ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನೆ ತಾರಸಿಯೇ ತಾಲೀಮು ಜಾಗ..

chandrahasa ullal

ಚಂದ್ರಹಾಸ ಉಳ್ಳಾಲ್

…ಹೀಗೊಂದು ಪ್ರಯೋಗ ನಡೆಯುತ್ತಿದೆ.. ಮಹಿಳೆಯರು ಮತ್ತು ಮಕ್ಕಳಿಗೆ ನಾಟಕದ ತಾಲೀಮು ನಡೆಸುತ್ತಿರುವೆ..28 ಜನ ನಟಿಯರು …! ಎಲ್ಲಾ ನಮ್ಮ ಮನೆಯ ಆಸುಪಾಸಿನವರು..ಬೀಡಿ ಕಟ್ಟುವ.. ಬತ್ತಿ ಹೊಸೆಯುವ.. ಅಂಗಡಿಯಲ್ಲಿ ಲೆಕ್ಕ ಬರೆಯುವ.. ಬಟ್ಟೆ ಹೊಲಿಯುವ ಕಾಯಕದ ಮಹಿಳೆಯರು … ಹಾಗೂ 6 ರಿಂದ 9 ನೆ ತರಗತಿಯಲ್ಲಿ ಓದುವ ಹೆಣ್ಣು ಮಕ್ಕಳು … ಒಬ್ಬಳು engineering ಓದುವವಳು… ಮನೆ ತಾರಸಿಯೇ ತಾಲೀಮು ಜಾಗ..

ನಾಟಕ.. ಬ್ರೆಕ್ಟ್ ನ “ಕಕೇಷಿಯನ್ ಚಾಕ್ ಸರ್ಕಲ್” ನ ತುಳು ರೂಪಾಂತರ ” ಸುಣ್ಣದ ಕಲ “… ನಾನೊಬ್ಬ ನಾಟಕ ನಿರ್ದೇಶನದ ವಿದ್ಯಾರ್ಥಿಯಾಗಿ ಈ ಗುಂಪಿನ ಜತೆ ಕಲಿಯುತ್ತಿದ್ದೇನೆ.. ಮೊದಲ ಬಾರಿಗೆ ರೂಪಾಂತರ, ಹಾಡುಗಳು.. ಸಂಗೀತ ಹಾಗೂ ನಿರ್ದೇಶನದ ಜವಾಬ್ದಾರಿ.. ಅಂತಿಮ ಫಲಿತಾಂಶಕ್ಕಿಂತ ಸವೆಸುವ ಹಾದಿ.. ಕಲಿಕೆಯ ಉತ್ಸಾಹವೇ ತುಂಬಾ ಮುಖ್ಯ ಅಲ್ಲವೇ …😊 ಆನಂದದ.. ಹುರುಪಿನಿಂದ ಕೂಡಿದ ದಿನಗಳು ಇವು…. ಪೇಟೆಯ ನಾಟಕದ ಜಂಜಡಕ್ಕೆ ಚಿಕ್ಕ ಬಿಡುವು ..

ಅಂದ ಹಾಗೆ 20-02-16 ರ ಸಂಜೆ 7:45ಕ್ಕೆ ಉಳ್ಳಾಲಬೈಲು ನಮ್ಮ ಮನೆ ಸಮೀಪವಿರುವ ಸಣ್ಣ ಮೈದಾನದಲ್ಲಿ ಶೋ.. ಈ ಒಟ್ಟು process ನಲ್ಲಿ ನಮ್ಮ ಮನೆ ಯಜಮಾನ್ತಿ ಪಾತ್ರ ತುಂಬಾ ಹಿರಿದು… ಆನಂದ ಹಂಚಿಕೊಂಡಿದ್ದು ಅತಿಯಾಗಿಲ್ಲ ತಾನೆ.
ಬನ್ನಿ ಗೆಳೆಯರೇ…

sunnada kala

‍ಲೇಖಕರು Admin

16 February, 2016

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading