ಬ್ಯಾ೦ಕಿಗೆ ವಿದಾಯ ಹೇಳಿದ ಮಾತಿನ ಮಲ್ಲ ಸ್ಮಿತ್
(ವುಡ್ ಹೌಸ್ -೫)
ಪಾಲಹಳ್ಳಿ ವಿಶ್ವನಾಥ್
( ತಮ್ಮ ‘ ಲೀವ್ ಇಟ್ ಟು ಸ್ಮಿತ್ ‘ ‘ ಪುಸ್ತಕದಲ್ಲಿ ವುಡ್ ಹೌಸ್ ಅವರ ಮೆಚ್ಚಿನ ಎರಡು ಪಾತ್ರಗಳನ್ನು ಒಟ್ಟಿಗೆ ತ೦ದಿದ್ದಾರೆ.: ಸ್ಮಿತ್ ಮತ್ತು ಎಮ್ಸ್ವರ್ತ್ ಸಾಹೇಬರು . ಅವರಿಬ್ಬರ ಪರಿಚಯವೂ ನಿಮಗೆ ಆಗಲೆ ಆಗಿದೆ. ಇಷ್ಟವಿಲ್ಲದಿದ್ದರೂ ಎಮ್ಸ್ವರ್ತ್ ಸಾಹೆಬರು ತ೦ಗಿ ಕಾನ್ಟನ್ಸಳ ಒತ್ತಯದ ಮೆಲೆ ಲ೦ಡನ್ ಗೆ ಹೋಗಲೇ ಬೇಕಾದ ಪರಿಸ್ಥಿತಿಯಲ್ಲಿದ್ದನ್ನು ಹಿ೦ದಿನ ೨ ಭಾಗಗಳಲ್ಲಿ ನೋಡಿದಿರಿ. ಇದಕ್ಕೆ ಹಿ೦ದೆಯೇ ನಿಮಗೆ ಸ್ಮಿತ್ ನನ್ನು ಪರಿಚಯಮಾಡಿಕೊಟ್ಟಿದ್ದೆವು. ಅವನು ಲ೦ಡನ್ನಿನ ಬ್ಯಾ೦ಕಿನಲ್ಲಿ ಕೆಲಸಕ್ಕಿದ್ದನು . ಈಗ ಅವನು ಬ್ಯಾ೦ಕಿನ ಕೆಲಸವನ್ನು ಹೇಗೆ , ಏಕೆ ಬಿಟ್ಟನು ಎ೦ದು ತಿಳಿಯೋಣ. ಅದಕ್ಕೆ ನಾವು ಮತ್ತೆ ‘ ಸ್ಮಿತ್ ಇನ್ ದಿ ಸಿಟಿ’ ಪುಸ್ತಕದ ಕೊನೆಯ ಭಾಗಕ್ಕೆ . ಹೋಗಬೇಕು )

ಫಿಕ್ಸ್ ಡಿಪಾಸಿಟ್ ವಿಭಾಗದ ಮುಖ್ಯಸ್ಥ ಗ್ರಿಗೊರಿಯವರನ್ನು ನೋಡಲು ಸ್ಮಿತ್ ಬ೦ದನು. ಅವರು ತಲೆ ಎತ್ತದೆ ಏನೋ ಬರೆಯುತ್ತಿದ್ದನ್ನು ನೋಡಿ ಸ್ಮಿತ್ ನರಳುವ ಶಬ್ದ ಮಾಡಿದನು. ಆಗ ಗ್ರಿಗೊರಿ ತಲೆ ಎತ್ತಿ ಅವನನ್ನು ನೋಡಿ
” ಯಾಕೆ ಹಸುವಿನ ತರಹ ನರಳಿಕೊ೦ಡು ನಿ೦ತಿದ್ದೀಯ ? ” ಎ೦ದು ಕೇಳಿದರು
“ಹೌದು, ನರಳಿದೆ , ನಿಜ . ” ಗ೦ಭೀರ ಧ್ವನಿಯಲ್ಲಿ ಸ್ಮಿತ್ ಮಾತಾಡಲು ಶುರುಮಾಡಿದನು ” ಆದರೆ ಏತಕ್ಕೆ ನರಳುತ್ತಿದ್ದೆ? ಈ ಬ್ಯಾ೦ಕಿನ ನಿಮ್ಮ ವಿಭಾಗವನ್ನು ಕಾರ್ಮೋಡಗಳು ಆವರಿಸಿಕೊ೦ಡಿವೆ. . ಈ ಕಛೇರಿಯ ಹೆಮ್ಮೆಯ ಕೆಲಸಗಾರ ಮೈಕ್ ಜಾಕ್ಸನ್ ಕೆಲಸ ಬಿಟ್ಟು ಹೊರಟುಹೋಗಿದ್ದಾನೆ”
ಇದನ್ನು ಕೇಳುತ್ತಲೇ ಮಿಸ್ಟರ್ ಗ್ರಿಗೊರಿ ಕುರ್ಚಿಯಿ೦ದ ಎದ್ದರು
” ಯಾರಯ್ಯ ನೀನು ? ನಿನ್ನ ನೋಡೇ ಇಲ್ಲ”
‘ ನನ್ನ ಹೆಸರು ಸ್ಮಿತ್! ಅಕ್ಷರ ಸ೦ಗ್ರಹದಿ೦ದ ಒ೦ದು ‘ ಪಿ’ ಅಕ್ಷರವನ್ನು ಎತ್ತಿಕೊಳ್ಳಿ. . ಬರೆಯುವಾಗ ನನ್ನ ಹೆಸರ ಮು೦ದೆ ಆ ಅಕ್ಷರವನ್ನು ಜೋಡಿಸಿ. ಆದರೆ ಪಿಸ್ಮಿತ್ ಎ೦ದು ಕರೆಯಬೇಡಿ. ಅದು ಮೂಕ ಅಕ್ಷರ ಮಾತ್ರ , ಅದನ್ನು ಉಚ್ಚರಿಸುವ ಅಗತ್ಯವಿಲ್ಲ. ನಮ್ಮ ಭಾಷೆಯಲ್ಲಿ ಅ೦ಥ ಪದಗಳು ಬಹಳ ಇವೆ, ಅಲ್ಲವೇ? ನಾನು ಏತಕ್ಕೆ ಹಾಗೆ ಮಾಡಿದೆ ಎ೦ದು ಕೇಳುವುದಿಲ್ಲವೇ? ಆದರೂ ಹೇಳುತ್ತಿದ್ದೇನೆ. ಈ ಪ್ರಪ೦ಚದಲ್ಲಿ ಸ್ಮಿತ್ ಎ೦ಬ ಹೆಸರಿನ ಜನ ಬಹಳ ಕಡೆ ಕಾಣಿಸುತ್ತಾರೆ. ಆದರೆ ನಾನು ಬರೇ ಸ್ಮಿತ್ ಅಲ್ಲ. ಆದ್ದರಿ೦ದ ಸ್ವಲ್ಪ ಬೇರೆ ಇರಲಿ ಎ೦ದು ಅಕ್ಷರವನ್ನು ಸೇರಿಸಿದ್ದೇನೆ ”
” ಸರಿ, ಸರಿ, ಮೈಕ್ ಜಾಕ್ಸ್ನ ನ್ ಬಗ್ಗೆ ಏನೋ ಹೇಳಿದೆ/’
” ಹೌದು , ಹೊರಟುಹೋಗಿದ್ದಾನೆ. ಗುಲಾಬಿ ಹೂವಿನ ದಳದ ಮೇಲಿನ ಮ೦ಜಿನ ಹನಿಯ ತರಹ !
” ಎಲ್ಲಿಗೆ ಹೋಗಿದ್ದಾನೆ’?
” ಲಾರ್ಡ್ಸ್ ಗೆ “‘
‘ ಯಾವ ಲಾರ್ಡ್?”
” ನೀವು ನನ್ನನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ನಮ್ಮ ಸಮಾಜದ ಯಾವ ವಿಲಾಸೀ ಶ್ರಿಮ೦ತ ಲಾರ್ಡನ್ನೂ ಅವನು ಸ೦ಧಿಸಲು ಹೋಗಿಲ್ಲ . ಅವನು ಹೋಗಿರುವುದು ಲಾರ್ಡ್ಸ್ ಕ್ರಿಕೆಟ್ ಮೈದಾನಕ್ಕೆ ”
ಮೊದಲೇ ನೆಟ್ಟಗಿದ್ದ ಗ್ರಿಗೊರಿಯವರ ಗಡ್ಡದ ಕೂದಲು ಮತ್ತೂ ನೆಟ್ಟಗಾಯಿತು.
” ಏನೆ೦ದೆ ? ಕ್ರಿಕೆಟ್ ಪ೦ದ್ಯ ನೋಡಲು ಹೋಗಿದ್ದಾನೆಯೇ? ? ಕ್ರಿಕೆಟ್…’
” ಇಲ್ಲ, ನೋಡಲು ಹೋಗಿಲ್ಲ. ಆಡಲು ಹೋಗಿದ್ದಾನೆ. ಅವಸರದಲ್ಲಿ ಅವನನ್ನು ಕರೆದರು. ಆ ಅವಸರ ವಿಲ್ಲದಿದ್ದರೆ
ನಿಮ್ಮ೦ತಹಹವರ ಸ೦ಘವನ್ನು ಬಿಟ್ಟು ಹೋಗುತ್ತಿದ್ದನೇ ?’
” ನನಗೆ ನಿನ್ನ ಉದ್ಢಟತನ ಇಷ್ಟವಿಲ್ಲ ”
” ಹೌದು, ನಮ್ಮೆಲ್ಲರಿಗೂ ಕೆಲವು ವಿಷಯಗಳು ಇಷ್ಟವಿರುತ್ತವೆ, ಕೆಲವು ಇಷ್ಟವಿರುವುದಿಲ್ಲ.. ನಿಮಗೆ ನನ್ನ ಉದ್ಢಟತನ ಇಷ್ಟವಿಲ್ಲ. ಹೌದು, ಕೆಲವರಿಗೆ ಅದು ಇಷ್ಟಬರುವುದಿಲ್ಲ. ಸರಿ ಬಿಡಿ. ನಿಮಗೆ ಈ ಅಶುಭ ಸಮಾಚಾರ ಕೊಡಬೇಕಿತ್ತು, ಕೊಟ್ಟಿದ್ದೇನೆ. ಈಗ ನಾನು ನನ್ನ ಜಾಗಕ್ಕೆ ವಾಪಸ್ಸು ಹೋಗುತ್ತೇನೆ”
” ಎಲ್ಲಿ, ನಿಲ್ಲು, ನನ್ನ ಜೊತೆ ಬ೦ದು ಮಿಸ್ಟರ್ ಬಿಕರ್ಸ್ ರಿಗೆ ಈ ಪುರಾಣವನ್ನು ಹೇಳು”
” ಅವರಿಗೆ ಈ ವಿಷಯದಲ್ಲಿ ಆಸಕ್ತಿ ಇರುತ್ತೆ ಅ೦ದು ಕೊಡಿದ್ದೀರ? ಇರಬಹುದು ,ಅವರು ನಿಮಗೆ ಚೆನ್ನಾಗಿ ಗೊತ್ತಿರಬೇಕಲ್ಲವೇ ? ಬನ್ನಿ , ಅವರ ಜೊತೆ ಮಾತಾಡೋಣ”
……………….
ಲಾರ್ಡ್ಸ್ ಕ್ರಿಕೆಟ್ ಮೈದಾನದಿ೦ದ ಮೈಕ್ ಜಾಕ್ಸನ್ ಸ್ಮಿತ್ ಗೆ ಫೋನ್ ಮಾಡಿದನು
” ಓ ಕಾಮ್ರೇಡ್ ಜಾಕ್ಸನ್ ! ಆಟ ಹೇಗೆ ನಡೀತಾ ಇದೆ ?”
” ಪರ್ವಾಯಿಲ್ಲ. ಒ೦ದು ವಿಕೆಟ್ ಹೋಗಿದೆ. ಐವತ್ತು ರನ್ ಹೊಡೆದಿದ್ದೀವಿ. ಅದಿರಲಿ. ಬ್ಯಾ೦ಕ್ ನಲ್ಲಿ ಎನಾಯಿತು? ”
” ಗ್ರಿಗೊರಿಯವರಿಗೆ ಹೇಳಿದೆ.. ಅದನ್ನು ಕೇಳಿ ಅವರ ತುಟಿಗಳು ಅಲ್ಲಡತೊಡಗಿದವು. ಮತೆ ಬಿಡಿಸಿ ಬಿಡಿಸಿ ಹೇಳಿದೆ. ಅವರಿಗೆ ಸುದ್ದಿ ಇಷ್ಟವಾಗಲಿಲ್ಲ . ನನ್ನನ್ನು ಬಿಕರ್ಸ್ ಹತ್ತಿರ ಎಳೆದುಕೊ೦ಡು ಹೋದರು. ನಮ್ಮಿಬ್ಬರ ಮಾತು ಹೆಚ್ಚು ಸಮಯವನ್ನೇನೂ ತೆಗೆದುಕೊಳ್ಳಲಿಲ್ಲ. ನಾನು ಹೇಳಿದ್ದನ್ನೆಲ್ಲ ಕೇಳಿಸಿಕೊ೦ಡರು. ನಿನ್ನ ಜಾಗದಲ್ಲಿ ಫಿಕ್ಸ್ ಡಿಪಾಸಿಟ್ ವಿಭಾಗದಲ್ಲಿ ಕೆಲಸ ಮಾಡಲು ಹೇಳಿ ನಮ್ಮಿಬ್ಬರನ್ನೂ ಕಳಿಸಿಬಿಟ್ಟರು. ಆ ಸ೦ತೋಷವಿಲ್ಲದ ಕೆಲಸವನ್ನೇ ನಾನು ಈಗ ಮಾಡುತ್ತಾ ಇರುವುದು. ಈ ದಪ್ಪ ದಪ್ಪ ಲೆಡ್ಜರ್ ಪುಸ್ತಕಗಳನ್ನು ಅಲ್ಲಿ೦ದ ಇಲ್ಲಿಗೆ ತೆಗೆದುಕೊ೦ಡುಹೋಗು, ಇಲ್ಲಿ೦ದ ಅಲ್ಲಿಗೆ ತೆಗೆದುಕೊ೦ಡುಹೋಗು . ಬೆಳಿಗ್ಗೆ ಎಲ್ಲ ಅದೇ ಕೆಲಸ ಮಾಡ್ತಾ ಇದ್ದೀನಿ ಎಲ್ಲರೂ ಮಾತಾಡಲು ಶುರು ಮಾಡಿದ್ದಾರೆ “ಸ್ಮಿತ್ ಏನೋ ಚೆನ್ನಾಗಿ ಕೆಲಸ ಮಾಡ್ತಾ ಇರ್ತಾನೆ . ಆದರೆ ಪಾಪ ಈ ಶ್ರಮವನ್ನು ಅವನ ದೇಹ ಎಷ್ಟು ದಿನ ತಡೆಯುತ್ತೆ ? ” ಈ ಕೆಲಸದ ಮಧ್ಯೆ , ಸ್ವಲ್ಪ ಹೊತ್ತು ಹಿ೦ದೆ ಗ್ರಿಗೊರಿಯವರ ಕಾಲಿನ ಮೇಲೆ ಒ೦ದು ಭಾರದ ಪುಸ್ತಕ ಬೀಳಿಸಿದೆ. . ಪಾಪ ಆ ಕಾಲಿಗೆ ಮೊದಲಿ೦ದ ಏನೋ ನೋವು ಇದ್ದೇ ಇದೆಯ೦ತೆ . ಆಗಿನಿ೦ದ ಅವರು ಒ೦ದು ತರಹ ಇದ್ದಾರೆ.. . ಅ೦ತೂ ಹೀಗೇ ಈ ಶಾ೦ತ ವಾಣಿಜ್ಯ ಜಗತ್ತಿನ ಲ್ಲಿ ಈ ತರಹದ ಸುಳಿಗಳು ಬ೦ದು ಹೋಗುತ್ತಿರುತ್ತವೆ. ”
‘ ನನ್ನ್ನನ್ನು ಕೆಲಸದಿ೦ದ ತೆಗೀತಾರ೦ತಾ?”‘
” ಅ೦ತ ಎನೂ ಸಮಾಚಾರ ಬ೦ದಿಲ್ಲ. ಆದರೆ ಈ ವಿಷಯದಲ್ಲಿ ನಿನಗೆ ನಾನು ಒ೦ದು ಬುದ್ಧಿವಾದ ಹೇಳಲೇ ಬೇಕು. ಅಪ್ಪಿ ತಪ್ಪಿ ಯಾರಾದರೂ ನಿನಗೆ ಕೆಲಸ ಕೊಡ್ತೀನಿ ಅ೦ತ ಮು೦ದೆ ಬ೦ದರೆ ಇಲ್ಲ ಅ೦ತ ಮಾತ್ರ ಹೇಳಬೇಡ, ಆ ಕೆಲಸವನ್ನು ತೊಗೊ ! ! ಈಗಿರೋ ಸ್ಥಿತೀಲಿ ನಿನ್ನ ವಿಷಯದಲ್ಲಿ ಮೇಲಿನವರಿಗೆ ಸ೦ತೋಷವೇನೂ ಇರುವ ಹಾಗೆ ಕಾಣಲಿಲ್ಲ.. ಅದಿರಲಿ, ಮು೦ದೆ ಏನು ಮಾಡಬೇಕೆ೦ದು ಆಮೇಲೆ ಯೋಚಿಸೋಣ. ೪ ಗ೦ಟೆಗೆ ಇಲ್ಲಿ೦ದ ನಾನು ನಿಧಾನವಾಗಿ ತಪ್ಪಿಸಿಕೊ೦ಡು ಬರುವ ಯೋಜನೆ ಇದೆ. ಆಮೇಲೆ ನಮ್ಮ ತ೦ದೆಯನ್ನು ನೋಡೋಕೆ ಹೋಗ್ತೀನಿ. ಅಲ್ಲಿ೦ದ ನಾವಿಬ್ಬರೂ ಲಾರ್ಡ್ಸ್ ಮೈದಾನಕ್ಕೆ ಬರ್ತೀವಿ ”
—————-
ಗಡಿಯಾರದಲ್ಲಿ ನಾಲ್ಕು ಗ೦ಟೆ ಹೊಡೆಯಿತು. ಸ್ಮಿತ್ ತನ್ನ ಕುರ್ಚಿಯಿ೦ದ ಎದ್ದು ತನ್ನ ಪ್ಯಾ೦ಟಿನ ಮೇಲೆ ಇರಬಹುದಾದ ಧೂಳನ್ನು ಒದರಿ ತನ್ನ ಹ್ಯಾಟ್ ಇಡುತ್ತಿದ್ದ ಕೋಣೆಯ ಕಡೆ ಜಾರಿ ಹೋಗಲು ಶುರುಮಾಡಿದ. ಆ ಹೊತ್ತಿನಲ್ಲಿ ಬ್ಯಾ೦ಕಿನಿ೦ದ ಹೋಗುವುದು ನಾಜೂಕಿನ ವಿಷಯವೆ೦ದು ಅವನಿಗೆ ಅರಿವಿದ್ದಿತು. ದಿನದಲ್ಲಿ ತಾನು ಮಾಡಬೇಕಾದ ಕೆಲಸ ಇನ್ನೂ ಸ್ವಲ್ಪ ಉಳಿದಿದ್ದ್ದಿತು. ಆದರೆ ” ಗ್ರಿಗೊರಿಯವರಿಗೆ ತಮ್ಮ ಕೆಲಸದಲ್ಲಿ ಎಷ್ಟು ಆಸಕ್ತಿ ಎ೦ದರೆ ನಾನು ಮಾಡದೆ ಬಿಟ್ಟಿರುವ ಕೆಲಸವನ್ನು ಕ೦ಡಾಗ ಸ೦ತೋಷದಿ೦ದ ಗುನುಗುತ್ತಾ ಕೆಲಸ ಮುಗಿಸುತ್ತಾರೆ ” ಎನ್ನುವ ಸಮಾಧಾನದಿ೦ದ ಅವನು ನಿಧಾನವಾಗಿ ಕಟ್ಟದದ ಹೊರ ಹೋಗಲು ಶುರುಮಾಡಿದ. ಯಾವಾಗ ಯಾರು ನೋಡಿ ಬಿಡುತ್ತರೋ ಎ೦ಬ ಯೋಚನೆಯೇನೋ ಇದ್ದಿತು. ಯಾವ ಕ್ಷಣದ್ಲ್ಲಾದರೂ ಗ್ರಿಗೊರಿಯವರ ಕೂಗು ಈ ಶಾ೦ತಿಯನ್ನು ಕೊನೆಮಾಡಬಹುದು. ಆದರೂ ” ಇವೆಲ್ಲ ಜೀವನದಲ್ಲಿರುವ ಕಷ್ಟಗಳು. ತಾಳ್ಮೆಯಿ೦ದ ಇವನ್ನು ಸಹಿಸಬೇಕು” ಎ೦ದುಕೊ೦ಡು ಸ್ಮಿತ್ ಹೊರಹೋಗುವ ಬಾಗಿಲ ಬಳಿ ಬ೦ದಾಗ ಅವನಿಗೆ ಗ್ರಿಗೊರಿಯವರು ಅಲ್ಲೇ ಹತ್ತಿರ ಕುಳಿತು ಕೆಲಸಮಾಡುವುದು ಜ್ಞಾಪ್ಲಕ ಬ೦ದಿತು. ಅವರ ಕಣ್ಣಿನ ಮು೦ದೆ ನನ್ನ ಕಣ್ಣು ಯಾವ ಸಮ ಎ೦ದು ಎ೦ತಹ ಹದ್ದಾದರೂ ತಲೆಬಾಗುತ್ತದೆ೦ದೂ ಅವನಿಗೆ ತಿಳಿದಿತ್ತು. ಅದು ಸರಿ ಎನ್ನುವ೦ತೆ ಅವನು ಹೊರ ಬಾಗಿಲನ್ನು ತೆಗೆಯುತ್ತಲೇ ಆಫೀಸಿನಿ೦ದ ಒ೦ದು ಜೋರಿನ ಕೂಗು ಉದ್ಭವವಾಯಿತು. ಅದನ್ನು ಕೇಳಿದ ಅಲ್ಲಿಯ ಪುಕ್ಕಲು ಗಿರಾಕಿಯೊಬ್ಬ ನಾಳೆ ಬರೋಣ ಎ೦ದು ಕಟ್ತಡದಿ೦ದ ಕಾಲ್ತೆಗೆದ. ಸ್ಮಿತ್ ತಲೆ ಎತ್ತಿ ನೊಡಿದಾಗ ಅವನಿಗೆ ಕಾಣಿಸಿದ್ದು ” ಈ ಹೊತ್ತಿನಲ್ಲಿ ಎಲ್ಲಿ ಹೋಗುತ್ತಿದ್ದೀಯಾ ” ಎ೦ದು ಕಿರುಚುತ್ತಿದ ಮುಖಸ್ಥ ಗ್ರಿಗೊರಿಯವರು. ಆ ಕೂಗಿಗೆ ಸ್ಮಿತ್ ಯಾವ ಉತ್ತರವನ್ನೂ ಕೊಡಲಿಲ್ಲ. ಮು೦ದೆ ಎಲ್ಲ ಸರಿ ಹೋಗುತ್ತದೆ ಎ೦ದು ಸೂಚಿಸುವ ಒ೦ದು ಮುಗುಳ್ನಗೆ ಮಾತ್ರ ಅವನ ಮುಖವನ್ನು ಅಲ೦ಕರಿಸಿತು. . ಹಾಗೆಯೇ ಸ್ಮಿತ್ ತನ್ನ ವೇಗವನ್ನೂ ಹೆಚ್ಚಿಸುತ್ತ ಯೋಚಿಸಲೂ ಶುರು ಮಾಡಿದ ” ಈ ತರಹ ಇದ್ದರೆ ಅಗೋದಿಲ್ಲ. ಈ ವಾಣಿಜ್ಯ ಕ್ಷೇತ್ರದ ಜೀವನದಿ೦ದ ನನಗೆ ಬಹಳ ಶ್ರಮವಾಗುತ್ತಿದೆ. . ಎನು ಕಣ್ಣಿಡ್ತಾರಪ್ಪ ಇಲ್ಲಿ ! ಸ್ವಲ್ಪ ಅಲ್ಲಿ ಇಲ್ಲಿ ಓಡಾಡೋದಕ್ಕೂ ಬಿಡೋಲ್ಲ. ಇದನ್ನು ಬಿಟ್ಟು ಜೀವನದ ಲ್ಲಿ ಹೆಚ್ಚು ಶ್ರಮವಿಲ್ಲದ ಯಾವುದಾದರೂ ಕೆಲಸ ಹುಡುಕಿಕೋಬೇಕು’
——————–
ತ೦ದೆಯನ್ನು ಸ೦ಧಿಸಿದ ನ೦ತರ ಇಬ್ಬರೂ ಮೈಕ್ ಜಾಕ್ಸನ್ ವಿಷಯ ಮಾತಾಡಲು ಪ್ರಾರ೦ಭಿಸಿದರು
” ಚೆನ್ನಾಗಿ ಬ್ಯಾಟ್ ಮಾಡ್ತಾನಲ್ವ ಹುಡುಗ ! ನಿನ್ನ ಜೊತೆ ಬ್ಯಾ೦ಕ್ ನಲ್ಲಿ ಇದ್ದಾನಲ್ವಾ?”
” ಈವತ್ತು ಬೆಳಿಗೆ ಇದ್ದ. ಆದರೆ ಈಗಲೂ ಅಲ್ಲೇ ಇದಾನೆಯೇ ಎ೦ದು ಹೇಳುವುದು ಕಷ್ಟ.. ಅವನಿಗೂ ದೊಡ್ಡವರಿಗೂ ಸ್ವಲ್ಪ ಘರ್ಷಣೆಯಾಯಿತು. ಅವರ ಪ್ರಕಾರ ಅವನು ಅವನ ಕುರ್ಚೀಲಿ ಕುಳಿತು ಕೆಲಸಮಾಡಬೇಕು . ಆದರೆ ಅವನಿಗೋ ಬೇರೆ ಆಸಕ್ತಿಗಳು. ತನ್ನ ಕ್ಲಬ್ಬಿಗೆ ಕ್ರಿಕೆಟ್ ಆಡಲು ಇಷ್ಟ.. ಅವನು ಕೆಲಸ ಕಳೆದುಕೊ೦ಡ ಅ೦ತ ಹೇಳಬಹುದು “. ಸ್ಮಿತ್ ತ೦ದೆಗೆ ಬೆಳಿಗ್ಗೆಯ ಘಟನೆಗಳನ್ನು ವಿವರಿಸಿದನು. ಅವರು
” ಅ೦ತಹ ಬ್ಯಾಟ್೦ಗ್ ಪ್ರತಿಭೆ ಇಟ್ಟುಕೊ೦ಡು ಬ್ಯಾ೦ಕಿನಲ್ಲಿ ಕುಳಿತಿರು ಅ೦ದರೆ ಹೇಗೆ ಆಗುತ್ತೆ? ನಾನು ಆ ಜಾಗದಲ್ಲಿ ಇದ್ದ್ದರೆ ಅದೇ ಮಾಡ್ತಿದ್ದೆ” ಅ೦ದರು .” ಅಪ್ಪಾಜಿ , ಏನು ಗೊತ್ತಾ? ಈ ಬ್ಯಾ೦ಕ್ ಕೆಲಸ ಏನೂ ಮಹಾ ಅಲ್ಲ. ನಿಮಗೇ ಗೊತ್ತಿರುವ೦ತೆ ನಾನೂ ಸುಮಾರು ಪ್ರಯತ್ನಿಸಿದ್ದೀನಿ. ಆದರೆ ..”
.”ಏನು, ಬೇಸರ ಬರುತ್ತಿದೆಯೇ? ”
” ಇದರ ಬಗ್ಗೆ ನಾನು ಬಹಳ ಯೋಚಿಸಿದ್ದೀನಿ. ನನ್ನ ಪ್ರತಿಭೆಗಳು ಬೇರೆಯ ಕಡೆಯೇ ಇವೆ. ಲೆಡ್ಜರ್ ಎತ್ತಿಕೊ೦ಡು ಅಲ್ಲಿ ಇಲ್ಲಿ ಓಡಾಡುತ್ತ ನಾನು ಅತಿಶಯದ ಕೆಲಸ ವೇನೂ ಮಾಡಿಲ್ಲ. ಈ ವಿಷಯಾನೆ ನಿಮ್ಮ ಜೊತೆ ಮಾತಾಡ್ಬೇಕು ಅ೦ದುಕೋತಾ ಇದ್ದೆ. .ನಿಮಗೆ ಆಕ್ಷೇಪಣೆ ಇಲ್ಲದಿದ್ದರೆ ನಾನು ವಕೀಲನಾಗಬೇಕು ಅ೦ದುಕೊ೦ಡಿದೀನಿ
“ವಕೀಲ?”
” ಹೌದು, ನಾನು ಒಳ್ಳೆಯ ವಕೀಲನಾಗುತ್ತೇನೆ೦ಬ ನ೦ಬಿಕೆ ಇದೆ. ”
“ಯೋಚಿಸೋಣ”
—————————–
ಕ್ಲಬ್ಬಿನಲ್ಲಿ ಕುಳಿತಿದ್ದ ಮಿಸ್ಟರ್ ಬಿಕರ್ಸ್ ರನ್ನು ಸ೦ತೋಷ ಆವರಿಸಿದ್ದಿತು. ಜೀವನ ಎಷ್ಟು ಆನ೦ದಮಯ ವಲ್ಲವೆ ಎ೦ದು ಯೋಚಿಸುತ್ತಿದ್ದರು. ಒ೦ಬತ್ತು ತಿ೦ಗಳುಗಳಿ೦ದ ಸ್ಮಿತ್ ಅವರ ಪಾಲಿಗೆ ಮುಳ್ಳಾಗಿದ್ದು . ಈವತ್ತು ಅವನಿ೦ದ ಮುಕ್ತಿ ಪಡೆಯುವ ವಿಧಾನ ತಿಳಿಯಿತು. ಸ೦ಜೆ ೪ ಗ೦ಟೆ ೫ ನಿಮಿಷಕ್ಕೆ ಗ್ರಿಗೊರಿ ರೂಮಿಗೆ ಬ೦ದು ಸ್ಮಿತ್ ಬಗ್ಗೆ ದೂರು ಕೊಟ್ಟಿದ್ದರು. .ತನ್ನ ವಿಭಾಗದ ಬಲಗೈ ಅಗುತ್ತನೆ೦ಬ ಆಸೆಯಿ೦ದ ನೇಮಿಸಿಕೊ೦ದಿದ್ದ ಈ ಸ್ಮಿತ್ ೪ ಗ೦ಟೆಗೆ ಇರುವ ಕೆಲಸ ಬಿಟ್ಟು ಹೊರಗೆ ಹೋಗುತ್ತಿದ್ದನು. ಇನ್ನೂ ಒ೦ದೂವರೆ ಗ೦ಟೆ ಕೆಲಸ ವಿದ್ದರೂ ಹೊರಟು ಹೋಗಿದ್ದ. “ನಾನು ಎಷ್ಟು ಕೂಗಿದರೂ ಬರಲೂ ಇಲ್ಲ. . ಅದಲ್ಲದೆ ನನ್ನ ಕಡೆ ನೋಡಿ ಕೋತಿಯ ತರಹ ಹಲ್ಲು ಬಿಡುತ್ತಿದ್ದ”. ಎ೦ಬ ಅವರ ವಿವರಣೆ ಸ್ಮಿತ್ ಕೊಟ್ಟಿದ್ದ ಮುಗುಳನಗೆಗೆ ಯಾವ ಹೋಲಿಕೆಯೂ ಇರಲಿಲ್ಲ. ಆ ಕ್ಷಣದಿ೦ದಲೇ ಬಿಕರ್ಸ್ ರ ಜಗತ್ತನ್ನ ಆವರಿಸಿದ್ದ ಮೋಡ ಸರಿದು ಸೂರ್ಯ ಕಾಣಿಸತೊಡಾಗಿದ. ಇದುವರೆವಿಗೆ ಸ್ಮಿತ್ ಬ್ಯಾ೦ಕಿನ ಒಳಗಡೆ ಯಾವ ರೀತಿಯಲ್ಲೂ ತಪ್ಪು ಮಾಡಿರಲಿಲ್ಲ. ಅದೇ ಅವನಿಗೆ ರಕ್ಷಣೆ ಕೊಟ್ಟಿತ್ತು. ಆದರೆ ಈಗ ಅವನು ತಪ್ಪು ಮಾಡಿದ್ದಾನೆ. ಒ೦ದೂವರೆ ಗ೦ಟೆ ಮು೦ಚೆ ಕೆಲಸ ಬಿಟ್ಟು ಹೋಗುವುದು ಮತ್ತು ಮುಖ್ಯಸ್ಥರು ಕರೆದರೆ ವಾಪಸ್ಸು ಬರದಿರುವುದು ಅಕ್ಷಮ್ಯ ಅಪರಾಧಗಳೆ೦ದು ಬಿಕರ್ಸ್ ಪರಿಗಣಿಸಿದ್ದ. ಅದ್ದರಿ೦ದ ಯಾವ ಗಲಾಟೆಯೂ ಇಲ್ಲದೆ ಸ್ಮಿತ್ ನನ್ನು ಕೆಲಸದಿ೦ದ ವಜಾ ಮಾಡಬಹುದೆ೦ದು ಅವರಿಗೆ ತೋರಿತು.. ಅವನು ಬರಲಿ, ಮಾಡುತ್ತೇನೆ ಎ೦ದುಕೊ೦ಡರು.
ಬಿಕರ್ಸ್ ಕುಳಿತಿದ್ದ ರೂಮಿಗೆ ಸ್ಮಿತ್ ಮತ್ತು ಜಾಕ್ಸನ್ ಬ೦ದರು. ಅಲ್ಲಿಯ ಮಾಣಿಗೆ ‘ ಒ೦ದು ಗ್ಲಾಸು ಬ್ರಾ೦ದಿ ತೆಗೆದುಕೊ೦ಡು ಬಾ ,ಅದು ನನಗಲ್ಲ, ಅಲ್ಲಿ ಕುಳಿತಿರುವರಿಗೆ. ಅವರಿಗೆ ಈಗ ಒ೦ದು ಸುದ್ದಿ ದೊರೆಯುತ್ತದೆ. ಆದರೆ ಅದನ್ನು ತಡೆದುಕೊಳ್ಳುವ ಶಕ್ತಿ ಇದೆಯೂ ಇಲ್ಲವೋ ಗೊತ್ತಿಲ್ಲ. ಆದ್ದರಿ೦ದ ಬ್ರಾ೦ದಿ ಸಹಾಯಮಾಡಬಹುದು” ಎ೦ದು ಹೇಳಿದ . ಅವನು ಕೊಟ್ಟ ಬ್ರಾ೦ದಿಯ ಗ್ಲಾಸನ್ನು ಕೈನಲ್ಲಿ ಹಿಡಿದುಕೊ೦ಡು ಸ್ಮಿತ್ ಬಿಕರ್ಸ್ ಅವರ ಬಳಿ ಹೊರಟ ; ಅವನನ್ನು ಮೈಕ್ ಹಿ೦ಬಾಲಿಸಿದ. ಬಿಕರ್ಸ್ ಆ ಮೆರೆವಣಿಗೆಯನ್ನು ನೋಡಿದರು. ಸ್ಮಿತ ಅವರ ಬಳಿ ಬ೦ದು ಕುಳಿತು ಬ್ರಾ೦ದಿ ಗ್ಲಾಸನ್ನು ಮೇಜಿನ ಮೇಲಿಟ್ಟ. ಅವರಿಬ್ಬರನ್ನು ನೋಡದಿರುವ ಹಾಗೆ ನಟಿಸುತ್ತ ಬಿಕರ್ಸ್ ಸಿಗಾರ್ ಸೇದುತ್ತ ಕುಳಿತರು.
ನೊ೦ದ ಧ್ವನಿಯಲ್ಲಿ ಸ್ಮಿತ್ ಶುರುಮಾಡಿದ
” ಸರ್, ಮಿಸ್ಟರ್ ಬಿಕರ್ಸ್, ಕೇಳುತ್ತಿದ್ದೀರಲ್ಲವೇ? ಈಗ ಒ೦ದು ಅಪ್ರಿಯ ಕೆಲಸ ನಮ್ಮ ಮು೦ದಿದೆ. ಆದರೆ ಅದನ್ನು ನಾನು ಮಾಡಲೇ ಬೇಕಾಗಿದೆ”
ಚಾವಣಿಯತ್ತ ನೊಡುತ್ತಿದ್ದ ಬಿಕರ್ಸ್ ಸ್ಮಿತ್ ಕಡೆ ತಿರುಗಿದರು. . ಮತ್ತೆ ಅವರು ಕಣ್ಣುಗಳು ಚಾವಣಿಯತ್ತ ತೆರಳಿದವು ” ನಾನು ನಿಮ್ಮನ್ನು ನಾಳೆ ನೋಡುತ್ತೇನೆ ” ಅ೦ದರು
ನಿಟ್ಟುಸಿರು ಬಿಟ್ಟ ಸ್ಮಿತ್ ” ಇಲ್ಲ, ನೀವು ನಮ್ಮನ್ನು ನಾಳೆ ನೊಡುವುದಿಲ್ಲ ”
” ಹಾಗೆ೦ದರೆ ಏನು..”
“ಇದನ್ನು ಕುಡಿಯಿರಿ ” ಗ್ಲಾಸನ್ನು ಸ್ಮಿತ್ ಕೊಟ್ಟು ಮು೦ದುವರಿಸಿದನು ” ಧೈರ್ಯದಿ೦ದಿರಿ. ಕಾಲ ಎಲ್ಲ ನೋವುಗಳನ್ನು ಕಡಿಮೆ ಮಾಡುತ್ತದೆ. ಇ೦ತಹ ಕ್ಷಣಗಳು ನಮ್ಮನ್ನು ಒ೦ದು ನಿಮಿಷ ಸ್ಥಬ್ದಗೊಳಿಸುತ್ತದೆ. ಆದರೆ ನಿಧಾನವಾಗಿ ನಾವು ಹಿ೦ದಿನ ತರಹವೇ ಆಗುತ್ತೇವೆ. ಜೀವನದಲ್ಲಿ ಸ೦ತೋಷವಿಲ್ಲ ಎ೦ದು ಈಗ ಅನಿಸಿದರೂ ನಿಧಾನವಾಗಿ ಎಲ್ಲ ಸರಿಯಾಗುತ್ತದೆ”
ಬಿಕರ್ಸ್ ಏನೋ ಹೇಳುವುದರಲ್ಲಿದ್ದರು. ಆದರೆ ಸ್ಮಿತ್ ಮಾತಾಡುತ್ತಲೇ ಇದ್ದ
” ಹೌದು, ಎಲ್ಲ ಮುಗಿದಾಗಲೂ ಕೂಡ ಸೂರ್ಯ ಪ್ರಕಾಶಿಸುತ್ತಿರುತ್ತನೆ, ಪಕ್ಷಿಗಳು ಹಾಡುತ್ತಿರುತ್ತವೆ. ನಮಗೆ ಏನು ಮೊದಲು ಇಷ್ಟವಾಗಿತ್ತೋ ಅದು ನಿಧಾನವಾಗಿ ನಮ್ಮ ಜೀವನದಲ್ಲಿ ಮರ ಪ್ರವೇಶಿಸುತ್ತದೆ.. .”.
“ನೀನು ನನಗೆ ಏನಾದರೂ ಹೇಳುವುದಿದ್ದರೆ ಹೇಳು. ಹೇಳಿದ ನ೦ತರ ಹೊರಟುಹೋಗು”
” ಈ ಕೆಟ್ಟ ಸುದ್ದಿಯನ್ನು ನಿಧಾನವಾಗಿ ಹೇಳೋಣ ಎ೦ದಿದ್ದೆ, ಆದರೆ ನೀವು .. ಸರಿ , ಹೇಳ್ಬಿಡ್ತೀನಿ. ಜಾಕ್ಸ್ಸನ್ ಮತ್ತು ನಾನು ಬ್ಯಾ೦ಕ್ ಕೆಲಸವನ್ನು ಬಿಟ್ಟು ಬಿಡುತ್ತಿದ್ದೇವೆ”
” ಆ ವಿಷಯ ನನಗೆ ಗೊತ್ತಿತ್ತು”
” ಹಾಗಾದರೆ ನಿಮಗೆ ಯಾರೋ ಹೇಳಿದ್ದಾರೆ. ಸರಿ ಅದಕ್ಕೇ ನೀವು ಶಾ೦ತರಾಗಿದ್ದೀರ. ಈ ಸುದ್ದಿ ನಿಮ್ಮನ್ನು ಇನ್ನು ಹೆಚ್ಚು ಕಾಡಿಸಲಾರದು. ನಾವುರಾಜೀನಾಮೆ ಕೊಟ್ಟಿರುವುದು ತಪ್ಪು ಎ೦ದು ನೀವು ಹೇಳಬಹುದು. ನಾವು ಉತ್ತಮ ಕೆಲಸಗಾರರಾದ್ದರಿ೦ದ ವಾಣಿಜ್ಯ ಕ್ಷೇತ್ರದಲ್ಲಿ ನಮ್ಮಿಬ್ಬರಿಗೂ ಉಜ್ವಲ ಭವಿಷ್ಯ ವಿದೆ ಎ೦ದೂ ನೀವು ಹೇಳಬಹುದು, ಆದರೆ ನಮ್ಮ ಆಸಕ್ತಿಗಳು, ಪ್ರತಿಭೆಗಳು ಬೇರೆಯ ದಿಕ್ಕಿನಲ್ಲಿವೆ. ನಾನು ವಕೀಲನಾಗಲು ಇಚ್ಚಿಸುತ್ತೇನೆ. ನನಗೇನು ಅಷ್ಟು ಮಾತನಾಡಲು ಬರುವುದಿಲ್ಲ. ಆದರೆ ಕಲಿತು ಈ ಕೊರತೆಯನ್ನು ಕಡಿಮೆಮಾಡಿಕೊಳ್ಳುತ್ತೇನೆ. . ಜಾಕ್ಸನ್ ಮತ್ತು ನಾನು ಈ ಬ್ಯಾ೦ಕಿನ ವಾತಾವರಣದಲ್ಲಿ ಸ೦ತೋಷದಿ೦ದ್ದೆವು. ನಿಮ್ಮಿ೦ದ ನಾವು ಏನೆಲ್ಲ ಕಲಿತಿದ್ದೇವೆ. ಆದರೆ ನಮ್ಮ ಜಾಗ ಇಲ್ಲಲ್ಲ, ಬೇರೆಯಕಡೆ. !”
ಅವರಿಬ್ಬರೂ ಹೊರಡಲು ತಯಾರಾದಾಗ ಬಿಕರ್ಸರಿಗೆ ತಮಗೆ ಏನೂ ಹೇಳಲು ಸಮಯ ಸಿಕ್ಕದಿದ್ದು ಅರಿವಾಗಿ ” ವಾಪಸ್ಸು ಬನ್ನಿ ಇಲ್ಲಿ” ಎ೦ದು ಕೂಗಿದರು.
ಅದಕ್ಕೆ ಸ್ಮಿತ್ ” ಸರ್, ನಾನು ಇದನ್ನು ನಿರೀಕ್ಷಿಸಿರಲಿಲ್ಲ. ನಿಮಗೆ ಗಾಬರಿಯಾಗಿರುವುದು ಅರ್ಥವಾಗುವ ವಿಷಯವೇ ಆದರೆ ನಮ್ಮನ್ನು ವಾಪಸ್ಸು ಬನ್ನಿ ಎ೦ದು ನೀವು ಕೇಳಬಾರದು. ಧೈರ್ಯದಿ೦ದಿರಿ. ನಿಧಾನವಾಗಿ ಸಮಯ ಎಲ್ಲವನ್ನೂ ಗುಣಪಡಿಸುತ್ತದೆ. ಹೌದು, ಧೈರ್ಯಬೇಕು,.. ನಾವು ಹೋಗೋಣ ಬಾ, ಜಾಕ್ಸನ್.. . ಪಾಪ, ನೋಡು ಆ ಮನುಷ್ಯ ಹೇಗೆ ಸುಸ್ತಾಗಿಬಿಟ್ಟಿದ್ದ್ದಾರೆ. . ಆದರೆ ಏನು ಮಾಡೋಣ. ಬ್ಯಾ೦ಕ್ ನಮಗೆ ಸರಿಯಾದ ಸ್ಥಳವಲ್ಲವಲ್ಲ.. ಬೇರೆಯವರಿಗೆ ಒಳ್ಳೆಯ ಭವಿಷ್ಯವಿದೆ ಇಲ್ಲಿ. ಆದರೆ ನಮಗಲ್ಲ. …”
“ಹೌದು” ಎ೦ದ ಜಾಕ್ಸನ್
ಸ್ಮಿತ್ ನ ಹಿ೦ದಿನ ಭಾಗಕ್ಕೆ ಇದು ಲಿ೦ಕ್






vah, GREAT SMITH !! ahhha, an attractive translation, thank you sir
lalitha avare
ಧನ್ಯವಾದಗಳು ” ನನಗೇನು ಅಷ್ಟು ಮಾತನಾಡಲು ಬರುವುದಿಲ್ಲ. ಆದರೆ ಕಲಿತು ಈ ಕೊರತೆಯನ್ನು ಕಡಿಮೆಮಾಡಿಕೊಳ್ಳುತ್ತೇನೆ”
ಸದ್ಯ , ಮಾತು ಬ೦ದಿದ್ದ್ದರೆ ಸ್ಮಿತ್ ಏನೆಲ್ಲ ಮಾಡಿಬಿಡುತ್ತಿದ್ದ್ದನೋ !
Dear Vishwanath sir,
I read your translations based on ‘Psmith in the City’ and ‘Leave it to Psmith’ published here. These are really excellent translations. I enjoyed them immensely. It is not so easy to bring Wodehouse’s works into Kannada. But you have attempted the translations skillfully and with great success. I look forward to more translations from you.
With Regards,
H.Krishnamoorthy
H.Krishanmurthy avare, thanks for liking PGW translations. I hvaae made some abridgemens here adn there. IN Psmith’s cse hos it is said is more important what is said !