
ಕುಂವೀ
ಪ್ರೀತಿಯ ಲೇಖಕರಾದ ತಿರುಮಲೇಶ್
ನನ್ನ ಅಹಂಕಾರಯುತ ಮಾತುಗಳಿಂದಾಗಿ ನೀವು ಇಷ್ಟು ಬೆಲೆಬಾಳುವ ಮಾತುಗಳನ್ನು ಹೇಳುವುದು ಸಾಧ್ಯವಾಯಿತು. ಧನ್ಯವಾದಗಳು
ಕೆ.ವಿ. ತಿರುಮಲೇಶ್
ನಿಮಗೆ ಗೊತ್ಫಿರುವಂತೆ ಕನ್ನಡದ ಲೇಖಕರಲ್ಲಿ ಹೆಚ್ಚಿನವರೂ ನಿಮ್ಮ ಆಶಯಕ್ಕೆ ಸಮ್ಮತರು. ಹಾಗೂ ನಮ್ಮ ಜನರ ಹೆಚ್ಚಿನ ಬರವಣಿಗೆಯೂ ನಾವೆಲ್ಲರೂ ಬಯಸುವ ಮೌಲ್ಯಗಳನ್ನು ಪ್ರತಿಪಾದಿಸುವಂಥದು. ಇದರಲ್ಲಿ ಎರಡು ಮಾತಿಲ್ಲ. ಅವರೆ ದನಿ ಅವರ ಬರವಣಿಗೆಯೇ–ಅವರಿಗೆ ಇನ್ನೊಂದು ದನಿಯಿಲ್ಲ. ಮರಳಿಸಲು ಪ್ರಶಸ್ತಿಗಳೂ ಇಲ್ಲ! ಅಷ್ಟಕ್ಕೆ ಅವರು ನಿಷ್ಪ್ರಯೋಜಕರು ಎಂದಲ್ಲ. ಇಷ್ಟು ಹೇಳಬೇಕೆನಿಸಿತು–ನಿಮ್ಮ ಜತೆ ಮಾತಾಡುವ ನೆಪದಲ್ಲಿ. ನೀವು ನನ್ನ ಮಾತುಗಳನ್ನು ಸರಿಯಾಗಿ ತೆಗೆದುಕೊಂಡುದರಿಂದ ನನಗೆ ಗೊತ್ತಿರುವ ಕುಂವೀ ಮತ್ತೆ ದೊರಕಿದಂತಾಗಿದೆ!
ಸಿ. ಎನ್. ರಾಮಚಂದ್ರನ್
ಪ್ರಿಯ ಕುಂವೀ ಅವರಿಗೆ: ನಿಮ್ಮ ಪತ್ರ ಹೃದಯಸ್ಪರ್ಶಿಯಾಗಿದೆ. ಒಂದು ಸಂದರ್ಭದಲ್ಲಿ ಅಪ್ರಜ್ಞಾಪೂರ್ವಕವಾಗಿ ಆದ ತಪ್ಪನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುವುದಕ್ಕೆ ಅಗಾಧ ನೈತಿಕ ಸ್ಥೈರ್ಯ ಬೇಕು; ಅದು ನಿಮ್ಮಲ್ಲಿದೆ ಎಂದು ತೋರಿಸಿದ್ದೀರಿ; ಈಗ ನಿಮ್ಮ ಬಗ್ಗೆ ನನಗಿದ್ದ ಅಭಿಮಾನ ಇಮ್ಮಡಿಯಾಯಿತು.
ಹಾಗೆಯೇ ನನ್ನನ್ನು ಉಲ್ಲೇಖಿಸಿರುವುದರಿಂದ ಈ ಮಾತು: ನಾನು ಯಾವಾಗಲಾದರೂ ಮಾತಿನಲ್ಲಿ ಅಥವಾ ಅಕ್ಷರೂಪದಲ್ಲಿ ಎಡವಿದಾಗ ನಿರ್ದಾಕ್ಷಿಣ್ಯವಾಗಿ ಎಚ್ಚರಿಸುವುದು ನಿಮ್ಮ ಜವಾಬ್ದಾರಿ.
ವಂದನೆಗಳೊಂದಿಗೆ,
S.N. Sridhar
I admire Kum Veeś sincerity and honesty. Such slips of the tongue can happen to any speaker. We must accept his explanation and apology at face value and move on.
ಅಶೋಕ ಶೆಟ್ಟರ್
ಹೋಗಲಿ ಬಿಡಿ, ಇದು ತೂಕ ಮಾಡಿ ಮಾತನಾಡಬೇಕಾದ ಕಾಲ. “ನಿರುಪದ್ರವಿ ಲೇಖಕರು ಬೇಲಿಯ ಮೇಲಿನ ನೀಲಿ ಹೂಗಳಂತೆ, ಅತ್ತಲೂ ಇಲ್ಲ, ಇತ್ತಲೂ ಇಲ್ಲ, ಪ್ರಸಂಗ ಬಂದರೆ ಅಲ್ಲೂ ಸೈ, ಇಲ್ಲೂ ಸೈ..”ಥರ ಏನಾದರೂ ಹೇಳುವದು ಬಿಟ್ಟು ಇನ್ನೇನೋ ಹೇಳಿದಿರಿ.
“To err is human; to forgive, divine..” ಎಂಬುದನ್ನು ಬಲ್ಲವರು ನಿಮ್ಮ ವ್ಯಥೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ.
s.b.jogur
Prastuta sandarbhadalli mounakkintaloo uttama uttara innondiralaaradu. Kum vee yavarlli aatmasaakshi iruva bagge gouravavide.adu sattiddaroo iruvante badukuvavara bagge marukavide.
ಗೋನವಾರ್ ಕಿಶನ್ ರಾವ್
ತಿರುಮಲೇಶ ಸರ್ ಹೇಳಿದ ಮಾತುಗಳಿಗೆ ನನ್ನ ಪೂರ್ಣ ಸಮ್ಮತಿ ಇದೆ.ಅವರೇ ದನಿ-ಅವರ ಬರವಣಿಗೆ ಎನ್ನುವ ಸಾಲು ನಾನು ಹೇಳಬೇಕಾದ ಎಲ್ಲವನ್ನೂ ಹೇಳಿಬಿಟ್ಟಿತು.ಕುಂವೀ.ಸರ್ ನಾನು ಯಾವಾಗಲೂ ಗೌರವಿಸುವ ಲೇಖಕ ಸ್ನೇಹಿತರು ನೀವು,ನಮ್ಮಸ್ನೇಹ ಇನ್ನೂ ಗಟ್ಟಿ ಆಯಿತು.
umesh desai
To ERR IS HUMAN FORGIVING IS DIVINE..ok agreed unfortunately politicians over the years have always maintained Twist of Tongue Unfortunately The Bane is spreading to Literary Circle Too..by claiming writers who dont protest about system And comparing them..is offense. Now KUMVEE sir publicly appologised and so was the Legislative council’s opposition Leader..confused whether to accept his appology first or this…





ಕುಂವೀ ಆಡಿದ ಮಾತಿನ ಉದ್ದೇಶವನ್ನು ಅರ್ಥ ಮಾಡಿ ಕೊಳ್ಳದೆ ಅವರ ಬಾಯಿಂದ ಜಾರಿ ಬಿದ್ದ “ದೇವ ದಾಸಿ” ಪದವನ್ನು ಮುಂದಿಟ್ಟು ಕೊಂಡು ಕುಂವೀ ಅವರಿಗೆ ಉಪದೇಶ ನೀಡುತ್ತಿರುವ ಅಡ್ಡ ಗೋಡೆ ಯ ದೀಪಗಳಾಗಿರುವ ಹಿರಿಯ ಸಾಹಿತಿಗಳ ಬಗ್ಗೆ ಕನಿಕರ ಇದೆ. ನಿರ್ಣಾಯಕ ಹೊತ್ತಿನಲ್ಲಿ ತಮ್ಮ ಪ್ರಶಸ್ತಿಯನ್ನು ಮರಳಿಸಿ ತನ್ನ ನಿಲುವನ್ನು ಸ್ಪಷ್ಟ ಪಡಿಸಿದ ಕುಂವೀ ಬಗ್ಗೆ ನನಗೆ ಯಾವತ್ತೂ ಹೆಮ್ಮೆ ಇದೆ.
ಬಿ. ಎಂ. ಬಶೀರ್
ಪ್ರಿಯ ಬಶೀರ್
ನೀವು ಯಾರನ್ನು ಅಡ್ಡಗೋಡೆಯ ಸಾಹಿತಿಗಳೆಂದು ಹೇಳುತ್ತೀರೋ ಅರ್ಥವಾಗುವುದಿಲ್ಲ! ಮಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನವಾಗಿದ್ದಾಗ ಅಖಿಲಭಾರತೀ ಕವಿಗೋಷ್ಠಿಗೆ ನನ್ನನ್ನು ಕರೆದಿದ್ದರು. ಆದರೆ ಅದನ್ನು ಜೆ.ಎಚ್. ಪಟೇಲ್ ಉದ್ಘಾಟಿಸುತ್ತಾರಂದು ತಿಳಿದು ನಾನು ಬರುವುದಿಲ್ಲವೆಂದು ಪ್ರತಿಭಟಿಸಿದೆ: ಪಟೇಲರ ಸರ್ಕಾರ ಅಗತಾನೇ `ಧರ್ಮಕಾರಣ’ವನ್ನು ನಿಷೇಧಿಸಿತ್ತು. ಅಲ್ಲದೆ ಪಟೇಲರು ಸ್ತ್ಫ್ರೀಯರ ಕುರಿತಾಗಿ ಲಘುವಾಗಿ ಮಾತಾಡಿದ್ದರು. ಈ ಕಾರಣಗಳನ್ನೂ ಸಾರ್ವಜನಿಕವಾಗಿ ನೀಡೆದ್ದೆ. ಆಗ ಯಾರೂ ನನ್ನ ಜತೆ ನಿಲ್ಲಲಿಲ್ಲ. ಬದಲು ಪತ್ರಿಕೆಗಳಲ್ಲಿ ನನ್ನನ್ನೇ ಗೇಲಿ ಮಾಡಿದರು. ಇಂಥ ಹಲವು ಕಹಿ ಅನುಭವಗಳು ನನ್ನಲ್ಲಿವೆ. ಪ್ರತಿಭಟನೆಗೆ ತಕ್ಕ ಘನತೆ ನನಗಿಲ್ಲ. ಹಲವು ಕಾಲದಿಂದ ಸಭೆ ಸಮಾರಂಭಗಳನ್ನೂ ತೊರೆದಿದ್ದೇನೆ.
ಅಲ್ಲದೆ ನಾನೊಬ್ಬ `ಸಾಹಿತಿ’ಯೂ ಅಲ್ಲ! ಇಡೀ ವೃತ್ತಿ ಜೀವನವನ್ನು ಅಧ್ಯಾಪಕನಾಗಿ ಕಳೆದುದು. ನನ್ನ ಬರಹಗಳು ಎರಡೂ ಕಡೆಗೆ (ಎಲ್ಲಾ ಕಡೆಗೆ)ಬೆಳಕು ಚೆಲ್ಲಿದರೆ ಸಂತೋಷವೇ! ಹಾಂ, ಬಶೀರರೇ! ಕುಂವೀಯವರ ಕೃತಿಗಳ ಕುರಿತಾಗಿ ಕೂಡ ನಾನು ಉತ್ಸಾಹದಿಂದ ಬರೆದದ್ದಿದೆ–ಅದು ನಿಮಗೆ ಗೊತ್ತಿರಲಾರದು!
ಕೆ.ವಿ. ತಿರುಮಲೇಶ್