ಚಂದ್ರಹಾಸ ಉಳ್ಳಾಲ್
…ಹೀಗೊಂದು ಪ್ರಯೋಗ ನಡೆಯುತ್ತಿದೆ.. ಮಹಿಳೆಯರು ಮತ್ತು ಮಕ್ಕಳಿಗೆ ನಾಟಕದ ತಾಲೀಮು ನಡೆಸುತ್ತಿರುವೆ..28 ಜನ ನಟಿಯರು …! ಎಲ್ಲಾ ನಮ್ಮ ಮನೆಯ ಆಸುಪಾಸಿನವರು..ಬೀಡಿ ಕಟ್ಟುವ.. ಬತ್ತಿ ಹೊಸೆಯುವ.. ಅಂಗಡಿಯಲ್ಲಿ ಲೆಕ್ಕ ಬರೆಯುವ.. ಬಟ್ಟೆ ಹೊಲಿಯುವ ಕಾಯಕದ ಮಹಿಳೆಯರು … ಹಾಗೂ 6 ರಿಂದ 9 ನೆ ತರಗತಿಯಲ್ಲಿ ಓದುವ ಹೆಣ್ಣು ಮಕ್ಕಳು … ಒಬ್ಬಳು engineering ಓದುವವಳು… ಮನೆ ತಾರಸಿಯೇ ತಾಲೀಮು ಜಾಗ..
ನಾಟಕ.. ಬ್ರೆಕ್ಟ್ ನ “ಕಕೇಷಿಯನ್ ಚಾಕ್ ಸರ್ಕಲ್” ನ ತುಳು ರೂಪಾಂತರ ” ಸುಣ್ಣದ ಕಲ “… ನಾನೊಬ್ಬ ನಾಟಕ ನಿರ್ದೇಶನದ ವಿದ್ಯಾರ್ಥಿಯಾಗಿ ಈ ಗುಂಪಿನ ಜತೆ ಕಲಿಯುತ್ತಿದ್ದೇನೆ.. ಮೊದಲ ಬಾರಿಗೆ ರೂಪಾಂತರ, ಹಾಡುಗಳು.. ಸಂಗೀತ ಹಾಗೂ ನಿರ್ದೇಶನದ ಜವಾಬ್ದಾರಿ.. ಅಂತಿಮ ಫಲಿತಾಂಶಕ್ಕಿಂತ ಸವೆಸುವ ಹಾದಿ.. ಕಲಿಕೆಯ ಉತ್ಸಾಹವೇ ತುಂಬಾ ಮುಖ್ಯ ಅಲ್ಲವೇ …😊 ಆನಂದದ.. ಹುರುಪಿನಿಂದ ಕೂಡಿದ ದಿನಗಳು ಇವು…. ಪೇಟೆಯ ನಾಟಕದ ಜಂಜಡಕ್ಕೆ ಚಿಕ್ಕ ಬಿಡುವು ..
ಅಂದ ಹಾಗೆ 20-02-16 ರ ಸಂಜೆ 7:45ಕ್ಕೆ ಉಳ್ಳಾಲಬೈಲು ನಮ್ಮ ಮನೆ ಸಮೀಪವಿರುವ ಸಣ್ಣ ಮೈದಾನದಲ್ಲಿ ಶೋ.. ಈ ಒಟ್ಟು process ನಲ್ಲಿ ನಮ್ಮ ಮನೆ ಯಜಮಾನ್ತಿ ಪಾತ್ರ ತುಂಬಾ ಹಿರಿದು… ಆನಂದ ಹಂಚಿಕೊಂಡಿದ್ದು ಅತಿಯಾಗಿಲ್ಲ ತಾನೆ.
ಬನ್ನಿ ಗೆಳೆಯರೇ…
0 ಪ್ರತಿಕ್ರಿಯೆಗಳು