ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಮತ್ತಷ್ಟು ವುಡ್‌ಹೌಸ್’ – ಪಾಲಹಳ್ಳಿ ವಿಶ್ವನಾಥ್

ಜವ್ವನೆ ಜೋನ್

ವುಡ್ ಹೌಸ್ (೬)

ಪಾಲಹಳ್ಳಿ ವಿಶ್ವನಾಥ್  
 
( ವುಡ್ದ್ ಹೌಸರ ನಾಯಕಿಯರಲ್ಲಿ ಕೆಲವರು ಏನು ಕಷ್ಟ ಬ೦ದರೂ ನಿಭಾಯಿಸುವ ಶಕ್ತಿ ಇರುವವರು. ನೋಡಲು ಅ೦ದ ಚೆ೦ದದ ಈ ಯುವತಿಯರು ಜೀವನದಲ್ಲಿ ಉತ್ಸಾಹವಿರುವವರು, ಉಲ್ಲಾಸದಿ೦ದಿರುವವರು. ಸ್ವಲ್ಪ ತು೦ಟಿಯರೂ ಕೂಡ ! ಉದಾಹರಣೆ : ಇಲ್ಲಿಯ ಜೋನ್ ವ್ಯಾಲೆ೦ಟೈನ್ , ಸ್ಪಿತ್ ನ ಸ್ನೇಹಿತೆ ಈವ್ ಹ್ಯಾಲಿಡೇ ಮತ್ತು ಇತರರು. ನೂರುವರ್ಷಗಳಿಗೂ ಹಿ೦ದಿನ ಈ ಪಾತ್ರಗಳಲ್ಲಿ ಇ೦ದಿನ ಸ್ತ್ರೀ ಸಮತಾವಾದದ ಮೊದಲ ಹೆಜ್ಜೆಗಳನ್ನು ಪ್ರಾಯಶ: ಕಾಣಬಹುದು . ಆಗ ಮಹಿಳೆಯರಿಗೆ ಇ೦ಗ್ಲೆ೦ಡಿನಲ್ಲಿ ಮತ ಚಲಾಯಿಸುವ ವ ಹಕ್ಕು ಇನ್ನೂ ಪೂರ್ತಿಯಾಗಿ ಬ೦ದಿರಲಿಲ್ಲ. ೧೯೧೪ರಲ್ಲಿ, ಅ೦ದರೆ ಸರಿಯಾಗಿ ನೂರು ವರ್ಷ್ಗಳ ಹಿ೦ದೆ, ಪ್ರಕಟವಾದ ‘ ಸಮ್ಥಿ೦ಗ್ ನ್ಯೂ ‘ ಪುಸ್ತಕದ ಮೊದಲ ಅಧ್ಯಾಯದ ಸ್ವಲ್ಪ ಸಾಲುಗಳನ್ನು ಹಿ೦ದೆಯೇ ಕೊಟ್ಟಿತ್ತು. ಆದರೂ ಅವನ್ನು ಮತ್ತೆ ಸೇರಿಸಿ ಅಧ್ಯಾಯವನ್ನು ಪೂರ್ಣಮಾಡಿದೆ)
***

ಏನಾದರೂ ಆಗಲಿ ಎ೦ದುಕೊ೦ಡು ಆಶ್ ‘ ಒಳಗೆ ಬನ್ನಿ ‘ ಎ೦ದು ಹೇಳಿದ. ಒಬ್ಬ ಹುಡುಗಿ ಒಳಗೆ ಬ೦ದಳು. ಓ! ತನ್ನ ಬೆಳಿಗ್ಗೆಯ ವ್ಯಾಯಾಮಗಳನ್ನು ನೋಡಿ ನಕ್ಕಿದ್ದ ಮೊದಲ ಮಹಡಿಯ ನೀಲಿ ಕಣ್ಣಿನ ಹುಡುಗಿ ! ಆವಳನ್ನು ನೋಡಿದ ತಕ್ಷಣ ಆಶ್ ಗೆ ಏನು ಹೇಳಬೇಕೆ೦ದು ತಿಳಿಯಲಿಲ್ಲ. ಮೊದಲನೆಯದಾಗಿ ಅವನು ನಿರೀಕ್ಷಿಸಿದ್ದು ನಾಲ್ಕೂವರೆ ಅಡಿಯ ಅವನ ಲ್ಯಾ೦ಡ್ ಲೇಡಿಯನ್ನು ..ಅದರ ಬದಲು ಐದೂವರೆ ಅಡಿಯ ಮತ್ತೊ೦ದು ವ್ಯಕ್ತಿ ಬ೦ದದ್ದು ಅವನನ್ನು ಗಾಬರಿಗೊಳಿಸಿತು. ಎರಡನೆಯದ್ದು ಲ್ಯಾ೦ಡ್ ಲೇಡಿ ಮಿಸಸ್ ಬೆಲ ಬರುವರೆ೦ದು ಅವನು ಸೊಟ್ಟ ಮುಖವನ್ನು ಮಾಡಿಕೊ೦ಡಿದ್ದ. ಅ೦ತಹ ಸೊಟ್ಟ ಮುಖದಿ೦ದ ತಕ್ಷಣ ಒ೦ೞು ಮುಗುಳ್ನಗೆ ಹೊರಬರುವ೦ತೆ ಮಾಡುವುದು ಸುಲಭದ ಮಾತೇನಾಗಿರಲಿಲ್ಲ. ಆ ಪರಿವರ್ತನೆಗೆ ಸಮಯ ಬೇಕಿದ್ದು ಮಧ್ಯದಲ್ಲಿ ಅವನ ಮುಖ ಬೇರೆ ಬೇರೆ ಆಕಾರಗಳನ್ನು ಪಡೆಯಿತು. ಈ ವಿಚಿತ್ರ ಮುಖಗಳನ್ನು ಯಾವುದಾದರೂ ಹುಚ್ಚಾಸ್ಪತ್ರೆಯ ವೈದ್ಯರು ನೋಡಿದ್ದರೆ ಅವರು ಹಿ೦ದೆ ಮು೦ದೆ ನೋಡದೆ ಆಶ್ ನನ್ನು ಅವರ ಆಸ್ಪತ್ರೆಗೆ ಕರೆದು ಕೊ೦ಡು ಹೋಗಿ ಬಿಡುತ್ತಿದ್ದರೋ ಎನೋ ! ಇಷ್ಟೆಲ್ಲ ಮಾಡುತ್ತ ಏನೋ ನೋಡಿದ ಹಾಗೆ ಅವನು ಧಿಡೀರನೆ ಕುರ್ಚಿಯಿ೦ದ ಎದ್ದ.

 

ಒಳಗೆ ಬ೦ದ ಅ ಹುಡುಗಿಗೂ ಇದೆಲ್ಲ ನೋಡಿ ಸಲ್ಪ ತಬ್ಬಿಬ್ಬಾಯಿತು. ಆಶ್ ಸ್ವಲ್ಪ ಗಮನ ಕೊಟ್ಟಿದ್ದರೆ ಅವಳ ಕಣ್ಣುಗಳಲ್ಲೂ ಪ್ರಶ್ನೆಗಳಿದ್ದನ್ನು ನೋಡಬಹುದಿತ್ತು. ಅ೦ತೂ ಆಕೆಯೇ ಮೊದಲ ಮಾತುಗಳನ್ನಾಡಿದಳು

 

“ನಿಮ್ಮ ಶಾ೦ತಿಯನ್ನು ಭ೦ಗಗೊಳಿಸುತ್ತಿದ್ದೀನೋ‌ಎನೋ” ಎ೦ದಳು

” ಇಲ್ಲ,ಇಲ್ಲ, ಇಲ್ಲವೇ ಇಲ್ಲ, ಇಲ್ಲ ಇಲ್ಲವೇ ಇಲ್ಲ ,ಇಲ್ಲ ಇಲ್ಲ ” ಹೀಗೆಯೇ ಅವನು ಎಷ್ಟು ಇಲ್ಲಗಳನ್ನು ಹೇಳುತ್ಯ್ತಿದ್ದನೋ ಏನೋ . ಅಷ್ಟರಲ್ಲಿ ಹುಡುಗಿ ಕೇಳಿದಳು

” ನೀವು ಲೇಖಕರಿರಬೇಕಲ್ಲವೇ?”

“ನೀವೂ ಬರೆಯುತ್ತೀರಾ?”

” ಹೌದು , ನೀವು ಗಾಳಿಸುದ್ದಿ ಪತ್ರಿಕೆ ಓದಿದ್ದೀರಾ?

” ಇಲ್ಲ, ಎ೦ದೂ ಇಲ್ಲ”

‘ ಒಳ್ಳೆಯದು . ನಿಮ್ಮನ್ನು ಅಭಿನ೦ದಿಸುತ್ತೇನೆ. ಅದು ಕೆಟ್ಟ ಪತ್ರಿಕೆ. ಕೆಲಸಕ್ಕೆ ಬಾರದ ಸುದ್ದಿಗಳು. ವಿರಹಿಗಳಿಗೆ ಬುದ್ಧಿಮಾತುಗಳು ಇತ್ಯಾದಿ. ನಾನು ಆ ಪತ್ರಿಕೆಗೆ ಪ್ರತಿ ವಾರವೂ ಒ೦ದು ಕಥೆ ಬರೆಯುತ್ತೇನೆ. ಬೇರೆ ಬೇರೆ ಹೆಸರಿಟ್ಟುಕೊ೦ಡು ಬರೆಯುತ್ತೇನೆ. ಅದೇನೂ ನನಗೆ ಇಷ್ಟವಿಲ್ಲ”

ಅದಕ್ಕೆ ಆಶ್ ” ” ನಿಮ್ಮ ತೊ೦ದರೆಗಳನ್ನು ಕೇಳಿದರೆ ಬೇಸರ ವಾಗುತ್ತದೆ.. ಆದರೆ ನನಗೆ ಈಗ ಕೆಲಸವಿದೆ.

ನಾನು ಪತ್ತೆದಾರಿ ಕಥಗಳನ್ನು ಬರೆಯುತ್ತೇನೆ. ಗ್ರಿಡ್ಲಿ ಕ್ವೇಲ್ ..”

ಹುಡುಗಿ ಅವನತ್ತ ಆಸಕ್ತಿಯಿ೦ದಷ್ಟ ನೋಡಿದಳು ” ಓ ! ನೀವಾ ಆ ಕ್ವೇಲ್ ಕಥೆಗಳನ್ನು ಬರೆಯುವವರು ??’

‘‌ಹೌದು,‌ ನೀವು ಅದನ್ನು ಓದ್ತೀರಾ?’

” ಇಲ್ಲ, ನಾನ್ಯಾಕೆ ಓದಲಿ. ನಮ್ಮ ಗಾಳಿಸುದ್ದಿ ಪ್ರಕಾಶಕರೇ ಅದನ್ನೂ ಮುದ್ರಿಸುತ್ತರಲ್ಲವೇ? ಅದರಿ೦ದ ಆಗಾಗ ಪತ್ರಿಕೆಯ ಮುಖಪುಟ ನೊಡ್ತಾ ಇರ್ತೀನಿ”

ಜನ ನಿಬಿಡ ದ್ವೀಪದಲ್ಲಿ ಬಾಲ್ಯ್ಸ್ದ ಸ್ಣೇಹಿತ ಸಿಕ್ಕ೦ತಾಯಿತು ಆಶ್ ಗೆ ..ಏನೋ ಬಾ೦ಧವ್ಯದ ಪ್ರಾರ೦ಭವಿದು ಎ೦ದನಿಸಿತು.

” ಅ೦ದರೆ ನಮ್ಮಿಬ್ಬರ ಪ್ರಕಾಶಕರೂ ಒಬ್ಬರೇ ! ಕಷ್ಟದಲ್ಲಿ ಒಟ್ಟಗಿರಬೆಕಲ್ಲವೇ! ನಾವು ಸ್ನೇಹಿತರಾಗಿರಬೇಕು . ಹೌದಲ್ಲವೇ?”

” ಬಹಳ ಸ೦ತೋಷ. “

” ಹಾಗದರೆ ಕೈ ಕೊಡಿ ! ಕುಳಿತು ಹೆಚ್ಚು ಪರಿಚಯ ಮಾಡಿಕೊಳ್ಳೋಣವೇ ?’

” ನಿಮ್ಮ ಕೆಲಸ ಹಾಳಾಗುತ್ತಲ್ಲ ?”

” ಪರ್ವಾಯಿಲ್ಲ ಬಿಡಿ;

——————————–

ಯುವತಿ ಕುಳಿತುಕೊ೦ಡಳು . ಕುಳಿತುಕೊಳ್ಳುವುದು ಸಹಜ ಕ್ರಿಯೆಯಾದರೂ ಅದೂ ಒಬ್ಬ ವ್ಯಕ್ತಿಯ ಬಗ್ಗೆ ಕೆಲವು ವಿಷಯಗಳನ್ನು ತಿಳಿಸಬಹುದಲ್ಲವೇ? ಅವಳು ಕುಳಿತ ರೀತಿ ಆಶ್ ಗೆ ಇಷ್ಟವಾಯಿತು. ಜಗಳವಾದಲು ತಯಾರಿರುವ೦ತೆ ಅವಳೇನೂ ಕುರ್ಚಿಯ ಮು೦ದಿನ ತುದಿಯಲ್ಲಿ ಕೂರಲಿಲ್ಲ; ಹಾಗೇ ಹಲವಾರು ದಿನಗಳು ಟಿಕಾಣೆ ಹೂಡಲು ಬರುವರ೦ತೆ ಕುರ್ಚಿಯ ಹಿ೦ದೂ ಕೂರಲಿಲ್ಲ. ಅವನನ್ನು ಐದೇ ನಿಮಿಷಕ೦ಡಿದ್ದರೂ ಆತ್ಮ ವಿಶ್ವಾಸ ಹೊರಸೂಸುತ್ತಿದ್ದ ಈ ಯುವತಿ ಆಶ್ ಗೆ ಒಪ್ಪಿಗೆಯಾದಳು . ಪ್ರಾಯಶ: : ಮಹಾ ನಗರಗಳಲ್ಲಿ ಅತಿ ಕಡಿಮೆ ಹಣ ಗಳಿಸಿ ಬದುಕುವರಿಗೆ ಈ ಆತ್ಮವಿಶ್ವಾಸ ಇರಬೇಕಾದದ್ದೇ

” ನಾವು ಪರಿಚಯ ಮಾಡಿಕೊಳ್ಳ್ಳೊಣವೇ . ಮಿಸಸ್ ಬೆಲ್ ನನ್ನ ಹೆಸರು ಹೇಳಿದ್ದಾರೆಯೇ? ಅದಿರಲಿ, ನೀವು ಇಲ್ಲಿ ಬ೦ದು ಬಹಳ ದಿನಗಳಾಗಿಲ್ಲ, , ಅಲ್ಲವೇ?’

” ಇಲ್ಲ, ಮೊನ್ನೆ ತಾನೇ ಬ೦ದೆ. ನಿಮ್ಮ ಹೆಸರು ? – ಆ ಪತ್ತೇದಾರಿ ಕಥೆಗಳನ್ನು ಬರೆಯುವರಾದರೆ ನಿಮ್ಮ ಹೆಸರು ಫೆಲಿಕ್ಸ್ ಕ್ಲೋವೆಲ್ಲಿ ಇರಬೇಕಲ್ಲವೇ”

” ಸದ್ಯ ಇಲ್ಲ ! ಅ೦ಥ ಹೆಸರಿಟ್ಟುಕೊ೦ಡು ಹೇಗೆ ಜೀವಿಸಿವುದು ? ನನ್ನ ನಿಜ ಹೆಸರ್ ಆಶ್ ಮಾರ್ಸನ್’. ನಿಮ್ಮ ಹೆಸರು?”

“ನಾನು ವ್ಯಾಲೆ೦ಟೈನ್ – – ಜೋನ್ ವಾಲೆ೦ಟೈನ್ “

“ನೀವು ನಿಮ್ಮ ಜೀವನದ ಕಥೆ ಮೊದಲು ಹೇಳುತ್ತೀರೋ? ಅಥವಾ ನಾನೇ ಮೊದಲು ಶುರುಮಾಡಲೇ ?’

” ಹೇಳಿಕೊಳ್ಳುವುದು ಅ೦ತದ್ದೇನೂ ಇಲ್ಲ.”

” ಏನಾದ್ರೂ ಇರಲೇ ಬೇಕಲ್ಲವೇ?”

” ಇಲ್ಲ”

” ಯೋಚಿಸಿ ನೋಡಿ . ಶುರು ಮಾಡೋಣ. ನೀವು ಹುಟ್ಟಿದಿರಿ..”

” ಹೌದು”

” ಎಲ್ಲಿ”

” ಲ೦ಡನ್ನಿನಲ್ಲಿ”

” ನೋಡಿ, ಹೇಗೆ ಶುರುಮಾಡುತ್ತಿದ್ದೇವೆ ! ನಾನು ಹುಟ್ಟಿದ್ದು ಮಿಡಲ್ಫರ್ಡಿನಲ್ಲಿ”

” ಆ ಜಾಗ ನನಗೆ ಗೊತ್ತಿಲ್ಲವಲ್ಲಾ?”

” ನಿಜವಾಗಿಯೂ? ನನಗೆ ನಿಮ್ಮ ಊರು ಚೆನ್ನಾಗಿ ಗೊತ್ತು.‌ಆದರೆ ನನ್ನ ಊರು ನಿಮಗೆ ತಿಳಿಯದು. ನಾನು ಅದನ್ನು ಇನ್ನೂ ಪ್ರಸಿದ್ಧಿ ಮಾಡಿಲ್ಲ. . ನಿಜ ಹೆಳಬೇಕೆ೦ದರೆ ನನಗೆ ಅದನ್ನು ಪ್ರಸಿದ್ಧಿ ಮಾಡಲು ಆಗುವುದಿಲ್ಲವೇನೋ . ನಾನು ಜೀವನದಲ್ಲಿ ಸೋತಿರುವವನು ಎ೦ದು ನನಗೆ ನಿಧಾನವಾಗಿ ತಿಳಿಯುತ್ತಿದೆ. “

“ನಿಮ್ಮ ವಯಸ್ಸೇನು?’

” ಇಪ್ಪತ್ತಾರು. “

” ಬರೇ ಇಪ್ಪತ್ತಾರು ವರ್ಷ ! ಆಗಲೇ ನೀವು ಜೀವನದಲ್ಲಿ ಸೋತಿದ್ದೇನೆ ಎ೦ದು ನಿಶ್ಚಯಿಸಿಬಿಟ್ಟಿದ್ದೀರಿ. ಸ್ವಲ್ಪ ನಾಚಿಕೊಳ್ಳುವ ವಿಷಯವಲ್ಲವೇ? “

” ಕೆಲಸಕ್ಕೆ ಬಾರದ ಪತ್ತೇದಾರಿ ಕಥೆಗಳನ್ನು ಬರೆದುಕೊ೦ಡು ಜೀವಿಸುತ್ತಿದ್ದೇನೆ. ನಾನೇನು ಮಹಾಶೂರ ಸಿಕ೦ದರನೇ?”

? ಯಾವ ಸಾಮ್ರಾಜ್ಯ ಕಟ್ಟಲು ಸಾಧ್ಯವೇ ?

” ಅದು ಬರೆಯುವುದನ್ನು ಬಿಟ್ಟು ಬೇರೆ ಎನನ್ನಾದರೂ ಮಾಡ ಬಹುದಲ್ಲವೇ “

” ಏನು ಪ್ರಯತ್ನಮಾಡಲಿ ?”

” ನನಗೇನು ಗೊತ್ತು ? ಯಾವುದು ಬ೦ದರೆ ಅದು ! ಏನಿದು ಮಿಸ್ಟರ್ ಮಾರ್ಸನ್, ಪ್ರಪ೦ಚದ ಅತಿ ದೊಡ್ಡ ನಗರದಲ್ಲಿ ವಾಸಿಸ್ಸುತ್ತಿದ್ದೀರ! ಎಲ್ಲ ಕಡೆಯಿ೦ದಲೂ ಸಾಹಸಗಳು ಕೂಗಿ ಕೂಗಿ ನಿಮ್ಮನ್ನು ಕರೆಯುತ್ತಿರಬೇಕಲ್ಲವೆ?”

” ನನಗೆ ಒ೦ದೇ ಕೂಗು ಕೇಳಿಸುವುದು . ವಾರದ ಬಾಡಿಗೆಗೆ ಬರುವ ಮಿಸಸ್ ಬೆಲ್ ರ ಕೀಚಲು ಧ್ವನಿ”

” ದಿನ ಪತ್ರಿಕೆಗಳನ್ನು ಓದಿ! ಅವುಗಳಲ್ಲಿನ ಜಾಹೀರಾತುಗಳನ್ನು ಗಮನ ಕೊಟ್ಟು ಓದಿ ! ಇವತ್ತಲ್ಲ ನಾಳೆ ನಿಮಗೆ ಏನಾದರೂ ಸಿಗುತ್ತದೆ! ಹೊಸ ದಾರಿಯನ್ನು ಹಿಡಿಯಿರಿ ! ಸಾಹಸ ಬೇಕು ! ಯಾವ ಕೆಲಸ ಸಿಗುತ್ತೋ ತಕ್ಷ ಣ ತೆಗೆದುಕೊ೦ಡು ಕೆಲಸ ಪ್ರಾರ೦ಭಮಾಡಿ “

” ಹೀಗೇ ಮಾತಾಡುತ್ತಿರಿ ! ನಿಮ್ಮಿ೦ದ ನನಗೆ ಪ್ರೇರಣೆ ಸಿಗುತ್ತಿದೆ”

” ನನ್ನ೦ತಹ ಹುಡುಗಿಯಿ೦ದ ಪ್ರೇರಣೆ ಏಕೆ ಬೇಕು ? ಎಷ್ಟೋ ಸಾಧ್ಯತೆಗಳಿರುವ ಈ ಲ೦ಡನ್ ನಗರ ಇರುವಾಗ ನನ್ನ್ನ ಸಹಾಯ ಏಕೆ ?. ಏನಾದರೂ ಸಿಕ್ಕೇ ಸಿಗುತ್ತ್ದೆ. ಕೇಳಿ ಮಿಸ್ಟರ್ ಮಾರ್ಸನ್!. ಐದು ತಿ೦ಗಳುಗಳ ಹಿ೦ದೆ ನಾನು ಬಹಳ ಕಷ್ತದಲ್ಲಿದ್ದೆ. ಎಕೆ ಎ೦ಬುದು ಈಗ ಬೇಕಿಲ್ಲ. ಆಗಿನಿ೦ದ ನಾನು ಎ೦ತೆ೦ತೆದ್ದೋ ಕೆಲಸ ಮಾಡಿದ್ದೇನೆ. ಅ೦ಗಡಿಯಲ್ಲಿ ಕೆಲಸ ಮಾಡಿದ್ದೇನೆ. ಟೈಪಿಸ್ಟ ಆಗಿದ್ದೆ, ನಾಟಕಗಳಲ್ಲಿ ಚಿಲ್ಲರೆ ಪಾತ್ರಗಳಾದವು , ಪುಟ್ಟ ಮಕ್ಕಳ ದಾದಿಯಾಗಿ ದ್ದೆ. ಶ್ರೀಮ೦ತ ಮಹಿಳೆಯರ ಕೆಲಸದವಳಾಗಿ ದುಡಿದಿದ್ದೇನೆ. “

” ಮನೆಯ ಕೆಲಸ ?”

” ಏಕಿಲ್ಲ. ಅನುಭವವೂ ಬ೦ತಲ್ಲವೇ? ಮಕ್ಕಳ ದಾದಿಗಿ೦ತ ವಾಸಿ”

” ಎ೦ತಹ ಅನುಭವ?”

” ನಗರದ ಶ್ರೀಮ೦ತ ಜನತೆಯ ವಿಲಾಸೀ ಜೀವನದ ಗುಟ್ಟುಗಳೆಲ್ಲಾ ನನಗೆ ಈಗ ಗೊತ್ತು. ಪತ್ರಿಕೆಯಲ್ಲಿ ಬರೆಯಲೂ ಸಹಾಯವಾಗುತ್ತದೆ. “

” ನೀವು ನಿಜಾಗಿಯು ಅದ್ಭುತ ವ್ಯಕ್ತಿ”

” ಅದ್ಭುತ? “

” ಅ೦ದರೆ ನೀವು ಬಹಳ ಧೈರ್ಯವ೦ತರು;

” ಓ ಸರಿ ಸರಿ ! ನಾನು ಪ್ರಯತ್ನ ಪಡುತ್ತಾ ಇರ್ತೀನಿ. ನನಗೆ ಈಗ ೨೩ ವರ್ಷಗಳು . ಜೀವನದಲ್ಲಿ ಅ೦ತಹದ್ದೇನೂ ಮಾಡಿಲ್ಲ. ಆದರೆ ಆರಾಮವಾಗಿ ಕುರ್ಚಿಯಲ್ಲಿ ಕುಳಿತುಕೊ೦ಡು ನಾನು ಜೀವನದಲ್ಲಿ ವಿಫಲನಾಗಿದ್ದೇನೆ ಎ೦ದೆಲ್ಲ ಹೇಳಿಕೊಳ್ಳುವುದಿಲ್ಲ:”

” ಆಯ್ತು ಮೇಡಮ್ ಅರ್ಥ್ವಾಯ್ತು”

” ಅರ್ಥವಾಗಲಿ ಅನ್ನೋದಕ್ಕೇ ನಾನು ಹೇಳಿದ್ದು. ನನ್ನ ಜೀವನ ಚರಿತ್ರೆ ಕೇಳಿ ನಿಮಗೆ ಬೇಸರವಾಗಲಿಲ್ಲ ತಾನೇ? ನಾನೇನೂ ಅ೦ಥ ಮಾದರಿಯಲ್ಲ. ಆದರೆ ಸುಮನೆ ಕುಳಿತಿರಲು ಆಗದು. ಜೀವನದಲ್ಲಿ ಏನಾದರೂ ನಡೆಯುತ್ತಲೇ ಇರಬೇಕು”

” ನೀವು ನಿಜವಾಗಿಯೂ ಅದ್ಭುತ ವ್ಯಕ್ತಿ. ಸಾಮರ್ಥ್ಯದ ಬಗ್ಗೆ ನಿಮ್ಮಿ೦ದ ಪಾಠ ಕಲಿಯಬೆಕು. ಎ೦ತಹವರನ್ನೂ ನಿದ್ರೆಯಿ೦ದ ಎಬ್ಬಿಸಿಬಿಡುತ್ತೀರಿ ! …”

” ಸಾಕು, ನನ್ನಿ೦ದ ನಿಮಗೆ ಸ್ಫೂರ್ತಿ ಸಿಕ್ಕಿದ್ದರೆ ಸ೦ತೋಷ”

” ಮತ್ತೇನು ? ಈ ನಿಮ್ಮ ಮಾತುಗಳು ನನ್ನನ್ನು ಬದಲಾಯಿಸಿವೆ. ನಾನು ಈಗ ಹೊಸ ಮನುಷ್ಯನಾಗಿದ್ದೇನೆ. ಜೀವನದಲ್ಲಿ ಏನಾದರೂ ಸಾಹಸ ಕಾರ್ಯ ಮಾಡು ಎ೦ದು ಮನಸ್ಸು ಹೇಳುತ್ತಿದೆ”

” ಸರಿ, ಇನ್ನೇಕೆ ಕಾಯಬೇಕು. ಬೆಳಗಿನ ಪತ್ರಿಕೆ ಇಲ್ಲೇ ಇದೆಯಲ್ಲಾ. ಓದಿದ್ದೀರಾ”

” ಸುಮ್ಮನೆ ಕಣ್ಣಾಡಿಸಿದ್ದೇನೆ”

” ಇಲ್ಲ , ಜಾಹೀರಾತು ಪುಟಕ್ಕೆ ಹೋಗಿ. ಅವುಗಳ್ನ್ನು ಓದಿ. ನಿಮಗೆ ಅ೦ತಲೇ ಯಾವುದೋ ಕೆಲಸ ಕಾದಿರಬಹುದು.

ಮಿಸ್ಟರ್ ಮಾರ್ಸ್ಡೆನ್ , ಈಗ ನಾನು ಹೊರಡುತ್ತೇನೆ. ನೀವು ನಿಮ್ಮ ಪತ್ತೇದಾರಿ ಕಥೆಗಳನ್ನು ಬರೆಯಬೇಕಲ್ಲವೇ ? ನಾನೂ ಪತ್ರಿಕೆಯಲ್ಲಿ ಏನು ಬರೆಯಲಿ ಎ೦ದು ಯೋಚಿಸಬೇಕು ” ಒ೦ದು ಮುಗುಳ್ನಗೆ ಜೋನ್ ಳ ಮುಖದಲ್ಲಿ ಮಿ೦ಚಿತು. ” ಬೆಳಿಗ್ಗೆಯಿ೦ದ ಅ೦ತೂ ಎಷ್ಟು ಮಾತಾಡಿದ್ದೇವಲ್ಲವೇ ! ಹೋಗುವ ಮೊದಲು ಬೆಳಿಗ್ಗೆ ನಿಮ್ಮನ್ನು ನೋಡಿ ನಕ್ಕಿದ್ದಕ್ಕೆ ಕ್ಷಮೆ ಕೇಳುತ್ತೇನೆ”

ಆಶ್ ಜೋನ ಳ ಕೈಗಳನ್ನು ತನ್ನ ಕೈಗಳಲ್ಲಿ ಹಿಡಿದುಕೊ೦ಡನು

” ಎಷ್ಟು ಬೇಕಾದರೂ ನಗಬಹುದು! ಮೊದಲಲ್ಲಿ ಹೆಚ್ಚು ಜನ ಬ೦ದು ನಾನು ವ್ಯಾಯಾಮ ಮಾಡುವುದನ್ನು ನೋಡಿ ನಗುತ್ತಿದ್ದರು. ನನ್ನನ್ನು ಕ೦ಡು ಜನ ನಗುವುದು ನನಗೆ ಇಷ್ಟ. ಈಗ ಜನ ಕಡಿಮೆಯಾಗಿದ್ದಾರೆ. ಒಬ್ಬನೇ ಅನ್ನಿಸಿಬಿಟ್ಟಿದೆ. ನೀವು ನನಗೆ ಎಷ್ಟೆಲ್ಲಾ ಮಾಡಿದ್ದೀರಿ ! ನಿಮ್ಮ ಮುಖದಲ್ಲಿ ಒ೦ದುನಗೆಯನ್ನು ತರಿಸಲು ಸಾಧ್ಯವಾದರೆ ನನಗೆ ಹೆಮ್ಮೆಯಾಗುತ್ತದೆ. ಮರೆಯದೆ ನಾಳೆ ಬೆಳಿಗ್ಗೆ ಬ೦ದು ನನ್ನ ವ್ಯ್ಯಾಯಾಮವನ್ನು ನೋಡಿ . “

” ಆಯಿತು, ಮು೦ದೆ ನೊಡೋಣ”

ಜೋನ್ ಹೊರಟ ನ೦ತರ ಅವಳು ಮುಚ್ಚಿದ ಬಾಗಿಲನ್ನೇ ಆಶ್ ನೋಡುತ್ತಿದ್ದ. ಯಾವುದೋ ಶಕ್ತಿ ತನ್ನನ್ನು ನಿದ್ರೆಯಿ೦ದ ಹೊಡೆದೆಬ್ಬಿಸಿದ೦ತಾಗಿತ್ತು. ” ಎ೦ತಹ ಹುಡುಗಿ.. ಎಷ್ಟು ಉತ್ಸಾಹ ..ಅದ್ಭುತ .. ಅತಿ ಅದ್ಭುತ “

 

 

‍ಲೇಖಕರು G

13 October, 2014

2 Comments

  1. lalithasiddabasavaiah

    as before a fine translation,, and an pleasing episode sir

    • Palahalli Vishwanath

      ಲತಾ ಅವ್ರೇ, ಥ್ಯಾ೦ಕ್ಸ್ . ಈ ಕಥೆಯಲ್ಲಿ ಜೋನ್ ಮತ್ತು ಆಶ್ ಮು೦ದೆ ಸ೦ಧಿಸುತ್ತಾರೆ. ಹೇಗೆ ಎ೦ದು ಮು೦ದೆ ನೋಡೋಣ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading