ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಜುನಾಯಕ ಚಳ್ಳೂರು ಅವರ ಕಥೆಗಳಿಗೂ ವಾಸನೆಯಿದೆ..

ಜಿ ಎನ್ ಮೋಹನ್

ಮಂಜುನಾಯಕ ಚಳ್ಳೂರು ಅವರ ಕಥೆಗಳನ್ನು ಓದಿ ಥೇಟ್ ಅವರ ಕಥೆಯ ‘ವಜ್ರಮುನಿ’ಯಂತೆ ಮೌನಕ್ಕೆ ಶರಣಾಗಿದ್ದೇನೆ.

ಅವರ ಅಷ್ಟೂ ಕಥೆಯ ಪಾತ್ರಗಳು ನನ್ನ ದೇಹವನ್ನೇ ಕ್ಯಾನ್ವಾಸ್ ಮಾಡಿಕೊಂಡು ಓಡಾಡುತ್ತಿದೆಯೇನೋ ಎನ್ನುವ ಅನುಭವವಾಗುತ್ತಿದೆ.

ಚಳ್ಳೂರು ಕಂಡ ಲೋಕಕ್ಕೆ ಕೊಟ್ಟ ಮಾತಿನ ಸ್ಪರ್ಶ ವಿಶಿಷ್ಟವಾದದ್ದು. ನಾನು ಮೂರು ವರ್ಷಗಳ ಕಾಲ ಕಲಬುರ್ಗಿಯಲ್ಲಿದ್ದದ್ದಕ್ಕೋ, ಈ ಕಥೆಗಳು ನಡೆದಾಡಿದ ನೆರೆಯ ನೆಲದ ಜೊತೆಗೆ ಉಸಿರಾಡಿದ ಕಾರಣಕ್ಕೂ.. ಇಲ್ಲಿನ ಜನ, ಮಾತು ಎಲ್ಲವೂ ನನ್ನ ಭಾಗವೂ ಆಗಿದ್ದ ಕಾರಣಕ್ಕೂ ‘ಫೂ’ ನನ್ನನ್ನು ಇನ್ನಿಲ್ಲದಂತೆ ಆವರಿಸಿಕೊಂಡಿತು.

ಫೂ ಎನ್ನುವ ಹೆಸರು ಕಥಾ ಸಂಕಲನಕ್ಕೆ ಇಟ್ಟ ಕಾರಣಕ್ಕೂ ಗಮನ ಸೆಳೆದ ಚಳ್ಳೂರು, ಅವರ ಕತೆಗಳಿಗೆ ಆರಿಸಿಕೊಂಡಿರುವ ಭಿತ್ತಿ ಹಾಗೂ ಪಾತ್ರಗಳನ್ನು ಕಡೆದಿಟ್ಟಿರುವ ರೀತಿ ಬಹಳ ಕಾಲ ಕಲಕುತ್ತದೆ.

ಅವರ ‘ಕನಸಿನ ವಾಸನೆ’ಯಂತೆ ಅವರ ಕಥೆಗಳಿಗೂ ವಾಸನೆಯಿದೆ.

ಮಾಧ್ಯಮದ ಗಿರಣಿಯಲ್ಲಿ ಇನ್ನೊಬ್ಬ ಲೇಖಕ ಕಳೆದುಹೋಗದಿರಲಿ ಎಂದು ನಾನು ‘ಖತಲ್ ರಾತ್ರಿ’ಯ ಅಲೈ ಕುಣಿಗೆ ಇನ್ನೊಂದು ಗಂಧದ ಕೊರಡು ಸೇರಿಸಬಹುದಷ್ಟೇ..

‍ಲೇಖಕರು avadhi

3 June, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading