ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ ಬಿಡುಗಡೆಯಾದ ಅರೆಸ್ಟ್ ಆದ ‘ ದೇವರು ‘

ಬಿಡುಗಡೆ ಮಾಡಿದ ಅಪ್ಪ ಅಮ್ಮ

ನನ್ನ ಮೊದಲ ಕಥಾ ಸಂಕಲನ “ದೇವರು ಅರೆಸ್ಟ್ ಆದ” 2015ರಲ್ಲಿ ಪ್ರಕಟಗೊಂಡಿತ್ತು. ಈಗ ಅದರ ಮೂರನೇ ಮರು ಮುದ್ರಣ ಮಾವಲಿ ಪಬ್ಲಿಕೇಶನ್ ನಿಂದ ಪ್ರಕಟವಾಗಿದೆ.

ಈ ಬಾರಿಯ ವಿಶೇಷ ಅಂದರೆ ಮಾವಲಿ ಪಬ್ಲಿಕೇಶನ್ ಈ ಪುಸ್ತಕವನ್ನು ನನ್ನ ಊರಾದ ಮಾವಲಿಯಲ್ಲಿ, ನಮ್ಮ‌ ಮನೆಯ ಹಿತ್ತಲಲ್ಲಿ ನನ್ನ ಅಪ್ಪ ಅಮ್ಮ ಬಿಡುಗಡೆ ಮಾಡಿದರು.

ಮೊದಲ ಬಾರಿ ಅವರಿಬ್ಬರೂ ಇದರ ಬಿಡುಗಡೆಗೆ ಬೆಂಗಳೂರಿಗೆ ಬಂದಿದ್ದರು. ಆಗ ಅಮ್ಮ ಬರೋಕು ಮುಂಚೆ ಪುಸ್ತಕದ ಹೆಸರೇನು ಅಂತ ಫೋನ್ ನಲ್ಲಿ ಕೇಳಿದಾಗಲೆಲ್ಲ ನಾನು ಏನೇನೋ ಹೇಳಿ ತಪ್ಪಿಸಿಕೊಳ್ತಿದ್ದೆ. ಅದರ ಟೈಟಲ್ ನಿಂದಾಗಿ…

ಈಗ ಹೊಸ ಮುದ್ರಣಕ್ಕೆ ಪ್ರೇಮ ಪ್ರಕಾಶಕಿಯಾಗಿದ್ದಾಳೆ, ‘ಕ್ಷಣ’ ಕೂಡ ನಮ್ಮನ್ನು ಸೇರಿಕೊಂಡಿದ್ದಾನೆ.

‘ಮನೆ ಗೆದ್ದು ಮಾರು ಗೆಲ್ಲು’ ಅಂತ ಹೇಳೋ ಹಾಗೆ ಹುಟ್ಟಿದ ಊರಿನಲ್ಲಿ , ನಮ್ಮ ಮನೆಯ ಹಿತ್ತಲಲ್ಲಿ ಈ ಪುಸ್ತಕವನ್ನು ಪೋಷಕರು ಬಿಡುಗಡೆ ಮಾಡಿದ್ದು ನಮ್ಮ ಪಾಲಿಗೆ ಒಂದು ವಿಶೇಷ.

ಪುಸ್ತಕಕ್ಕಾಗಿ ಸಂಪರ್ಕಿಸಿ ಅಮೂಲ್ಯ ಪುಸ್ತಕ
ಸಂಪರ್ಕ ಸಂಖ್ಯೆ : 9448676770

‍ಲೇಖಕರು avadhi

1 June, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading