ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಮತ್ತೆ ಮಳೆ ಹೊಯ್ಯುತ್ತಿದೆ ಎಲ್ಲವೂ ನೆನಪಾಗುತ್ತಿದೆ……' ಸ್ಮಿತಾ ಅಮೃತರಾಜ್

ಸ್ಮಿತಾ ಅಮೃತರಾಜ್

ಧೋ! ಮಳೆ ಮುಸಲಾಧಾರೆಯಾಗಿ ಸುರಿಯುತ್ತಿತ್ತು. ಆಗಪ್ರಾಥಾಮಿಕ ಶಾಲಾದಿನಗಳು.ಸುರಿವಮಳೆಗೆ ಹಾದಿಯುದ್ದಕ್ಕೂಕನಸಬೀಜಗಳನ್ನು ಬಿತ್ತುತ್ತಾ ಶಾಲೆಯ ಕಡೆಗೆ ಪಾದ ಬೆಳೆಸುವುದು ಅಷ್ಟೇನು ಕಷ್ಟಕರವಾಗಿರಲಿಲ್ಲ.ಒ೦ದೇ ಸಮನೆ ಉಸುರುಕಟ್ಟಿ ಮಳೆಹೊಯ್ದರ೦ತೂ ಶಾಲೆಗೆ ರಜೆ ಖಚಿತ. ಶಾಲೆಗೆ ಹೋದನ೦ತರ ರಜೆಕೊಟ್ಟರೂ ತರಗತಿಯಲ್ಲಿ ಪಾಠಕೇಳುವ ಉಸಾಬರಿ ತಪ್ಪಿತೆ೦ದು ಸ೦ತಸಪಟ್ಟುಕೊಳ್ಳಬೇಕೇ ಹೊರತು ಬೇರೇನು ಖುಷಿಯ ವಿಚಾರ ಇಲ್ಲ.ಯಾಕೆ೦ದರೆ ಜಿಡಿಗುಟ್ಟುವ ಮಳೆಯಲ್ಲೇ ತಿರುಗಿ ಮನೆಕಡೆ ಬರುವಾಗ ಹಳ್ಳಕೊಳ್ಳ ಪಾಲಸೇತುವೆಗಳೆಲ್ಲಾ ಮೀರಿ ಹರಿಯೋಕೆ ಶುರುಮಾಡಿಬಿಡುತ್ತಿದ್ದವು .ಶಾಲೆ ಬಿಟ್ಟಾಕ್ಷಣ ನಮ್ಮ ಆಲೋಚನೆ ಯಾವ ಬಳಸು ಹಾದಿಹಿಡಿದು ಹೋದರೆ ಕ್ಷೇಮವಾಗಿ ಮನೆತಲುಪಬಹುದು ಎ೦ಬುದು. ಆಗೆಲ್ಲಾ ಸಾಮನ್ಯವಾಗಿ ಹಳ್ಳಿಮೂಲೆಯಿ೦ದ ಶಾಲೆಗೆ ಬರುವ ಹೆಚ್ಚಿನ ಮಕ್ಕಳು ಅನುಭವಿಸುವ ಸಮ¸ ಏನಿದು. ಹೊಳೆಯೋ, ಹಳ್ಳವೋ, ತೋಡೋ ಹೀಗೆ ಯಾವುದಾದರೊ೦ದು ನೀರಿನ ಹರಿವನ್ನು ದಾಟಿಯೇ ಅಕ್ಷರದ ಕನಸು ಕಾಣಬೇಕಿತ್ತು. ಹಾಗಾಗಿ ಕೆಲವೊಮ್ಮೆ ಮಳೆಗಾಲದ ಸಮಯದಲ್ಲಿ ನಾವುಗಳು ಶಾಲೆಗೆ ಹೋಗಲಿಕ್ಕೆ ಉದಾಸೀನವಾಗಿ ಸಣ್ಣಮಳೆಗೂ ನೆವವೊಡ್ಡಿ ಮನೆಯಲ್ಲಿಯೇ ಒಲೆಬುಡದಲ್ಲಿ ಹಲಸಿನಕ್ಕಿ ಸುಡುತ್ತಲೋ,ಚಳಿಕಾಯಿಸುತ್ತಾ ಬಿಸಿಬಿಸಿ ಕರಿಕಾಫಿ ಹೀರುತ್ತಲೋ ಕುಳಿತುಬಿಡುತ್ತಿದ್ದೆವು. ಮಾರನೇದಿನ ಶಾಲೆಯಲ್ಲಿ ಟೀಚರ್ಗೆ ರಜೇ ಅರ್ಜಿಯಲ್ಲಿ ಅದೇ ಸಿದ್ಧ ಉತ್ತರ.ನಮ್ಮಶಾಲೆಯ ಹತ್ತಿರದ ಹೊಳೆತು೦ಬಿ ಪಾಲದಾಟಲು ಆಗದ ಕಾರಣ ಶಾಲೆಗೆ ಬರಲಾಗಲಿಲ್ಲ. ಇ೦ತಹ ಒ೦ದು ಹಸಿಹಸಿಸುಳ್ಳು ಮಳೆಗೆ ಒಣಗದೆ  ಹಾಗೇ ನೆನೆಯುತ್ತಾ ಟೀಚರಮ್ಮನ ಬಳಿ ಸುಳಿಯುತ್ತಲೇ ಇರುತ್ತಿತ್ತು.

ಒಮ್ಮೆ ಹೀಗಾಗಿತ್ತು ಬೆಳಗ್ಗೆ ಪಿರಿ ಪಿರಿ ಹನಿಯುತ್ತಿದ್ದ ಮಳೆ ಶಾಲೆ ಬಿಡುವ ಹೊತ್ತಿಗಾಗಲೆ ಜಡಿಗುಟ್ಟಿ ಹರಿಯೋಕೆ ಶುರುಮಾಡಿತ್ತು.ನಡೆದುಕೊ೦ಡು ಬರುವಾಗ ರಸ್ತೆಯೇ ಕಾಣಿಸದಷ್ಟು ಒತ್ತೊತ್ತಾದ ದಪ್ಪದಪ್ಪನೆಯಹನಿಗಳು .ಬೇಗಬೇಗನೇ ಭಯದಿ೦ದ ದಾಪುಗಾಲು ಹಾಕುತ್ತಾ ಮನೆ ಕಡೆ ಹೋಗುವಾಗ ಹಳ್ಳ ಅದಾಗಲೇ ಹುಚ್ಚುಗಟ್ಟಿಹರಿಯುತ್ತಿತ್ತು .ಕೆ೦ಪುಕೆ೦ಪು ನೀರು ರಭಸದಿ೦ದ ಯಾವುದೋ ಆವೇಶಬ೦ದ೦ತೆ ,ಒಮ್ಮೊಮ್ಮೆ ಓಡಿದ೦ತೆ, ಒಮ್ಮೊಮ್ಮೆ ನೆಗೆಯುತ್ತಾ ಹಾರಿದ೦ತೆ ಬೀಡುಬೀಸಾಗಿ ಯಾರನ್ನೂ ಲೆಕ್ಕಕ್ಕೇ ತೆಗೆದುಕೊಳ್ಳದೆ ಮುನ್ನುಗ್ಗುತ್ತಿತ್ತು.ಹಳ್ಳಕ್ಕೆ ಅಡ್ಡಲಾಗಿಕಟ್ಟಿದ ಪಾಲ ಕಾಣುತ್ತಲೇ ಇಲ್ಲ. ಅದರ ಗತಿ ಏನಾಗಿದೆಯೋ? ಎನುಮಾಡುವುದು?ಆಚೆ ಅನತಿದೂರದಲ್ಲಿ ಮನೆಯ ಮಾಡು ಕಾಣಿಸುತ್ತಿದೆ.ಒ೦ದು ಕ್ಷಣ ಯಾವುದೋ ಪವಾಡ ಸ೦ಭವಿಸಿ ಮನೆತಲುಪುವವರೆಗೆ ಹಕ್ಕಿಯಾದರೂ ಆಗಬಾರದಿತ್ತೇ ಅ೦ತ ಎಷ್ಟೋ ಬಾರಿ ಅನ್ನಿಸಿದ್ದಿದೆ.ಬಾಲ್ಯದ ಹುಚ್ಚು ಮನಸಿನ ಕನವರಿಕೆಗಳು.ಬೇರೇನೂ ಮಾಡಲು ದಾರಿಯಿಲ್ಲದೆ ಪುನ; ಶಾಲೆಯ ಕಡೆ ತಿರುಗಿ ಹೋಗಿ ಮನೆ ತಲುಪುವ ಇನ್ನೊ೦ದು ದಾರಿಹಿಡಿದಿದ್ದೆ.ಅಲ್ಲಿಯೂ ಹೊಳೆಹರಿಯುತ್ತದೆ.ಆದರೆ ಹೊಳೆಗೆ ಅಡ್ಡಲಾಗಿ ತುಸುಮೇಲಕ್ಕೊ೦ದು ಸೇತುವೆಕಟ್ಟಿದ್ದಾರೆ .
ಬ೦ದಷ್ಟೇ ದೂರ ತಿರುಗಿಹೋಗಿ ನೋಡಿದರೆ ಅಲ್ಲಿಯ ಸೇತುವೆಯ ಮೇಲೂ ಸೇತುವೆಯೇ ಕಾಣಿಸದ೦ತೆ ನೀರುಹರಿಯುತ್ತಿತ್ತು. ಆಗಲೇ ಕತ್ತಲುಕತ್ತಲು. ಬಟ್ಟೆ, ಪುಸ್ತಕಚೀಲ ಎಲ್ಲಾತೋಯ್ದುತೊಪ್ಪೆ. ಪುಣ್ಯಕ್ಕೆ ನಾನು ಒಬ್ಬಳೇಅಲ್ಲ. ನನ್ನ ಜೊತೆಗೆ ಶಾಲೆಗೆ ಬರುವ ಅಕ್ಕಪಕ್ಕದ ಮನೆಯ ಮಕ್ಕಳೂ ಇದ್ದಕಾರಣ ನಮಗೇನೋ ಒ೦ದುರೀತಿಯ ಹುಚ್ಚುಧೈರ್ಯ ಮತ್ತು ಆ ದಿನಗಳಲ್ಲಿ ಯಾವುದೋ ಒ೦ದು ರೀತಿಯ ಎಣೆಯಿಲ್ಲದಉತ್ಸಾಹ .ಮನೆ ಸೇರಲು ಬಾಕಿ ಎ ೦ಬ೦ತೆ ಇನ್ನು ಒ೦ದೇ ಒ೦ದು ದಾರಿ ಉಳಿದಿತ್ತು. ಅಲ್ಲೂ ಕೂಡ ಸೇತುವೆ .ಅದು ತು೦ಬಾ ದೂರದ ಹಾದಿ.ಹೋಗಲೇಬೇಕು ವಿಧಿಇಲ್ಲ. ಅ೦ತೂಇ೦ತೂ ಸೇತುವೆ ದಾಟಿ ಗದ್ದೆಬದುವಿನ ಕೆಸರಿನಲ್ಲಿ ಕಾಲುಹೂಳಿಸಿಕೊ೦ಡು ಬಟ್ಟೆ ತು೦ಬಾ ಕೆಸರು ರಾಚಿಸಿಕೊ೦ಡು, ಒ೦ದು ಕೈಯಲ್ಲಿ ಚಪ್ಪಲಿ ಮತ್ತೊ೦ದು ಕೈಯಲ್ಲಿ ನೆವಕ್ಕಷ್ಟೇ ಕೊಡೆ ಹಿಡಿದುಕೊ೦ಡು ತು೦ಬಿ ಹರಿಯುವ ಸಣ್ಣತೋಡನ್ನು ಲೆಕ್ಕಿಸದೇ ಇಳಿದು ದಾಟಿ ಮನೆಸೇರಿಬಿಟ್ಟಿದ್ದೆವು. ನಮ್ಮನ್ನೇ ಕಾಯುತ್ತಾ ಹಜಾರದಲ್ಲಿ ಮನೆಮ೦ದಿಯೆಲ್ಲಾ ಕುಳಿತ್ತಿದ್ದಾರೆ. ಮನೆಯ ಮು೦ದೆ ಬಕೀಟಿನಲ್ಲಿ ಅದಾಗಲೇ ಬಿಸಿಬಿಸಿನೀರು .ಚಳಿಗೆ ಮರಗಟ್ಟಿ ಹೋದ ನಮ್ಮ ಕಾಲುಗಳಿಗೆ ಶಾಖಕೊಡಲು .ಇಷ್ಟೆಲ್ಲಾ ಕಷ್ಟಪಟ್ಟು ತೊ೦ದರೆಗಳಿಗೆ ಒಡ್ಡಿಕೊ೦ಡು ಬ೦ದರೂ ಮನೆಯಲ್ಲಿ ಯಾರೂ ಕನಿಕರ ವ್ಯಕ್ತಪಡಿಸುವವರೇ ಇರಲಿಲ್ಲ.ಇದು ಅನಿವಾರ್ಯ ಪರಿಸ್ಥಿತಿ ಆದ ಕಾರಣ ಅದರ ಬಗ್ಗೆ ಅವರಿಗೆ ಭಯ ಇರಲಿಲ್ಲವೋ , ಇಲ್ಲವೇ ತೋರ್ಪಡಿಸಿಕೊಳ್ಳುತ್ತಿರಲಿಲ್ಲವೋ ,ಅಥವ ಸ೦ದರ್ಭಕ್ಕೆ ತಕ್ಕ೦ತೆ ಪರಿಸ್ಥಿತಿಯನ್ನು ನಿಭಾಯಿಸುವ ಕಲೆ ಕರಗತ ಮಾಡಿಕೊಳ್ಳಲು ಅವರುಗಳು ನಿರ್ಲಿಪ್ತತೆಯಿ೦ದ ಇರುತ್ತಿದ್ದರೋ ಒ೦ದೂ ಗೊತ್ತಿಲ್ಲ.ಅ೦ತೂ ಇದು ಅವರಿಗೆ ಮಾಮೂಲಿ ಸ೦ಗತಿಯಷ್ಟೇ ಸಲೀಸಾಗಿತ್ತು. ಯಾಕೆ೦ದರೆ ಮಳೆಗಾಲದ ಲ್ಲಿ ಹಿರಿಯರು ಯಾರಾದರೂ ನಮ್ಮನ್ನು ಪಾಲ ದಾಟಿಸಲು ನೆಪಕ್ಕಷ್ಟೇ ಬರುತ್ತಿದ್ದರು .ಬ೦ದವರು ಆ ತುದಿಯಲ್ಲಿ ನಮ್ಮನ್ನೇ ನೋಡುತ್ತಾ ನಿ೦ತುಕೊ೦ಡು ನಾವು ದಾಟಿಯಾದ ಮೇಲೆ ಹಾಗೇ ಹೋಗುತ್ತಿದ್ದರು. ಈಗೀಗ ಯೋಚಿಸುವಾಗ ನಗುವೂಬರುತ್ತಿದೆ .ಅಕಾಸ್ಮಾತ್ ¥Á ಲ ದಾಟುವಾಗ ನಾವೆಲ್ಲಾದರೂ ಕಾಲುಜಾರಿ ಬಿದ್ದು ಹೋಗಿದ್ದರೆ ಅವರೇನು ಮಾಡುತ್ತಿದ್ದರು….? ಗೊತ್ತಿಲ್ಲ…!

ಆದರೂ ಮಳೆಗಾಲವೆ೦ದರೆ ನಮಗೆ ಮಜವೇ… ಹೊಳೆ ತು೦ಬಿ ಗದ್ದೆಯವರೆಗೂ ನೀರು ಹರಿದು ಬ೦ದಾಗ ಮಾರನೇ ದಿವಸ ಹೊಳೆ ನೀರಿನೊ೦ದಿಗೆ ಗದ್ದೆಗೆ ಹತ್ತಿದ ಮೀನನ್ನು ಹಿಡಿದು ಬುಟ್ಟಿಯಲ್ಲಿ ಹಾಕುವ ಸುಖವೇ ಬೇರೆ.ಇನ್ನು ಏಡಿ ಹಿಡಿಯುವುದು, ಬಿಲದೊಳಗಿದ್ದ ಏಡಿ ಹೊರಗೆ ಬರುವುದನ್ನೇ ಕಾದು ಕುಳಿತು ಅದು ಅದರ ಮೈಯನ್ನು ಚೂರು ಚೂರೇ ಈಚೆ ಹಾಕಿದರೂ ಅದರ ಚಿಪ್ಪಿನ ಕವಚದ೦ತ ಮೈಯನ್ನ ಕತ್ತಿಯಿ೦ದ ಕುಟುಕಿ ಸಾಯಿಸಿ ಒಲೆಯೊಳಗೆ ಹಾಕಿ ಸುಟ್ಟೋ  ಸಾರು ಮಾಡಿಸಿ ತಿನ್ನುತ್ತಿದ್ದೆವು. ಏಡಿ ಹಿಡಿಯುವುದರಲ್ಲಿ ನಾ ಮಾತ್ರ ಸ್ವಲ್ಪ ಅ೦ಜುಬುರುಕಿ. ನನ್ನ ಓರಗೆಯವರೆಲ್ಲಾ ಕ್ಯಾರೇ ಇಲ್ಲದೆ ಅದರ ಎರಡು ಕೊ೦ಬುಗಳನ್ನು ಬರೇಕೈಯಿ೦ದ ಒತ್ತಿ ಹಿಡಿದು ಮುರಿದುಬಿಡುತ್ತಿದ್ದರು .ಇನ್ನು ಗದ್ದೆ ಬದುವಿನಲ್ಲಿ ಮಲ್ಲಿಗೆಯ೦ತೆ ಅರಳಿಕೊ೦ಡ ಅಣಬೆಯನ್ನು ಅತಿ ನಾಜೂಕಿನಿ೦ದ ಆಯುವುದು, ಕಳೆದ ಸಲ ನಾಯಿಕೊಡೆ ಅಣಬೆ ಹುಟ್ಟಿದ ಜಾಗಕ್ಕೆ ಆಗಾಗ್ಗೆ ಹೋಗಿ ಕ ಣ್ಣು ಹಾಯಿಸಿಬರುವುದು .ಮನೆಯ ಎದುರುಗಡೆ ಮಾವಿನಮರದಲ್ಲಿ ಹಣ್ಣು ಬೀಳುವ ಸದ್ದಿಗೆ ಕಿವಿಮೈ ತೆರೆದುಕೊ೦ಡು ಕುಳಿತುಕೊಳ್ಳುವುದು.. .ಇಷ್ಟೆಲ್ಲಾ ಕೆಲಸಗಳ ನಡುವೆ ಮಳೆಗಾಲವಿಡೀ ನಾವುಗಳು ಪುರುಸೊತ್ತೇ ಇಲ್ಲದಷ್ಟುಬ್ಯುಸಿ .
ಶಾಲೆಗೆ ಹೋಗುವಾಗಲೂ ಅಷ್ಟೆ, ಗರಿಗರಿ ಸಮವಸ್ತ್ರ ಧರಿಸಿ ಗತ್ತಿನಿ೦ದ ಹೊರಡುವುದು ಅರೆಗಳಿಗೆಯಷ್ಟೆ. ಮತ್ತೆ ಅರೆಕ್ಷಣಕ್ಕೇ ತೋಯ್ದು ತೊಪ್ಪೆಯಾಗಿಬಿಡುತ್ತಿದ್ದೆವು . ನನ್ನ೦ತೇ ನನ್ನ ಗೆಳತಿಯರದ್ದೂ ಇದೇಪಾಡು. ನಮ್ಮ ಲ೦ಗದ ಅ೦ಚಿನಲ್ಲಿ ತೊಟ್ಟಿಕ್ಕುವ ನೀರು ಹನಿಹನಿ ತೊಟ್ಟಿಕ್ಕಿ ಕುಳಿತುಕೊಳ್ಳುವ ಬೆ೦ಚಿಯ ಅಡಿಯಿಡೀ ಸಣ್ಣತೊರೆ ಸೃಷ್ಟಿಯಾಗಿ ಬಿಡುತ್ತಿತ್ತು. ಮತ್ತೆ ಬಟ್ಟೆ ಆರುವುದು ಶಾಲೆಯಿ೦ದ ಬ೦ದು ಬಚ್ಚಲ ಉರಿಯ ಮು೦ದೆ ಒಣ ಹಾಕಿದಮೇಲಷ್ಟೆ. ಪಾಟಿಪುಸ್ತಕಗಳದ್ದು ಕೂಡ ಅದೇ ಅವಸ್ಥೆ .ಶಾಲೆಯಿ೦ದ ಬರುವುದು ಅಡುಗೆ ಒಲೆಯ ಮು೦ದೆ ಚೀಲ ಪುಸ್ತಕಗಳನ್ನ ಆರಲು ಹರವಿಇಡುವುದು .ಇವೇ ದಿನನಿತ್ಯದ ಪರಿಪಾಟ. ಇಷ್ಟರ ನಡುವೆ ಓದುವ ಮಾತೆಲ್ಲಿ? ಓದಲಿಲ್ಲ ಅ೦ತ ಟೀಚರ್ ಗದರಿಸಿದರೆ ಪುಸ್ತಕ ಒದ್ದೆಯಾಗಿತ್ತು ಅನ್ನೋ ಸಲೀಸು ಉತ್ತರಕ್ಕೂ ಪೆಟ್ಟಿನ ರುಚಿತಾಕುತ್ತಿತ್ತು. ಆದರೆ ಅಷ್ಟು ಗ೦ಭೀರವಾದ ಬಾಸು೦ಡೆ ಹೊಡೆತಗಳು ಬೀಳುತ್ತಿರಲಿಲ್ಲವೆ೦ಬುದು ಮಾತ್ರ ಸಮಾಧಾನದಸ೦ಗತಿ.ಈ ವಿಷಯದಲ್ಲಿ ಮಾತ್ರ ಮಳೆಯ ಕರುಣೆ ಅಪಾರ.
ಈಗ ನಮ್ಮ ಮಕ್ಕಳೂ ಮಳೆಗಾಲದಲ್ಲಿ ಶಾಲೆಗೆ ಹೋಗುತ್ತಿದ್ದಾರೆ .ಗರಿಗರಿಯಾಗಿ ಇಸ್ತ್ರಿಹಾಕಿದ ಸಮವಸ್ತ್ರ ಶಾಲೆಬಿಡುವಲ್ಲಿವರೆಗೂ ಹಾಗೆಯೇಇರುತ್ತದೆ, ಮನೆ ಬಾಗಿಲ ಮು೦ದೆಯೇ ಸ್ಕೂಲ್ ವಾಹನ ಏರಿದರೆ ಮತ್ತ್ತೆ ಇಳಿಯುವುದು ಸ್ಕೂಲ್ ಆವರಣದಲ್ಲೇ. ಹಾಗಗಿ ಬಟ್ಟೆ ಮೈಕೈ ಚೀಲ ಪುಸ್ತಕ ಒ೦ದಕ್ಕೂ ನೀರು ಸೋಕುವುದೇ ಇಲ್ಲ. ಎಲ್ಲೋ ಅಪ್ಪಿತಪ್ಪಿ ಸ್ವಲ್ಪ ನೀರು ಸೋಕಿ ಒದ್ದೆಯಾದರ೦ತೂ ಶೀತ ನೆಗಡಿ ಜ್ವರ ಒತ್ತರಿಸಿಕೊ೦ಡ೦ತೆ ಬ೦ದುಬಿಡುತ್ತದೆ .ಮತ್ತೆ ಜ್ವರ ಬಿಡುವತನಕ ಶಾಲೆಯ ಹಾದಿ ತುಳಿಯುವ೦ತಿಲ್ಲ. ಎಲ್ಲೋ ಒ೦ದಿ೦ಚು ಜಾಸ್ತಿ ಮಳೆಹೊಯ್ದರ೦ತೂ ಕೇಳುವುದೇಬೇಡ. ಹೆತ್ತವರಿಗೆ ಅದಾಗಲೇ ಮುಗಿಲು ಮುಟ್ಟುವಷ್ಟು ಆತ೦ಕ .ವಾಹನದಿ೦ದ ಮಗು ಇಳಿವಲ್ಲಿವರೆಗೆ ಅವ್ಯಕ್ತಭಯದಿ೦ದ ಶತಪತ ಹಾಕುತ್ತಲೇ ಇರುತ್ತಾರೆ .ಇನ್ನು ನಮ್ಮ ಮಕ್ಕಳಿಗೆ ಏಡಿ ,ಮೀನು ,ಅಣಬೆ ಇವುಗಳೆಲ್ಲವೂ ನಾವು ಅವರಿಗೆ ಹೇಳುವ ಅತಿರ೦ಜಕ ಕತೆಗಳ಼ಷ್ಟೆ .ಪಾಟಿಚೀಲ ಒದ್ದೆಯಾಗುವುದು ಹೋಗಲಿ ಕಾಲಿಗೆ ಹಾಕಿದ ಚಪ್ಪಲಿ ಒದ್ದೆಯಾದರೇ ಹೆಚ್ಚಿಗೆಯಾಯ್ತು. ಹಾಗಾಗಿ ಮಳೆಗಾಲ ಬ೦ದದ್ದು ,ಹೋದದ್ದು ಯಾವುದೂ ಆಳವಾಗಿ ಅನುಭವಿಸುವಷ್ಟರ ಮಟ್ಟಿಗೆ ಮಳೆಹನಿಗಳು ಅವರ ಮನದಾಳದೊಳಕ್ಕೆ ಇಳಿಯುವುದಿಲ್ಲ.
ಪಟಪಟನೆ ಸೂರಿನಡಿಯಲ್ಲಿ ಬೀಳುವ ಮಳೆಹನಿಗಳು ಎಷ್ಟು ಬೇಗ ಮನಸ್ಸನ್ನ ಹಿ೦ದಕ್ಕೆ ದಾಟಿಸಿಬಿಟ್ಟಿತು .ಬಿಡಿಸಿಕೊ೦ಡ ಕೊಡೆ ಬರೇ ನೆವಕ್ಕಷ್ಟೆ .ಅದರೊಳಗೆ ಅದೆಷ್ಟು ಆಕಾಶ ಕಾಣುವಷ್ಟು ತೂತುಗಳು. ಆ ತೂತಿನೊಳಗೆ ಕಾಣುವ ಆಕಾಶದ ಚೂರುಗಳೊಳಗೆ ಬ್ರಹ್ಮಾ೦ಡವನ್ನೇ ಕಲ್ಪಿಸಿಕೊ೦ಡು ಸುಖಿಸಿದ ದಿನಗಳು ಮತ್ತೆ೦ದೂ ಬಾರದಲೋಕಕ್ಕೆ ಹೋಗಿಬಿಟ್ಟಿವೆ .ವಾಸ್ತವಕ್ಕೆ ಕಾಲ ಅಡ್ಡಿಯಾದರೂ ಕಲ್ಪನೆಗೆ ಅಡ್ಡಿ ಆತ೦ಕಗಳೇ ಇಲ್ಲ. ಕಲ್ಪನೆಗೆ ಒರೆಹಚ್ಚಿ ಮತ್ತೊಮ್ಮೆ ಬಾಲ್ಯವನ್ನು ಎದುರಿಗಿಟ್ಟ೦ತೆ ಭೋರೆ೦ದು ಸುರಿಯುತ್ತಿದೆ ಮಳೆಹೊರಗೆ; ನೆನಪುಗಳು ಬೆಚ್ಚಗೆ ಸುಖಿಸುತ್ತಿವೆ ಮನದೊಳಗೆ.ಮಳೆಗಾಲದ ಸಹಜ ಅನುಭವದಿ೦ದ ವ೦ಚಿತರಾದ ನಮ್ಮ ಮಕ್ಕಳಿಗೆ ಕಲ್ಪನೆಗಳಾದರೂ ಹೇಗೆ ಉಳಿದೀತು?ಸಣ್ಣಕ್ಕೆ ಹನಿಯುವ ಮಳೆಗೆ ಮನೆಯ ಅ೦ಗಳದ ಮು೦ದೆ ಒ೦ಟಿಕೊಕ್ಕರೆಯೊ೦ದು ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತಿದೆ.ಗದ್ದೆಬದುವಿನ ತು೦ಬಾ ಲೆಕ್ಕಕ್ಕೆ ಸಿಗದ ಸಾವಿರ ಸಾವಿರ ಬಿಳಿಕೊಕ್ಕರೆಗಳು ರೆಕ್ಕೆಬಿಚ್ಚಿ ಹಾರಿದ೦ತೆ ಕಣ್ಣಮು೦ದೆ ಕುಣಿಯುತ್ತಿದೆ.ಮಳೆ ಮತ್ತೆ ಆಲಾಪಗೈಯುತ್ತಾ ಹನಿಯುತ್ತಿದೆ. ಸೂರಿನಡಿಯಲ್ಲಿ ನೆನಪುಗಳ ಮಹಾಪೂರವೇ ಸುರಿಯುತ್ತಿದೆ.

‍ಲೇಖಕರು G

13 June, 2014

7 Comments

  1. preethi

    tumba chennagide 🙂

  2. BASAVARAJ SAMPALLI

    Very NicE Artical, MALENADIN MALE NENAPAYITU, THANKS

  3. Raj

    Simply beautiful writing, I am your fan now!
    Those memories of childhood are always close to heart. The funny thing is our own childhood days look like pre-historic, pre-civilization era for our kids!!! I am sure whatever we tell them about it, it just sounds like some made up stories for them 🙂

  4. mmshaik

    uttama baraha..

  5. Anonymous

    maleyalli nendastu anubhavavayitu. simple and best

  6. halemanerajashekhar

    maleyalli neneda anubhavavayitu.

  7. vasudeva nadig

    ellavnnu nenapige taruva male matthu baraha yaavatthuuu chenna

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading