ಡಿ ರವಿವರ್ಮ
ಹೊಸಪೇಟೆ
ಯಾಕೋ ಮನಸು ತುಂಬಾ ಭಾರವಾಗಿತ್ತು. ಬೇಸರ, ನೋವು, ಆತಂಕ,ಶೂನ್ಯತನ,ಎಲ್ಲವನ್ನು ದೂರ ತಳ್ಳಲು ಹಾಗೆ ಘಾಲಿಬ್ನ ತೆಕ್ಕೆಗೆ ಬಿದ್ದೆ.. ಆ ಕಾವ್ಯದ ಮೋಡಿಯಲ್ಲಿ ಮುಳುಗಿಹೋದೆ, ಆ ಕಾವ್ಯದ ನಶೆಯಲ್ಲಿ ನನ್ನನ್ನೇ ನಾನು ಕಳೆದುಕೊಂಡೆ..ವಾಹ್ ಗಾಲಿಬ್ ನಿನ್ನ ಎದೆಯಲ್ಲಿ ಹೊತ್ತಿದ್ದ ಆ ಪ್ರೇಮದ ಜ್ವಾಲೆ, ಆ ನಿನ್ನ ಒಳ ಮನಸ್ಸಿನ ಬರಹ, ನಿನ್ನನ್ನೇ ನೀನು ಆ ಪ್ರೇಮದ ಹಾದಿಯಲ್ಲಿ ಕಳೆದು ಕೊಂಡ ಅನನ್ಯತೆ..ನಿಜಕ್ಕೂ ಎದೆ ಜಲ್ಲೆನುಸುವಂತಿದೆ..ಮನ ತಟ್ಟುವಂತಿದೆ ಮನ ಮುಟ್ಟುವಂತಿದೆ..ಪ್ರೇಮ ಸರೋವರದಲ್ಲಿ ಕೊನೆ ಇಲ್ಲದ ಪಯಣ ಮಾಡಿಸಿದಂತಿದೆ …
ದೇವರ ಗೊಡವೆ ಬೇಡ … ಮಿರ್ಜಾ ಗಾಲಿಬ್ ಅಭಿನವ ಪ್ರಕಾಶನ, ಸಂಪಾದಕ ನ..ರವಿಕುಮಾರ್ ಹಾಗೆ ನೋಡಿದರೆ ಅವರ ಘಜಲ್ಗಳ ಅನುವಾದ..ಇಲ್ಲಿದೆ..
ಒಂದೆರಡು ಮನತಟ್ಟುವ ಘಜಲ್ಗಳ ಝಲಕ್ ನಿಮ್ಮೊಂದಿಗೆ..

ಅವಳನ್ನು ನೋಡಿದ ಮರುಕ್ಷಣ,
ನನ್ನ ಕಣ್ಣು ಮಿನುಗುತ್ತವೆ,
ಕಾಯಿಲೆ ಎಲ್ಲಿಯದು,
ಎಲ್ಲ ಸುಳ್ಳು ಎನ್ನುತ್ತಾಳವಳು..
ಎಂದು ಉದ್ಗರಿಸುತ್ತಾ ಅವಳಿಗಾಗಿ ನೂರಾರು ದ್ವಿಪದಿಗಳನ್ನು ಬರೆದು ಅವಳ ಓಡ್ಯಾನಕ್ಕೆ ಸಿಕ್ಕಿಬಿದ್ದ ಗಾಲಿಬ್
ಅನುವಾದ : ರವಿಬೆಳೆಗೆರೆ
ಈ ಕೆಳಗಿನ ಸಾಲುಗಳನ್ನು ಸಾಲುಗಳನ್ನು ಸಂವರ್ಥ ಸಾಹಿಲ್ ಅನುವಾದ ಮಾಡಿದ್ದಾರೆ…..
ಧೀರ್ಘಾಯುಷ್ಯವ ಬೇಡಿ ನಾಲ್ಕು ದಿನಗಳ ಪಡೆದೆ, ಎರಡು ದಿನ ಆಶೆಯಲಿ, ಎರಡು ದಿನ ಕಾಯುವಿಕೆಯಲಿ ಕಳೆದೆ..
ಈ ಚೆಲುವೆಯ ಕಾಲು ನೋಯುತ್ತಿದೆಯಂತೆ, ಇಂದು ರಾತ್ರಿ ತುಸು ಹೆಚ್ಚೇ ಓಡಾಡಿರಬೇಕು,ಯಾರದೋ ಕನಸಿನಲಿ ..
ನನ್ನ ನಾಲಿಗೆಯಿಂದ ಮಾತುಗಳು ಹೊರಡುತ್ತವೆ,
ಎಂದಾದರು ಬಯಕೆ ಏನೆಂದು ಕೇಳಬಾರದೆ,
ನಾನು ಯಾರಿಂದ ಪ್ರೀತಿ ನಿರಿಕ್ಷಿಸುತ್ತಿರುವೇನೋ,
ಆಕೆಗೆ ಪ್ರೀತಿ ಏನೆಂಬುದು ತಿಳಿದಿಲ್ಲ…
ಮಾನವೀಯತೆ ಗಾಲಿಬ್ ಕವನಗಳಲ್ಲಿ ಎದ್ದು ಕಾಣುವ ಅಂಶ .ಮಾನವ ರೂಪದಲ್ಲಿರುವವರೆಲ್ಲ ಮಾನವರಲ್ಲ ಮಾನವೀಯತೆ ಉಳ್ಳವರು ಮಾತ್ರ ಮಾನವರು ಹಾಗೆ ಮಾನವರಾಗುವುದು ಬಲು ಕಷ್ಟದ ಕೆಲಸ ಎಂಬುದು ಅವರ ನಿಲುವು..
ತುಂಬಾ ಕಷ್ಟ ಪ್ರತಿಯೊಂದು ಕೆಲಸವೂ ಸರಳವಾಗುವುದು ..
ಜನರಿಗೆಲ್ಲ ಸುಲಭ ಸಾಧ್ಯವಲ್ಲ ಮಾನವರಾಗುವುದು..
ಕಾಗದಗಳು ಇಲ್ಲವಾದವು ಆದರೆ ನಿನ್ನ ಪ್ರಶಂಸೆ ಇನ್ನು ಬಾಕಿ ಇದೆ,
ದೋಣಿ ಬೇಕಾಗಿದೆ ದಡವಿಲ್ಲದ ಸಾಗರದಲಿ ವಿಹರಿಸಲು..
ನಿಮ್ಮ ಪ್ರೇಯಸಿಯ ಕೆನ್ನೆಯ ಕಡೆಗೆ,
ಕತ್ತಲಲ್ಲಿ ಬೆರಳು ಸರಿಸುವ ಮುನ್ನ,
ಗೊತ್ತಿಲ್ಲದ ಮಚ್ಚೆಗೆ,ಹೆಸರಿಡಲು ಹೊರಡುವ ಮುನ್ನ,
ನಿಮ್ಮ ಒಂದೊಂದು ಆಸೆಗೂ ಒಂದೊಂದು
ಜನ್ಮವೆತ್ತಲು ನಿರ್ದರಿಸುವ ಮುನ್ನ …
ಪ್ಲೀಸ್ ನೀವೊಮ್ಮೆ ಅಸಾದುಲ್ಲಾ ಬೇಗ್ ಖಾನ್ ಗಾಲಿಬ್ ನನ್ನು ಬೆಟ್ಟಿಯಾಗಬೇಕು ..
ಪ್ರೀತಿ, ಕವಿತೆ, ನಿರಾಸೆ,ತಿರಸ್ಕಾರ, ಫಿಲಾಸಫಿ,ಹಮ್ಮು, ಆತ್ಮಗೌರವ,ಮತ್ತು ಹಟಮಾರಿತನಗಲೆಲ್ಲ ತಂತಾನೇ ಮಿಕ್ಸ್ ಆಗಿ ಅವೆಲ್ಲವುಗಳ ನಡುವಿನಿಂದ ಒಂದು ಸಾಂದ್ರ ಶಿಲ್ಪ ಎದ್ದು ಬಂದದ್ದೆ ಆದರೆ ಅದಕ್ಕೆ ಮಾತ್ರ ನೀವು ಅಸಾದುಲ್ಲ ಖಾನ್ ಗಾಲಿಬ್ ಎಂದು ಹೆಸರಿಡಬಹುದು…[ಹಿನ್ನುಡಿ ಯಿಂದ ಆಯ್ದದ್ದು }
ಎಸ್ ಭಾಗೇಶ್ರಿ ಅನುವಾದ:
ಕಿವಿ ಕಿವುಡಾದಾಗ,ಹೃದಯ ಹಾಡಿಗೆ ಹಪಹಪಸುವಾಗ,
ಜೀವನದ ಅರ್ಥ ಹುಡುಕುವುದಾದರೂ ಹೇಗೆ ಹೇಳು …
ಪಂಜರದಲಿ ಬಂದಿಯಾಗಿದ್ದೇನೆ
ಆದರು ಬಾ ಹೇಳಿಬಿಡು ,
ಉದ್ಯಾನವನದ ಕತೆ
ನಿನ್ನೆ ಸುಟ್ಟು ಕರಕಲಾದ ಗೂಡು
ನನ್ನದೇ ಆಗಿರಬೇಕಲ್ಲವಲ್ಲ ..
ಬಣ್ಣ ಆಕಾರಗಳೇನೆ ಬದಲಾಗಲಿ
ನೋಡುವ ಕಣ್ಣು ಎಂದು ತೆರೆದೇ ಇರಲಿ…
ಬಹುದಿನಗಳ ನಂತರ ಒಂದು ಎದೆ ಕಲಕುವ, ಥ್ರಿಲ್ ನೀಡುವ ಕಾವ್ಯ ಒದಿದೆ…






chennagide
Great !
super sir