ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ ಸಜ್ಜು ವಿಜಯನಗರ ಬಿಂಬ

ವಿಜಯನಗರ ಬಿಂಬ ರಂಗ ಶಿಕ್ಷಣ ಕೇಂದ್ರ 20ನೇ ವಷ೯ದ ಸಂಭ್ರಮಕ್ಕೆ ಪ್ರತಿ ತಿಂಗಳು ಒಂದೊಂದು ಅಥ೯ ಪೂಣ೯ ಕಾಯ್ರಕ್ರಮ ಹಮ್ಮಿಕೊಂಡು ಬಂದಿದೆ. 10 ನೇ ತಿಂಗಳ ಕಾಯ೯ಕ್ರಮವಾಗಿ ಮಕ್ಕಳ ವಿಭಾಗದ ಈ ಸಾಲಿನ ವಿದ್ಯಾಥಿ೯ಗಳಿಂದ ಮೂರು ರಂಗ ಪ್ರಯೋಗಗಳನ್ನು ಇದೇ ಜನವರಿ 17, 2016 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 5ಕ್ಕೆ ಹಮ್ಮಿಕೊಂಡಿದ್ದೇವೆ –

ಕಾಯ೯ಕ್ರಮದ ವಿವರ
ದಿನಾ೦ಕ – 17 , ಜನವರಿ, 2016
ಸ್ಥಳ – ರವೀಂದ್ರ ಕಲಾಕ್ಷೇತ್ರ
ಸಮಯ-ಸಂಜೆ 5 ಗಂಟೆಗೆ
ಪ್ರದಶ೯ನ – ಮಕ್ಕಳಿಂದ ಮೂರು ಹೊಸ ರಂಗ ಪ್ರಯೋಗಗಳು
ಮುಖ್ಯ ಅತಿಥಿಗಳು –
ಪ್ರೋ. ಎಂ.ಎಚ್.ಕೃಷ್ಣಯ್ಯ,
ಶ್ರೀಮತಿ ಲಕ್ಷ್ಮೀ ಚಂದ್ರಶೇಖರ ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿದೇ೯ಶಕರಾದ ಕೆ.ಎ ದಯಾನಂದ್ ,
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿದೇ೯ಶಕರಾದ ಬಲವಂತ್ ರಾವ್ ಪಾಟೀಲ್

ವಾಕವ್ವ – ಮಕ್ಕಳ ನಾಟಕ ಕುರಿತು
ರಚನೆ ಮತ್ತು ನಿದೇ೯ಶನ – ಡಾ.ಎಸ್.ವಿ.ಕಶ್ಯಪ್,
ಇಂದಿನ ಜಾಗತೀಕರಣದ ಯಂತ್ರ ಜಗತ್ತಿನಲ್ಲಿ ಮಾನವ ಸಂಬಂಧಗಳ ಅಸ್ತಿತ್ವ ಇಕ್ಕೂ ಇಲ್ಲದಂತಾಗಿದೆ . ಚದುರಿ ಹೋಗಿರುವ ಮಾತುಗಳ ಸಂಕೇತವಾಗಿ ಚದುರಂಗದೂರು ರಂಗೇರುತ್ತದೆ. ಯಂತ್ರ ಮತ್ತು ಮಾನವ, ಮಾತು ಮತ್ತು ಅಥ೯ ಇವುಗಳ ಅಂತರ ಸಂಬಂಧಗಳನ್ನು ಅತ್ಯೇಶಿಸುವ ರಂಗ ಪ್ರಯೋಗ ವಿಜಯನಗರ ಬಿಂಬದ ಹೊಚ್ಚ ಹೊಸ ರಂಗ ಪ್ರಯೋಗ “ವಾಕವ್ವ.”

ಒನಿಯೋಮೇನಿಯಾ – ಮಕ್ಕಳ ನಾಟಕ ಕುರಿತು
ರಚನೆ ಮತ್ತು ನಿದೇ೯ಶನ – ಶೈಲೇಶ್
ಅವಶ್ಯಕತೆಗಷ್ಟೇ ವ್ಯಯಿಸುತ್ತಿದ್ದುದು ಆ ಕಾಲ
ಅನಾವಶ್ಯಕವಾದದ್ದೇ ವಿಜೃಂಭಿಸಿ ತರೋದು ಈ ಕಾಲ . .
ಜಾಗತಿಕರಣ, ವ್ಯಾಪಾರಿಕರಣಗಳಲ್ಲಿ ಸಿಲುಕಿ ಹಪ ಹಪಿಸುತ್ತಿರುವ ಮನುಷ್ಯ ಮತ್ತು ಪರಿತಪಿಸುತ್ತಿರುವ ವಸ್ತುಗಳ ಹಗ್ಗ ಜಗ್ಗಾಟದ ಸೂಕ್ಷ್ಮಗಳ ಒಂದು ಸಣ್ಣ ಇಣುಕು ನೋಟ | – ವಿಜಯನಗರ ಬಿಂಬದ ಹೊಚ್ಚ ಹೊಸ ರಂಗ ಪ್ರಯೋಗ “ಒನಿಯೋಮೇನಿಯಾ “

ಗೋವಿನ ಹಾಡು – ಮಕ್ಕಳ ಬ್ಯಾಲೆ ಕುರಿತು
ವಿನ್ಯಾಸ ಮತ್ತು ನಿದೇ೯ಶನ – ಎಸ್.ವಿ.ಸುಷ್ಮಾ
ಅಬು೯ದನ ಆಭ೯ಟ ,ಗೋವಿನ ಸಂಕಟ
ಕಂದನ ಕರೆ ,ತಾಯಿಯ ಮೊರೆ
ಕಂದನ  ಬೇಡಿಕೆ ಬದಿಗೊತ್ತಿ
ಸತ್ಯವ ನು ಮೆರೆಸಿದ ಪುಣ್ಯಕೋಟಿ
ಸತ್ಯಕ್ಕೆ ಮಣಿದ ಅಬು೯ದ ಹುಲಿ
ಸತ್ಯವನ್ನು ಗೆಲ್ಲಿಸುವ ಅಬು ೯ ದ ಹುಲಿ ಹಾಗು ಪುಣ್ಯಕೋಟಿ ಹಸುವಿನ ಕಥೆ…..
ಗೋವಿನ ಹಾಡು ………

‍ಲೇಖಕರು Admin

14 January, 2016

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading