ಬಾ ಕಿ ನ ಅವರ ಕನಸಿನ ಕೂಸು ಗಾಂಧಿ ಬಜಾರ್ ಆರ್ಥಿಕ ಹೊಡೆತ ತಡೆಯಲಾಗದೆ ನಿಲ್ಲುವ ಯೋಚನೆ ಮಾಡಿತ್ತು. ಆದರೆ ಅವಧಿ ಕೈಗೊಂಡ ಸತತ ಅಭಿಯಾನದಿಂದಾಗಿ ಅನೇಕ ಸಾಹಿತ್ಯಾಸಕ್ತರು ಬಾ ಕಿ ನ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಹಾಗಾಗಿ ಬಾ ಕಿ ನ ಕಾಣದ ಕೈಗಳ ಸಹಾಯ ಹಸ್ತವನ್ನು ನೆನೆಯುತ್ತಾ ಪತ್ರಿಕೆ ಮುಂದುವರೆಸುವ ಇಚ್ಛೆ ತೋರಿಸಿದ್ದಾರೆ. ಜನವರಿ ಸಂಚಿಕೆ ಈಗ ಎಲ್ಲರನ್ನೂ ಮುಟ್ಟಿದೆ ಎಂದು ವಿಮರ್ಶಕ ನರೇಂದ್ರ ಪೈ ತಿಳಿಸಿದ್ದಾರೆ
ಇಲ್ಲಿ ಚಂದಾ ವಿವರವನ್ನೂ ನೀಡಲಾಗಿದೆ. ಚಂದಾದಾರರಾಗಿ




ಮತ್ತೆ ಬಂತು 'ಗಾಂಧಿ ಬಜಾರ್'
ನಿಮಗೆ ಇವೂ ಇಷ್ಟವಾಗಬಹುದು…




ಬಾಕಿನ ಲಾಸ್ಟಿಯರ್ ಎಷ್ಟೊ ಚೆಕ್ ಕಳಿಸಿದ್ದೆ ಕಣ್ರಿ, ನೆನಪಿಲ್ಲ, ಇನ್ನೆರಡು ಮೂರು ದಿವಸಗಳಲ್ಲಿ ಪುನಃ ಐದುನೂರು ರುಪಾಯಿ ಚೆಕ್ ಕಳಿಸುತ್ತಿರುವೆ, ನನ್ನಂತೆ ಎಲ್ರು ಕಳಿಸ್ತಾರೆ ಎನ್ನೋ ವಿಶ್ವಾಸವಿದೆ, ಇಷ್ಟೆಲ್ಲಾ ಗಾಂಧಿಬಜಾರ್ ಅಭಿಮಾನಿಗಳಿದ್ದಾಗ್ಯು ನಿಮ್ಮಂಥ ಛಲದಂಕ ಮಲ್ಲ ಪತ್ರಿಕೆ ನಿಲ್ಲಿಸುವುದಾಗಿ ಹೇಳುವುದ್ಯಾಕೆ? ಪತ್ರಿಕೇನ ಎಷ್ಟು ಸಾಧ್ಯವೊ ಅಷ್ಟು ರೆಗ್ಯುಲರ್ರಾಗಿ ತಗೊಂಡು ಬನ್ನಿ, ಅಲ್ಲಿಗಂಟ ನಾವೆಲ್ರು ನಿಮ್ಮ ಸಂಗಾಟ ಇದ್ದೇ ಇರ್ತೀವಿ ಬಾಕಿನ, ಗಾಂಧಿಬಜಾರ್ ಕನ್ನಡ ಸಾಹಿತ್ಯದ ಅಭಿಮಾನದ ಪ್ರಶ್ನೆ, ಅದಕ್ಕೆ ಅದನ್ನು ನಿಲ್ಲಿಸುವುದಾಗಿ ಬಹಿರಂಗವಾಗಿ ಹೇಳಬೇಡಿ ಅದರ ವಾಚಕರಾದ ನಮ್ಮ ಮನಸ್ಸಿಗೆ ನೊವ್ವಾಗುತ್ತೆ, ಪತ್ರಿಕೆ ಒಂದು ಸೃಜನಶೀಲ ಕ್ರೀಡೆ, ನಾವೆಲ್ರು ಎಂಜಾಯ್ ಮಾಡೋಣ.
ಕುಂವೀ
ಗಾಂಧಿಬಜಾರ್ ನ ಮೊದಲ ಸಂಚಿಕೆಯಿಂದಲೂ ನನ್ನ ಒಡನಾಟವಿದೆ. 30ನೇ ವರ್ಷಕ್ಕೆ ಬಂದಿರುವುದಕ್ಕೆ ಬಾ.ಕಿ.ನ.ರಿಗೆ ಅಭಿನಂದನೆಗಳು. ನೂರ್ಕಾಲವಿರಲಿ .ನಾ.ಗೀತಾಚಾರ್ಯ.ನೇತ್ರದಾನಿ ಲಕ್ಷ್ಮೀದೇವಿ ನಾರಾಯಣಶರ್ಮ ಗ್ರಾಮಗ್ರಂಥಾಲಯ ದೊಡ್ಡಹೆಜ್ಜಾಜಿ ಬೆಂಗಳೂರು.ಗ್ರಾಮಾಂತರ ಜಿಲ್ಲೆ.- ಈ ವಿಳಾಸಕ್ಕೆ ಪತ್ರಿಕೆ ಕಳಿಸಿ ಚಂದಾ ಕಳಿಸುವೆ.