ಸರ್ಕಾರ ತಾಯಿಯಂತೆ ಯೋಚಿಸಲಿ
ರೂಪ ಹಾಸನ
ಕೃಪೆ : ವಿಜಯ ಕರ್ನಾಟಕ
ಕಡಿಮೆ ಮಕ್ಕಳಿರುವ ನೆವದಲ್ಲಿ ಸಕರ್ಾರಿ ಶಾಲೆಗಳನ್ನು ಮುಚ್ಚುತ್ತಿರುವುದರಿಂದ ಗ್ರಾಮೀಣ ಬಡ ಮಕ್ಕಳ ಮೇಲೆ ಆಗುವ ಪರಿಣಾಮಗಳನ್ನು ಕುರಿತು, ಹಾಗೂ ಅದರ ಹಿಂದೆ ಇರುವ ವಾಸ್ತವ ಕಹಿ ಸತ್ಯಗಳನ್ನು ಕಳೆದ 15 ದಿನಗಳಿಂದ ವಿಜಯ ಕನರ್ಾಟಕ ಪತ್ರಿಕೆ ‘ಮುಚ್ಚು-ಮರೆ’ ಶೀಷರ್ಿಕೆಯಡಿ ಜನರ ಮುಂದಿರಿಸುವುದರ ಜೊತೆಗೆ ಸಕರ್ಾರದ ಕಣ್ಣು ತೆರೆಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆ. ತನ್ಮೂಲಕ ಪತ್ರಿಕೋದ್ಯಮ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂಬ ಮಾತನ್ನು ಸಾಬೀತುಪಡಿಸಿದೆ. ರಾಜ್ಯದ ಒಂದೊಂದು ಜಿಲ್ಲೆಯದೂ ಒಂದೊಂದು ಕಥೆಯಾದರೆ, ಒಂದೊಂದು ಶಾಲೆಯದು ವಿಭಿನ್ನ ಸಮಸ್ಯೆ, ಒಂದೊಂದು ಮಗುವಿನದು ಬೇರೆ ಬೇರೆಯದೇ ಸಂಕಟ. ಈ ವರ್ಷ ಹತ್ತಕ್ಕಿಂಥಾ ಕಡಿಮೆ ಇರುವ 3000 ಶಾಲೆಗಳನ್ನು ಮುಚ್ಚುವುದೆಂದರೆ ಅಂದಾಜು 25000 ಬಡ ಮಕ್ಕಳ ಬದುಕಿನೊಂದಿಗೆ ಚೆಲ್ಲಾಟವಾಡಿದಂತೆ. ಈ ಪ್ರಮಾಣ ಪ್ರತಿ ವರ್ಷ ಹೆಚ್ಚುತ್ತಾ ಹೋಗುತ್ತದೆ ಎಂಬುದೇ ಆತಂಕದ ವಿಷಯ.
ಒಂದು ಸಕರ್ಾರವೆಂದರೆ ಕಾಳಜಿ-ಅಂತಃಕರಣವಿರುವ ತಾಯಿಯಂತೆ. ಕುಟುಂಬದಲ್ಲಿ ಮಗುವೊಂದು ಬಡಕಲಾಗಿ, ಅನಾರೋಗ್ಯದಿಂದಿದ್ದರೆ, ತಾಯಿ ಆ ಮಗುವಿಗೆ ಹೆಚ್ಚಿನ ಪೌಷ್ಟಿಕ ಆಹಾರದೊಂದಿಗೆ ತನ್ನ ಪ್ರೀತಿಯನ್ನು ನೀಡಿ ಶ್ರದ್ಧೆಯಿಂದ ಮಗುವನ್ನು ಸಶಕ್ತಗೊಳಿಸಲು ಪ್ರಯತ್ನಿಸುತ್ತಾಳೆ. ಮುಂದಿನ ಸಮಾಜ ಹೇಗಿರಬೇಕು? ಎಂಬುವುದನ್ನು ನಿರ್ಧರಿಸುವುದು ಆ ನಾಡಿನ ಶಿಕ್ಷಣ ವ್ಯವಸ್ಥೆ. ನಿಜವಾದ ಕಾಳಜಿಯುಳ್ಳ ಸಕರ್ಾರ ಅದಕ್ಕೆ ಪೂರಕವಾಗಿ ಯೋಚಿಸಬೇಕು. ಸಕರ್ಾರಿ ಶಾಲೆಯಲ್ಲಿ ಮಕ್ಕಳು ಕಡಿಮೆಯಾಗುತ್ತಿದ್ದಾರೆ ಎಂದಾಕ್ಷಣ ಶಾಲೆಯನ್ನೇ ಮುಚ್ಚಿ ಕೈ ತೊಳೆದುಕೊಳ್ಳುವುದಲ್ಲ. ಬದಲಿಗೆ ಸಕರ್ಾರಿ ಶಾಲೆಗಳನ್ನು ಬಲಗೊಳಿಸಲು ಇರುವ ಪಯರ್ಾಯ ಮಾರ್ಗಗಳನ್ನು ಹುಡುಕಿ ಅನುಷ್ಠಾನಗೊಳಿಸಬೇಕು.
ಬಹು ಮುಖ್ಯ ಅಂಶವೆಂದರೆ ಶಿಕ್ಷಣ ಮಾರಾಟದ ಸರಕಲ್ಲ. ದೊಡ್ಡ ದೊಡ್ಡ ಮಾಲ್ಗಳಲ್ಲಿ, ಬಣ್ಣ ಬಣ್ಣದ ಆಕರ್ಷಕ ಪ್ಯಾಕ್ಗಳಲ್ಲಿ, ರೋಚಕ ಜಾಹಿರಾತು ನೀಡಿ ಹರಾಜಿಗಿಡುವಂತದ್ದಲ್ಲ. ಆದರೆ ಇಲ್ಲಿ ಏನಾಗಿದೆ ಎಂದರೆ ಖಾಸಗಿವಲಯವೇ ಸಕರ್ಾರಿ ವ್ಯವಸ್ಥೆಯನ್ನು ನುಂಗಿ ನೀರು ಕುಡಿಯುವಂತಾಗಿದೆ. ಖಾಸಗಿವಲಯದ ಪಾಲುದಾರಿಕೆ ಎಷ್ಟು ಪ್ರಮಾಣದಲ್ಲಿರಬೇಕು? ಯಾವ ಸ್ವರೂಪದಲ್ಲಿರಬೇಕು? ಅದರ ಮೇಲೆ ಸಕರ್ಾರದ ಹಿಡಿತ ಹೇಗಿರಬೇಕು? ಅದಕ್ಕೆ ಒಂದು ಸ್ಪಷ್ಟ ನೀತಿ ನಿಯಮ ಅಂತೇನಾದರೂ ಇದೆಯೇ? ಇಲ್ಲವೇ ಇಲ್ಲ. ಉದಾಹರಣೆಗೆ ಕನರ್ಾಟಕ ಸಾರಿಗೆ ಎಂಬ ಸಾರ್ವಜನಿಕ ವ್ಯವಸ್ಥೆ ಹಾಗೂ ಖಾಸಗಿ ಸಾರಿಗೆ ವ್ಯವಸ್ಥೆ, ಒಂದರ ಮೇಲೆ ಒಂದು ಪೈಪೋಟಿ ಇಲ್ಲದೇ, ಸ್ಪಧರ್ೆಗೆ ಇಳಿಯದೇ ಎರಡೂ ಒಟ್ಟಾಗಿ ಸಾಗ್ತಾ ಇಲ್ಲವೇ? ಹಾಗೇ ಖಾಸಗಿವಲಯ ಮಿತಿ ಮೀರಿ ಹೋಗದಂತೆ ಕಠಿಣ ಹಾಗೂ ಸಮಗ್ರ ಶೈಕ್ಷಣಿಕ ನೀತಿಯೊಂದನ್ನು ರೂಪಿಸಬೇಕು. ಈಗಿನಂತೆ ಬೇಕಾಬಿಟ್ಟಿ ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಖಾಸಗಿ ಶಾಲೆಗಳನ್ನು ಪ್ರಾರಂಭಿಸದಂತೆ, ಅವುಗಳಿಗೆ ಪರವಾನಗಿ ನೀಡಲು ಮಾನದಂಡಗಳನ್ನು ರೂಪಿಸಿ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.
ಒಂದು ಕಡೆ ಖಾಸಗಿವಲಯ ಕೊಬ್ಬಿ ನಿಲ್ಲೋದಕ್ಕೆ ಹಾಸಿಗೆ ಹಾಕಿಕೊಟ್ಟು ಇನ್ನೊಂದು ಕಡೆ ಸಕರ್ಾರಿ ಶಾಲೆಗಳನ್ನು ಸಾವಿರದ ಲೆಕ್ಕದಲ್ಲಿ ಮುಚ್ಚುತ್ತಾ ಹೋಗಿ, ಕೆಲವೇ ವರ್ಷಗಳಲ್ಲಿ ಸರಕಾರಿ ಶಿಕ್ಷಣ ವ್ಯವಸ್ಥೆಯನ್ನೇ ಸಂಪೂರ್ಣವಾಗಿ ನಿಲ್ಲಿಸಿ, ‘ಬೇಕಿದ್ದರೆ ಖಾಸಗಿ ಶಾಲೆಯಲ್ಲಿ ಕಲಿಯಲಿ, ಇಲ್ಲದಿದ್ದರೆ ಕೂಲಿ ಮಾಡಲು ಹೋಗಲಿ’ ಎಂಬ ಸಂದೇಶವನ್ನೇನಾದರೂ ಸಕರ್ಾರ ಕೊಡ್ತಾ ಇದ್ಯಾ ಅನ್ನಿಸ್ತಾ ಇದೆ. ಒಂದು ಹಳ್ಳಿಯ ಸಕರ್ಾರಿ ಶಾಲೆ ಮುಚ್ಚುವ ಮೂಲಕ ಆ ಊರಿನ ಸಾಂಸ್ಕೃತಿಕ ನೆಲೆಗಟ್ಟನ್ನೇ ಕಳಚಿದಂತಾಗುತ್ತದೆ. ಪ್ರಾಥಮಿಕ ಶಾಲೆ ಓದುತ್ತಿರುವ ಪುಟಾಣಿ ಮಕ್ಕಳು ಏಕಾಂಗಿಯಾಗಿ, ದೂರದ ಶಾಲೆಗೆ ನಡೆದು ಅಥವಾ ಬಸ್ಗಳಲ್ಲಾದರೂ ಹೇಗೆ ಹೋಗಬಲ್ಲರು? ಬಸ್ಗಳೇ ಪ್ರವೇಶಿಸದ, ರಸ್ತೆಗಳೇ ಇಲ್ಲದ ಕುಗ್ರಾಮಗಳು ರಾಜ್ಯದಲ್ಲಿ ಎಷ್ಟಿವೆ ಎನ್ನೋದು ನಗರದಲ್ಲಿ ವಿಲಾಸಿ ಜೀವನ ನಡೆಸುತ್ತಿರುವ, ವಿಮಾನ-ಹೆಲಿಕಾಫ್ಟರ್ಗಳಲ್ಲಿ ಹಾರಾಡುವ ನಮ್ಮ ರಾಜಕಾರಣಿಗಳಿಗೆ ತಿಳಿದಿದೆಯೇ? ಅನನುಕೂಲ ಭೌಗೋಳಿಕ ಪ್ರದೇಶದಲ್ಲಿ, ಅದರಲ್ಲೂ ಮನೆಯ ಹತ್ತಿರದ ಶಾಲೆಗೇ ಹೆಣ್ಣು ಮಕ್ಕಳನ್ನು ಸುರಕ್ಷತೆಯ ದೃಷ್ಟಿಯಿಂದ ಕಳಿಸೋದಕ್ಕೆ ಗ್ರಾಮೀಣ ಪೋಷಕರು ಹೆದರ್ತಾರೆ. ಇನ್ನು ದೂರದ ಶಾಲೆಗೆ ಮಕ್ಕಳನ್ನು ಹೇಗೆ ಕಳುಹಿಸುತ್ತಾರೆ? ಅಲ್ಲಿಗೆ ಹೆಣ್ಣು ಮಕ್ಕಳ ಶೈಕ್ಷಣಿಕ ಭವಿಷ್ಯವನ್ನ ಮುಚ್ಚಿದಂತೆನೇ ಅಲ್ವೇ?
2011ರ ಜನಗಣತಿಯಂತೆ ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಸಂಖ್ಯೆ 1,11,000. ಇದು ಹೋಗಲಿ, ಸಕರ್ಾರದ ಸರ್ವಶಿಕ್ಷಣ ಅಭಿಯಾನ ಶೈಕ್ಷಣಿಕ ಮಾಹಿತಿ 2010-11ರ ಪ್ರಕಾರವೇ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ 39841. ನಿಜಕ್ಕೂ ಸಕರ್ಾರಕ್ಕೆ ಕಣ್ಣಿದೆಯೇ? ಇದ್ದಿದ್ದರೆ ಇಂಥ ದಿವ್ಯ ನಿರ್ಲಕ್ಷ್ಯ ಯಾಕೆ? ಈ ಮಕ್ಕಳನ್ನಾದರೂ ಶಾಲೆಗೆ ಸೇರಿಸುವ ಪ್ರಾಮಾಣಿಕ ಪ್ರಯತ್ನವನ್ನೇನಾದರೂ ಸಕರ್ಾರ ಮಾಡಿದರೆ ಈಗ ಇರುವ ಶಾಲೆಗಳು ಸಾಲದೇ ಮತ್ತಷ್ಟು ಹೊಸ ಶಾಲೆಗಳನ್ನು ತೆರೆಯಬೇಕಾಗುತ್ತದೆ. ರಾಜ್ಯದಲ್ಲಿ ಲಂಗುಲಗಾಮಿಲ್ಲದೇ ಹುಟ್ಟಿಕೊಂಡಿರುವ 3000 ಕ್ಕೂ ಹೆಚ್ಚಿನ ಅನಧಿಕೃತ ಶಾಲೆಗಳನ್ನು ಮುಚ್ಚಿದರೆ ಸಕರ್ಾರಿ ಶಾಲೆಗೆ ಮಕ್ಕಳು ತಾವಾಗಿಯೇ ಬರುತ್ತಾರೆ. ಖಾಸಗಿ ಶಾಲೆಗಳಿಗೆ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಪರವಾನಗಿ ನೀಡಿ ದಶಕಗಳಿಂದ ಖಾಸಗಿ ಹಿತಕ್ಕೆ ಬಲಿಯಾಗಿರುವ ಸಕರ್ಾರ ಮತ್ತು ಅಧಿಕಾರಶಾಹಿಯ ಸಂಚಿಗೆ ಇವತ್ತು ಬಡ ಮಕ್ಕಳ ಶಿಕ್ಷಣ ಬಲಿಯಾಗಬೇಕಾಗಿದೆ.
ಶಿಕ್ಷಣ ಇಲಾಖೆಯ ದಾಖಲೆಗಳ ಪ್ರಕಾರವೇ ರಾಜ್ಯದಲ್ಲಿ 13 ಸಾವಿರ ಶಾಲೆಗಳಲ್ಲಿ ಶೌಚಾಲಯವಿಲ್ಲ. 8389 ಶಾಲೆಗಳಲ್ಲಿ ನೀರಿಲ್ಲ, 8000 ಶಿಕ್ಷಕರ ಹುದ್ದೆಗಳು ಭತರ್ಿಗಾಗಿ ಕಾಯುತ್ತಿವೆ! 21910 ಶಾಲೆಗಳಿಗೆ ಆಟದ ಮೈದಾನವಿಲ್ಲ, 763ಕ್ಕೂ ಹೆಚ್ಚು ಶಾಲೆಗಳಿಗೆ ಕಟ್ಟಡವೇ ಇಲ್ಲ, 257ಕ್ಕೂ ಹೆಚ್ಚು ಶಾಲೆ ಶಿಥಿಲಾವಸ್ಥೆಯಲ್ಲಿವೆ. 28%ರಷ್ಟು ಶಾಲೆಗಳು ಮೂಲಸೌಕರ್ಯದ ಕೊರತೆ ಎದುರಿಸುತ್ತಿವೆ. ಇಂತಹ ಸಕರ್ಾರಿ ಶಾಲೆಗಳಿಗೆ ಒಂದಿಷ್ಟು ಅನುಕೂಲತೆ ಇರುವವರ್ಯಾರು ತಮ್ಮ ಮಕ್ಕಳನ್ನು ಸೇರಿಸಲು ಬಯಸುತ್ತಾರೆ? ಜೊತೆಗೆ ಸಕರ್ಾರಿ ಶಾಲೆಗಳಲ್ಲಿ ಡಿ ದಜರ್ೆ ನೌಕರರಿಲ್ಲ. ಅವರು ಮಾಡುವ ಕೆಲಸವನ್ನೆಲ್ಲಾ ಮಕ್ಕಳೇ ಮಾಡಬೇಕು! ಶೌಚಾಲಯ ಸ್ವಚ್ಛಗೊಳಿಸೋದು, ಶಾಲೆಯ ಒಳ ಹೊರಗೆ ಶುದ್ಧಿ ಮಾಡೋದು, ಬಿಸಿ ಊಟದ ತಯಾರಿಯಲ್ಲಿ ಸಹಾಯ ನೀಡುವ ಕೆಲಸವನ್ನೆಲ್ಲಾ ಮಕ್ಕಳಿಂದ, ಇದೆಲ್ಲಾ ಮಾಮೂಲು ಅನ್ನೋ ರೀತಿಲಿ ಮಾಡಿಸಲಾಗುತ್ತಿದೆ. ಇಲ್ಲೆಲ್ಲಾ ಮಕ್ಕಳ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯನ್ನು ಸಕರ್ಾರ ಮತ್ತು ಅಧಿಕಾರಶಾಹಿಯೇ ತಿಳಿದೂ ಮಾಡುತ್ತಿದೆ. ಸಕರ್ಾರಿ ಶಾಲೆ ಮಕ್ಕಳು ಅಂದ್ರೆ ಯಾಕಿಷ್ಟು ತಾತ್ಸಾರ? ಬೇಲಿಯೇ ಎದ್ದು ಹೊಲ ಮೆಯ್ದರೆ ಯಾರಿಗೆ ದೂರು ಕೊಡೋದು?
ಸಕರ್ಾರಿ ಶಾಲೆಗಳ ಮೂಲ ಸೌಕರ್ಯ ಸುಧಾರಣೆಗೆ ಆಗ್ರಹಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅಜರ್ಿಯನ್ನು ಪರಿಗಣಿಸಿದ್ದ ಹೈಕೋಟರ್್ ‘ಇದು ಸಕರ್ಾರಿ ಶಾಲೆಗಳ ಅಳಿವು-ಉಳಿವಿನ ಪ್ರಶ್ನೆ. ಮಕ್ಕಳನ್ನು ಮನುಷ್ಯರಂತೆ ನಡೆಸಿಕೊಳ್ಳಿ, ಡಿಸೆಂಬರ್ 2011ರ ಒಳಗೆ ಮೂಲ ಸೌಕರ್ಯ ಒದಗಿಸಿ’ ಎಂದು ಆದೇಶಿಸಿತ್ತು. ಕೊರತೆಯಂತೂ ಸರಿಯಾಗಲಿಲ್ಲ. ಈಗ ಶಾಲೆಗಳನ್ನೇ ಮುಚ್ಚಿ ಸಮಸ್ಯೆಗೆ ಶಾಶ್ವತ ಮೋಕ್ಷ ಕಾಣಿಸ್ತಿದೆ ಸಕರ್ಾರ!
‘ಸಕರ್ಾರಿ ಶಾಲೆ ಮುಚ್ಚುವಿಕೆಯಿಂದ ಯಾವುದೇ ಕಾರಣಕ್ಕೂ ಮಕ್ಕಳ ಮೂಲಭೂತ ಹಾಗೂ ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆ ಆಗಬಾರದು. ನಿಗದಿತ ಅಂತರಕ್ಕಿಂಥಾ ದೂರವಿರುವ ಶಾಲೆಗಳಿಗೆ ಪ್ರಯಾಣಿಸಲು ಮಕ್ಕಳಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಬೇಕು. ಗುಡ್ಡಗಾಡು ಹಾಗೂ ಭೌತಿಕ ಅಸಮತೋಲನಗಳಿರುವ ಪ್ರದೇಶಗಳಲ್ಲಿ ಮಕ್ಕಳ ವಾಸಸ್ಥಳದ ಹತ್ತಿರದಲ್ಲಿಯೇ ಸಕರ್ಾರ ಶಾಲೆಗಳನ್ನು ಪ್ರಾರಂಭಿಸಬೇಕು. ಉಚಿತ ಸಾರಿಗೆ ವ್ಯವಸ್ಥೆ ಮಾಡದೇ ಶಾಲೆಗಳನ್ನು ವಿಲೀನ ಮಾಡುತ್ತಿರುವುದು ಕೋಟರ್್ನ ಗಮನಕ್ಕೆ ಬಂದರೆ ಅದು ನ್ಯಾಯಂಗ ನಿಂದನೆಯಾಗುತ್ತದೆ’ ಎಂದು ಹೈಕೋಟರ್್ ಇದೇ 2012, ಜೂನ್ 20ರಂದು ನೀಡಿರುವ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಉಚಿತ ಸಾರಿಗೆ ವ್ಯವಸ್ಥೆ ಅಂತ ಒತ್ತಿ ಹೇಳಿದೆ. ಆದರೆ ‘ಸಾರಿಗೆ ವ್ಯವಸ್ಥೆನೇ’ ಇಲ್ಲ ಇನ್ನು ‘ಉಚಿತ’ ಎಲ್ಲಿಂದ ಬಂತು ಅಂತ ಜನ ಕೇಳ್ತಾ ಇದ್ದಾರೆ.
ಶಿಕ್ಷಣ ಹಕ್ಕು ಕಾಯ್ದೆಯನ್ನೂ ಪರಿಗಣಿಸದೇ ಮನ ಬಂದ ಹಾಗೆ ಶಾಲೆಗಳನ್ನು ಮುಚ್ಚುತ್ತಿರುವ ಸಕರ್ಾರಕ್ಕೆ ಹೈಕೋಟರ್್ನ ಆದೇಶ ಯಾವ ಲೆಕ್ಕ? ಅಧಿಕಾರಿಗಳು ನಮಗೆ ಶಾಲೆ ಮುಚ್ಚುವ ಸ್ಪಷ್ಟ ಆದೇಶ ಬಂದಿಲ್ಲ ಅಂತ ಸಬೂಬು ಹೇಳುತ್ತಾ, ದಾಖಲೆಗಳಲ್ಲಿ ಶಾಲೆಗಳನ್ನು ತೋರಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಶಾಲೆಗಳು ‘ವಿ-ಲೀನ’ಗೊಂಡಿವೆ. ಇದೇ 2012ರ ಜುಲೈ 24ರಂದು ಶಿಕ್ಷಣ ಇಲಾಖೆ ಶಾಲೆಗಳನ್ನು ವಿಲೀನಗೊಳಿಸಲು ರಾಜ್ಯದ ಎಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆದೇಶ ನೀಡಿದೆ. ‘ವಿಲೀನಗೊಳಿಸುವಾಗ ಘಟ್ಟ ಪ್ರದೇಶಗಳಲ್ಲಿ, ಆಯಾ ಪ್ರದೇಶದ ಭೌತಿಕ ಲಕ್ಷಣಗಳನ್ನು, ವಿದ್ಯಾಥರ್ಿಗಳಿಗೆ ಶಾಲೆಗೆ ಹೋಗಲು ಅನುಕೂಲವಾಗುವುದನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಸಮಸ್ಯೆಗಳನ್ನು ಪರಿಹರಿಸಿ ಸಂಬಂಧಿಸಿದ ಇವರಿಬ್ಬರೂ ಸೂಕ್ತ ನಿಧರ್ಾರಗಳನ್ನು ತೆಗೆದುಕೊಳ್ಳಬೇಕೆಂದು, ಉಚಿತವಾಗಿ ಸಾರಿಗೆ ಭತ್ಯೆಯನ್ನು ಭರಿಸಲು ವಿಲೀನಗೊಳಿಸಿದ ಪ್ರತಿ ಶಾಲೆಯ ಅಂತರ ಪ್ರತಿ ಮಗುವಿನ ವಿವರವನ್ನು ನೀಡಬೇಕೆಂದು’ ಆದೇಶಿಸಿದೆ. ಆದರೆ ಇದುವರೆಗೂ ಸಕರ್ಾರ ರಾಜ್ಯದ ಯಾವುದೇ ಭಾಗದಲ್ಲೂ, ಯಾವ ಮಗುವಿಗೂ ಉಚಿತ ಸಾರಿಗೆ ವ್ಯವಸ್ಥೆ ಏರ್ಪಡಿಸಿಲ್ಲ, ಸಾರಿಗೆ ಭತ್ಯೆ ನೀಡಿಲ್ಲ. ಇಂತಹದೊಂದು ವ್ಯವಸ್ಥೆಯನ್ನು ಜಾರಿಗೆ ತರಲು ಇನ್ನೂ ಪ್ರತ್ಯೇಕ ಸಮಿತಿಯನ್ನೂ ರಚಿಸಿಲ್ಲವೆಂದರೆ ಸಕರ್ಾರ ಖಾಸಗಿಗೆ ತನ್ನನ್ನ ಮಾರಿಕೊಂಡ ಅನುಮಾನ ಬಲವಾಗ್ತಾ ಇದೆ.
ಯಾವುದೇ ಮಗುವೂ ಶಿಕ್ಷಣ ಹಕ್ಕಿನಿಂದ ವಂಚಿತವಾಗದಂತೆ ತಕ್ಷಣವೇ ಮಕ್ಕಳಿಗೆ ಉಚಿತ ಸಾರಿಗೆ ವ್ಯವಸ್ಥೆ ನೀಡಬೇಕು. ಇನ್ನೂ ಸಾವಿರ ಸಂಖ್ಯೆಯಲ್ಲಿ ಶಾಲೆಯ ಹೊರಗಿರುವ ಮಕ್ಕಳಿಗೂ ಉಚಿತ ಶಿಕ್ಷಣ ನೀಡಲು ಸಶಕ್ತ ಯೋಜನೆ ರೂಪಿಸಬೇಕು. ಇಲ್ಲದೇ ಇದ್ರೆ ‘ಉಚಿತ’ ‘ಕಡ್ಡಾಯ’ ಎಲ್ಲಾ ಸಂವಿಧಾನದಲ್ಲಿ, ಕಾಯ್ದೆನಲ್ಲಿ ಮಾತ್ರ. ವಾಸ್ತವದಲ್ಲಿ ಕಾಟಾಚಾರ ಅಷ್ಟೇ ಎನ್ನಿಸಿಬಿಡುತ್ತೆ. ಸೊರಗುತ್ತಿರುವ ಸಕರ್ಾರಿ ಶಾಲೆಗಳನ್ನು ಉಳಿಸಲು ಮೂಲಸೌಲಭ್ಯಗಳನ್ನು ಒದಗಿಸುವ ಜೊತೆಗೆ ಖಾಲಿ ಹುದ್ದೆಗಳಿಗೆ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು.
ಎಲ್ಲಕ್ಕಿಂಥಾ ಮುಖ್ಯವಾಗಿ ಶಿಕ್ಷಣ ಖಾಸಗಿಕರಣ ಸಕರ್ಾರಿ ಶಾಲೆಗಳನ್ನು ನಿನರ್ಾಮ ಮಾಡದಂತೆ ಪ್ರಬಲ ಶೈಕ್ಷಣಿಕ ನೀತಿಯೊಂದನ್ನು ತುತರ್ಾಗಿ ರೂಪಿಸಬೇಕು. ಈಗಲಾದರೂ ಸಕರ್ಾರ ಶಾಲೆಯನ್ನ ಅಂಗಡಿ ಅಂದುಕೊಂಡಿದೆಯಾ, ವಿದ್ಯಾಲಯ ಅಂದ್ಕೊಂಡಿದ್ಯಾ ಅಂತ ಆತ್ಮಾವಲೋಕನ ಮಾಡಿಕೊಂಡು, ಪ್ರಾಮಾಣಿಕತೆ ಇದ್ದರೆ, ಅನಧಿಕೃತ ಖಾಸಗಿ ಶಾಲೆಗಳನ್ನು ತಕ್ಷಣ ಮುಟ್ಟುಗೋಲು ಹಾಕಿಕೊಂಡು ತಾಯಿಯ ಸ್ಥಾನದಲ್ಲಿ ನಿಂತು, ಶಿಕ್ಷಣ ವ್ಯವಸ್ಥೆ ಯಾವುದೇ ಲಾಭ ಮತ್ತು ಲಾಭಿಗಳಿಗೆ ಮಣಿಯದಂತೆ ‘ಮಕ್ಕಳ’ ಶೈಕ್ಷಣಿಕ ಹಿತದೃಷ್ಟಿಯಿಂದ ಮಾತ್ರ ಪುನರ್ರೂಪುಗೊಳಿಸಬೇಕು. ಇಲ್ಲದೇ ಇದ್ದರೆ ಮನು ಸಂಸ್ಕೃತಿಯ ಕಾಲದಲ್ಲಿ ಕೆಲವರಿಗೆ ಶಿಕ್ಷಣವನ್ನ ನಿರಾಕರಿಸಿದ್ದ ಪಿಶಾಚಿ, ಇವತ್ತು ಗವಾಕ್ಷಿಯಲ್ಲಿ ಬಂದು ಕೂತಿದೆ ಅಂತಾಗುತ್ತೆ!
]]>






0 Comments