ಪ್ರಗತಿಪರರು ಆಚರಣೆ ವಿರೋಧಿಗಳಲ್ಲ,
ಆಚರಣೆಯ ಹೆಸರಿನಲ್ಲಿ ನಡೆಯುವ ಮೌಢ್ಯತೆಯ ವಿರೋಧಿಗಳು
ಡಾ. ಕಿರಣ್.ಎಂ ಗಾಜನೂರು
ಕಳೆದ ಕೆಲವು ದಿನಗಳಿಂದ ಸುಬ್ರಮ್ಮಣ್ಯ ದೇವಸ್ಶಾನದಲ್ಲಿನ ಮಡೆಸ್ನಾನದ ಆಚರಣೆ ಕುರಿತು ಹಲವಾರು ಚಿಂತಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೆಲವು ಹಿತಾಸಕ್ತಿಗಳು ಮಡೆ ಸ್ನಾನವನ್ನು ಇತರೆ ಜಾತಿಯವರು ಹಲವು ಕಡೆ ಮಾಡಿತ್ತಿದ್ದಾರೆ, ಒಂದು ಊರಿನ ಸಂಪ್ರದಾಯವನ್ನು ಪ್ರಶ್ನಿಸಲು ನಾವ್ಯಾರು ಎಂದು ಹೇಳುವ ಮೂಲಕ ಸಮಥರ್ಿಸುತ್ತಿದ್ದಾರೆ. ಮಡೆ ಸ್ನಾನವನ್ನು ಯಾವುದೇ ಜಾತಿ ಆಚರಿಸಲಿ ಅದು ಅಮಾನಿಯವೇ, ಮತ್ತು ಬೇರೆ ಜಾತಿಯವರು ಇದನ್ನು ಮಾಡುತ್ತಿದ್ದಾರೆ ಎಂಬ ವಾದ ಇದುವರೆಗೂ ಈ ಆಚರಣೆ ಮಾಡಿಕೊಂಡು ಬಂದ ಬ್ರಾಹ್ಮಣಶಾಹಿಯ ಸಮರ್ಥನೆಯಾಗಲಾರದು. ಎಂಬ ನನ್ನ ನಿಲುವಿನ ಆಧಾರದ ಮೇಲೆ ಮೇಲೆ ನನ್ನ ಅಭಿಪ್ರಾಯ ತಿಳಿಸಬಯಸುತ್ತೇನೆ ಒಟ್ಟಾರೆ ಮಡೆ ಸ್ನಾನ ಕುರಿತು ಚಚರ್ೆಗಳಲ್ಲಿ ಎರಡು ಪ್ರಮುಖ ಅಂಶಗಳನ್ನು ಗುರುತಿಸಬಹುದು
1) ಮಡೆಸ್ನಾನ ಆಚರಣೆಯಲ್ಲಿ ಬ್ರಾಹ್ಮಣರು, ಬ್ರಾಹ್ಮಣೇತರರು ಭಾಗವಹಿಸುತ್ತಿದ್ದಾರೆ ಇದರಿಂದ ತಿಳಿದು ಬರುವುದು ಏನೆಂದರೆ ಈ ಆಚರಣೆಯು ಯಾವುದೋ ಒಂದು ಸಮುದಾಯದ (ಮುಖ್ಯವಾಗಿ ಬ್ರಾಹ್ಮಣರ) ಕುತಂತ್ರವಲ್ಲ ಬದಲಾಗಿ ಜನರು ಸ್ವಯಂ ಇಚ್ಚೆಯಿಂದ ಮಾಡುತ್ತಿರುವ ಕ್ರಿಯಾ ವಿಧಿಯಾಗಿದೆ. ಇದನ್ನು ಅರ್ಥಮಾಡಿಕೊಳ್ಳದೆ ಒಂದು ಸಮುದಾಯವನ್ನು ದೂಷಿಸುವುದು ಸರಿಯಲ್ಲ ಎಂಬುದು.
2) ಭಾರತೀಯ ಸಮಾಜದಲ್ಲಿ ಆಚರಣೆಗಳನ್ನು ಮಾಡಲು ನಿಧರ್ಿಷ್ಟ ವೈಚಾರಿಕ ವಿವರಣೆ ಅಥವ ಕಾರಣ ಇರಬೇಕೆಂಬ ನಿಯಮವೇನಿಲ್ಲ ಯಾವುದೇ ಕಾರಣಗಳಿಲ್ಲದೆಯೇ ಜನರು ತಲಾತಲಾಂತರದಿಂದ ಆಚರಣೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಆ ಅಚರಣೆಗಳಿಗೆ ಕಾರಣಗಳಿಲ್ಲ ಹಾಗಾಗಿ ಇವುಗಳನ್ನು ಮೂಢ ಆಚರಣೆಗಳು ಆ ಕಾರಣಕ್ಕಾಗಿ ಅವುಗಳನ್ನು ನಿಲ್ಲಿಸಬೇಕು ಎನ್ನುವವರು, ಮನುಷ್ಯವರ್ತನೆಯ ಒಂದು ವೈಜ್ಞಾನಿಕ ಸತ್ಯವನ್ನು ಅರಿತಿಲ್ಲ. ಅದೆಂದರೆ ಆಚರಣೆಗಳನ್ನು ಮುಂದುವರಿಸಲು ಕಾರಣ ಇಲ್ಲ ಎನ್ನುವುದೇ ಅವುಗಳನ್ನು ನಿಲ್ಲಿಸಲು ಕಾರಣವಾಗಲಾರವು. ಅವುಗಳನ್ನು ನಿಲ್ಲಿಸಲು ಪ್ರತ್ಯೇಕ ಕಾರಣಗಳು ಬೇಕು. ಇದು ಮಾನವ ಆಚರಣೆಯ ಕುರಿತು ವಿಜ್ಞಾನಿಗಳೇ ಹೇಳಿದ ವಿಚಾರ ಅದ್ದರಿಂದ ಈ ಸತ್ಯವನ್ನು ಪ್ರಗತಿಪರರು ಮತ್ತು ಆಚರಣೆಯಲ್ಲಿ ತೋಡಗಿರುವ ಭಕ್ತಸಮೂಹ ಅರ್ಥಮಾಡಿಕೊಂಡಿಲ್ಲ. ಅದ್ದರಿಂದಲೇ ಕುಕ್ಕೆ ಸುಬ್ರಹ್ಮಣ್ಯದ ಆಚರಣೆಯ ಕುರಿತು ಪ್ರಗತಿಪರರು ನಡೆಸುತ್ತಿರುವ ವಿರೋಧಗಳು ಆ ಆಚರಣೆಗಳಲ್ಲಿ ಭಾಗವಹಿಸುವ ಜನರಿಗೆ ಅರ್ಥವಾಗುತ್ತಿಲ್ಲ ಅದಕ್ಕೆ ವಿರುದ್ಧವಾಗಿ ಆಚರಣೆಗಳನ್ನು ವಿರೋಧಿಸುತ್ತಿರುವವರಿಗೆ (ಪ್ರಗತಿಪರರು) ಜನರೇಕೆ ಆಚರಣೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂಬುದು.
ವಿದ್ವಾಂಸರ ಮೇಲಿನ ವಾದದ ಆಧಾರದ ಮೇಲೆ ಮೊದಲನೆಯ ವಿವರಣೆಯನ್ನು ನೋಡುವುದಾದರೆ ಯಾವುದೇ ಸಮಾಜ ವಿಜ್ಞಾನದ ಸಂಶೋಧನೆಗಳು ಬ್ರಾಹ್ಮಣರನ್ನು ಕುತಂತ್ರಿಗಳು ಎಂದು ಕರೆದಿಲ್ಲ ಬದಲಾಗಿ ಒಂದು ನಿಧರ್ಿಷ್ಟ ಕಾಲಘಟ್ಟದ ಸಮಾಜದ ಮೇಲೆ ಹಲವಾರು ಮೌಲ್ಯಗಳು ಪ್ರಭಾವ ಬೀರುತ್ತವೆ ಬಹುಸಂಸ್ಕೃತಿಯುಳ್ಳ ಭಾರತದ ಸಮಾಜದ ಮೇಲೆ ಬ್ರಾಹ್ಮಣ ಕೆಂದ್ರಿತ ಮೌಲ್ಯಗಳ ಪ್ರಾಭಾವ ಹೆಚ್ಚಾಗಿವೆ ಮಡೆಸ್ನಾನದಂತಹ ಆಚರಣೆಗಳು ಇದೇ ವಿದ್ಯಮಾನವನ್ನು ಗಟ್ಟಿಗೊಳಿಸುತ್ತಿವ.ೆ ಆ ಮೂಲಕ ಮೂಲತ: ಮನುವಿನಿಂದ ಮುಂದಿಡಲ್ಪಟ್ಟು ಸಮಾಜದ ಎಲ್ಲಾ ಮಾನವರನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿರುವ ಬ್ರಾಹ್ಮಣಿಯ ಮೌಲ್ಯ, ಜೀವ ಮತ್ತು ಸಮಾನತೆಯ ವಿರೋಧಿಯೆಂದು ಭಾವಿಸಿದರೆ ತಪ್ಪಾಗಲಾರದು. (ಈ ವಾದದದ ಸತ್ಯತೆ ಕುರಿತು ಹಲವಾರು ಗುಣಾತ್ಮಕ ಚಚರ್ೆಗಳು ಈಗಾಗಲೇ ನಡೆಯುತ್ತಿವೆ ಅದು ಬೆರೆಯದೇ ವಿಚಾರ) ಅದ್ದರಿಂದ ಮಾನವ ಸಮಾನತೆಯನ್ನು ಬಯಸುವವರು, ಸಮಾಜವು ಆಚರಣೆಗಳ ಹೆಸರಿನಲ್ಲಿ ಬ್ರಾಹ್ಮಣಿಕರಣಕ್ಕೆ ಒಳಗಾಗುವುದನ್ನು ಆ ಮೂಲಕ ಮಾನವ ವಿರೋಧಿಯಾಗುವುದನ್ನು ತಡೆಯಬೇಕು ಎಂಬುದು ಇದುವರೆಗಿನ ಸಮಾಜ ಸಂಶೋಧನೆಗಳ ಒಟ್ಟು ಸಾರ. ಇದನ್ನು ಭಾರತದ ಪ್ರಖ್ಯಾತ ಸಮಾಜ ಸಂಶೋಧಕರೇ ಅನುಮೂದಿಸಿದ್ದಾರೆ ಅಸಕ್ತಿಕರ ಅಂಶವೆಂದರೆ ಇವರಲ್ಲಿ ಬಹುಪಾಲು ಚಿಂತಕರು ಬ್ರಾಹ್ಮಣ ಸಮುದಾಯಕೆ ಸೇರಿದ್ದಾರೆ. ಕನರ್ಾಟಕದ ಸಂದರ್ಭದಲ್ಲಿ ಇದನ್ನ ಇನ್ನು ನಿಧರ್ಿಷ್ಟವಾಗಿ ಗುರುತಿಸಬಹುದು. ಇದೇ ಅಲ್ಲದೇ ಈ ಚಚರ್ೆಯಲ್ಲಿ ಭಾಗವಹಿಸಿದ ಬಹುಪಾಲು ಚಿಂತಕರು ಮಡೆಸ್ನಾನ ಆಚರಣೆಯಲ್ಲಿ ಬ್ರಾಹ್ಮಣರು, ಬ್ರಾಹ್ಮಣೇತರರು ಭಾಗವಹಿಸುತ್ತಾರೆ. ಎನ್ನುವ ಮೂಲಕ ತಾವೇ ಸ್ವತ; ಬ್ರಾಹ್ಮಣೀಯ ರಾಜಕಾರಣದ ಭಾಗವಾಗಿದ್ದಾರೆ ಎನ್ನುವ ಭಾವನೆ ಬರುವಂತೆ ಮಾಡಿದ್ದಾರೆ. ಎಕೆಂದರೆ ಭ್ರಾಹ್ಮಣರು, ಮಾದಿಗರು, ಮಲೆಕುಡಿಯವರು, ಬಲಜಿಗರು, ಹೊಲೆಯರು ಮತ್ತು ಗೌಡರು ಇತ್ಯಾದಿ ಹಲವು ಜಾತಿಯವರು ಮಡೆಸ್ನಾನ ಆಚರಣೆಯಲ್ಲಿ ಭಾಗವಹಿಸುತ್ತಾರೆ ಎಂಬುದಾಗಿ ಹೇಳಬಹುದಿತ್ತು ಅದಕ್ಕೆ ಬದಲಾಗಿ ಭ್ರಾಹ್ಮಣರು, ಬ್ರಾಹ್ಮಣೇತರರು ಎಂದು ಹೇಳುವ ಮೂಲಕ ಭಾರತದಲ್ಲಿ ಇರುವುದು ಎರಡೇ ಜಾತಿ ಒಂದು ಬ್ರಾಹ್ಮಣರು ಇನ್ನೊಂದು ಬ್ರಾಹ್ಮಣೇತರರು ಎನ್ನುವ ಮೂಲಕ ಅವರಿಗೆ ತಿಳಿಯದಂತೆ ಒಂದು ನಿಧರ್ಿಷ್ಟ ರಾಜಕೀಯ ಗ್ರಹಿಕೆಯ ಮೂಲಕ ಜಾತಿಗಳನ್ನು ಗುರುತಿಸುವ ಮನಸ್ಥಿತಿಯ ಭಾಗವಾಗಿ ಬಿಟ್ಟಿದ್ದಾರೆ ಇದು ನಿಜವಾದ ದುರಂತ (ಜಾತಿ ಆಧಾರಿತ ಈ ಕಲ್ಪಿತ ವಿಂಗಡನೆಯನ್ನು ಕನರ್ಾಟಕದ ಹಿಂದುಳಿದ ವರ್ಗಗಳ ಹೋರಾಟದ ಕಾಲದಲ್ಲಿ ಹೆಚ್ಚಾಗಿ ಬಳಸಿದ್ದಾರೆ. ಮುಂದುವರಿದು ರಾಜಕೀಯ ಚಿಂತಕರು ಇದನ್ನು 20ನೇ ಶತಮಾನದ ಜಾತಿ ರಾಜಕೀಯದ ಭಾಗ ಎಂದು ಗುರುತಿಸಿದ್ದಾರೆ.)
ಇನ್ನು ಎರಡನೇಯ ಕಾರಣವನ್ನು ನೋಡುವುದಾದರೆ ಕುಕ್ಕೆ ಸುಬ್ರಹ್ಮಣ್ಯದ ಆಚರಣೆಯ ಕುರಿತು ಪ್ರಗತಿಪರರು ನಡೆಸುತ್ತಿರುವ ವಿರೋಧಗಳು ಆ ಆಚರಣೆಗಳಲ್ಲಿ ಭಾಗವಹಿಸುವ ಜನರಿಗೆ ಅರ್ಥವಾಗುತ್ತಿಲ್ಲ ಅದಕ್ಕೆ ವಿರುದ್ಧವಾಗಿ ಆಚರಣೆಗಳನ್ನು ವಿರೋಧಿಸುತ್ತಿರುವವರಿಗೆ (ಪ್ರಗತಿಪರರು) ಜನರೇಕೆ ಆಚರಣೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂಬ ವಿವರಣೆ ನಿಜವಾಗಿಯು ಪ್ರಗತಿಪರರನ್ನು ಆಶ್ಚರ್ಯಗೂಳಿಸುತ್ತದೆ. ಏಕೆಂದರೇ ಯಾವುದೇ ಪ್ರಗತಿಪರ ಸಂಘಟನೆಗಳು ಆಚರಣೆಗಳ ವಿರೋಧಿಯಲ್ಲ. ಭಾರತದಂತಹ ಬಹುಸಂಸ್ಕ್ರತಿ ಸಮಾಜದಲ್ಲಿ ಅದು ಸಾಧ್ಯವೂ ಇಲ್ಲ, ಇಲ್ಲಿ ಸಾವಿರಾರು ಆಚರಣೆಗಳಿವೆ ಲಕ್ಷಾಂತರ ನಂಬಿಕೆಗಳಿವೆ ಒಟ್ಟಾರೆ ಹೇಳುವುದಾರೆ ಆಚರಣೆ ಮತ್ತು ನಂಬಿಕೆಗಳೇ ಭಾರತದ ಜನಜೀವನದ ಜೀವಾಳ ಹೀಗಿರುವಾಗ ಪ್ರಗತಿಪರ ಸಂಘಟನೆಗಳು ಆಚರಣೆಗಳನ್ನು ವಿರೋಧಿಸುತ್ತಾರೆ ಎಂದು ಕಲ್ಪಿಸಿಕೊಳ್ಳುವುದು ಸಂಕುಚಿತ ಮನಸ್ಸಿನ ವಿಚಾರವಾಗುತ್ತದೆ. ಲೇಖಕರು ಗಮನಿಸಬೇಕಾದ ವಿಚಾರ ಎಂದರೆ ಪ್ರಗತಿಪರ ಸಂಘಟನೆಗಳು ಆಚರಣೆ ವಿರೋಧಿಗಳಲ್ಲ ಬದಲಾಗಿ ಯಾವುದಾದರೋ ಆಚರಣೆ ಮೌಡ್ಯದಿಂದ ಕೂಡಿದ್ದು ಮಾನವನ ಗೌರವಕ್ಕೆ, ಸಾಮುದಾಯಿಕ ಬದುಕಿಗೆ ವಿರೋಧಿಯಾಗಿದ್ದರೆ ಅಂತಹ ಆಚರಣೆಗಳಲ್ಲಿನ ಮೌಡ್ಯತೆಯ ವಿರುದ್ಧ ಪ್ರಗತಿಪರರು ದ್ವನಿ ಎತ್ತುತ್ತಾರೆಯೇ ವಿನಹ ಆಚರಣೆಗಳ ವಿದ್ಧವಾಗಿ ಅಲ್ಲ ಈ ನಾಡಿನ ಬಹುಪಾಲು ಪ್ರಗತಿಪರರು, ಬುದ್ಧಿಜೀವಿಗಳು ಸುಬ್ರಮ್ಮಣ್ಯ ದೇವಸ್ಶಾನದಲ್ಲಿನ ಮಡೆಸ್ನಾನವನ್ನು ಈ ಹಿನ್ನಲೆಯಲ್ಲಿಯೇ ಮಾನವ ಪರ ನೆಲೆಯಿಂದ ವಿಮಶರ್ಿಸಿದ್ದಾರೆ. ಇನ್ನು ಮುಂದುವರಿದು ಆಚರಣೆಗಳು ಒಂದು ನಿದರ್ಿಷ್ಟ ಸಮಯ ಮತ್ತು ಸ್ಥಳದಲ್ಲಿ ಪ್ರಸ್ಥುತತೆ ಹೊಂದಿರುತ್ತವೆ. ಅವುಗಳಿಗೆ ಕಾರಣವಿಲ್ಲ ಅದ್ದರಿಂದ ಅವುಗಳನ್ನು ಆಚರಿಸುವವರು ಮತ್ತು ವಿರೋಧಿಸುವವರು ನಮಗೆ ಅರ್ಥವಾಗುತ್ತಿಲ್ಲ ಎಂದಾದರೆ. ಕನರ್ಾಟಕದ ಹಲವಾರು ಚಳುವಳಿಗಳು ತಮ್ಮ ಮೌಲ್ಯ ಕಳೆದುಕೊಂಡು ಬಿಡುತ್ತವೆ. ಆಚರಣೆಯ ಹೆಸರಿನಲ್ಲಿ ನಡೆಯುವ ಮೌಢ್ಯತೆಯ ವಿರುಧ್ದ ಹೋರಾಡಿ ಯಶಸ್ವಿಯಾದ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ ( ಉದಾ; ಚಂದ್ರಗುತ್ತಿಯ ಬೆತ್ತಲೆ ಸೇವೆ, ಉತ್ತರ ಕನರ್ಾಟಕದ ಬಸವಿ ಬಿಡುವ ಪದ್ಧತಿ ಇತ್ಯಾದಿಗಳನ್ನು ಹೆಸರಿಸಬಹುದು) ಅವೆಲ್ಲವೂ ಸಮಾಜ ಅರ್ಥವಾಗದೇ ಪ್ರಗತಿಪರರು ಮಾಡಿದ ಹೋರಾಟ ಎಂದಾಗುತ್ತದೆ, ಇಲ್ಲಿ ಪ್ರಗತಿಪರರ ವಿರೋಧ ಇರುವುದು ಆಚರಣೆಗಳ ಹೆಸರಿನಲ್ಲಿ ಮಾನವ ವಿರೋಧಿ ಮೌಡ್ಯಗಳನ್ನು ಪ್ರೋತ್ಸಾಹಿಸಿ ಅದನ್ನು ಸಮಾಜದ ಸಾಮಾನ್ಯ ವಿದ್ಯಮಾನ ಎಂದು ಬಿಂಬಿಸುತ್ತಿರುವ ಮೇಲ್ವರ್ಗದ ರಾಜಕೀಯ ನಿಲುವಿನ ವಿರುದ್ಧವಾಗಿಯೇ ಹೊರತು. ಈ ದೇಶದ ಆಚರಣೆಗಳ ವಿರುದ್ಧ ಅಲ್ಲ. ಆದರೆ ತಳಸಮುದಾಯದವರನ್ನು ಎತ್ತಿ ಕಟ್ಟಿ ಈ ರಾಕಾರಣದ ಭಾಗವಾಗಿ ಬಳಸಲ್ಪಡುತ್ತಿರುವುದು ನಿಜವಾದ ದುರಂತ. ಇದಕ್ಕೆ ಮಲೆಕುಡಿ ಜನಾಂಗ ಪ್ರಸ್ಥುತ ಉದಾಹರಣೆಯಾಗಿದೆ
ಅಂತಿಮವಾಗಿ ಹೇಳುವುದಾದರೆ ಶತಮಾನಗಳ ಹೋರಾಟ, ಬಲಿದಾನದ ಮೂಲಕ ಸಂವಿಧಾನವನ್ನು ರಚಿಸಿ ಕಾನೂನಾಗಿಯಾದರೂ ಮೇಲ್ವರ್ಗದ ಜನರಿಗೆ ಶತಮಾನಗಳ ಕಾಲ ತಾವು ಮಾಡಿದ ಶೋಷಣೆಯ ಅರಿವಾಗಲಿ ಎಂದು ಚಿಂತಕರು ಹಂಬಲಿಸುತ್ತಿರುವ ಮತ್ತು ಅರಿವು ಮೂಡಿಸುತ್ತಿರುವ ಈ ಸಂದರ್ಭದಲ್ಲಿ ಶತಮಾನಗಳಿಂದ ನೀವು ದಲಿತರನ್ನು ಹೊರಗಿಟ್ಟಿರುವುದು, ಅವರಿಗೆ ಮಲತಿನ್ನಿಸಿರುವುದು, ಕುಡಿಯಲು ನೀರು ನೀಡದಿರುವುದು, ದೇವಸ್ಥಾನ ಪ್ರವೇಶ ನಿಷೇದ, ಎಂಜಲೆಲೆಯ ಮೇಲೆ ಹೊರಳಾಡಿಸುವುದು ಇತ್ಯದಿಗಳು ಆಚರಣೆಗಳು ಅಷ್ಟೆ ಇದು ಯಾವುದೇ ಸಮುದಾಯದ (ಮುಖ್ಯವಾಗಿ ಬ್ರಾಹ್ಮಣಶಾಹಿ ಚಿಂತನೆಯ) ಉದ್ದೇಶ ಪೂರ್ವಕ ಕ್ರೀಯೇ ಅಲ್ಲ. ಎಕೆಂದರೆ ಭಾರತದ ಸಂದರ್ಭದಲ್ಲಿ ಆಚರಣೆಗಳಿಗೆ ಕಾರಣವೇ ಇಲ್ಲ, ಅದನ್ನು ಮೂದಲು ಅರ್ಥಮಾಡಿಕೊಳ್ಳಬೇಕು ಎಂದು ಒಂದು ಸಂಶೋಧನೆ ಲಾಜಿಕಲ್ ಆಗಿ ನಿರೂಪಿಸಿದರ,ೆ ಆಚರಣೆಯ ಹೆಸರಿನಲ್ಲಿ ಮೌಢ್ಯತೆಯನ್ನು ಪಾಲಿಸುತ್ತಿರುವ ಮತ್ತು ಆ ಮೂಲಕ ತಳಸಮುದಾಯದವರನ್ನು ನಿರಂತರವಾಗಿ ಶೋಷಿಸುತ್ತಿರುವ ಮೇಲ್ವರ್ಗಗಳು ಹೊ. . . ! ಇದುವರೆಗು ನಾವು ಪಾಲಿಸುತ್ತಿರುವುದು ಹಿಂದಿನಿಂದ ಬಂದ ಆಚರಣೆಗಳನ್ನು ಅದ್ದರಿಂದ ಅದು ಅಮಾನುಷವೂ ಅಲ್ಲ, ಮಾನವ ವಿರೋಧಿಯೂ ಅಲ,್ಲ ಎಂಬ ಧರ್ಮ ಸಮರ್ಥನೆಗೆ ತೋಡಗಿಬಿಡುತ್ತವೆ. ಇದು ನಿಜವಾಗಿಯು ಮಡೆಸ್ನಾನಕ್ಕಿಂತ ಅಪಾಯಕಾರಿ ಅದ್ದರಿಂದ ಈ ಕುರಿತಂತೆ ಮಾತನಾಡುವವರು ಆಚರಣೆಗಳಿಗೂ ಮತ್ತು ಅದರ ಹೆಸರಿನಲ್ಲಿ ನಡೆಯುವ ಮೌಢ್ಯತೆಗೂ ನಡುವಿನ ವ್ಯತ್ಯಾಸ ತಿಳಿಯಬೇಕು ಎರಡನೆಯದಾಗಿ ಮಡೆಸ್ನಾನ ಕುರಿತ ಪ್ರಗತಿಪರರ ವಿರೋಧವನ್ನು ಶತಮಾನಗಳಿಂದ ಬಂದಿರುವ ಆಚರಣೆಗಳ ವಿರೋಧವಾಗಿ ಗ್ರಹಿಸದೆ ಆಚರಣೆಯ ಹೆಸರಿನಲ್ಲಿ ಮಾನವ ವಿರೋಧಿ ಮೌಢ್ಯಗಳನ್ನು ಸಮಾಜದಲ್ಲಿ ಸ್ಥಾಪಿಸುತ್ತಿರುವ ಮೇಲ್ವರ್ಗದ ವಿಚಾರಗಳ ವಿರೋಧವಾಗಿ ಅರ್ಥಮಾಡಿಕೊಳ್ಳಬೇಕು.







In Dasaprkash hotel in Kilapuk, Chennai there is an old big phto wherein the founder is dansing along with a host of guests and also performing a sort of madesnana..yes every commmunity was performing and one by one they have all given up ..and no it is for Daliths to give up..their own movemnet should do this ..temple and priests are not agents of change..the urge for change should come from within and it would become easy for others to join hands..now when I want to do this as brahmin, I am suspected about my motive by the Dalith friends..
ತಪ್ಪಾದ ಗ್ರಹಿಕೆ ಮತ್ತು ಅಸಂಬದ್ದ ವಿವರಣೆ
೧. ಮಡೆಸ್ನಾನದ ಕುರಿತು ಯಾರು ಯಾವ ನಿಲುವು ಬೇಕಾದರೂ ಇಟ್ಟುಕೊಳ್ಳಲಿ ಏನೂ ತೊಂದಲೆ ಇಲ್ಲ, ಏಕೆಂದರೆ ಅದು ಅವರ ಅಭಿವ್ಯಕ್ತಿ ಸ್ವಾತಂತ್ರ. ಆದರೆ ನಿಮ್ಮ ಲೇಖನ ಪ್ರಾರಂಭದಲ್ಲಿ ಹೇಳಿರುವಂತೆ ಹಲವಾರು ಸಮುದಾಯಗಳು ಸೇರಿಕೊಂಡು ಆಚರಣೆಯನ್ನು ಮಾಡುತ್ತಿದ್ದು ಮತ್ತು ಅವುಗಳನ್ನು ಪ್ರಶ್ನಿಸಲು ನಾವ್ಯಾರು ಎಂಬುದು ಆ ಆಚರಣೆಯ ಸಮರ್ಥನೆ ಎಂಬುದು ಮಾತ್ರ ತಪ್ಪು ಗ್ರಹಿಕೆ. ಏಕೆಂಧರೆ ಅದು ನಿರ್ಲಿಪ್ತವು ಆಗಿರಬಾರದೇಕೆ? ಅದೇಕೆ ಸಮರ್ಥನೆ ಅಥವಾ ವಿರೋಧ ಎಂಬ ಎರಡೇ ಅತಿಗಳ ನಡುವೆ ಇರಬೇಕಾದುದು? ಆದ್ದರಿಂದ ಮಡೆಸ್ನಾನದ ಕುರಿತು ವಿರೋಧ ಮಾಡದೆ ಅಧ್ಯಯನ ಮಾಡಿದೊಡನೆ ಅದು ಸಮರ್ಥನೆಯಾಗುತ್ತದೆ ಎಂಬುದು ನಿಜವಾಗಿಯೂ ಅವಸರದ ತೀರ್ಮಾನ.
೨. ಮನುವಿನಿಂದ ಸಮಾಜದ ಮೌಲ್ಯ ನಿರ್ಧಾರವಾಗುತ್ತಿದೆ ಎಂಬುದು ಮತ್ತೊಂದು ತಪ್ಪಾದ ಗ್ರಹಿಕೆ. ನಿಮ್ಮ ಅನುಭವವನ್ನೆ ಅವಲೋಕಿಸಿ ನೋಡಿದರೆ ಮನುಧರ್ಮಶಾಸ್ತ್ರದಲ್ಲಿರುವ ಯಾವ ಅಂಶಗಳು ನಮ್ಮ ಬದುಕನ್ನು ನಿರ್ದೇಶಿಸುತ್ತಿವೆ ಎಂದು ಗುರುತಿಸುವುದೇ ಕಷ್ಟದ ಕೆಲಸ.
೩. ಸಮಾಜ ವಿಜ್ಞಾನಗಳ ಒಟ್ಟು ಬ್ರಾಹ್ಮಣ ವಿರೋಧಿ ಎಂಬುದೂ ಸಹ ತಪ್ಪುಗ್ರಹಿಕೆ. ವೀಣಾದಾಸ್, ಎಂ.ಎನ್ ಶ್ರೀನಿವಾಸ್, ಲೂಯಿ ದೂಮೋ, ಸೆಲಸ್ಟಿನ್ ಬೂಗ್ಲೆ ಇನ್ನೂ ಮುಂತಾದ ಸಮಾಜ ವಿಜ್ಞಾನಿಗಳ ಪಠ್ಯಗಳನ್ನು ಓದಿದ್ದೇ ಆದರೆ ಅವರ ವಾದವೇನು ಎಂಬುದು ತಿಳಿಯುತ್ತದೆ. ಸಮಾಜ ವಿಜ್ಞಾನದಲ್ಲಿ ಸೈದ್ಧಾಂತಿಕವಾಗಿ ಸಮಾಜವನ್ನು ವಿವರಿಸಿರುವ ಇನ್ನೂ ಹಲವಾರು ಚಿಂತಕರ ವಾದಗಳನ್ನು ಪರಿಶೀಲಿಸಿದರೆ ಸಮಾಜ ವಿಜ್ಞಾನಗಳ ಒಟ್ಟು ಸಾರಾಂಶದ ಕುರಿತು ತಮಗಿರುವ ತಪ್ಪು ಅಭಿಪ್ರಾಯ ಮನವರಿಕೆಯಾಗಬಹುದು.
೩. ಬ್ರಾಹ್ಮಣರ ಕುತಂತ್ರ ಅವರು ಇತರರನ್ನು ಶೋಷಣೆ ಮಾಡುತ್ತಿದ್ದಾರೆ ಎಂದೊಡನೆ, (ಅವರು ಶೋಷಣೆ ಮಾಡುತ್ತಿದ್ದಾರೋ ಇಲ್ಲವೋ ಎಂಬ ವಿಚಾರಕ್ಕಿಂತ) ಬ್ರಾಹ್ಮಣರು ಅದರಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತೋರಿಸದರೆ ಅದು ಬ್ರಾಹ್ಮಣರ ರಾಜಕಾರಣದ ಒಂದು ಭಾಗ ಎನ್ನುವುದು ಸಹ ತಪ್ಪಾದ ಗ್ರಹಿಕೆ. ಏಕೆಂದರೆ ಅದೇಕೆ ದಲಿತರ ರಾಜಕಾರಣದ ಭಾಗವಾಗಬಾರದು? ಅಷ್ಟೇ ಏಕೆ ಯಾವುದಾದರೊಂದು ವಿಚಾರದ ಕುರಿತು ವಸ್ತುನಿಷ್ಟವಾಗಿ ಮಾತನಾಡುತ್ತಿದ್ದರೆ ಒಂದಲ್ಲ ಒಂದು ರಾಜಕಾರಣದ ಭಾಗವಾಗಿರಲೇ ಬೇಖು ಎಂಬುದು ಮೂರ್ಖತನವೇ ಸರಿ
೪. ಆಚರಿಸುವವರು ಮತ್ತು ವಿರೋಧಿಸುವವರು ಒಬ್ಬರಿಗೊಬ್ಬರು ಅರ್ಥವಾಗುತ್ತಿಲ್ಲ ಎಂದೊಡನೆ ಪ್ರಗತಿಪರರಿಗೆ ಆಶ್ಚರ್ಯವಾಗುತ್ತದೆಯೋ ಇಲ್ಲವೋ ಆದರೆ ಸೋಗಲಾಡಿತನ ಮಾಡುವ ಇತ್ತ ಪ್ರಗತಿಪರರೂ ಅಲ್ಲದ ಇತ್ತ ಆಚರಣೆಗಳ ಕುರಿತು ಜ್ಞಾನವೂ ಇಲ್ಲದವರಿಗೆ ಮಾತ್ರ ಆಶ್ಚರ್ಯವಾಗುತ್ತದೆ, ಈ ಮಟ್ಟಿಗೆ ತಾವು ಹೇಳುತ್ತಿರುವುದು ನೂರಕ್ಕೆ ನೂರು ಸತ್ಯ. ಮಡೆಸ್ನಾನವನ್ನು ಪ್ರಗತಿಪರರು ವಿರೋಧಿಸಸುತ್ತಿದ್ದಾರೆ ಎಂಬುದರ ಅರ್ಥ ಅವರು ಭಾರತೀಯ ಸಮಾಜದಲ್ಲಿರುವ ಎಲ್ಲಾ ಆಚರಣೆಗಳನ್ನು ಅವರು ವಿರೋಧಿಸುತ್ತಿದ್ದಾರೆ ಎಂದು ನಿರ್ಣಯಕ್ಕೆ ಬರುವುದು ಸಹ ತಪ್ಪು ಗ್ರಹಿಕೆಯಿಂದ ಕೂಡಿರುವುದಾಗಿದೆ. ಅಷ್ಟಾಗಿ ಮಡೆಸ್ನಾನವನ್ನು ವಿರೋಧಿಸಿದೊಡನೆ ಎಲ್ಲಾ ಆಚರಣೆಗಳನ್ನು ವಿರೋಧಿಸುತ್ತಿದ್ದಾರೆ ಎಂಬ ಮುಠ್ಠಾಳತನವನ್ನು ನಾನು ಎಲ್ಲಿಯೂ ತೋರಿಸಿಲ್ಲ. ಆದ್ದರಿಂದ ಇದೂ ಸಹ ತಪ್ಪು ತಿಳುವಳಿಕೆಯಿಂದ ಹೊರಹೊಮ್ಮಿದ ವಿಚಾರವಾಗಿದೆ.
೫. ಕೊನೆಯ ಭಾಗದಲ್ಲಿ ನಮೂದಿಸಿರುವ ಬೇರೆ ಆಚರಣೆಗಳು ಬೇರೆ ಬೇರೆ ಸ್ವರೂಪದವುಗಳಾಗಿದ್ದು, ಅವುಗಳಲ್ಲಿ ಶೋಷಣೆಯಿಂದ ಕೂಡಿದ ನಡವಳಿಕೆಗಳು ಹಾಗೂ ಹಿರಿಯರಿಂದ ಬಂದ ಆಚರಣೆಗಳಿಗೂ ವ್ಯತ್ಯಾಸವೇ ಗೊತ್ತಿಲ್ಲದೆ ಕಲಸುಮೇಲೋಗರ ಮಾಡುವುದೂ ಸಹ ತಪ್ಪಾದ ಗ್ರಹಿಕೆಯನ್ನು ಎತ್ತಿ ತೋರಿಸುತ್ತದೆ.
ಇಷ್ಟೆಲ್ಲಾ ತಪ್ಪಾದ ಗ್ರಹಿಕೆಯಿಂದ ಕೂಡಿರುವ ಲೇಖನದಲ್ಲಿ ನೀಡುತ್ತಿರುವ ವಿರಣೆಗಳು ಹಾಗೂ ತೋರುತ್ತಿರುವ ಸಾಮಾಜಿಕ ಕಾಳಜಿಗಳು ತಪ್ಪಾಗಿಯೇ ಅಂತ್ಯ ಕಾಣುತ್ತವೆ.
beautiful carricature!! picture is defnitely powerful than the words!! i hope this happens and i also hope that we could see it live on TV !!!
ಡಾ ಕಿರಣ್ ಎಂ ಗಾಜನೂರ್ ಅವರಿಗೆ
” ಯಾವುದಾದರೋ ಆಚರಣೆ ಮೌಢ್ಯದಿಂದ ಕೂಡಿದ್ದು ಮಾನವನ ಗೌರವಕ್ಕೆ, ಸಾಮುದಾಯಿಕ ಬದುಕಿಗೆ ವಿರೋಧಿಯಾಗಿದ್ದರೆ ಅಂತಹ ಆಚರಣೆಗಳಲ್ಲಿನ ಮೌಢ್ಯತೆಯ ವಿರುದ್ಧ ಪ್ರಗತಿಪರರು ದ್ವನಿ ಎತ್ತುತ್ತಾರೆಯೇ ವಿನಹ ಆಚರಣೆಗಳ ವಿರುದ್ಧವಾಗಿ ಅಲ್ಲ ” – ಎಂಬ ನಿಮ್ಮ ಮಾತುಗಳು ತುಂಬಾ ಚೆನ್ನಾಗಿವೆ . ಮಡೇಸ್ನಾನದ ಆಚರಣೆಯು ಕೇವಲ ಪ್ರಗತಿಪರರಲ್ಲಿ ಮಾತ್ರವಲ್ಲ , ಕೇವಲ ಮನುಷ್ಯರಾಗಿರುವ ಎಲ್ಲರಲ್ಲೂ ಆತಂಕ ಮತ್ತು ಆಕ್ರೋಶವನ್ನುಂಟು ಮಾಡಬೇಕಾಗಿದೆ . ಆದರೆ ಅರಿವಿನಿಂದ ಈ ಆಚರಣೆಯನ್ನು ನೋಡುವುದರ ಬದಲು ಅಕ್ಷರಜ್ಞಾನದ ತರ್ಕದಿಂದ ಇದನ್ನು ನಾನಾ ಬಗೆಗಳಲ್ಲಿ ಸಮರ್ಥಿಸಿಕೊಳ್ಳುತ್ತಿರುವ ಜನರನ್ನು ಕಂಡಾಗ ಒಂದು ರೀತಿ ಭಯವಾಗುತ್ತಿದೆ . ನಿಮ್ಮ ಬರಹದಲ್ಲಿನ ವಿಚಾರಗಳು ಮೊದಲಿನಿಂದ ಕೊನೆಯ ತನಕ ಬಹಳ ಸಮಚಿತ್ತದಿಂದ ಕೂಡಿವೆ . ಇದಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತೇನೆ .
dear parthasarathi
Temple and priests are not agents of change.. Yes I agree but they are the founders of this king of activities. The urge for change should come from within the upper castes of this land and it would become easier for others to join hands… thank you
ಗೆಳೆಯ ನಾಗರಾಜ್
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ಸಂತೋಷ್ ರವರಿಗೆ
೧)ನಾನು ಲೇಖನದಲ್ಲಿ ಮಡೆ ಸ್ನಾನವನ್ನು ಬೇರೆ ಜಾತಿಯವರು ಮಾಡುತ್ತಿದ್ದಾರೆ ಎಂಬ ವಾದ ಇದುವರೆಗೂ ಈ ಆಚರಣೆ ಮಾಡಿಕೊಂಡು ಬಂದ ಬ್ರಾಹ್ಮಣಶಾಹಿಯ ಸಮರ್ಥನೆಯಾಗಲಾರದು ಎಂದು ತಿಳಿಸಿದ್ದೇನೆ ಇದರಲ್ಲಿ ನನಗೆ ಯಾವ ದ್ವಂದ್ವ ಇಲ್ಲ
೨) ಮನುವಿನಿಂದ ಮುಂದಿಡಲ್ಪಟ್ಟು ಸಮಾಜದ ಎಲ್ಲಾ ಮಾನವರನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿರುವ ಬ್ರಾಹ್ಮಣಿಯ ಮೌಲ್ಯ, ಜೀವ ಮತ್ತು ಸಮಾನತೆಯ ವಿರೋಧಿಯೆಂದು ಭಾವಿಸಿದರೆ ತಪ್ಪಾಗಲಾರದು. (ಈ ವಾದದದ ಸತ್ಯತೆ ಕುರಿತು ಹಲವಾರು ಗುಣಾತ್ಮಕ ಚಚರ್ೆಗಳು ಈಗಾಗಲೇ ನಡೆಯುತ್ತಿವೆ ಅದು ಬೆರೆಯದೇ ವಿಚಾರ) ನಿಮಗೆ ಅಗತ್ಯವಾದ ಪದಗಳನ್ನು ಪಡೆದು ಬ್ರಾಕೆಟ್ ನಲ್ಲಿ ಇರುವುದನ್ನು ಬಿಟ್ಟರೆ ಹೇಗೆ ಪೂರ್ತಿ ಓದಿದರೆ ತಿಳಿಯುತ್ತದೆ
೩) ಸಮಾಜ ವಿಜ್ಞಾನಗಳ ಒಟ್ಟು ಬ್ರಾಹ್ಮಣ ವಿರೋಧಿ ಎಂದು ಇಡಿ ಲೇಖನದಲ್ಲಿ ಎಲ್ಲಿಯೂ ಹೇಳಿಲ್ಲ ನಾನು ಹೇಳಿರುವುದು ಹೀಗೆ ಮಾನವ ಸಮಾನತೆಯನ್ನು ಬಯಸುವವರು, ಸಮಾಜವು ಆಚರಣೆಗಳ ಹೆಸರಿನಲ್ಲಿ ಬ್ರಾಹ್ಮಣಿಕರಣಕ್ಕೆ ಒಳಗಾಗುವುದನ್ನು ಆ ಮೂಲಕ ಮಾನವ ವಿರೋಧಿಯಾಗುವುದನ್ನು ತಡೆಯಬೇಕು ಎಂಬುದು ಇದುವರೆಗಿನ ಸಮಾಜ ಸಂಶೋಧನೆಗಳ ಒಟ್ಟು ಸಾರ ಎಂಬುದಾಗಿದೆ ನೀವು ಹೇಳಿರುವ ಬಹುಪಾಲು ಬರಹಗಳನ್ನು ನಾನು ಓದಿದ್ದೇನೆ ಮುಂದು ಓದುವೆ ಅದಕ್ಕೆ ಕೊನೆ ಎಂಬುದಿಲ್ಲ
4) ನಾನು ನನ್ನ ಲೇಖನದಲ್ಲಿ ಎಲ್ಲಿಯೂ ಬ್ರಾಹ್ಮಣರನ್ನು ಕುತಂತ್ರಿಗಳು ಎಂದು ಕರೆದಿಲ್ಲ ಬದಲಾಗಿ ಒಂದು ನಿರ್ದಿಷ್ಟ ಕಾಲಘಟ್ಟದ ಸಮಾಜದ ಮೇಲೆ ಹಲವಾರು ಮೌಲ್ಯಗಳು ಪ್ರಭಾವ ಬೀರುತ್ತವೆ ಬಹುಸಂಸ್ಕೃತಿಯುಳ್ಳ ಭಾರತದ ಸಮಾಜದ ಮೇಲೆ ಬ್ರಾಹ್ಮಣ ಕೆಂದ್ರಿತ ಮೌಲ್ಯಗಳ ಪ್ರಾಭಾವ ಹೆಚ್ಚಾಗಿವೆ ಮಡೆಸ್ನಾನದಂತಹ ಆಚರಣೆಗಳು ಇದೇ ವಿದ್ಯಮಾನವನ್ನು ಗಟ್ಟಿಗೊಳಿಸುತ್ತಿವೆ ಎಂದಿದ್ದೇನೆ ಇದರಲ್ಲಿ ತಪ್ಪಾದ ಗ್ರಹಿಕೆ ಏನಿದೆ ಗೆಳೆಯರೇ
೫) ನಿಮಗೆ ಇ ಹಿಂದೆ ಇದೆ ಚರ್ಚೆಯ ವೇಳೆ ನೀಡಿದ ಉತ್ತರವೇ ಸಾಕು ಎನಿಸುತ್ತದೆ ಏನು ಮಾಡುವುದು ನಿಮ್ಮ ಅನಿವಾರ್ಯತೆ ಮತ್ತೆ ಮತ್ತೆ ಉತ್ತರ ಬಯಸುತ್ತದೆ ಸೊ ಇನ್ನೊಮ್ಮೆ ಓದಿಕೊಳ್ಳಿ ನಾನು ಮೊದಲೇ ನಿಮಗೆ ಸ್ಪಷ್ಟ ಪಡಿಸಿದ್ದೇನೆ ಆಚರಣೆಗಳ ಕುರಿತ ತಮ್ಮ ಜ್ಞಾನ ಪಡೆಯುವ ಪ್ರಯತ್ನ ನಿರಂತರವಾಗಿರಲಿ ನಿಮ್ಮ ಸಂಶೋದನೆ ಮತ್ತು ನಿಲುವು ಎರಡು ಪ್ರಶಂಶನಿಯ ಆದರೆ ನಮ್ಮ ಸಂಶೋದನೆಗಳು ಯಾವುದೊ ಒಂದು ವರ್ಗದ ಶತಮಾನಗಳ ಶೋಷಣೆಗೆ ಧರ್ಮ ಸಮರ್ಥನೆ ಒದಗಿಸಭಾರದು ಎಂಬುದು ನನ್ನ ನಿಲುವು ಉದಾಹರಣೆಗೆ ಹೇಳುವುದಾದರೆ ಭಾರತದಲ್ಲಿ ಜಾತಿ ಪಧತಿ ಇಗ ನಾವು ಸಮಾಜ ವಿಜ್ಞಾಗಳಲ್ಲಿ ಕಲಿಯುತ್ತಿರುವಂತೆ ಇಲ್ಲ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಶೂದ್ರ ಎಂಬ ವಿಂಗಡಣೆ ಇ ಸಮಾಜವನ್ನು ಅಧರಿಸಿಲ್ಲ ಎಂಬ ನಮ್ಮ ವಾದ, ಇದೆ ವಾದವನ್ನು ಬಳಸಿಕೊಂಡು ಶೋಷಣೆ ನಡೆಸಿದ ಮೆಲ್ವರ್ಗಗಳಿಗೆ ನಿರಪರಾಧಿ ಪಟ್ಟ ನಿಡಿಬಿದಭಾರದು ಇದು ನನ್ನ ನಿಲುವು ನೀವು ನಿಮ್ಮ ಲೇಖನದಲ್ಲಿ ಮದೆಸ್ನನಕ್ಕ ಯಾವುದೇ ಒಂದು ವರ್ಗ ಕಾರಣವಲ್ಲ , ಅದ್ದರಿಂದ ಬ್ರಾಹ್ಮಣರನ್ನು ಕುತಂತ್ರಿಗಳು ಎಂದು ಕರೆಯಭಾರದು ಎಂದು ಹೇಳಿದ್ದಿರಿ ಅದು ಅಕ್ಷೆಪರ್ಹ ಏಕೆಂದರೆ ( ಸಮಾಜ ವಿಜ್ಞಾನದ ಯಾವುದೇ ವಾದಗಳು ಬ್ರಾಹ್ಮಣರನ್ನು ಕುತಂತ್ರಿಗಳು ಎಂದು ಕರೆದಿಲ್ಲ ಬದಲಾಗಿ ಬ್ರಾಹ್ಮಣಶಾಹಿ ಆಲೋಚನೆಗಳನ್ನು ಹಾಗೆ ಸಮಾಜ ವಿರೋಧಿಯಾಗಿ ಗುರುತಿಸಿವೆ) ಇಂದು ಆಚರಣೆಯ ಹೆಸರಿನಲ್ಲಿ ಮೌದ್ಯಥೆ ಭಿತ್ತುತ್ತಿರುವವರು ಯಾರು ಅದನ್ನೇ ಬಂಡವಾಳ ಮಾಡಿಕೊಂಡು ಸಮಾಜಿಕ ಶೋಷಣೆ ನಡೆಸಿದವರು ಯಾರು ಎಂದು ನನಗು ನಿಮಗೋ ತಿಳಿದಿದೆ. ಅದ್ದರಿಂದ ಜಾಣ ಮೌನ ತೋರಿಸದೆ ಆಚರಣೆಗೂ ಮತ್ತು ಅದರ ಹೆಸರಿನಲ್ಲಿ ನಡೆಯುತ್ತಿರುವ ಬ್ರಾಹ್ಮಣಶಾಹಿ ಮೌದ್ಯವನ್ನು ವಿರೋಧಿಸಿ. ಜಾತಿವ್ಯವಸ್ಥೆ ಇಲ್ಲ ಎಂಬ ನನ್ನ ವಾದ ಬ್ರಾಹ್ಮಣಶಾಹಿಯಾ ಸಮರ್ಥನೆ ಖಂಡಿತ ಅಲ್ಲ ಉನ್ನತ ಜ್ಞಾನದ ಹೆಸರಿನಲ್ಲಿ ಶತಮಾನಗಳ ಅವರ ಶೋಷಣೆ ಖಂಡನೀಯ ಇದು ನನ್ನ ನಂಬಿಕೆ ಮತ್ತು ನನ್ನ ನಿಮ್ಮ ಸಂಶೋದನೆಯ ನಡುವೆ ಇರುವ ವ್ಯತ್ಯಾಸ ಇದನ್ನು ಅರ್ಥ ಮಾಡಿಕೊಂಡರೆ ನಮ್ಮ ದಾರಿ ಸುಲಭವಾಗುತ್ತದೆ. ಆದರೆ ನಿಮ್ಮ ಅನಿವಾರ್ಯತೆ ಅದಕ್ಕೆ ಅವಕಾಶ ಕೊಡಬೇಕಷ್ಟೇ
ಆಸಕ್ತರು ಇದೆ ವಿಷಯದ ಕುರಿತಾದ ಸಂತೋಷ್ ಮತ್ತು ನನ್ನ ಮದ್ಯೆ ನಡೆದ ಚರ್ಚೆಗೆ ಕೆಳಗಿನ ಲಿಂಕ್ ನೋಡಿ
http://www.facebook.com/santhuappu/posts/2534142186524