ಇತ್ತೀಚೆಗಷ್ಟೆ ‘ಟಿಪ್ಪು ಸುಲ್ತಾನ್ ನ ಹಕೀಕತ್’ ಎಂಬ ಸಂಶೋಧನಾ ಪುಸ್ತಕ ಪ್ರಕಟಿಸಿದ್ದ ಪರಸ್ಪರ ಪ್ರಕಾಶನ, ಇದೀಗ ಮತ್ತೆ ಮೂರು ಪುಸ್ತಕಗಳನ್ನು ಹೊರ ತರಲು ಅಣಿಯಾಗಿದೆ. ಹೊಸ ವರ್ಷಾರಂಭದಲ್ಲಿ ಈ ಪುಸ್ತಕಗಳು ಅರ್ಪಣೆಯಾಗಲಿವೆ.
ಅಮರಿಕನ್ ಮನೆ: ಖ್ಯಾತ ಕಥೆಗಾರ, ಚಿಂತಕ ಕೆ.ಸತ್ಯನಾರಾಯಣ ಅವರ ಕಥಾ ಸಂಕಲನವಿದು.
ಹೊನ್ನಪರ್ವತ: ಕನ್ನಡ ಚಲನಚಿತ್ರರಂಗದ ಕಪ್ಪು ಬಿಳುಪಿನ ಕಾಲದಲ್ಲಿ ನಟ, ಗಾಯಕರಾಗಿ ಬೆಳಗಿದ ಮಹಾನ್ ಕಲಾವಿದ ಹೊನ್ನಪ್ಪ ಭಾಗವತರ್ ಅವರ ಬದುಕನ್ನು ಕಲಾರಸಿಕರ ಮುಂದೆ ತೆರೆದಿಡುವ ಪುಸ್ತಕ.
ಬೆಂಕಿ ಬಿದ್ದ ಬಯಲು ಮತ್ತು ಪೆದ್ರೊ ಪರಾಮೊ: ಜಗತ್ತಿನ ಪ್ರಖ್ಯಾತ ಕಾದಂಬರಿಕಾರರಲ್ಲಿ ಒಬ್ಬರಾದ ಸ್ಪಾನಿಷ್ ಲೇಖಕ ಹ್ವಾನ್ ರುಲ್ಫೋ ಅವರ ಅತ್ಯಂತ ಜನಪ್ರಿಯ ಕಾದಂಬರಿ. ಹ್ವಾನ್ ರುಲ್ಫೋ ಮಹಾ ಕಾದಂಬರಿಕಾರ ಮಾರ್ಕ್ವೆಜ್ ಗೂ ಗುರುವಾಗಿದ್ದವನು. ರುಲ್ಫೊನ ಒಂದು ಕಥಾ ಸಂಕಲನ ಮತ್ತು ವಿಶ್ಚವಿಖ್ಯಾತ ‘ಪೆದ್ರೊ ಪರಾಮೊ’ ಕಾದಂಬರಿಯನ್ನು ಸೇರಿಸಿ ಹೊಸ ಕೃತಿ ನಮಗೆ ಕೊಟ್ಟವರು ಓ.ಎಲ್ ನಾಗಭೂಷಣ ಸ್ವಾಮಿ.
ಇನ್ನೇನು ಬಿಡುಗಡೆಯಾಗಲಿರುವ ಆ ಮೂರು ಪುಸ್ತಕಗಳ ಮುಖಪುಟಗಳು ನಿಮ್ಮ ಮುಂದಿವೆ.







0 Comments