ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಡಾಳು ಒಗ್ಗರಣೆ ಮನೆ ದೇವರು!

ಬಣಗಾರರ ಹವ್ಯಾಸ, ಮನೆ ದೇವ್ರು, ಮಡಿ ತೇರು ಮತ್ತು ಬ್ರಹ್ಮ ರಥೋತ್ಸವ

ಅಮರದೀಪ್ ಪಿ ಎಸ್

ಕೊಪ್ಪಳದಿಂದ ಹೊರಟು ಹೊಸಪೇಟೆಯಲ್ಲಿ ಅಂದು ಸಂಜೆ ಏಳು ಗಂಟೆಯಾಗಿತ್ತು ಅನ್ನಿಸ್ಸುತ್ತೆ .. ಶಿವಶಂಕರ್ ಬಣಗಾರ್ ಅವರಿಗೆ ಫೋನ್ ಮಾಡಿದೆ. ಬಣಗಾರ್ ಇವರು ಒಬ್ಬ ಪತ್ರಿಕಾ ಛಾಯಾಗ್ರಾಹಕರು, ಹವ್ಯಾಸಿಯಾಗಿ ಜಾನಪದ, ಪರಿಸರ ಹಾಗೂ ಪಕ್ಷಿಸಂಕುಲದ ಬಗ್ಗೆ ಆಸಕ್ತಿವುಳ್ಳವರು. ನಾನ್ ಸಂಜೆ ೪.೩೦ ಕ್ಕೆ ಹಂಪಿಗೆ ಹೋಗುತ್ತೀನೆಂದು ಹೇಳಿದ್ದೆನಲ್ಲ ? ಬರಬಹುದಿತ್ತು ಎಂದರು . ನಾನು ಹೊಸಪೇಟೆಗೆ ಹೋಗುವುದು ನಿಕ್ಕಿ ಇದ್ದರೂ, ಬಣಗಾರ್ ಇವರನ್ನು ಒಮ್ಮೆ ಭೇಟಿ ಮಾಡುವುದಾಗಿ ಮುಂಚೆಯೇ ತಿಳಿಸಿದ್ದೆನಾದರೂ ಅವರ ಜೊತೆ ಹಂಪಿಗೆ ಹೋಗುವುದು ನನ್ನ ಅಂದಾಜಿರಿರಲಿಲ್ಲ . ” ಸರಿ, ಕ್ಯಾಮೆರಾ ಇದೆಯಾ ನಿಮ್ ಹತ್ರ ? ಕೇಳಿದರು ಬಣಗಾರ್. ಒಂಟಿ ಕಣ್ಣನ್ನು ಇದುವರೆಗೂ ನಾನು ಬಾಡಿಗೆ ನೀಡದೇ ಪಡೆದು ಹೆಗಲಿಗೆ ಹಾಕಿಕೊಂಡವನು. ಕ್ಯಾಮರಾ ಖರೀದಿ ಮಾಡಲು ಜೋಡಿಸಿಟ್ಟುಕೊಂಡ ಹಣಕ್ಕೆ ಏನಾದರು ಕಂಟಕ ಎದುರಿಸುವ ನಾನು ಇಲ್ಲ ಎಂದಷ್ಟೇ ಹೇಳಿದೆ .

ನಾಳೆ ಬೆಳಿಗ್ಗೆ ೫. ೩೦ಕ್ಕೆಲ್ಲಾ ಎಂ. ಪಿ. ಪ್ರಕಾಶ್ ನಗರಕ್ಕೆ ಬಂದುಬಿಡಿ, ಅಲ್ಲಿಂದ ಕಮಲಾಪುರ ಕೆರೆಗೆ ಹೋಗೋಣ ಅಂದರು. ನಾನು ಬೆಳೆಗ್ಗೆನೆ ಎದ್ದು ಬೈಕ್ ನಲ್ಲಿ ಹೋದೆ . ನಿಜಕ್ಕೂ ಬಣಗಾರ್ ಒಳ್ಳೆ ಫೋಟೋಗ್ರಾಫರ್. ಅವರು ತೆಗೆದ ಫೋಟೋಗಳನ್ನು ನೋಡಿಯೇ ನಾನು ಅವರಿಗೆ ಹೆಚ್ಚು ಆಪ್ತನಾಗಲು ಕಾರಣವಾದದ್ದು . ಅವರ ಫೋಟೋಗ್ರಫಿ ಪ್ರೊಫೈಲ್ ಒಮ್ಮೆ ನೋಡಬೇಕು. ಒಂದೇಟಿಗೆ ಪ್ರಪ್ಹುಲ್ಲವಾಗುವಂಥ ಸೆರೆ ಹಿಡಿದ ಛಾಯಾಚಿತ್ರಗಳ ಗುಚ್ಹವೇ ಅವರ ತೆಕ್ಕೆಯಲ್ಲಿದೆ. ಮನೆಯಲ್ಲಿ ತಮಗೊಂದು ಕ್ಯಾಮೆರಾ ನೇತಾಕಿಕೊಂಡು, ತಮ್ಮಲ್ಲೇ ಇದ್ದ ತಮ್ಮದೊಂದು ಸಣ್ಣ ಕ್ಯಾಮೆರಾ ನನ್ನ ಕೈಗಿಟ್ಟು ನಿಮ್ಮ ನಿಲುಕಿಗೆ ತಕ್ಕಂತೆ ತೆಗೆದು ನೋಡಿ ಎಂದರು . ಅಲ್ಲಿಂದ ಸೀದಾ ಕಮಲಾಪುರದ ಕೆರೆ ದಂಡೆ ಮೇಲೆ ನಡೆದೆವು . ಪಶ್ಚಿಮಕ್ಕೆ ತೆಳುವಾಗುತ್ತಿದ್ದ ಹಿಂದಿನ ದಿನವೇ ಹುಣ್ಣಿಮೆ ಆಚರಿಸಿಕೊಂಡ ಚಂದ್ರ, ಸ್ವಚ್ಛ ನೀಲಿ ಬಾನು, ಪೂರ್ವಕ್ಕೆ ಕೆರೆಯ ನೀರೆಲ್ಲಾ ಬಂಗಾರದ ಬಣ್ಣಕ್ಕೆ ಬದಲಾಗುವ, ಬಂಗಾರದ ನೀರಿನಲ್ಲಿ ತೆಪ್ಪದ ಹರಿಗೋಲು ಮೀಟುತ್ತಾ ಒಬ್ಬ, ಎಸೆದ ಬಲೆಯಲ್ಲಿ ಮೀನಿನ ಶೇಖರಣೆಗೆ ಇನ್ನೊಬ್ಬ. ಹೀಗೆ ಹಲವು ತೆಪ್ಪಗಳಲ್ಲಿ ಹೊರಟಿದ್ದ ಮೀನುಗಾರರು, ಬೆಳಗಿನ ಹೊಟ್ಟೆಪಾಡು ಸಂಚಾರಕ್ಕೆ ಗುಂಪು ಗುಂಪಾಗಿ ಹರಡಿದ್ದ ಪಕ್ಷಿ ಸಂಕುಲದ ಸದ್ದು ಕೇಳುತ್ತಾ ಬೇಕೆಂದೇ ಡಾಂಬರು ರಸ್ತೆಗುಂಟ ಹೋಗದೆ ಹೊಲದ ಮಧ್ಯೆಯೇ ಹಾಯುತ್ತಾ ಹೊರಟಿದ್ದ ನಾವು ಸುಮಾರು ಫೋಟೋಗಳನ್ನು ಸೆರೆ ಹಿಡಿದರೂ ಬಣಗಾರ್ ತೆಗೆಯುವ ಫೋಟೋಗಳಲ್ಲಿ ವೈವಿಧ್ಯ ಹೆಚ್ಚಾಗಿತ್ತು .
ಅಲ್ಲಿಂದ ಸೀದಾ ಹಂಪಿಗೆ ತೆರಳಿ ಪುರಾತನ ಕೆತ್ತನೆಗಳ, ಬೆಟ್ಟ ಗುಡ್ಡಗಳ ಸಾಲು, ಶಿಥಿಲಗೊಂಡ ಸ್ಮಾರಕಗಳ ಉಳಿವಿಗೆ ಪುರಾತತ್ವ ಇಲಾಖೆಯ ಕಣ್ಣು ತೆರೆಸುವಂಥ ಚಿತ್ರಗಳನ್ನು ಸೆರೆ ಹಿಡಿದರು. ಮಧ್ಯೆ ಬಣಗಾರರು “ನಾನಿಲ್ಲಿ ಸರಿಸುಮಾರು ವರ್ಷಗಳಿಂದ ಹಂಪಿ ಸುತ್ತುತ್ತಿದ್ದೇನೆ, ಇನ್ನೂ ನೋಡಬೇಕಾದ ಹಂಪಿ, ಸಂಗ್ರಹಿಸಬೇಕಾದ ಮಾಹಿತಿ, ತಿಳಿದುಕೊಳ್ಳುವಂಥ ಇತಿಹಾಸ ಸಾಕಷ್ಟಿದೆ ಎಂದರು . ಅಷ್ಟರಲ್ಲಿ ಸೂರ್ಯನ ಪ್ರಖರತೆ ಹೆಚ್ಚಾಯಿತು. ಸೂರ್ಯನ ಬೆಳಕು ಮೊನಚಾಗುತ್ತಿದ್ದಂತೆಯೇ ಚಿತ್ರಗಳನ್ನು ತೆಗೆಯಲು ಅಷ್ಟಾಗಿ ಇಷ್ಟಪಡದ ಶಿವಶಂಕರ್, ವಾಪಸ್ಸು ತೆರಳುವಾಗ ಈ ಭಾಗದಲ್ಲಿ ನೆಲೆಸಿರುವ , ವಲಸೆ ಬರುವ ವಿವಿಧ ಹಕ್ಕಿಗಳು, ಸಂತತಿ, ಅವುಗಳ ಜೀವನ, ಸಂಸಾರ ಕ್ರಮ, ಆಹಾರ ಪದ್ಧತಿ, ಅವುಗಳ ಕೂಗು, ಅದರ ಸೂಚನೆ ಇತ್ಯಾದಿ ಬಗ್ಗೆ ತಮಗೆ ತಾವೇ ಹೇಳುತ್ತಾ ಬಂದರೂ ನನಗೆ ವಿಷಯ ಸಂಗ್ರಹವಾಯಿತು .
ಒಂದು ವಿಧದ ಪಕ್ಷಿಗಳು ಯಾವುದೋ ಕಾಡಿನ ಪರಿಸರದಲ್ಲಿ ಮರಿ ಹಾಕಿದ ಬಗ್ಗೆ ತಮ್ಮಂತೆಯೇ ಅಭಿರುಚಿ ಇರುವ ಪಕ್ಷಿಪ್ರಿಯರೊಡನೆ ಪಕ್ಷಿಗಳ ಸಂತಾನಕ್ಕೆ ಅವು ಕಾಳು ಹೆಕ್ಕಿ ತಂದು ತಮ್ಮ ಮರಿ ಹಕ್ಕಿಗಳಿಗೆ ತಿನ್ನಿಸುವ, ನೆಲಹಕ್ಕಿಗಳಾದ ಅವುಗಳ ಮರಿಗಳು ನಾಲ್ಕಾರು ದಿನಗಳಲ್ಲೇ ಹಾರುವುದನ್ನು ರೂಢಿಸಿಕೊಳ್ಳುವ ಶಕ್ತಿಯನ್ನು ಹೊಂದಿದ ಪ್ರಕೃತಿ ಸೂಕ್ಷ್ಮಗಳನ್ನೂ ಹತ್ತಿರದಿಂದ ಸೆರೆ ಹಿಡಿದು ಅಭ್ಯಸಿಸುವ ಅವರು ತಮ್ಮ ಸಮನಾಕಾಂಕ್ಷಿ ಗಳೊಟ್ಟಿಗೆ ಗಂಟೆಗಟ್ಟಲೆ ಕಾದೂ ವೀಡಿಯೊ ಸೆರೆ ಹಿಡಿಯುತ್ತಾರೆ. ಡಾಕ್ಯುಮೆಂಟರಿ ಕೆಲಸ ಇವರಿಗೆ ಬಹಳ ಒಗ್ಗುತ್ತದೆಂದುಕೊಂಡೆ. ಅವತ್ತೂ ಸುಮಾರು ಹೊತ್ತು ಸದ್ದು ಮಾಡದೇ ಹಕ್ಕಿ ಮರಿಗಳಿದ್ದ ಜಾಗದಲ್ಲಿ ಕ್ಯಾಮೆರಾ ಆನ್ ಮಾಡಿಟ್ಟು ದೂರದಿಂದಲೇ ತಂದೆ ಮಾತು ತಾಯಿ ಹಕ್ಕಿಗಳ ಚಲನವಲನಗಳನ್ನು ತಾಯಿ ಹಕ್ಕಿ ತನ್ನ ಮರಿ ಹಕ್ಕಿಗಳಿಗೆ ಕಚ್ಚಿಕೊಂಡು ಬಂದು ಆಹಾರ ಸಂಗ್ರಹಿಸುವ, ತಿನ್ನಿಸುವ ಕ್ರಮವನ್ನು ಸುಮಾರು ಹೊತ್ತು ರೆಕಾರ್ಡ್ ಮಾಡಿಕೊಂಡರು. ಈಗಿನ ಪರಿಸರ ಹಾನಿಕಾರಕ ಪ್ರವೃತ್ತಿಗಳನ್ನೂ, ನೈಸರ್ಗಿಕ ಆಪತ್ತುಗಳನ್ನು ಜರಿಯುತ್ತಲೇ ದೇಶೀ ಪದ್ಧತಿಯನ್ನು ಇಷ್ಟಪಡುವ ಪ್ರಾಣಿ, ಪಕ್ಷಿ ಸಂಕುಲ ಉಳಿಯಲು ಕೈಗೊಳ್ಳಬೇಕಾದ ಕ್ರಮಗಳನ್ನು ಶಿವಶಂಕರ ಬಣಗಾರ್ ವಿವರಿಸುತ್ತಿದ್ದರು. ಹಾಸ್ಯಪ್ರಜ್ಞೆಗೆ ವಾಲಿದ ಶಿವಶಂಕರ್ ಹಂಪಿಯಿಂದ ಬರುವಾಗ ಕಮಲಾಪುರ ಹತ್ತಿರದ ವೃತ್ತವೊಂದರಲ್ಲಿ ತಡೆದು ನಿಲ್ಲಿಸಿ ತಮ್ಮ “ಮನೆ ದೇವರನ್ನು” “ಮಡಿ ತೇರು” ನೆನೆದು ಜಪಿಸುತ್ತಾ,ಜಠರಾಗ್ನಿ ಶಮನಗೊಳಿಸಲು ಸಣ್ಣ ಬಂಡಿಯೊಂದರಲ್ಲಿ ನಡೆಸುವ ಹೋಟೆಲ್ ನತ್ತ ಕರೆದೊಯ್ದರು.
ತಮ್ಮ ದಿನನಿತ್ಯದ ರೂಢಿಗಳನ್ನೂ, ಅಭಿರುಚಿಗಳನ್ನು ಹೇಳುತ್ತಾ, ತಮ್ಮ ಮನೆ ದೇವರು, ಊರ ದೇವರು, ಮಡಿ ರಥೋತ್ಸವ, ಬ್ರಹ್ಮ ರಥೋತ್ಸವ, ಬಗ್ಗೆ ಸ್ವಾರಸ್ಯಕರವಾಗಿ ಹೇಳಿದರು. ಉಪ್ಪಿಟ್ಟು ಅವರ ಮೆಚ್ಚಿನ ತಿಂಡಿ, ಆದ್ದರಿಂದ ಅದು ಮನೆ ದೇವರು, ಮಂಡಾಳು ಒಗ್ಗರಣೆ, ಮೆಣಸಿನಕಾಯಿ ಈ ಭಾಗದ ಅತಿಥಿಗಳ ನಾಲಗೆ ಚುರುಕ್ಕೆನಿಸುವ ತಿನಿಸಾಗಿದ್ದರಿಂದ ಅದು ಅವರ ಊರ ದೇವರೆಂದು ಹಾಸ್ಯವಾಗಿ ಹೇಳುತ್ತಾ, ಇಡ್ಲಿ ಪೂರಿ ತಿನ್ನುತ್ತಿದ್ದರು. ಎಲ್ಲಾದ್ರೂ ಸರಿ, ಅವರು ಮನೆ ದೇವ್ರು ಕಂಡ್ರೆ ಜಪಿಸದೇ ಇರಲಾರರು . ನಾನು , ಹಾಗದರೆ, ಇಡ್ಲಿ, ಪೂರಿ ಒಡ ದೋಸೆ ಇವು ವಲಸೆ ದೇವರಾ ? ಅಂದೆ. ಅದ್ಸರಿ , ಈ ಮಡಿ ತೇರು, ಬ್ರಹ್ಮ ರಥೋತ್ಸವ ಬಗ್ಗೆ ಹೇಳಿ ಅಂದೆ, ಬಣಗಾರ್ ನಗುತ್ತಲೇ ಹೇಳಿದರು; ನೋಡಿ, ಲೈಟಾಗಿ ತಿಂಡಿ – ಎರಡೇ ಇಡ್ಲಿ , ಒಂದೇ ಪ್ಲೇಟ್ ಪುರಿ, ಅಥವಾ ಸಿಂಗಲ್ ಒಡ, ತಿನ್ನುವುದಾದರೆ ಅದು ಮಡಿ ತೇರು, ಗಡದ್ದಾಗಿ ತಿಂದುಂಡು ಡೇಗಿದರೆ ಅದು ಬ್ರಹ್ಮ ರಥೋತ್ಸವ ಎಂದರು.
ಅವರಂತೆ ಹವ್ಯಾಸಿ ಛಾಯಾಗ್ರಾಹಕರು, ಪಕ್ಷಿಪ್ರಿಯರು ಹೊತ್ತಿಗನುಗುಣವಾಗಿ ಕಂಡೊಡನೆ ಏನ್ರಿ, ಮಡಿ ತೇರು ಎಳೆದ್ರಾ ಇಲ್ಲಾ ಬ್ರಹ್ಮರಥೋತ್ಸವನಾ? ಅನ್ನುವುದು ರೂಢಿ. ನಾನು ಜೊತೆಯಾಗಿ ಕೊನೆಯಲ್ಲಿ ಚಾ, ಸಿಗರೇಟ್ ಇದ್ದರೆ ಅಭಿಷೇಕದ ನೀರು ಮತ್ತು ಧೂಪಾರ್ತಿ ಯಂತೆ ಇದ್ದರೂ ಇರಬಹುದು ಅಂದುಕೊಂಡು ಸುಮ್ಮನಾದೆ. ಅಲ್ಲಿಂದ ನಿಸರ್ಗಧಾಮಕ್ಕೆ ತೆರಳಿದ ನಾವು ಬಣಗಾರರ ಊರ ದೇವರನ್ನು(ಮಂಡಾಳು ಒಗ್ಗರಣೆ ) ಮತ್ತೊಮ್ಮೆ ಬಾಂಸುರಿ (ಹಿಟ್ಟಚ್ಚಿದ ಮೆಣಸಿನಕಾಯಿ ) ಕಂಬಿನೇಷನ್ನಲ್ಲಿ ಜಪಿಸಿದ್ದಾಯಿತು. ನಿಸರ್ಗಧಾಮದಲ್ಲಿ ನಮಗೆ ಜೊತೆಯಾದ ಇನ್ನೊಬ್ಬ ಪಕ್ಷಿಪ್ರೇಮಿ ಉಮೇಶ್ ತಮ್ಮ ನೆನಪಿಗಿದ್ದ ಜನಜಾಗೃತಿಗೀತೆಗಳನ್ನೂ, ಸಾಮಾಜಿಕ ನಾಟಕಗಳ ಸಂಭಾಷಣೆಗಳನ್ನು, ತಮಗಿದ್ದ ಓದು, ಬರವಣಿಗೆಗಿನ ಆಸಕ್ತಿಯನ್ನು ಹಂಚಿಕೊಂಡರು. ದರೋಜಿ ಕರಡಿಧಾಮ, ನಿಸರ್ಗಧಾಮದಲ್ಲಿ ಇರುವ ಇನ್ನೊಬ್ಬ ಪರಿಸರ, ಹಾಗೂ ಪಕ್ಷಿವೀಕ್ಷಣೆಯ ಸೂಕ್ಷ್ಮ ಗ್ರಹಿಕೆಯ ವ್ಯಕ್ತಿ ಪಂಪಯ್ಯ ಸ್ವಾಮಿ ಪರಿಚಯವಾಯಿತು.ಪಕ್ಷಿ ಪ್ರೇಮಿಗಳು, ಪರಿಸರ ಪ್ರೇಮಿಗಳು ಇವರ ವಿವರಣೆಯಲ್ಲಿ ವೀಕ್ಷಿಸಲು ಸುಮಾರು ದೂರದೂರುಗಳಿಂದ ಅವರ ದೊರೆಯುವ ಸಮಯಾವಕಾಶ ಉಪಯೋಗಿಸಿಕೊಂಡು ವಿಸಿಟ್ ಮಾಡುವ ಮಂದಿ ಇದ್ದಾರಂತೆ.
ಇಷ್ಟರಲ್ಲೇ ಮಧ್ಯಾನ್ಹ ಬಿಸಿಲಿ ನೆತ್ತಿ ಮೇಲೆ. ಸಹಜವೆಂಬಂತೆ, ಬಣಗಾರರಿಗೆ, ಉಮೇಶ್, ಹಾಗೂ ನನಗೆ ಬ್ರಹ್ಮರಥೋತ್ಸವಕ್ಕೆ ಆಹ್ವಾನ ಬಂತು. ನನಗಾಗಲೇ ವಾಪಾಸ್ಸು ಬರುವ ಅನಿವಾರ್ಯತೆ. ಬೆಳಗಿನ ಮಡಿ ತೇರು ಎರಡೆರಡು ಬಾರಿ ಎಳೆದು ವಲಸೆ ದೇವರನ್ನು ಜಪಿಸಿದ್ದಾಗಿತ್ತು. ಮತ್ತಿನ್ಯಾಕೆ ಬ್ರಹ್ಮ ರಥೋತ್ಸವ ಅಂದೆ. ಅಂದಹಾಗೆ, ಮಂಡಾಳು ಒಗ್ಗರಣೆ ಉಮೇಶ್ ರ ಮನೆ ದೇವರೆಂದು ಗೊತ್ತಾಯಿತು. ಕೊನೆಯಲ್ಲಿ ಅವರಿಬ್ಬರೂ ನಿಮ್ಮ ಮನೆ ದೇವರು ಯಾರೆಂದು ಕೇಳಿದ್ದರೆ, ಅಥವಾ ಊರ ದೇವರು, ವಲಸೆ ದೇವರ ಬಗ್ಗೆ ಕೇಳಿದ್ದರೆ, ನನಗೆ ಉಪ್ಪಿಟ್ಟು ಮಾತ್ರ ನನಗೆ ಊರ ಹೊರಗಿನ ಹಣಮಪ್ಪನೆಂದು ಹೇಳಬೇಕೆಂದುಕೊಂಡೆ.. ಅವರು ಕೇಳಲಿಲ್ಲ ನಾನು ಹೇಳಲಿಲ್ಲ …

‍ಲೇಖಕರು G

25 October, 2013

33 Comments

  1. Gururaj katriguppe

    good article.

  2. shivashankar banagar

    ಹಹಹಹ.. ಉಪ್ಪಿಟ್ಟು ಕಂಡುಹಿಡಿದ ಮಹಾನುಭಾವನಿಗೊಂದು ಶರಣು.ನನ್ನ ಮನೆ ದೇವರ ದರ್ಶನ ಪಡೆದ ಅಮರದೀಪ ಅವರಿಗೊಂದು ಡಬ್ಬಲ್ ಶರಣು.ಉಪ್ಪಿಟ್ಟು ತುಂಬಾ ಕಾಡಿರುವ, ಕಾಡಿಸುವ, ತಿನ್ನಲು ಉದ್ದೀಪಿಸುವ ಅದೊಂದು ಮಾಂತ್ರಿಕ ತಿಂಡಿ.

    • Anonymous

      Hey bhagawan…. If i say it is like edible concrete… You will kill me, I suppose. 🙂

  3. knravikumar

    good pl. continue the writing

    • amardeep.p.s.

      thanks…sir

  4. Rukmini Nagannavar

    ha ha… tumba chennagide onagaaraara hasya prajne.. naanoo nageyalli teli hode. anda haage naavu brahma rathotsavavannu ishta paduvavaru… 🙂
    Thank you
    Rukmini Nagannavar

  5. LATHA ATTE

    MANE DEVRU, OORA DEVRU,etc. arei fine

    • amardeep.p.s.

      thanks atte…

  6. Suman Desai

    ವ್ಹಾ…. ಭಾಳ ಛಂದ ಬರೆದೀರಿ..

    • amardeep.p.s.

      dhanyavaada akkore…

  7. M.GAVIYAPPA

    I have read over the article. Its very nice. Really I like it very much. Keep going on.

  8. jyothi

    Chennaagide..sir

  9. Sarvesh Mashal

    sir, nimma article channagide. Nanu nimma article odutta oduta Ravi Baligeri barediruva article tharane anisutte.

  10. aradhya

    ನಾನು ಕೂಡ ಬಣಗಾರ್ ಸರ್ ಜೊತೆ ತಿರಗಾಡ ಬೇಕೆಂಬ ಹಂಬಲ ಹೊಂದಿದವನು, ಅವರು ಸಹ ಸಾಕಷ್ಟು ಬಾರಿ ನನ್ನು ಕರೆದಿದ್ದಾರೆ. ಒಮ್ಮೆ ನಾನು ಅವರ ಜೊತೆ ಹೋಗಿದ್ದೆ. ಅದರ ಅನುಬವವೇ ಬೇರೆ ನಾನು ಅಂದು ಕೇವಲ ನನ್ನ ಕ್ಯಾಮರ ಮಾತ್ರ ತೆಗೆದುಕೊಂದು ಹೋಗಿದ್ದೆ. ಅದರೆ ಟೆಲಿ ಲೆನ್ಸ್ ಬಿಟ್ಟು ಹೋಗಿದ್ದೆ, ಮತ್ತೆ ಅವರೊಂದಿಗೆ ಹೋಗಬೇಕೆಂದಿದ್ದೇನೆ. ನೋಡುವ ಅಂತ ಅವಕಾಶ ಯಾವಗ ಬರುತ್ತೆ ಅಂತ.

    • shivashankar banagar

      ದಯಮಾಡಿ ಬನ್ನಿ ಆರಾಧ್ಯ ಅವರೆ

  11. Dr Vani Sundeep

    Tumba Chennagi barediddeera, Good article.

  12. Manohara Kn

    Article is very and Keep it up

  13. diwakar

    Nice article

  14. kotresh

    Odisikondu hoguva nirantarate mattu ardrate ide

  15. Santhoshkumar LM

    Super sir!

  16. bharathi b v

    Aahaara devru anta prove maadidaare ! Nam mane devroo adene 🙂 … neevondu camera begane kondu kollo haagaagli anta haraisuttene

  17. ganesh s iyer

    nivu bareda ankana snehitharondike hasya pravasa iddange itthu. hasya prajne yethechavagi kanuthithu. Prathi ondarallu hasya chataki harisi mano ullasa niduva nima baraha chennagide. kalpane adbutha. bhuri bhojana arthath brahmarathothsava maditherigintha chennagirathe adanna neevu miss madkond ollede madidri doctor fees ulisidri… a ulisid feesna nange illige kasli bramaharathosava madkothini.

  18. Rajshekhad Daggi

    Swamy,
    Nange Ee Camera priyaranna heegu matinalli vijrambisabahudu anta gottagiddu nimmindalene. Hageye, Brahmarathotsava matte Madi Terina vivarane tumba chennagi helidare Banagara Gurugalu
    Thanks for Accelerating such words Amar

  19. Harish Shetty

    ಲೇಖನ ಚೆನ್ನಾಗಿದೆ, ಕೆಲವು ಗೊತ್ತಿಲ್ಲದ ವಿಷಯ ತಿಳಿದಂತಾಯಿತು.

  20. Jagadish

    Nice one Sir, Keep writing these kind of article. Good one to read in kannada.

  21. hemalatha5800@gmail.com

    ಲೇಖನ ತುಂಬಾ ಚೆನ್ನಾಗಿದೆ
    ಕಮಲಾಪುರದ ಕೆರೆದಂಡೆಯ ಮೇಲಿನ ವೀಕ್ಷಣೆಯ ವಿವರೆಣೆಯನ್ನು ಓದುತ್ತಿದ್ದರೆ ಆಆ ದೃಷ್ಯಗಳನ್ನು ಕ್ಯಾಮೆರಾಗಿಂತ ಮುಂಚಿತವಾಗಿ ನಮ್ಮ ಮನಸ್ಸಿನ ಕಣ್ಣುಗಳೇ ಸೆರೆಹಿಡಿದಿರುತ್ತವೆ. ಸಂದರ್ಭಕ್ಕಿಂತ ಹೆಚ್ಚಾಗಿ ಆಆ ಸಮಯದ ಹಾಸ್ಯಗಳೇ ಹೆಚ್ಚು ಮರೆಯಲಾರದ ಸಂತಸದ ನೆನಪುಗಳು

  22. Anonymous

    hi… niroopane chennagide, utamma prayatna… prayaana munduvariyali….. tv gintha ttiviya prvash uttama havyasa… munduvariyali…
    ganesh rao havaldar

  23. ganesh rao havaldar

    ದೀಪು , ಉತ್ತಮ ಪ್ರಯತ್ನ … ಮುಂದುವರಿಯಲಿ ….ಒಳ್ಳೆಯ ಹವ್ಯಾಸಗಳು ಉಳಿಯಲಿ ಬೆಳೆಯಲಿ … ಕೋಣೆಯಿಂದ ಹೊರಬಂದು ಪರಿಸರ ವೀಕ್ಷಣೆ .. ರಕ್ಷಣೆ .. ಸಂರಕ್ಷಣೆ ನಮ್ಮೆಲ್ಲರ ಹೊಣೆ … ನೋಡಿ ಕಲಿ – ಮಾಡಿ ತಿಳಿ

  24. Anonymous

    nammora tindi tinusugalige heegella helabahudu anta gottagidde eega….. tumba olle baraha deepanna ….. good one..

  25. C.M.Srinivasa, Typist

    Good article sir, its continue sir

  26. Basavaraj Sulikeri

    ನಮ್ಮ ಊರ ದೇವ್ರ ಇವತ್ತು ಅಮರ ಸರ್. ಚೆನ್ನಾಗಿದೆ ಓದಿ ತೃಪ್ತನಾದೆ.

  27. ಆರತಿ ಘಟಿಕಾರ್

    ಮನೆದೇವರು , ರಥೋತ್ಸವ , ಮಡಿ ತೇರು ಹಹಃ ಎಷ್ಟೆಲ್ಲಾ ವಿಭಿನ್ನ ಒಳ ಅರ್ಥಗಳು .ಬಗ್ಗೆ ಪರಿಚಯ ಮಾಡಿಸಿದ್ದೀರಿ .ನಿಮ್ಮ ಬರಹದ ನಂಟಿನ ಜೊತೆಗೆ ನಿಮ್ಮ ಫೋಟೋಗ್ರಫಿ ಕೂಡಾ ಯಶಸ್ಸು ಕಾಣಲಿ !

  28. kb rudresh

    Nice article

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading