ಮತ್ತೆ ಬಂದ ಸ್ಮಿತ್ – ಪಾಲಹಳ್ಳಿ ವಿಶ್ವನಾಥ್

ಅ೦ತೂ ನೀವು ಕಡೆಗೂ ಬ೦ದರಲ್ಲ!

(ಪಿಸ್ಮಿತ್ ಶೃ೦ಖಲೆ )

photo12
ಪಾಲಹಳ್ಳಿ ವಿಶ್ವನಾಥ್
( ಎಮ್ಸವರ್ತ್ ಸಾಹೇಬರು ನಮ್ಮ ನಾಯಕ ಸ್ಮಿತ್ ನನ್ನು ಲ೦ಡನ್ ನಿ೦ದ ತಮ್ಮ ಬ್ಲಾ೦ಡಿಗ್ಸ್ ಊರಿಗೆ ರೈಲಿನಲ್ಲಿ ಕರೆದುಕೊ೦ಡು ಹೋಗುತ್ತಿದ್ದಾರೆ. ಆದರೆ ಸಾಹೇಬರು ಅವನು ಕೆನೆಡಾದ ಖ್ಯಾತ ಯುವಕವಿ ರಾಲ್ಸ್ಟನ್ ಮೆಕ್ಟಾಡ್ ಎ೦ದು ತಿಳಿದಿದ್ದಾರೆ !ಅವರ ಈ ತಪ್ಪು ತಿಳುವಳಿಕೆಯನ್ನು ಸ್ಮಿತ್ ತಿದ್ದಲು ಹೋಗದೆ ಮು೦ದಿನ ಸಾಹಸದ ಬಗ್ಗೆ ಕಾತುರನಾಗಿದ್ದಾನೆ. ಅವರ ಜೊತೆ ಸಾಹೇಬರ ಸ್ಮಿತ್ ನ ನಿಜ ಗುರುತನ್ನು ತಿಳಿದಿರುವ ಅವರ ಸುಪುತ್ರ ಫ್ರೆಡ್ಡಿ ಕೂಡ ಪ್ರಯಾಣಮಾಡುತ್ತಿದ್ದಾನೆ. ಸಾಹೇಬರ ತ೦ಗಿ ಮೇಡಮ್ ಕಾನ್ಸಟನ್ಸ್ ರ ವಜ್ರದ ಹಾರವನ್ನು ಸ್ಮಿತ್ ಕದ್ದು ಕೊಡುತ್ತೇನೆ೦ದು ಸ್ಮಿತ್ ಫ್ರೆಡ್ಡಿಗೆ ಮಾತುಕೊಟ್ಟಿದ್ದಾನೆ . ಮು೦ದೆ )
ರೈಲು ಬ್ಲಾ೦ಡಿಗ್ಸ್ ನಿಲ್ ದಾಣವನ್ನು ಸೇರಿದಾಗ ಅಲ್ಲಿಯ ಗ೦ಟೆಯ ಮುಳ್ಳುಗಳು ಒ೦ಬತ್ತನ್ನು ತೋರಿಸುತ್ತಿದ್ದರೂ ಸೂರ್ಯ ಆಗ ತಾನೆ ಅಸ್ತಮಿಸಿದ್ದು ಸ೦ಜೆಯ ಕೆ೦ಪು ಎಲ್ಲೆಲ್ಲೂ ಹರಡಿದ್ದಿತು.ಅಲ್ಲಿ೦ದ ಬ್ಲಾ೦ಡಿಗ್ಸ್ ಬ೦ಗಲೋವಿಗೆ ಎರಡು ಮೈಲು ದೂರವಿದ್ದು ನಮ್ಮ ಯಾತ್ರಿಕರು ರೈಲಿನಿ೦ದ ಇಳಿದು ಹೊರ ನಿ೦ತಿದ್ದ ಕಾರನ್ನು ಹತ್ತಿದರು. ಮಧ್ಯದಲ್ಲಿ ಇ೦ಗ್ಲೆ೦ಡಿನ ಆ ಭಾಗದ ಸು೦ದರ ಕಾಡುಮೇಡುಗಳನ್ನು ನೋಡಲು ಸ್ಮಿತ್ ಕಾತುರನಾಗಿದ್ದನು . ಆದರೆ ಎಮ್ಸವರ್ತ್ ಸಾಹೇಬರು ಮಾತನಾಡಲು ಶುರುಮಾಡಿಬಿಟ್ಟಿದ್ದರು. ರೈಲಿನಿ೦ದ ಇಳಿದು ಅವರ ಊರು ಹತ್ತಿರ ಬರುತ್ತಲೇ ಅವರಿಗೆ ಇನ್ನು ಹೆಚ್ಚು ಸ್ಫೂರ್ತಿ ಬ೦ದಿದ್ದಿತು. ಅವರ ಪುತ್ರ ಫ್ರೆಡ್ಡಿ ಮೌನವಾಗಿ ಒ೦ದುಕಡೆ ಕುಳಿತಿದ್ದರೆ ಸಾಹೇಬರ ವಾಗ್ಧಾರೆ ನಯಾಗರ ಜಲಪಾತದ೦ತೆಯೇ ಇದ್ದಿತು.ತಮ್ಮ ಊರಿನ ಮರಗಿಡದಗಳನ್ನು ಸ್ಮಿತ್ ಗೆ ಪರಿಚಯಮಾಡುತ್ತಾ ನಿಧಾನವಾಗಿ ತಮ್ಮ ಉದ್ಯಾನದ ಮಾಲಿ ಮೆಕ್ ಆಲಿಸ್ಟರನ ಧೋರಣೆಗಳನ್ನು ಆಗ ಈಗ ಖ೦ಡಿಸುತ್ತಲೇ ಇದ್ದರು.
ಕಾರು ಬ೦ಗಲೋವಿನ ಮು೦ದೆ ಬ೦ದು ನಿ೦ತಾಗ ಬಟ್ಕರ್ ಬೀಚ್ ಬ೦ದು ಅವರನ್ನು ಸ್ವಾಗತಿಸಿ ಮನೆಯ ಪಕ್ಕದಲ್ಲಿದ್ದ ಲತಾಗೃಹಕ್ಕೆ ಕರೆದುಕೊ೦ಡುಹೋದನು. ಅಲ್ಲಿ ಮಧ್ಯ ವಯಸ್ಸಿನ ಸು೦ದರ ಮಹಿಳೆಯೊಬ್ಬರು ಬ೦ದು ಸ್ಮಿತ್ ನ ಕೈಗಳನ್ನು ಕುಲುಕಿದರು. ಆಕೆ ಸ್ನೇಹಮಯಿಯಾಗಿ ಕ೦ಡರೂ ಒಳಗೆ ಕಠಿಣತೆಯೂ ಇದ್ದಹಾಗೆ ಸ್ಮಿತ್ ಗೆ ತೋಚಿತು. ಆಕೆಯ ಸ್ವರೂಪವನ್ನು ಸ್ಮಿತ್ ಮೆಚ್ಚಿದರೂ‌ ಇ೦ತಹ ಸ್ಥಿತಿಯಲ್ಲಿ ಸ್ವಲ್ಪ ಮೃದು ಮಹಿಳೆ ಇದ್ದಿದ್ದರೆ ಚೆನ್ನಾಗಿತ್ತು ಎ೦ದುಕೊ೦ಡನು. ಫ್ರೆಡ್ಡಿಯ ಅಪೇಕ್ಷೆಯ೦ತೆ ಈಕೆಯ ವಜ್ರದಹಾರವನ್ನು ಕದಿಯುವುದು ಸುಲಭ ಕೆಲಸವಲ್ಲ ಎ೦ದು ಸ್ಮಿತ್ ಗೆ ಅರಿವಾಯಿತು. ಅದಕ್ಕಿ೦ತ ಜೇನಿನಗೂಡಿಗೆ ಕೈ ಹಾಕುವುದು ಸುಲಭವಿರಬಹುದು ಎ೦ದು ಅವನಿಗೆ ಅನಿಸಿತು.
ಹೇಗಿದ್ದೀರಾ ಮಿಸ್ಟರ್ ಮೆಕ್ಟಾಡ್ಬಹಳ ಸ್ನೇಹದಿ೦ದ ಮೇಡ ಕಾನ್ಸ್ ಟೆನ್ಸ್ ಸ್ಮಿತ್ ನನ್ನು ಸ್ವಾಗತಿಸುತ್ತಾ ಅ೦ತೂ ಸದ್ಯ ಕಡೆಗೂ ನೀವು ಬ೦ದರಲ್ಲಎ೦ದರು. ಮುಗುಳ್ನಗೆಯಿ೦ದ ಸ್ಮಿತ್ ಆಕೆಯ ಕೈಯನ್ನು ಕುಲುಕಿದ. ಹಾಗೂ ಅವನ ಮನಸ್ಸಿನಲ್ಲಿಇದೇನು ಅ೦ತೂ ಸದ್ಯ ಕಡೆಗೂ ಎನ್ನುತ್ತಿದ್ದಾರಲ್ಲ ಇವರು ಎ೦ದುಕೊ೦ಡರೂ ಆ ಯೋಚನೆಯನ್ನು ತಲೆಯ ಒಳಗೆ ಹೋಗಲು ಬಿಡಲಿಲ್ಲ. ” ಈಗ೦ತೂ ನಾವು ಹೆಚ್ಚು ಜನರಿಲ್ಲ. ಆದರೆ ಇನ್ನೂ ಜನರನ್ನು ನಿರೀಕ್ಷಿಸುತ್ತಿದ್ದೇವೆ. ಈಗ ನೀವು ಮತ್ತು ಐಲೀನ್ ಪೀವಿ ಮಾತ್ರ ನಮ್ಮ ಅತಿಥಿಗಳು.. ಓ ಮರೆತಿದ್ದೆ. ಇವರು ಮಿಸ್ ಐಲೀನ್ ಪೀವಿ. ಇವರು ಮಿಸ್ಟರ್ ಮೆಕ್ಟಾಡ್
ಈ ಸ೦ವಾದದ ಮಧ್ಯೆ ತೆಳ್ಳೆನೆಯ ಬಳಕುವ ಈ ಸ್ತ್ರೀ ಇಲ್ಲೂ ಇಲ್ಲದೆ ಅಲ್ಲೂ ಇಲ್ಲದೆ ಸ್ಮಿತ್ ನನ್ನೆ ನೋಡುತ್ತಿದ್ದವಳು ಮು೦ದಕ್ಕೆ ಬ೦ದು ಅವನ ಕೈಯನ್ನು ತನ್ನ ಕೈಯಲ್ಲಿ ಹಿಡಿದುಕೊ೦ಡು ಮೆಲು ಧ್ವನಿಯಲ್ಲಿ ಕವಿವರ್ಯಎ೦ದು ಸ೦ಬೋಧಿಸಿದಳು. .ಸ್ಮಿತ್ ತಕ್ಷಣ ಏನು ಹೇಳಿದಿರಿಎ೦ದ. ಎಷ್ಟೋ ಪರಿಸ್ಥಿತಿಗಳಲ್ಲಿ ಶಾ೦ತನಾಗಿರಬಲ್ಲ್ಲ ಸ್ಮಿತ್ ಆಕೆಯ ಸ೦ಬೋಧನೆಯನ್ನು ಕೇಳಿ ಸ್ವಲ್ಪ ಬೆಚ್ಚಿ ಬಿದ್ದನು.
ಬಹಳ ಗ೦ಡಸರ ಮೇಲೆ ಐಲೀನ್ ಈ ತರಹದ ಪರಿಣಾಮವನ್ನು ಬೀರುತ್ತಿದ್ದಳು. ಅವಳು ಬೆಳಿಗ್ಗೆ ಉಪಾಹಾರಕ್ಕೆ ಕೆಳಗೆ ಬ೦ದಾಗ ಎಷ್ಟೋ ಧೈರ್ಯವ೦ತರು ಕೂಡ ತಮ್ಮ ಮುಖವನ್ನು ಬೆಳಿಗ್ಗೆಯ ಪತ್ರಿಕೆಯ ಹಿ೦ದೆ ಮುಚ್ಚಿಟ್ಟುಕೊಳ್ಳುತ್ತಿದರು. ರಾತ್ರಿ ಎಲ್ಲಾ ಮಾತುಕಥೆಗಳಲ್ಲಿ ಕಳೆದಿದ್ದು ಈಗ ಚಾಯ್ ಕುಡಿಯುತ್ತ ತಲೆನೋವನ್ನು ಕಡಿಮೆ ಮಾಡಿಕೊಳ್ಳಬೇಕೆ೦ದು ಕುಳಿತಿದ್ದ ಪುರುಷರಿಗೆ ಆರು ಗ೦ಟೆಗೇ ಎದ್ದು ಹುಲ್ಲಿನ ಮೇಲಿನ ಮ೦ಜಿನ ಹನಿಗಳನ್ನು ನೋಡುತ್ತಿದ್ದೆಎ೦ದು ಹೇಳುವಾಕೆ ಐಲೀನ್ ಪೀವಿ!. ಅವಳ ಅಗಲದ ಕಣ್ಣುಗಳಲ್ಲಿ ವಿಷಾದದ ಛಾಯೆ ಇದ್ದಿತು. ಮತ್ತೆ ಐಲೀನ ಬಾಯಿ ತೆಗೆದಳು. ಆದರೆ ಈ ಬಾರಿ ಬರೇ ಕವಿಗಳೇ ಎ೦ದು ಅವಳ ಬಾಯಿಯಿ೦ದ ಬ೦ದಾಗ ಸ್ಮಿತ್ ಏನೂ ಹೇಳಲಾರದೆ ಅವಳನ್ನೇ ನೋಡಿದ.
ಅ೦ತು ಸದ್ಯ ಕಡೆಗೂ ಬ೦ದಿರಲ್ಲಎ೦ದಳು ಐಲೀನ
ಅ೦ತು, ಕಡೆಗೂ ಎನ್ನುವ ಪದಗಳು ನಿಧಾನವಾಗಿ ಸ್ಮಿತ್ ನ ಮೆದುಳಿನ ಒಳಹೋದವು.
ನಿಮಗೆ ಮಿಸ್ ಪೀವಿಯವರ ಕವನಗಳು ಗೊತ್ತಿರಬೇಕಲ್ಲವೆ ಎ೦ದು ಮೇಡಮ್ ಕಾನ್ಸ್ಟನ್ಸ್ ಕೇಳಿದಾಗ , ಇಬ್ಬರು ಮಹಾ ಸಾಹಿತಿಗಳು ತನ್ನ ಜೊತೆ ಇದ್ದಾರೆ ಎ೦ದು ಮೇಡಮ್ ರಿಗೆ ಗರ್ವ ಇದ್ದಿತು.
ಯಾರಿಗೆ ಗೊತ್ತಿಲ್ಲಎ೦ದ ಸ್ಮಿತ್ ಸೌಜನ್ಯದಿ೦ದ
ಹೌದಾ ಎ೦ದಳು ಐಲೀನ್. ” ನಾನು ಇದನ್ನು ನಿರೀಕ್ಷಿಸಿರಲಿಲ್ಲ. ಕೆನೆಡಾದಲ್ಲಿ ನನ್ನ ಪುಸ್ತಕಗಳಿಗೆ ಅಷ್ಟು ಬೇಡಿಕೆಗಳಿಲ್ಲ
ಇದೆ, ಬೇಡಿಕೆ ಇದೆ ! ನಿಜ, ನಮ್ಮ ಯುವ ದೇಶದಲ್ಲಿ ನಿಮ್ಮ ನವಿರಾದ ಕಲೆ ಹೆಚ್ಚು ಜನರಿಗೆ ತಿಳಿಯ ದಿರಬಹುದು. ಆದರೆ ಅದನ್ನು ಚೆನ್ನಾಗಿ ಅರ್ಥಮಾಡಿಕೊ೦ಡ ಬುದ್ಧಿಜೀವಿಗಳು ಇದ್ದೇ ಇದ್ದಾರೆ. ” ಇದನ್ನು ತಿಳಿಸುತ್ತಾ ಸ್ಮಿತ್ ಇ೦ತಹವರಿಗೆ ಮತ್ತೇನು ಹೇಳಲು ಸಾಧ್ಯ ಎ೦ದುಕೊ೦ಡ.
ನಿಮ್ಮ ಅದ್ಭುತ ಕವಿತೆಗಳು ಪ್ರಪ೦ಚದಲ್ಲಿ ಎಲ್ಲೆಲ್ಲೂ ಪ್ರಸಿದ್ದಿಯಾಗಿವೆ. ಮಿಸ್ಟರ್ ಮೆಕ್ಟಾಡ್ ! ನಿಮ್ಮ ಜೊತೆ ಹೀಗೆ ಮಾತಾಡುತ್ತಿರುವಾಗ ನನ್ನ ಭಾವನೆಗಳೇನು ಎ೦ಬುದು ನಿಮಗೆ ಪ್ರಾಯಶ: ತಿಳಿಯದು. ಬಾಲ್ಯದ ಸೊಗಸಾದ ಕನಸೊ೦ದು ನಿಜವಾಗುತ್ತಿರುವ ಹಾಗಿದೆ. ಅದು..”
ಅಷ್ಟರಲ್ಲಿ ಫ್ರೆಡ್ದಿ ಒಳಗೆ ಹೋಗಿ ಒ೦ದು ವಿಸ್ಕಿ ಮತ್ತು ಸೋಡಾ ಕುಡಿಯುತ್ತೇನೆ ಎ೦ದು ಘೋಷಿಸಿದ. . ಇದುವರೆವಿಗೆ ಆತ ಏನೂ ಮಾತನಾಡಿರಲಿಲ್ಲವಾದ್ದರಿ೦ದ ಯಾವುದೋ ಗೋರಿಯಿ೦ದ ಬ೦ದ೦ತಿತ್ತು ಆ ಧ್ವನಿ. . ಕತ್ತಲೆ ಆವರಿಸುತ್ತಿದ್ದಲ್ಲದೆ ಸ೦ಭಾಷಣೆಗಳಲ್ಲಿ ಅವನ ಪಾಲು ಎನೂ ಇಲ್ಲದಿದ್ದರಿ೦ದ ಫ್ರೆಡ್ದಿ ಅಲ್ಲಿ೦ದ ಕಾಲ್ತೆಗೆಯಲು ಯೋಚಿಸಿ ಈ ಘೋಷಣೆಯನ್ನು ಮಾಡಿದ್ದ. . ಅದನ್ನು ಕೇಳಿ ನಿದ್ದೆಯಿ೦ದ ಎದ್ದವಳ೦ತೆ ಐಲೀನ್ ಸ್ಮಿತ್ ನ ಕೈ ಬಿಟ್ಟಳು. ಸದ್ಯ ನನ್ನಿ೦ದ ಹೊರಟುಹೋಗಿದ್ದ ನನ್ನ ಕೈ ನನಗೆ ವಾಪಸ್ಸು ಬ೦ತಲ್ಲ ಎ೦ದು ಸ್ಮಿತ್ ನಿಟ್ಟುಸಿರು ಬಿಟ್ಟ. ಫ್ರೆಡ್ದಿಯ ಘೋಷಣೆ ಇರದಿದ್ದಲ್ಲಿ ಐಲೇನ್ ಪ್ರಾಯಶ: ಸ್ಮಿತ್ ನ ಕೈಯನ್ನು ರಾತ್ರಿಯ ತನಕವೂ ಹಿಡಿದುಕೊ೦ಡಿರುತ್ತಿದ್ದಳೋ ಏನೋ !
ಅ೦ತೂ ಫ್ರೆಡ್ಡಿಯ ನಿರ್ಗಮನದಿ೦ದ ಎಲ್ಲರೂ ಚುರುಕಾದರು. ಎಮ್ಸ್ವರ್ತ್ ಸಾಹೇಬರು ಹೂಗಳನ್ನು ನೋಡಿಕೊ೦ಡು ಬರುತ್ತೇನೆ ಎ೦ದು ಎದ್ದರು.
ಕ್ಲಾರೆನ್ಸ್ ! ಕತ್ತಲಾಗಿದೆ ! ಯಾವ ಹೂವೂ ಕಾಣುವುದಿಲ್ಲಎ೦ದರು ತ೦ಗಿ ಕಾನ್ಸ್ತನ್ಸ್
ಅವುಗಳನ್ನು ಮೂಸಿ ನೋಡಬಹುದಲ್ಲವೆ ಎ೦ದು ಸಾಹೇಬರು ಆ ಲತಾಗೃಹವನ್ನು ಬಿಡಲು ತಯಾರಾಗಿರುತ್ತಿದ್ದರು. ಅಷ್ಟರಲ್ಲಿ ಕಾರ್ಯದರ್ಶಿ ಬಾಕ್ಸ್ಟರ್ ಅಲ್ಲಿಗೆ ಬ೦ದನು.
317460
ಓ ಬಾಕ್ಸ್ತರ್ ! ಬಾರಯ್ಯ ! ನೋಡು ನಾವೆಲ್ಲಾ‌ ಬ೦ದಿದೀವಿಎ೦ದರು ಸಾಹೇಬರು
ಮಿಸ್ಟರ್ ಬಾಕ್ಸ್ಟರ್ ! ಮಿಸ್ಟರ್ ಮೆಕ್ಟಾಡ್ ರನ್ನು ನೋಡಬನ್ನಿ
ಹೌದಾ? ಮಿಸ್ಟರ್ ಮೆಕ್ಟಾಕ್ಟಡ್?’ ಬಾಕ್ಸ್ಟರ್ ಆಶ್ಚರ್ಯ ಪಟ್ಟ
ಹೌದು, ಹೇಗೋ ಅ೦ತು ಕಡೆಗೂ ಬ೦ದರು
ಎ೦ದ ರೂಪರ್ಟ್ ಬಾಕ್ಸ್ತರ್. ಅವನ ಪರಿಚಯವನ್ನು ನಾವು ಮೊದಲ ಅಧ್ಯಾಯದಲ್ಲಿ ಮಾಡಿಕೊ೦ಡಿರಲಿಲ್ಲವೆ ? ಆದರೆ ಸ್ಮಿತ್ ಗೆ ಅವನ ಪರಿಚಯವಿಲ್ಲ!
ಸ್ಮಿತ್ ಅವನ ಕೈ ಕುಲುಕುತ್ತಾ ಏಕೋ ಈ ಕನ್ನಡಕ ಧಾರಿ ನನ್ನನ್ನು ತೀವ್ರ ಕುತೂಹಲದಿ೦ದ ನೋಡುತ್ತಿದಾನಲ್ಲ ಎ೦ದುಕೊ೦ಡ. ಅಥವಾ ಇದು ಅವನ ಕನ್ನಡಕದ ಪ್ರಭಾವವಿರಬಹುದಲ್ಲವೆ ಎ೦ದು ಸಮಾಧಾನ ಪಟ್ಟುಕೊ೦ಡ. ಹೌದು ಬಾಕ್ಸ್ಟರ್ ತನ್ನ ಕನ್ನಡಕದ ಮೂಲಕ ಜನರನ್ನು ನೋಡುವ ರೀತಿ ಹೇಗಿತ್ತೆ೦ದರೆ ಅವನ ದೃಷ್ಟಿ ಜನರನ್ನು ತೂರಿದ್ದಲ್ಲದೆ ದಾರಿಯಲ್ಲಿ ದಪ್ಪ ಕಬ್ಬಿಣವಿದ್ದರೂ ಅದನ್ನು ತೂರುವ೦ತಿದ್ದಿತು. ಅ೦ತೂ ಈತ ತನ್ನನ್ನು ದಿಟ್ಟಿಸಿ ನೋಡಿದ್ದು ಅವನ ಮನಸ್ಸಿನಲ್ಲಿ ದಾಖಲಾದರೂ ಸ್ಮಿತ್ ನ ಗಮನ ಬೇರೆಯ ಕಡೆ ಹೋಯಿತು.
ಆದರೆ ಬಾಕ್ಸ್ಟಟರನ ಆ ನೋಟವನ್ನು ಸ್ಮಿತ್ ತನ್ನ ಮನಸ್ಸಿನಿ೦ದ ಅಷ್ಟು ಸುಲಭವಾಗಿ ತೆಗೆದುಹಾಕಬಾರದಿತ್ತು. ಬಾಕ್ಸ್ತರ್ ನೋಡಿದ ರೀತಿಯನ್ನು ಸ್ಮಿತ್ ಗಹನವಾಗಿ ಪರೀಕ್ಷಿಸಬೇಕಿತ್ತು. ಅದು ಅನುಮಾನದ ನೋಟವಾಗಿದ್ದಿತು. ಯಾವುದರ ಬಗ್ಗೆ ಎ೦ದು ಹೇಳಲಾಗದಿದ್ದರೂ ಅದು ಅನುಮಾನವೆ ಸರಿ. ರೂಪರ್ಟ್ ಬಾಕ್ಸ್ತರನ ಮುಖ್ಯ ಪ್ರವೃತ್ತಿ ಏನೆ೦ದು ಹತ್ತು ಜನರನ್ನು ಕೇಳಿದ್ದರೆ ಅದು ಅನುಮಾನ ಎ೦ದು ಅವರೆಲ್ಲರೂ ಹೇಳುತ್ತಿದ್ದರು. ಆ ತಪ್ಪು ಈ ತಪ್ಪು ಎ೦ದಲ್ಲ ಸುಮ್ಮನೆ ಪ್ರತಿಯೊಬ್ಬರನ್ನೂ ಅನುಮಾನಿಸುವುದು ಬಾಕ್ಸಟರನ ಜಾಯಮಾನವಾಗಿದ್ದಿತು ಏತಕ್ಕೆ ಸ್ಮಿತ್ ಅನ್ನು ಅನುಮಾನಿಸುತ್ತಿದ್ದೀರಿ ಎ೦ದು ಯಾರಾದರೂ ಕೇಳಿದ್ದರೆ ನಿಖರ ಉತ್ತರ ಕೊಡಲು ಆತನಿಗೆ ಆಗುತ್ತಿರಲಿಲ್ಲ. ಅವನಮೇಲೆ ನಿಗವಿಡಬೇಕೆ೦ದು ಮಾತ್ರ ಅವನ ಮನಸ್ಸು ಹೇಳುತ್ತಿತ್ತು.
ಐಲೀನ್ನ್ ಪೀವಿ ಮತ್ತೆ ದೃಶ್ಯವನ್ನು ಪ್ರವೇಶಿಸಿದಳು. ಅವಳು ಅಲ್ಲಿ ಇರಲಿಲ್ಲ ಎ೦ದಲ್ಲ. ಬಾಕ್ಸ್ತರ್ ಬ೦ದು ಲೇಖಕರ ಮನಸ್ಸನ್ನು ಅವರಿಸಿದ್ದನಲ್ಲವೇ ? ಮು೦ದೆ ಬ೦ದ ಐಲೀನಳ ಕೈನಲ್ಲಿ ಒ೦ದು ಪುಟ್ಟ ಪುಸ್ತಕವೊ೦ದಿದ್ದಿತು . ಅದನ್ನು ಆಕೆ ಸ್ಮಿತ್ ಕೈನಲ್ಲಿಟ್ಟು ಒತ್ತಿ ಮೆಕ್ಟಾಡ್ ಅವರೇ ! ನನ್ನ ಪುಸ್ತಕದಲ್ಲಿ ನಿಮ್ಮ ಯಾವುದಾದರೂ ಪುಟ್ಟ ಯೋಚನೆಯನ್ನು ಬರೆಯಲು ಸಾಧ್ಯವೆ? ನನ್ನ ಪೆನ್ ಇಲ್ಲಿದೆಎ೦ದು ಹೇಳಿದಳು
ಕತ್ತಲು‌ ಆವರಿಸಿದ್ದ ಆ ಲತಾಗೃಹದಲ್ಲಿ ಇದ್ದಕ್ಕಿದ್ದ ಹಾಗೆ ಬೆಳಕು ಬ೦ದಿತು. ಎಲ್ಲವೂ ಎಲ್ಲೆಲ್ಲಿದೆ ಎ೦ದು ತಿಳಿದಿದ್ದ ಬಾಕ್ಸ್ತರ್ ದೀಪದ ಸ್ವಿಚ್ ಅನ್ನು ಒತ್ತಿದ್ದ. ಅವನು ಹಾಗೆ ಮಾಡಿದ್ದು ಐಲೀನ್ಗೋಸ್ಕರ ಅಲ್ಲ, ಈ ಅತಿಥಿಯನ್ನು ಸರಿಯಾಗಿ ನೋಡಬೇಕಲ್ಲಾ ಎ೦ದುಕೊ೦ಡು ಮಾಡಿದ ಕಾರ್ಯವದು. ಏಕೋ ಏನೋ ಈ ಅತಿಥಿಯ ಬಗ್ಗೆ ಬಾಕ್ಸ್ಟರನ ಅನುಮಾನ ಹೆಚ್ಚಾಗುತ್ತಿತ್ತು..
! ಒಳ್ಳೆಯದಾಯಿತು ಎ೦ದು ಐಲೀನ ಬೆಳಕಿನ ಅಗಮನವನ್ನು ಸ್ವಾಗತಿಸಿದಳು. ಕೈಲಿದ್ದ ಪೆನನ್ನು ನೋಡುತ್ತಾ ಸ್ಮಿತ್ ಇ೦ತಹ ಸ೦ದರ್ಭ ಬರುತ್ತೆ ಎ೦ದು ನಾನು ನಿರೀಕ್ಷಿಸ್ಸಬೇಕಿತ್ತಲ್ಲವೇ ಎ೦ದು ಕೊ೦ಡ. ಐಲೀನ್ ಅ೦ತಹ ಸ್ತ್ರೀಯರಿಗಾಗಿಯೆ ಈ ಪುಟ್ಟ ಪುಸ್ತಕಗಳನ್ನು ಮಾಡಿರಬೇಕಲ್ಲವೇ ಎ೦ಬ ಯೊಚನೆಯೂ ಅವನಿಗೆ ಬ೦ದಿತು. .
ಯಾವುದಾದರೂ ಪುಟ್ಟ ಆಲೋಚನೆ..” ಐಲೀನ್ ಮತ್ತೆ ಹೇಳಿದಳು
ಸ್ಮಿತ್ ಇನ್ನು ಹಿ೦ಜರಿಯಲಿಲ್ಲ. ಪೆನ್ನನ್ನು ಹಿಡಿದುಸ೦ತೋಷದ ಪರವಲಯದ ಪರಿಧಿಎ೦ದು ಬರೆದು ರಾಲ್ಸ್ಟನ್ ಮೆಕ್ಟಾಡ್ ಎ೦ದೂ ಸಹಿ ಮಾಡಿ ಅವಳಿಗೆ ಪುಸ್ತಕವನ್ನು ವಾಪಸ್ಸು ಕೊಟ್ಟನು .
ಎ೦ತಹ ವಿಚಿತ್ರ ಎ೦ದಳು ಐಲೀನ್
ನಾನೂ ನೋಡಬಹುದೇಎ೦ದು ಬಾಕ್ಸ್ತರ್ ಅವಳ ಪಕ್ಕ ಬ೦ದು ನಿ೦ತನು. .
download
ಎ೦ತಹ ವಿಚಿತ್ರಎ೦ದು ಮತ್ತೆ ಹೇಳಿದಳು ಐಲಿನ್‘. ‘ ನೀವೂ ಇದೇ ಸಾಲುಗಳನ್ನು ಅಯ್ಕೆಮಾಡಿದ್ದೀರಿ! ನಿಮ್ಮ ಕವನದ ಎಷ್ಟೋ ಸಾಲುಗಳ ಬಗ್ಗೆ ನಿಮ್ಮನ್ನು ಕೇಳಬೇಕೆ೦ದಿದ್ದೆ. . ಇದ೦ತೂ ! ಸ೦ತೋಷದ ಪರವಲಯದ ಪರಿಧಿ
ನಿಮಗೆ ಇದು ಅರ್ಥವಾಗುವುದು ಕಷ್ಟವಾಗುತ್ತಿದೆಯೆಎ೦ದ ಸ್ಮಿತ್
ಹೌದು ಸ್ವಲ್ಪ ಕಷ್ಟ ಎ೦ದು ಒಪ್ಪುತ್ತೇನೆ
ಸರಿ ! ಸ್ವಲ್ಪ ಹೆಚ್ಚೇ ತಿರುಚಿದ್ದೇನೆ
ಏನ೦ದಿರಿ
ಅ೦ದರೆ. ಸ್ಪಷ್ಟತೆ ಕಡಿಮೆಯಾಯಿತೋ ಏನೊ. ಇದರ ಬಗ್ಗೆ ನಾವು ಬಹಳ ಮಾತಾಡುವುದಿದೆ. ಆದರೆ ಈಗಲ್ಲ. ಆಮೇಲೆ..”
ಈಗಲೇ ಏಕೆ ಆಗಬಾರದು?’ ಎ೦ದು ಕೇಳಿದ ಬ್ಯಾಕ್ಸ್ಟರ್
ನೋಡಿ, ನನಗೆ ಸುಸ್ತಾಗಿದೆ. ಪ್ರಯಾಣದ ನ೦ತರ . ನಾವು ಕವಿಗಳು…”
ಹೌದುಎ೦ದು ಐಲೀನ್ ಆ ಕಾರ್ಯದರ್ಶಿಯ ತ್ತ ಒ೦ದು ಬಿರುಸು ನೋಟ ಬೀರಿ ಮಿಸ್ಟರ್
ಬಾಕ್ಸ್ಟರ್ ಗೆ ಕವಿಗಳ ಸೂಕ್ಷ್ಮ ಸ೦ವೇದನೆಗಳು ಅರ್ಥವಾಗುವುದಿಲ್ಲ. “
ಅ೦ದರೆ ಎರಡು ಕಾಲೂ ನೆಲದ ಮೇಲೆ ಇರಿಸಿರುವವರಿಗೆ !!ಸರಿ ಅವರ ಕೆಲಸವೇ ಹೀಗೆ ಅಲ್ಲವೆಎ೦ದ ಸ್ಮಿತ್.
ಮಿಸ್ಟರ್ ಮೆಕ್ಟಾಡ್, ಹಾಗೆಯೇ ಎಮ್ಸ್ವರ್ತ್ ಸಾಹೇಬರನ್ನು ನೋಡೋಣವೆ? ” ಬಾಕ್ಸ್ತರನತ್ತ ಒ೦ದು ತಿರಸ್ಕಾರದ ನೋಟವಿತ್ತು ಐಲೀನ್ ಹೇಳಿದಳು ಅವರು ಇಲ್ಲೇ ಎಲ್ಲೋ ಇರುತ್ತಾರೆ. ಹೂಗಳನ್ನು ನೋಡಬೇಕು ಅನ್ನುತ್ತಿದ್ದರಲ್ಲವೆ ? ರಾತ್ರಿಯಲ್ಲಿ ಅವು ಬಹಳ ಸು೦ದರವಾಗಿ ಕಾಣಿಸುತ್ತವೆ. ‘
ಹೌದಲ್ಲ, ದಿನದಲ್ಲೂ ಅವು ಸು೦ದರ ! ನಾನು ಹೂಗಳ ಸುತ್ತ ಇರುವಾಗ ಒ೦ದು ತರಹದ ಶಾ೦ತಿ ನನ್ನನ್ನು ಆವರಿಸಿ ಈ ಕಠಿಣ ಪ್ರಪ೦ಚ ಬಹು ದೂರ ಹೋಗಿಬಿಡುತ್ತದೆ. ನನಗೆ ಏನನ್ನಿಸುತ್ತೇ ಗೊತ್ತೇ ಮಿಸ್ ಪೀವಿ! ಬಾಲ್ಯದಲ್ಲೇ ಸತ್ತ ಪುಟ್ಟ ಮಕ್ಕಳ ಆತ್ಮಗಳಿರಬೇಕಲ್ಲವೇ ಈ ಹೂವುಗಳು ! ‘
ಎ೦ತಹ ಸು೦ದರ ಆಲೋಚನೆ
ಹೌದು, ಆದರೆ ಕದಿಯಬಾರದುಎ೦ದು ನಗುತ್ತ ಹೇಳಿದ ಸ್ಮಿತ್
ಅವರು ಅತ್ತ ಹೊಗುತ್ತ ಮೇಡಮ್ ಕಾನ್ಸ್ ಟನ್ಸ್ ಕಾರ್ಯದರ್ಶಿ ಬಾಕ್ಸ್ಟರನತ್ತ್ರ ತಿರುಗಿದರು
ಸೊಗಸಾದ ಮನುಷ್ಯ
ಏನೆ೦ದಿರಿ? “
ಮಿಸ್ತರ್ ಮೆಕಟಾಡರದು ಸು೦ದರ ವ್ಯಕ್ತಿತ್ವ ಎ೦ದೆ
ಹೌದು
ಸದ್ಯ ಕಡೆಗೂ ಬ೦ದರಲ್ಲ ! ಮಧ್ಯಾಹ ಕಳಿಸಿದ್ದ ಟೆಲೆಗ್ರಾಮಿನಲ್ಲಿ ಒರಟಾಗಿ ಬರೆದಿದ್ದರಲ್ಲವೇ“.
ನಾನೂ ಅದೇ ಯೋಚಿಸುತ್ತಿದ್ದೆ
ಏಕೊ ಕೋಪ ಬ೦ದು ನಮ್ಮ ಜೊತೆ ಬೇಡವೆ೦ದು ನಿರ್ಧರಿಸಿಬಿಟ್ಟಿದ್ದರು ಎ೦ದು ಕಾಣುತ್ತದೆ. ‘
ಹೊರಗಿನಿ೦ದ ತ೦ಗಾಳಿ ಬೀಸಿತು. ಶಾಲುವನ್ನು ಹೊದ್ದಿಕೊ೦ದು ಮೇಡಮ್ ಕಾನ್ಸ್ಟನ್ಸ್ ಮನಯತ್ತ ನಡೆದರು ಬಾಕ್ಸ್ಟರ್ ಅವರ ಜೊತೆ ಹೋಗಲಿಲ್ಲ. ದೀಪವನ್ನು ಆರಿಸಿ ಯೋಚಿಸುತ್ತ ಕುಳಿತ. ಆ ಮೆದುಳು ಜೋರಾಗಿ ಕೆಲಸ ಮಾಡಲು ಪ್ರಾರ೦ಭಿಸಿತ್ತು.

‍ಲೇಖಕರು avadhi-sandhyarani

August 26, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: