿಗಳನ್ನು ಬರೆದಿರುವ ಮನೋರಂಜನ್ ಅವರು ಗ್ರಂಥಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಆ ಕೆಲಸವೂ ಖಾಯಂ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಗೆಲುವು ಅಂಬೇಡ್ಕರ್ ಅವರ ಸಮಾನತೆಯ ಆಶಯಗಳಿಗೆ ಸಿಕ್ಕ ಗೆಲುವು. ಅವರು ಇನ್ನು ಮುಂದೆಯು ಸಮಾನತೆಗಾಗಿ ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡುವಂತಾಗಲಿ… ಜೈ ಭೀಮ್…

‍ಲೇಖಕರು Avadhi

5 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading