ಮತ್ತೆ ಬಾಡೂಟ: ಮತ್ತೊಮ್ಮೆ ಹೇಳುತ್ತೇನೆ ಸರಿಯಾಗಿ ಕೇಳಿಸಿಕೊಳ್ಳಿ..

quotes

 

 

ಶ್ರೀವತ್ಸ ಕಂಚೀಮನೆ

 

ಮೊದಲಾಗಿ ನಾನೆಲ್ಲೂ ನಿಮ್ಮ ಆಹಾರ ಕ್ರಮವನ್ನ ವಿರೋಧಿಸಿಯೇ ಇಲ್ಲ. ಆದರೆ ಅದನ್ನು ಹೊಂದುವಲ್ಲಿನ “ಅನಗತ್ಯ” ಹಿಂಸೆಯನ್ನ ಮಾತ್ರ ವಿರೋಧಿಸಿದ್ದೇನೆ. ಮುಂದೆಯೂ ವಿರೋಧಿಸುತ್ತೇನೆ ಕೂಡ.

avadhi baduta jugari crossಅಲ್ಲದೇ ತಾಯೊಂದಿಗೆ ಕರುವನ್ನೂ ಸಾಕಿ, ಅದರ ಪೂರಕ ಆಹಾರವನ್ನೇ ಅದಕ್ಕೆ ಒದಗಿಸಿ ಪರ್ಯಾಯವಾಗಿ ತಾಯ ಹಾಲನ್ನು ಬಳಸಿಕೊಳ್ಳುವುದಕ್ಕೂ ಹಾಲು ಕರೆವ ತಾಯನ್ನೇ ಕಡಿದು ತಿನ್ನುವುದಕ್ಕೂ ತುಂಬಾ ವ್ಯತ್ಯಾಸ ಇದೆ ಅನ್ನುವುದನ್ನ ನಿಮಗೆ ವಿವರಿಸಬೇಕಾ ನಾನು.
ಅಲ್ಲದೇ ಬ್ರಾಹ್ಮಣರು ದೇವರ ಹೆಸರಲ್ಲಿ ಬಲಿ ಕೊಟ್ಟರೂ ಅದನ್ನೂ ನಾನು ವಿರೋಧಿಸ್ತೇನೆ. ಅದನ್ನೂ ಅಲ್ಲಿ ಹೇಳಿದ್ದೇನೆ ಕೂಡ.

ನೀವಂದಂತೆ ಇದುವರೆಗೂ ಅನ್ನ ಮತ್ತು ಸ್ನೇಹವನ್ನ ಹಂಚಿಕೊಳ್ಳುವಾಗ ಜಾತಿಯನ್ನು ಕೇಳಿದ್ದಿಲ್ಲ ನಾನು. ಜಾತಿಯ ಕಾರಣಕ್ಕೆ ಅನ್ನವಿಲ್ಲ ಅಂದದ್ದೂ ಇಲ್ಲ.
ಅಲ್ಲದೇ ನೀವನ್ನೋ ತುಳಿಯಲ್ಪಟ್ಟವರ ನಡುವಿನ ಒಳ ಜಾತಿ ಪಂಗಡಗಳ ನಡುವಿನ ಅವಾಂತರಗಳನ್ನು ನಿಮ್ಮಷ್ಟಲ್ಲದಿದ್ದರೂ ಒಂದಿಷ್ಟು ಕಂಡಿದ್ದೇನೆ ಕೂಡ.
ದೇವರ ಹೆಸರಲ್ಲಿ ಧನ ಸುಲಿಯೋ, ಅನ್ನವನ್ನು ಚೆಲ್ಲಿ ಸಂಭ್ರಮಿಸೋ ಪುರೋಹಿತರಿಗೂ, ಅದೇ ದೇವರ ಹೆಸರು ಹೇಳಿ ಮೂಗ ಪ್ರಾಣಿಯ ಪ್ರಾಣ ಸುಲಿದು ಅಬ್ಬರದ ತುಳಿತದ ಮಾತಾಡೋ ನಿಮ್ಮಗಳಿಗೂ ವ್ಯತ್ಯಾಸ ಕಾಣ್ತಾ ಇಲ್ಲ ನಂಗೀಗ.

ಪ್ರತಿಕ್ರಿಯೆ ನೀಡುವ ಮುನ್ನ ಮತ್ತೊಮ್ಮೆ ನನ್ನ ಪ್ರತಿಕ್ರಿಯೆಯನ್ನ ಪೋರ್ತಿ ಓದಿ ಅದರ ಒಟ್ಟು ಆಶಯ ಅರಿತು ಮಾತಾಡಿದರೆ ಚಂದ ಎಂದು ಬುದ್ಧಿವಂತರಾದ ನಿಮ್ಮಂಥವರಿಗೆ ನಾನು ಹೇಳಬೇಕಾಗಿ ಬಂದದ್ದು ವಿಶಾದವೆನ್ನಿಸುತ್ತೆ.

ಮತ್ತೊಮ್ಮೆ ಹೇಳುತ್ತೇನೆ ಸರಿಯಾಗಿ ಕೇಳಿಸಿಕೊಳ್ಳಿ: ನಾನು ವಿರೋಧಿಸುತ್ತಿರುವುದು ಮಾಂಸಾಹಾರವನ್ನಲ್ಲ; ಅದರ ಹಿಂದಿನ ಅನಗತ್ಯ ಹಿಂಸೆಯನ್ನ ಅಷ್ಟೇ.
ಇದಕ್ಕಿಂತ ಹೆಚ್ಚಿನ ವಿವರಣೆ ಮತ್ತು ಮಾತು ಅಗತ್ಯ ಅನ್ನಿಸುತ್ತಿಲ್ಲ ನಂಗೆ. ಆಡಿದರೆ ಅದು ಮಾನಸಿಕ ದಾರಿದ್ಯ್ರ ಅನ್ನಿಸುತ್ತೆ.
ಶುಭವಾಗಲಿ…_/\_

 

quotes

 

ರಾಜೇಂದ್ರ ಪ್ರಸಾದ್

 

ಎಲ್ಲರಿಗೂ : ಚಾಪಲ್ಯ ಎನ್ನುವ ಮಾತಿನಲ್ಲೇ ಮಾನಸಿಕ ದರಿದ್ರ್ಯವಷ್ಟೇ ಅಲ್ಲದೆ ಬೌದ್ದಿಕ ದಾರಿದ್ರ್ಯವೂ ತುಂಬಿರುವುದು ಕಾಣುತ್ತಿದೆ.

ಹಾಲು ಕರುವಿನ ಸ್ವತ್ತು ಮನುಷ್ಯನ್ನದ್ದು ಅಲ್ಲ. ಹಾಗೆ ನೋಡಿದ್ರೆ ಕಡಿಯುವುದು, ಕದಿಯುವುದು ಎರಡೂ ಹಿಂಸೆಯ ಪ್ರತ್ಯೇಕ ಸ್ವರೂಪಗಳು.
ಒಂದು ಸ್ವರೂಪವನ್ನು ತಮ್ಮ ಸ್ವಾರ್ಥಕ್ಕೆ ಸಮರ್ಥಿಸುವುದು, ಮತ್ತೊಂದನ್ನು ವಿರೋಧಿಸುವುದು ಮತಿಗೇಡಿತನದ ಲಕ್ಷಣ.

avadhi baduta jugari crossಅಲ್ಲಿನ ಪ್ರಾಣಿಯನ್ನು ಆಹಾರಕ್ಕೆ ಬಳಸಾಗುತ್ತದೆಯೇ ಹೊರತು ಸಾರ್ವಜನಿಕವಾದ ಹಿಂಸೆಗೆ, ಆಟಕ್ಕೆ, ಮೆರವಣಿಗೆ ಬಳಸುವುದಿಲ್ಲ ಎಂದು ಅದಾಗಲೇ ನಾನು ವಿವರಣೆ ಕೊಟ್ಟ ಮೇಲೂ ಸಮರ್ಥನೆ ಮಾತನ್ನು ಆಡುವರಲ್ಲಿ ಅಂಧ ಶ್ರದ್ಧೆ ಕಾಣುತ್ತಿದೆಯೇ ಹೊರತು ಸಾಮಾಜಿಕ ಕಾಳಜಿ ಇನಿತೂ ಇಲ್ಲ.

ಮಾಂಸಾಹಾರ ಎನ್ನುವುದು ಹಿಂಸೆಯಲ್ಲ. ಅದು ಪ್ರಾಕೃತಿಕ ಸಮತೋಲನದ ನಡೆ. ಅದು ನಿಸರ್ಗದತ್ತ ಎಂಬುದನ್ನೂ ಮತ್ತೆ ಮತ್ತೆ ಹೇಳಿ ಅರ್ಥ ಮಾಡಿಸುವುದು ಕಷ್ಟ. ಒಂದು ವೇಳೆ ಜಗತ್ತು ಮಾಂಸಾಹಾರವನ್ನೆ ನಿಲ್ಲಿಸಿ ಬಿಟ್ಟರೆ ಭೂಮಿಯಲ್ಲಿ ಬದುಕುವ ದುಸ್ತರ ಸ್ಥಿತಿಯ ಅರಿವು ಕೆಲ ಜನರಿಗೆ ಇಲ್ಲದಿರುವುದು. ಇವತ್ತಿನ ವಿಪರ್ಯಾಸ.

ನಮಸ್ಕಾರ.

‍ಲೇಖಕರು admin

April 2, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಕೆ.ಪುಟ್ಟಸ್ವಾಮಿ

    ಮಾಂಸಾಹಾರ ವಿರೋಧಿಸುವ ಗುಂಪು ಒಂದು ವಿಷಯವನ್ನು ಮರೆತಂತಿದೆ. ಇದು ಹಿಂಸೆಗೆ ಸಂಬಂಧಪಟ್ಟ ವಿಷಯವೇ ಅಲ್ಲ. ಆಹಾರ ಕ್ರಮವನ್ನು ನೀತಿನಿರ್ಲಿಪ್ತವಾಗಿ ನೋಡಬೇಕಾದ ತುರ್ತಿದೆ. ಮನುಷ್ಯ ಅಲೆಮಾರಿಯಾಗಿದ್ದಾಗ ಬೇಟೆಯೇ ಅವನ ಆಹಾರ ಮೂಲವಾಗಿತ್ತು. ನೆಲೆ ನಿಂತ ಮೇಲೆ ಪ್ರಾಣಿಗಳನ್ನು ಮೊದಲು ಆಹಾರಕ್ಕಾಗಿಯೇ ಪಳಗಿಸಿದ. ಆ ನಂತರವೇ ಅವುಗಳನ್ನು ಕೃಷಿಗೆ, ಸಂಚಾರಕ್ಕೆ, ಖುಷಿಗೆ, ಬೇಟೆಗೆ, ಮುದ್ದಿಗೆ ಪಳಗಿಸಿದ್ದು. ಈ ಪಳಗಿಸುವ ಕ್ರಿಯೆಯಲ್ಲಿ ಆತ ಮೂಲಜೀವಿಗಳ ಗುಣಗಳನ್ನೆ ಸಂಪೂರ್ಣ ನಾಶ ಮಾಡಿದ . (ಅಳಿಸಿಹಾಕಿದ ಎನ್ನುವುದು ಸೂಕ್ತವೇನೋ). ಿದರಿಂದ ಜೀವ ವೈವಿಧ್ಯಕ್ಕೇನೂ ಧಕ್ಕೆಯಾಗಲಿಲ್ಲ. ಒಂದು ವೇಳೆ ಆಹಾರಕ್ಕಾಗಿ ಮನುಷ್ಯ ಪ್ರಾಣಿಗಳನ್ನು ಪಳಗಿಸದೇ ಹೋಗಿದ್ದರೆ ಬೇಟೆಯಾಡಿ ಜಗತ್ತಿನ ಪ್ರಾಣಿಗಳನ್ನು ಎಗ್ಗಿಲ್ಲದಂತೆ ಬೇಟೆಯಾಡಿ ಜೀವವೈವಿಧ್ಯವನ್ನೇ ನಾಶ ಮಾಡಿಬಿಡುತ್ತಿದ್ದ. ಹಾಗಾಗಿ ನಾವು ಆಹಾರಕ್ಕಾಗಿ ಬಳಸುತ್ತಿರುವ (ಕಡಿಯುತ್ತಾರೆ ಎಂದು ಉದ್ದೇಶಪೂರ್ವಕವಾಗಿ ಸಸ್ಯಹಾರಿಗಳು ಹೇಳುತ್ತಾರೆ) ತಳಿಗಳೆಲ್ಲವೂ ಮೂಲ ಜೀವಿಗಳಿಂದ ಪ್ರತ್ಯೇಕವಾಗಿ ಕೇವಲ ನಮ್ಮ ಬಳಕೆಗೆ ಮಾತ್ರ ಸಾಕುತ್ತಿದ್ದೇವೆ. ಹಾಲು ಕುಡಿಯುವುದು, ಬಾಡು ತಿನ್ನುವುದು ಎರಡೂ ಒಂದೇ ಕ್ರಿಯೆ. ನಮ್ಮ ನಮ್ಮ ಮಟ್ಟಕ್ಕೆ ಅದನ್ನು ಅರ್ಥೈಸಿಕೊಳ್ಳುತ್ತಿದ್ದೇವೆ ಅಷ್ಟೆ. ಚರಿತ್ರೆ ಮತ್ತು ಪರಿಸರವನ್ನು ಬಲ್ಲವರಿಗೆ ಇದರ ಬಗ್ಗೆ ಗೊಂದಲವಿಲ್ಲ. ಮಾಂಸಾಹಾರ ಬೇಡ ಎನ್ನುವವರನ್ನು ಒತ್ತಾಯಿಸಬಾರದು. ಬೇಕೆಂದು ಉಂಬುವವರನ್ನು ಹುಸಿನೀತಿಯ ಮೀಟುಗೋಲು ಹಾಕಿ ತಡೆಯಬಾರದು. ಮಾಂಸಹಾರ ಬಳಸುವ ಮಿತ್ರರಲ್ಲಿ ಒಂದೇ ಮನವಿಯೆಂದರೆ ಾಹಾರಕ್ಕಾಗಿ ಕಾಡಿನ ಜೀವಿಗಳನ್ನು ಬೇಟೆಯಾಡಬೇಡಿ. ಅವುಗಳ ಮೇಲೆ ನಮ್ಮ ಹಕ್ಕಿಲ್ಲ. ಕಾಡಿನ ಬೇಟೆಗಾರ ಜೀವಿಗಳಿಗೆ ಅದು ಮೀಸಲು. ಹಾಗಾಗಿ ಕಾಡು ಜೀವಿಗಳ ಶಿಕಾರಿಗೆ ವಿರೋಧವಿದೆ. ಅದು ನೀತಿಯ ಅಮಲಿನಿಂದ ಉದ್ಭವವಾದ ದಯೆಯಲ್ಲ. ಜೀವ ವೈವಿಧ್ಯ ಉಳಿಯಬೇಕಾದ ತುರ್ತಿನಿಂದ ಃಏಳುವ ಮಾತು.

    ಪ್ರತಿಕ್ರಿಯೆ
  2. Lingaraju BS

    kuri, koli mamsadinda gomamsakke banda charche munde adu hindu dharmakke allinda rashtradrohakke bandu nillalide. konege kelisuvudu mamsaaharigalu rashtradrohiglalu.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: