ಮನಸು ಹುಣಸೆ ಮರ
ವಿದ್ಯಾ ಕುಂದರಗಿ
ದಡದಲಿ ಶಾಂತವಾಗಿಯೇ ಕಾಣುವ
ನಮ್ರ ,ಶುಭ್ರ ಹೊರಮುಖದ ಅಲೆಗಳು,
ಸದಾ ಮೂಕವಾಗಿಯೇ ಇರುವ
ಸವಲತ್ತಿನ ಝರಿಗಳು,
ಹಚ್ಚಗಿದ್ದಲ್ಲಿ ತಟ್ಟನೆ ಚಿಗುರುವ
ಬೀಡಾಡಿ ಬೇರುಗಳು
ಮಣ್ಣಿನ ಕೊನೆಕಣದಲ್ಲೂ
ಚಿಗುರಿಸಿ ಚಲ್ಲವರಿಸುವ ಯೌವನ,
ಬೆತ್ತಲೆದೆಯ ಮೇಲೆ ಕತ್ತಲ್ಹರಡಿದಂತೆ
ಸುತ್ತಿಕೊಂಡ ರೋಮರಾಶಿ
ಶಿಖರದೆತ್ತರಕೆ ಒತ್ತಿ ನಿಂತು
ಬಾಚಿ ಕರೆಯುವ
ಬರಿದು ಭಾವಭುಜಗಳು
ಬಾಣಂತಿ ಎದೆಯೊಳಗೂ
ಢಣಢಣ ಢಂಗುರ.
ನರನಾಡಿಗಳಲಿ ಕಚಗುಳಿ ಇಟ್ಟು
ಕೆಣಕುವ ಅವಳಿ ಸುಳಿ,
ಕಂಡೂ ಕಾಣದಂತೆ ಹಾದುಹೋಗುವ
ತುಳುಕುವ, ಬಳುಕುವ
ಕೆಣೆಯುವ, ಕಾಡುವ ಗಾಳಿ
ಬೆಳೆದಷ್ಡು ಇಳುವರಿ ಮಿಶ್ರತಳಿಗೆ.
ಹುಲ್ಲು ತಿನ್ನುವವಕ್ಕೇನು
ಯಾವ ದಾರಿ ? ಯಾವ ನೀತಿ
ಕರೆಯುವುದೊಂದೇ ಗೊತ್ತು
ಗಡಿಗೆ ತುಂಬ ಹಾಲು.
ಯಾರಿಗ್ಗೊತ್ತು ಅದರಲ್ಲಿ ಯಾರ್ಯಾರಿಗೆ ಪಾಲು
ಚಪ್ಪರಿಸಿದಷ್ಟೂ ನೀರೂರುವುದು
ಇದಕೆ ಕೊನೆಎಲ್ಲಿ ಮೊದಲೆಲ್ಲಿ







chandada kavithe.
nice…
chennagide…
ಬೆತ್ತಲೆದೆಯ ಮೇಲೆ ಕತ್ತಲ್ಹರಡಿದಂತೆ
ಸುತ್ತಿಕೊಂಡ ರೋಮರಾಶಿ
ಶಿಖರದೆತ್ತರಕೆ ಒತ್ತಿ ನಿಂತು
e rupaka tumba ista ayitu…this is d beauty of d poem