ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಜುನಾಥ್ ಚಾಂದ್ ಬರೆವ ‘ಇವರು ಮೂರ್ತಿ’

-ಮಂಜುನಾಥ್ ಚಾಂದ್

ಇವರು ಮೂರ್ತಿ 3 ಕೆಮೆಸ್ಟ್ರೀ, ಆಲ್ಜೀಬ್ರಾ, ಟ್ರಿಗ್ನಾಮೇಟರಿ… ಆದರೆ, ನಾನೇನು ಗುಡ್ ಸ್ಟುಡೆಂಟ್ ಆಗಿರಲಿಲ್ಲ. ಕೆಮೆಸ್ಟ್ರೀ ನನ್ನ ತಲೆಗೆ ಹೋಗ್ತಾನೇ ಇರಲಿಲ್ಲ. ಹೋಗ್ಲಿ ಆದಾದರೂ ಓಕೆ. ಆದರೆ, ಟ್ರಿಗ್ನಾಮೇಟರಿ? ಆಲಜಿಬ್ರಾ? ಇದು ನನ್ನ ತಲೆಗೆ ಹತ್ತುತ್ತಲೇ ಇರಲಿಲ್ಲ. ಐ ಹೇಟ್ ಬೋತ್ ದ ಸಬ್ಜೆಕ್ಟ್! ಆಗ ಸುಮಾರು 13 ಪ್ರೊಫೆಶನಲ್ ಕೋರ್ಸ್ ಗಳಿದ್ದವು. ಟೈಲರಿಂಗ್ ನಿಂದ ಆರಂಭಿಸಿ ಬೂಟ್ ಮ್ಯಾನುಫ್ಯಾಕ್ಚರಿಂಗ್ ತನಕ. ಆದರೆ, ಸರಿಯಾದ ಪ್ರೊಫೆಶನಲ್ ಅಪ್ರೋಚ್ ಇರಲಿಲ್ಲ. ನಮಗೆ ಫೋಟೋಗ್ರಫಿ ಹೇಳಿಕೊಡುತ್ತಿದ್ದವರು ಒಬ್ಬರು ಅಡ್ವೊಕೇಟ್. ಬಿಎ ಎಲ್ಎಲ್ಬಿ ಮಾಡಿದ್ದವರು. ಅವರು ಏನು ಹೇಳಿಕೊಡಬಹುದಿತ್ತು ಹೇಳಿ? ಅವರು ಕೇವಲ ಸ್ಟಿಲ್ ಫೋಟೊ ತೆಗಿತಾ ಇದ್ದರು. ಅವರೇ ಹೆಡ್ ಆಫ್ ದಿ ಡಿಪಾರ್ಟ್ ಮೆಂಟ್! ಆಗ ಬಾಂಬೆ ಕಾಲೇಜುಗಳಿಂದ ಪ್ರೋಫೆಸರ್ಗಳು ಬಂದಿದ್ದರು. ಅವರ ಬಳಿ ಹೋಗಿ ನಾನು ಕೇಳಿದೆ; ಬಾಂಬೆ ಕಾಲೇಜುಗಳಲ್ಲಿ ಫೋಟೊಗ್ರಫಿಯಲ್ಲಿ ಈ ಸಬ್ಜೆಕ್ಟ್ಗಳೆಲ್ಲ ಇವೆಯಾ? ಅಂತ. ಅವರದಕ್ಕೆ; “ನೋ ನೋ, ಆಲ್ ದೀಸ್ ಆರ್ ಸಿಲ್ಲಿ ಥಿಂಗ್ಸ್’ ಅಂದರು. ಆಮೇಲೆ ಅವರನ್ನೇ ಮುಂದೆ ಮಾಡಿಕೊಂಡು ಪ್ರಿನ್ಸಿಪಾಲರನ್ನು, ಹೆಡ್ ಆಫ್ ದಿ ಡಿಪಾರ್ಟ್ ಮೆಂಟ್ ಭೇಟಿ ಮಾಡಿ ಕಂಪ್ಲೇಂಟ್ ಮಾಡಿದ್ವಿ. ಅವರು ಇದೆಲ್ಲಾ ಬೇಡ್ವಾ ಹಾಗಾದರೆ? ಅಂತ ಹೇಳಿ ಒಬ್ಬರು ದೇಸಾಯಿ ಅಂತಿದ್ದರು ಅವರನ್ನು ಕರೆಸಿದ್ರು. ಅವರು ಬಂದವರು, ಟ್ರಿಗ್ನಾಮೇಟರಿ, ಆಲ್ಜಿಬ್ರಾ ಫೋಟೋಗ್ರಫಿಗೆ ಸಂಬಂಧವೇ ಇಲ್ಲದ್ದು ಅಂತ ತೀರ್ಪು ಕೊಟ್ಟರು. ಸರಿ ಅಂದ್ಹೇಳಿ ಆ ಸಬ್ಜೆಕ್ಟನ್ನೇ ತೆಗೆದು ಹಾಕಿದರು. ಮೊದಲ ಪರೀಕ್ಷೆ ಹೊತ್ತಿಗೆ ಆ ಸಬ್ಜೆಕ್ಟ್ ಗಳೇ ಇರಲಿಲ್ಲ. ಅಬ್ಬಾ! ನಮಗಂತೂ ಬಾರೀ ನಿರಾಳ ಆಗಿತ್ತು. ಆದರೂ ನಾನು ಆರ್ಕೆಷ್ಟ್ರಾ, ನಾಟಕ, ಸಂಗೀತ ಅಂದ್ಕೊಂಡು ಅದೂ ಇದೂ ಪ್ರೋಗ್ರಾಂ ಮಾಡ್ಕೊಂಡು ಇನ್ಸ್ಟಿಟ್ಯೂಟ್ನಲ್ಲಿ ಸಲ್ಪ ಫೇಮಸ್ ಆಗಿದ್ದೆ. ಒಂದಿಷ್ಟು ಹುಡುಗರನ್ನು ಜಮಾಯಿಸಿಕೊಂಡು ಕಾರ್ಯಕ್ರಮ ಮಾಡ್ತಾ ಇದ್ದೆ. ಆರ್ಕೆಷ್ಟ್ರಾ ಮಾಡ್ತಾ ಇದ್ದೆ. ಇದನ್ನೆಲ್ಲ ಮಾಡೋಕೆ ಫಂಡ್ ಬೇಕಲ್ಲ? ಅದಕ್ಕೆ ಸ್ಕೂಲ್ ಬಾಯ್ಸ್ ಫಂಡ್, ಪ್ಲೀಸ್ ಡೊನೇಟ್ ಅಂತ ಬೋರ್ಡ್ ನೇತ್ಹಾಕ್ಕೊಂಡು ಆಗಿನ ಕಾಲದಲ್ಲಿ ಹೆಸರು ಮಾಡಿದ ದೊಡ್ಡವರ ಮನೆಗೆ ಹೋಗ್ತಾ ಇದ್ವಿ. ಆಗ ಒಂದಿನ ನಾವು ಸರ್ ಸಿ.ವಿ.ರಾಮನ್, ಎಸ್.ಜೆ.ಭಗವಾನ್ ಮನೆಗೆ ಹೋಗಿ ಪ್ರೋಗ್ರಾಂಗೆ ದುಡ್ಡು ಕಲೆಕ್ಟ್ ಮಾಡಿಕೊಂಡು ಬಂದಿದ್ದೆವು. ]]>

‍ಲೇಖಕರು G

21 December, 2010

2 Comments

  1. Agnihothri

    Nice Sir…

  2. chand

    ಥ್ಯಾಂಕ್ಯು!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading