ನಾವು ಇದರ ಬಗೆ ಯೋಚಿಸಿದ್ದಿವೇಯೇ ?
– ಸ್ಮಿತಾ ಮಿಥುನ್
ಮಸ್ಕಟ್
ಅದು ಒಂದು ಅನಾಥ ಹೆಣ್ಣು ಮಕ್ಕಳ ಹಾಸ್ಟೆಲ್ ರಾಜ್ಯ ಸರ್ಕಾರದ ದ ಮಹಿಳಾ ಮತ್ತು ಮಕ್ಕಳ ಅಭಿವೃಧಿ ಇಲಾಕೆ ಯ ಆಧೀ ನ ಸಂಸ್ಥೆ . ಅಲ್ಲಿಗೇ ದೊರದ ಮಲೆನಾಡಿನ ದಂಪತಿಗಳು ಬಂದಿದ್ದಾರೆ . ಆ ಸಂಸ್ಥೆ ಯ ಮುಖ್ಯಸ್ಥೆ ಬಳಿ ಗೋಗರಿಯುತ್ತಾರೆ “ಮೇಡಂ , ಸ್ವಲ್ಪ ನೋಡಿ ತುಂಬಾ ಆಸೆ ಇಟ್ಕೊಂಡು ಬಂದಿದ್ದೀವಿ , ಒಂದು ಒಳ್ಳೆ ಹುಡುಗಿ ತೋರಿಸಿ ನಮ್ ಹುಡುಗ ತುಂಬಾ ಒಳ್ಳೆವನು , ಮನೆ ಕಡೆ ತುಂಬಾ ಅನುಕೂಲ ಇದೆ . ನಮಗೆ ಏನು ಬೇಡ ಒಂದು ಚೂರು ಓದಿರೋ ಹುಡುಗಿ ಆದ್ರೆ ಸಾಕು . ” ಹೆಣ್ಣು ಸಿಗುವುದು ಇವತಿನ ದಿನಗಳಲ್ಲಿ ತುಂಬಾ ಕಷ್ಟ . ಈ ರೀತಿ ಯ ಅನಾಥ ಸಂಸ್ಥೆ ಗಳಿಂದ ಹುಡುಗಿ ಯರನ್ನು ಮದುವೆ ಆಗುವುದು ಈಗ ಸಾಮಾನ್ಯವಾಗಿದೆ . ಅಮ್ಮ ಮಹಿಳಾ ಮತ್ತು ಮಕ್ಕಳ ಅಭಿವೃದಿ ಇಲಾಕೆ ಯಲ್ಲಿ ಸೇವೆ ಸಲ್ಲಿಸಿ ಜನವರಿ ಯಲ್ಲಿ ನಿವೃತಿ ಆದಳು . ಈಗಲು ಅಲ್ಲಿ ಈ ರೀತಿಯ ದೃಶ್ಯ ಸಾಮಾನ್ಯ , ಹಲವು ಹುಡುಗಿಯರು ಮಲೆನಾಡಿಗೆ ಮದುವೆ ಆಗಿ ಹೋಗಿ ಸಂಸಾರಿ ಗಳಗಿದ್ದಾರೆ . ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡ್ದಪ್ಪೋ ” ಹಾಡು ಈಗಿನ ಕಾಲಕ್ಕೆ ಅನ್ವವಾಗುದಿಲ್ಲ , ಸ್ವಲ್ಪಾ ಯೋಚಿಸಿ ಹಿಂದೆ ಗಂಡಿನ ಮನೆಯವರ ಡಿಮ್ಯಾಂಡ್ ಹೇಗೆ ಇರ್ತಿತ್ತು ?
ಅದರಲ್ಲೂ ಮದ್ವೆ ಅಂದ್ರೆ ಮಲೆನಾಡಿಗರ ಮನೆಯಲ್ಲಿ ಹೆಣ್ಣು ಹೆತ್ತವರ ತಿಥಿ ಎಂದೆ ಅರ್ಥ ,ಹುಡುಗನ ಮನೆಯವರು ಜಾತಕ ಕೇಳಿದರೆ ಮದುವೆ ಆದಷ್ಟೆ ಸಂತೋಷ , ನೆಮ್ಮದಿ ಹೆಣ್ಣು ಹೆತ್ತವರಿಗೆ . ದೋಸೆ ಮಗುಚಿದಂತೆ ಕಾಲ ಬದಲಾಗಿದೆ , ಎಲ್ಲಾ ಖರ್ಚು ಗಂಡಿನ ಕಡೆಯವರೇ ಮಾಡಿ ಕುಲ, ಗೋತ್ರ ಗೊತ್ತಿಲ್ಲದ (ಈ ವಿಷಯಕ್ಕೆ ಹಿಂದೆ ಎಷ್ಟು ಮದುವೆಗಳು ಮುರಿದು ಬಿದ್ದಿತೋ ? ಹುಡುಗಿಯ ನಕ್ಷತ್ರ ಕಾಲು ಗುಣ ಅಬ್ಬಾ ) ಕನಿಷ್ಠ ತಂದೆ -ತಾಯಿ ಯಾರು ಎಂದು ಗೊತ್ತಿಲ್ಲದ ಹುಡುಗಿಯನ್ನ ಸರದಿ ಯಂತೆ ಮದುವೆ ಮಾಡಿಕೊಂಡು ಹೋಗುತ್ತಿದ್ದಾರೆ . ಹುಡುಗಿ ಗಾಗಿ ಎರಡು ಕುಟುಂಬಗಳು ಜಗಳ ಕೊಡ ಮಾಡಿದ್ದಾರೆ , ಹುಡುಗನೊಬ್ಬ ಅಮ್ಮನಿಗೆ ” ಆಂಟಿ ಎಲ್ಲಾ ಹಾಸ್ಟೆಲ್ ನ ಸುತ್ತಿ ಬಂದ್ವಿ ಏನಾದ್ರು ಮಾಡಿ , ನಿಮಗೆ ಪುಣ್ಯ ಬರುತೆ ” ಅಂತ ಬೇಡಿಕೊಂಡರಂತೆ . ಇನ್ನು ವರದಕ್ಷಿಣೆ ಯ ಬಗ್ಗೇ ಹೇಳದಿರುವುದೇ ವಾಸಿ . ಹೆಣ್ಣು ಮಕ್ಕಳು ಕಮ್ಮಿ ಆಗಲು ಈ ಭೂತವೇ ಕಾರಣ . ಸಂಸ್ಥೆ ಯ ಬಗ್ಗೆ ತಿಳಿದ ಹಲವು ಮಲೆನಾಡಿನ ಜನ ದಿನ ಇಲ್ಲಿಗೆ ಬರುತಾರೆ ಮುಖ್ಯ ವಾಗಿ ಶಿವಮೊಗ್ಗ , ಸಿರಿಸಿ, ಸಾಗರ ಹೊಸ ನಗರದಿಂದ ಬರುತಾರೆ . ಮೊದಲು ಹವ್ಯಕ ಕುಟುಂಬಗಳಲ್ಲಿ ಶುರುವಾದ ಈ ಸಮಸ್ಯೆ ದಿನೇ ದಿನೇ ಗಂಭೀರ ಸ್ವರೂಪ ಪಡೆಯುತ್ತಿದೆ.

ಇವತ್ತಿನ ಜ್ವಲಂತ ಸಮಸ್ಯೆ ಇದು , ಇವತ್ತು ಹೆಣ್ಣಿಗೆ ಬರ ಗಂಡು ಹೆಣ್ಣುಗಳ ಅನುಪಾತ ದಲ್ಲಿ ಭಾರೀ ಅಂತರ ಶುರುವಾಗಿದೆ ಪರಿಣಾಮ ಹಲವು ಯುವಕರು ಇವತ್ತು ಅನಿವಾರ್ಯ ವಾಗಿ ಮದುವೆ ಇಲ್ಲದೆ ಬ್ರಹ್ಮಚಾರಿ ಗಳಾಗಿ ಉಳಿಯಬೇಕಾಗಿದೆ . ಇವತ್ತು ಎಲ್ಲಾ ಜಾತಿ , ಜನಾಂಗ , ಗಳಲ್ಲಿ ಹೆಣ್ಣು ಸಿಗುವುದು ತುಂಬಾ ಕಷ್ಟ ಆಗ್ತಾ ಇದೇ . ನೀವು ದಿನಾ ಬೆಳ್ಳಗೆ ಟಿ .ವಿ. ಯಲ್ಲಿ ಚಾನೆಲ್ ತಿರುಗಿಸಿ ಅಲ್ಲಿ ಬರುವ ಜ್ಯೋತಿಷ್ಯ ಕಾರ್ಯಕ್ರಮ ನೋಡಿ ಅದರಲ್ಲಿ ಕಮ್ಮಿ ಅಂದ್ರು ಒಂದು ಎರಡು ಕರೆ ಗಳು ಮಗನ ಮದುವೆ ಯ ಬಗ್ಗೆ , ಮಗನಿಗೆ ಮದುವೆ ಲೇಟ್ ಅಗ್ತಾ ಇರೋ ದಕ್ಕೆ ಹತಾಶರಾಗಿ ಪರಿಹಾರ ಕೇಳುವ ಗಂಡು ಹೆತ್ತ ತಂದೆ – ತಾಯಿ . ಇದಕ್ಕೆಲ್ಲ ಏನು ಕಾರಣ ? ಹೆಣ್ಣನ್ನು ಮೊಳಕೆ ಯಲ್ಲಿ ಚಿವುಟುತ್ತಿರುವುದು . ೮೦ ೯೦ ದಶಕ ದ ನಂತರ ಬಂದ ಆಧುನಿಕ ಟೆಕ್ನಾಲಜಿ , ವೈದ್ಯಕೀಯ ಕ್ಷೇತ್ರ ದಲ್ಲಿ ಆದ ಸುಧಾರಣೆ ಹೆಣ್ಣಿನ ಹುಟ್ಟಿಗೆ ಕುತ್ತು ತಂದು ಇಟ್ಟಿವೆ . ಯಾವುದು ವರವಾ ಗಬೇಕ್ಕಿತೋ ಅದು ಹೆಣ್ಣು ಕುಲ ಕ್ಕೆ ಶಾಪವಾಗಿದೆ . ಹಿಂದನ ಕಾಲದ ತರ ಹೆಣ್ಣು ಹುಟ್ಟಿತ್ತು ಎಂದು ಬೇಸರಿಸಿಕೊಳಬೇಕ್ಕಿಲ್ಲ ,ಇರುವ ಟೆಕ್ನಾಲಜಿ ಬಳಸಿ ಹೆಣ್ಣು ನ್ನ ಹುಟ್ಟದಂತೆ ಮಾಡಿದರಾಯ್ತು .
ಈಗಂತು ಸಣ್ಣ ಪುಟ್ಟ ಹಳ್ಳಿಗಳಲ್ಲೂ ಸ್ಕ್ಯಾನಿಂಗ್ ಸೆಂಟರ್ ಇದೇ . ಎಷ್ಟೇ ಕಾನೂನು ಮಾಡಿದರೂ ಶಿಕ್ಷೆ ಕೊಟ್ಟರು ನಮ್ಮ ಮನಸಿನ್ನ ಆಂತರ್ಯ ದಿಂದ ಹೆಣ್ಣನ ಬಗ್ಗೇ ಅದರಲ್ಲೂ ಹೆಣ್ಣು ಮಗುವಿನ ಬಗ್ಗೇ ಪ್ರೀತಿ ಹುಟ್ಟಬೇಕು ಹೆಣ್ಣು ಮಗು ಮದುವೆ ಆಗಿ ಹೋಗುತ್ತಾಳೆ ಆದರೆ ನನ್ನ ಪತಿ ಯು ಸೇರಂತೆ ಹಲವು ಜನ ಗಂಡು ಹುಡುಗರು ಕೆಲಸ, ಓದು ಅಂತ ಹೆತ್ತವರಿಂದ ದೊರ ಇಲ್ಲ ? ರೆಕ್ಕೆ ಬಲಿತ ಹಕ್ಕಿ ನೀಲಕಾಶದಲ್ಲಿ ಹಾರಲು ಬಯಸುತ್ತದೆ . ಹೆಣ್ಣಿನ ಮೇಲೆ ಆಗುವ ಹಿಂಸೆ ಗೇ ಮೇಲ್ವರ್ಗ ಕೆಳವರ್ಗ ಅಂತ ಭೇದ ವೇನು ಇಲ್ಲಾ . ಹೆಣ್ಣು ಮಗು ಹುಟ್ಟಲಿ ಆದ್ರೆ ನಮಗಲ್ಲ ಅನ್ನುವ ಮನೋಭಾವವು ಇದೆ ಎಲ್ಲಾ ದಂಪತಿಗಳಿಗು ಗಂಡು ಮಗುವೆ ಬೇಕು. ಈಗ ಅದ್ಕೆ ಸುಲಭ ವಾದ ಮಾರ್ಗ ವು ಇದೆ .. ನಂಗೆ ತುಂಬಾ ಹಿಂಸೆ ಮಾಡಿದ್ದೂ ಗಂಡು ಮಗನ ಆಸೆಗೆ ಬಿದ್ದ ಒಬ್ಬ ನರ ರಾಕ್ಷಸ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದದು ಮೂರನೆಯ ಮಗಳ ಮೇಲೆ ಹಲ್ಲೆ ಮಾಡಿದ್ದು , ಸುದ್ದಿ ಚಾನೆಲ್ ನಲ್ಲಿ ಇಷ್ಟೇ ತೋರಿಸಿ ಸುಮ್ನೆ ಆದರು ನಂತರ ಏನು ಎಂದು ಮತ್ತೆ ಮಾಹಿತಿ ಇಲ್ಲ . ಬಹುಷ ಇವರಿಗೇ ರೋಚಕ ಸುದ್ದಿ ಮೇಲೆ ಇರುವ ಪ್ರೀತಿ . ಏನೇ ಕಾನೂನು ತಂದರು ಹೆಣ್ಣು ಭ್ರೂಣ ದ ಹತ್ಯೆ ನಿರಂತರ ವಾಗಿ ಸಾಗಿದೆ . ನಾಯಿ ಕೊಡೆ ಗಳಂತೆ ಬೇದಿಗಳಲ್ಲಿ ಇರುವ ಸ್ಕ್ಕಾನಿಂಗ್ ಸೆಂಟರ್ಗಳು ,ಇಲ್ಲೇ ನಡೆಯುವ ಕೆಲಸ ಕಸಾಯಿ ಖಾನೆ ಗಿಂತಲೂ ಹೀನ ಕೆಲಸ . ಇದು ಸಾಮಾನ್ಯ ಕ್ಲಿನಿಕ್ ಗಳಿಂದ ಹಿಡಿದು ದೊಡ್ಡ ಪಾಶ್ ಅನಿಸಿ ಕೊಂಡ ಕಡೆಯೂ ಇದೆ . ಅಲ್ಲಿಯ ಕೋಡ್ ವರ್ಡ್ಸ್ ಕುತೂಹಲ ಹುಟ್ಟಿಸುತೆ “ಒಳ್ಳೆಯದು “? ಅಂದ್ರೆ ಗಂಡು ,” ಕೆಟ್ಟದು “?! ಹೆಣ್ಣು ಅಂದ್ರೆ ಅಷ್ಟು ಅಗ್ಗವೇ ? ಅಂದ್ರೆ ಹೆಣ್ಣು . ಅದೇ ಕಲಿತ ? ವಿದ್ಯಾವಂತರು ? ಹೋಗುವ ಕ್ಲಿನಿಕ್ ಗಳ ಕೋಡ್ ವರ್ಡ್ ” ಸ್ಟಾಪ್ ಇಟ್ ” ಅಂದ್ರೆ ಹೆಣ್ಣು ” ಗೋ ಅಹೆಡ್ ” ಅಂದ್ರೆ ಗಂಡು . ಇನ್ನು ಮುಂದುವರಿದ ಶ್ರೀಮಂತ ಕುಟುಂಬಗಳು ನಿಖರವಾಗಿ ಮಗುವಿನ ಬಗ್ಗೇ ತಿಳಿಯಲು ದುಬೈ ವರೆಗೂ ಪಾದ ಬೆಳೆಸುತ್ತಾರೆ ಅಲ್ಲಿ ಮಗುವಿನ ಲಿಂಗ ದ ಬಗ್ಗೇ ಖಚಿತ ಮಾಹಿತಿ ತಿಳಿದು ಭಾರತ ದಲ್ಲಿ ಗರ್ಭ ಪಾತ ಮಾಡಿಸಿಕೊಳ್ಳುತ್ತಾರೆ ( ಗಲ್ಫ್ ದೇಶ ಗಳಲ್ಲಿ ಗರ್ಭ ಪಾತ ಅಪರಾಧ , ಇಲ್ಲಿಗೆ ಐ -ಪಿಲ್ ಮುಂತಾದ ಗರ್ಭ ನಿರೋಧಕ ಗಳು ತರುವಂತಿಲ್ಲ ಸಿಕ್ಕಿಬಿದ್ದರೆ ಕಾಪಡಲು ದೇವರು ಬರವುದಿಲ್ಲ ). ನಾನು ಹೆರಿಗೆ ಗೆ ಭಾರತಕೆ ಕ್ಕೆ ಬಂದಾಗ ನನ್ನ ನೋಡುತ್ತಿದ್ದ ಡಾಕ್ಟರ್ ನೀವು ದುಬೈ ಇಂದ ಬರ್ತಾ ಇದ್ದೇರ ( ನಾನು ಆಗಾ ದುಬೈ ವಾಸಿ) ನಿಮ್ಗ್ಗೆ ಹುಟ್ಟೋದು ಮಗನೋ , ಮಗಳೋ ಗೊತ್ತಿರ್ಬೇಕ್ಕಲ್ಲ ?ಅಂದರು ನಾನು ” ಇಲ್ಲಾ ಮೇಡಂ , ನಾನು ಕೇಳಿಲ್ಲ ನಂಗೆ ಯಾವ ಮಗು ಆದರು ಸರಿ ಅಂದೇ ” ಅವರು ಗುಡ್ ಅಂದರು ಆವಾಗ ಮದ್ಯ ವಯಸ್ಕ ಮಹಿಳೆ ಒಬ್ರು ಡಾಕ್ಟರ್ ಹತ್ತಿರ ಬಂದು ಅವರ ಸೊಸೆ ಯ ಹೊಟ್ಟೆ ಯಲ್ಲಿ ಯಾವ ಮಗು ಇದೆ ಹೇಳಲೇಬೇಕು ಅಂತ ಡಾಕ್ಟರ್ ಗೆ ಜೋರು ಮಾಡಲು ಶುರು ಮಾಡಿದರು , ಅದಕ್ಕೆ ಡಾಕ್ಟರ್ ನಿರಾಕರಿಸಿದಾಗ ನಮ್ಗೆ ಎಲ್ಲಿ ಹೋಗ್ಬೇಕು ಅಂತ ಗೂತ್ತಿದೆ ಎಂದೋ ಸಿಟ್ಟಿ ನಿಂದ ಹೊರಟು ಹೋದರು . ನಮ್ಮ ಸರ್ಕಾರೀ ಆಸ್ಪತ್ರೆ ಯಲ್ಲಿ ಹೆರಿಗೆ ಮತ್ತು ಪ್ರಸೂತಿ ವಿಭಾಗದಲ್ಲಿ ನಡೆಯುವ ಭ್ರಷ್ಟಾಚಾರ ಇನ್ನು ಎಲ್ಲಿಯೂ ಕಾಣಲು ಸಾದ್ಯವಿಲ್ಲ , ಹೆಣ್ಣು ಮಗು ಸಾಯಿಸಲು, ಹುಟ್ಟಿದ ಮಗು ಬಿಟ್ಟು ಪರಾರಿಯಾಗಲು , ನವ ಜಾತ ಶಿಶುಗಳ ಬದಲಾವಣೆ ,ಇನ್ನು ಇಂಥ ಕಡೆ ಅಪಹರಣ ವಾಗುವುದು ಹೆಚ್ಚಾಗಿ ಗಂಡು ಶಿಶುಗಳು , ಮತ್ತೆ ಜಗಳ ವಾಗುವುದು ಗಂಡು ಮಗುವಿಗಾಗಿ . ಹೆಣ್ಣು ಮಗು ವನ್ನು ಪ್ರೀತಿ ವಿಶ್ವಾಸ ದಿಂದ ಸಾಕಿ ಸಲಹುವವರು ಇದ್ದಾರೆ ಆದರೆ ಅಂತ ವರ ಸಂಖ್ಯೆ ತುಂಬ ಕಮ್ಮಿ, ನಗರ ಪ್ರದೇಶಗಳಲ್ಲಿ ಆಶದಾಯಕ ವಾತಾವರ್ಣ ಇದೆ ಆದ್ರೆ ಎಲ್ಲಾ ಕಡೆ ಈ ರೀತಿ ಇಲ್ಲಾ . ಪುಟ್ಟ ಬಾಲಕಿ ವಯಸ್ಸಾದ ವೃದ್ದೆ ಯರನ್ನು ಬಿಡದ ಹಿಂದೆ ಕಡಿಮೆ ಯಾಗಿರುವ ಆಗುತ್ತಿರುವ ಹೆಣ್ಣು ಮಕ್ಕಳ ಸಂಖ್ಯೆ ಯು ಒಂದು ಗಂಭೀರ ಪ್ರಮುಖ ಕಾರಣ ಅಲ್ಲವೇ ? ನಮ್ಮ ಸಮಾಜ ಇನ್ನಾದರೂ ಹೆಣ್ಣು ಮಗುವನ್ನ ಪ್ರೀತಿ ಆಧಾರಗಳಿಂದ ಸ್ವಾಗತಿಸಿತೇ ? ಇದು ಸದ್ಯಕ್ಕೆ ಇರುವ ಯಕ್ಷ ಪ್ರಶ್ನೆ .





ಮಾನ್ಯರೇ, ಲೇಖನಕ್ಕೆ ಧನ್ಯವಾದಗಳು. ಈ ಲೇಖನದಿಂದ ನನಗೆ ಕೆಲ ಕಾಲದಿಂದ ಕಾಡುತ್ತಿರುವ ಪ್ರಶ್ನೆಗಳು- ನಾವು ವಿಧ್ಯಾವಂತರಾಗಿ ಏನು ಕಲಿತಿದ್ದೇವೆ. ಕರ್ಮಠ ಬ್ರಾಹಣರ ಮನೆಗಳಲ್ಲಿ ನೀವು ನಮೂದಿಸಿದ ಸ್ತ್ರೀ ಭ್ರೂಣ ಹತ್ಯೆ ನಡೆದ ಕಾರಣ ಈ ಸಮುದಾಯದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಆಗಿದೆ. ನನಗೆ ತಿಳಿದಂತೆ ಹೆಣ್ಣು ಮಕ್ಕಳು ಬೇಡಾ ಎಂದು ತೀರ್ಮಾನಿಸುವ ಯಾರೂ ಅನಕ್ಷರಸ್ಥರಲ್ಲ. ಸ್ಕ್ಯಾನಿಂಗ್ ಸೆಂಟರ್ ನವರು, ವೈಧ್ಯರು ಯಾರೂ ಅನಕ್ಷರಸ್ಥರಲ್ಲ. ಹಾಗಿದ್ದರೆ ನಮ್ಮ ಕಲಿಕೆ ಶಿಕ್ಷಣದಿಂದ ಏನು? ಬಹಿರಂಗವಾಗಿ ಮದ್ಯಪಾನದ, ಮಾಂಸಾಹಾರ ಭೋಜನ ಆಧುನಿಕತೆಯ ಸಂಕೇತ ಎಂದು ತೋರಿಸುವ ಗ್ರಾಮೀಣ ಪ್ರದೇಶದ ಯುವಕರು-ಈಗ ಮಧ್ಯ ವಯಸ್ಕರು ಅಂತರ ಜಾತಿ ಮದುವೆಗಳಿಗೆ ಯಾಕೆ ಮುಂದಾಗುತ್ತಿಲ್ಲ ಎಂದು ಕೇಳುವಾಗ ಅದು ತಮಗೆ ಸರಿ ಬರುವುದಿಲ್ಲ ಎಂಬುದು ಕೆಲವರ ಅನಿಸಿಕೆ. ಆಧುನಿಕತೆಯನ್ನು ಅಪ್ಪಿಕೊಂಡದಕ್ಕೆ ಅನುಭವಿಸುವ ಅನೇಕ ಫಲಗಳಲ್ಲಿ ಇಂತಹು ಕೆಲವು. ಮನಸ್ಸಿಗೆ ಚಿಕಿತ್ಸೆ ಕೊಡುವತ್ತ ಆಲೋಚಿಸುವುದು ಉತ್ತಮ. ಮಕ್ಕಳಿಗೆ ಪರಿಸ್ಥಿತಿಯನ್ನ ಒಪ್ಪಿಕೊಳ್ಳುವ ಬದಲು ಪ್ರಶ್ನಿಸಲು ಕಲಿಸಿದರೆ ಬಹುಷಃ ಒಂದು ರೀತಿಯ ಬದಲಾವಣೆ ಸಾಧ್ಯ ಅನ್ನಿಸುತ್ತದೆ.
ಒಬ್ಬ ಸ್ಕ್ಯಾನಿಂಗ್ ನವರು ತಿಳಿಸದಿದ್ದರೆ, ಮತ್ತೊಬ್ಬ ಮಹಾಶಯ ಭ್ರೂಣ ಪರೀಕ್ಷೆಯಲ್ಲಿ ಹೆಚ್ಚು ಹಣ ಮಾಡುವ ದಂಧೆಗೆ ಇಳಿದಿದ್ದಾರೆ. ಕಾನೂನು ಪಾಲಿಸುವವ ದಡ್ಡ, ತಾನು ಬುದ್ದಿವಂತೆ ಎಂದು ನಮ್ಮಲ್ಲಿ ತಮ್ಮ ಬುದ್ದಿವಂತಿಕೆ ಮೆರೆದ ವಿಧ್ಯಾವಂತರು, ತಾನು ಭ್ರೂಣಪರೀಕ್ಷೆಯಲ್ಲಿ ಲಿಂಗ ತಿಳಿಸದೇ ಇದ್ದರೆ ತನಗೆ ಪೇಷಂಟ್ ತಪ್ಪಿಹೋಗುತ್ತಾರಲ್ಲ ಎಂದು ಮರುಗಿದ ಇಂದಿನ ವಿಧ್ಯಾವಂತ ವೈಧ್ಯರನ್ನು ಭೇಟಿಯಾಗುವ ಸಂದರ್ಭ ನನಗೆ ಒದಗಿದೆ. ಬೆರಳೆಣಿಕೆಯ ವೈಧ್ಯರು ಮಾತ್ರ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿ ಬಿಗಿ ನಿಲುವನ್ನು ತೋರಿಸಿದ್ದೂ ಇದೆ.
ಒಂದು ಉದಾಹರಣೆಯಲ್ಲಿ ೪ ಬಾರಿ ಗರ್ಭ ಧರಿಸಿದಾಗಲೂ ಗರ್ಭಪಾತದ ಬಗ್ಗೆ ಆಯುರ್ವೇದ ವೈಧ್ಯರೊಬ್ಬರು ತಿಳಿ ಹೇಳಿಯೂ ಅತ್ತೆ ಮಾವರ ಬಲವಂತಕ್ಕೆ ಗರ್ಭಪಾತ ಮಾಡಿಸಿಕೊಂಡ ಮಹಿಳೆಗೆ ೫ ಬಾರಿ ಹೆರಿಗೆಗೆ ಕಷ್ಟ ಎಂದು ಕೈ ಚೆಲ್ಲಿದ, ೪ ಬಾರಿ ಗರ್ಭಪಾತ ಮಾಡಿಸಿದ ವೈದ್ಯರು, ಮಹಿಳೆಯನ್ನ ಆಯುರ್ವೇದ ವೈಧ್ಯರ ಬಳಿ ಕಳುಹಿಸಿ ತಾಯಿ ಮಗುವಿನ ಪ್ರಾಣ ಉಳಿಸಲು ತಾನು ಮಾಡಿದ ಹರ ಸಾಹಸದ ಬಗ್ಗೆ ವೈಧ್ಯರು ನಮ್ಮ ಬಳಿ ಹೇಳಿಕೊಂಡಿದ್ದರು.
ಬುದ್ಧಿವಂತರಿಗೆ ಬುದ್ದಿ ಹೆಳುವ ದಾರಿ ಕಂಡುಕೊಳ್ಳಬೇಕಿದೆ.ಸಾಮಾನ್ಯವಾಗಿ ಅರಿವಿಲ್ಲದವರಿಗೆ ಅರಿವು ಮೂಡಿಸುವುದು ಸುಲಭ. ಅರಿವು ಇರುವವರಿಗೆ?
ಪ್ರಸ್ತುತ ಲೇಖನ ಈಗ ಹೆಣ್ಣುಗಳಿಗೆ ಬಂದಿರುವ ಅಭಾವಕ್ಕೆ ತಕ್ಕುದಾಗಿದೆ. ಜನ ಇನ್ನಾದರೂ ಅರಿತು ಕೊಳ್ಳದೆ ಹೋದರೆ ಮುಂದೊಂದು ದಿನ ಹೆಣ್ಣುಗಳ ಕದ್ದೊಯ್ಯುವುದು ಹೆಚ್ಚಾಗಿ, ಆ ಕಾರಣಕ್ಕೇ ಕದನಗಳಾದರೂ ಹೆಚ್ಚೇನಲ್ಲ.
ಮಾನ್ಯರೆ ತಾವು ನನ್ನ ಲೇಖನ ಓದಿ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಕೆ ವಂದನೆಗಳು . ಮನ ಪೂರ್ವಕ ವಾಗಿ ಮಹಿಳೆ ಯರಿಗೆ ಗೌರವ ಬರಬೇಕು , ನನಗೂ ಹಾಗೇ ಅನಿಸುತೆ ಎಲ್ಲಿವರ್ಗು ಮಾನವೇಯತೆ ಯ ಮೇಲೆ ದುಡ್ಡು ಸವಾರಿ ಮಾಡುತೋ ಅಲ್ಲಿವರ್ಗು ಹೀಗೆ ಇರುತ್ತೆ . ತಮ್ಮ ಅಭಿಪ್ರಾಯ ಕ್ಕೆ ನನ್ನ ಸಹಮತ ಇದೆ . ನಮ್ಮ ಆಧುನಿಕ technology ಹೆಣ್ಣು ಕುಲದ ಹುಟ್ಟಿಗೆ ಕುತ್ತು ತಂದಿವೆ . ಈ ಭ್ರಾಮಣರು ತಾವು ಮಾಡಿದ್ದಕ್ಕೆ ತಕ್ಕ ಬೆಲೆ ಕೊಡ್ತಾ ಇದ್ದಾರೆ , ಮಡಿ ಮೈಲಿಗೆ ಅಂತ ಎಷ್ಟು ಜೀವ ದ ಹಿಂಸೆ ಮಾಡಿದ್ದಾರೆ .