ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಗಳೂರಿನಲ್ಲಿ ಎರಡು ನಾಟಕ

ಪ್ರಿಯರೇ

`ನೀನಾಸಂ ತಿರುಗಾಟ’ದ ಹೆಸರಿನಲ್ಲಿ ವಾರ್ಷಿಕ ಒಂದೇ ಸುತ್ತಿನ ಪ್ರದರ್ಶನವಾದರೂ ಈಚಿನ ದಿನಗಳಲ್ಲಿ ಆ ತಂಡದ ಸಣ್ನ ತುಕಡಿಗಳು ಮತ್ತೆ ವಿವಿಧ ಹೆಸರುಗಳಲ್ಲಿ ಇನ್ಯಾವುದೋ ಒಂದು ಪ್ರದರ್ಶನವನ್ನು ಇಟ್ಟುಕೊಂಡು ಸಣ್ಣ ತಿರುಗಾಟ ನಡೆಸುವುದು ನಿಮಗೆ ಗೊತ್ತೇ ಇದೆ. ಅಂತದ್ದೇ ಒಂದರ ಪ್ರದರ್ಶನವೇ ನಾವು ಉಡುಪಿಗೆ ಹೋಗಿ ನೋಡಿ ಬಂದ `ನೀರಿನ ನಿಲುತಾಣ’. ಅದರ ಪಶ್ಚಾತ್ ಕಂಪನಗಳಲ್ಲಿ ಮಿತ್ರ ಬಳಗದಿಂದ “ಅಶೋಕರೇ ಮತ್ತೆ ಇಂಥಾ ಪ್ರದರ್ಶನಗಳು ನಮ್ಮ ವಲಯಕ್ಕೆ ಬಂದದ್ದು ನಿಮಗೆ ತಿಳಿದರೆ ನಮಗೆ ಮುಂದಗಿ ತಿಳಿಸಲೇಬೇಕು” ಎಂದು ಒತ್ತಾಯ ಬಂದದ್ದರಿಂದ ಈಗ ಎರಡು ತಂಡ ಎರಡು ಪ್ರದರ್ಸನಗಳ ವಿವರಗಳು ನನ್ನಲ್ಲಿವೆ:

೨೬-೬-೨೦೧೧ ಆದಿತ್ಯವಾರ ಸಂಜೆ ಆರೂವರೆಗೆ ಮಂಗಳೂರಿನ ಶಕ್ತಿನಗರದಲ್ಲಿರುವ ಕಲಾಂಗಣ್ ವಠಾರದಲ್ಲಿ (ಮಾಂಡ್ ಸೊಭಾಣ್ ಆಶ್ರಯದಲ್ಲಿ) ಥಿಯೇಟರ್ ಸಮುರಾಯ್ಸ್ ತಂಡದಿಂದ ಕನ್ನಡ ನಾಟಕ – ಹದ್ದುಮೀರಿದ ಹಾದಿ. ರಚನೆ ಪ್ರಸನ್ನ, ನಿರ್ದೇಶನ ವೆಂಕಟರಮಣ ಐತಾಳ. ಪ್ರವೇಶ ಧನ ರೂ ಐವತ್ತು.

೧೦-೭-೨೦೧೧ ಆದಿತ್ಯವಾರ ಸಂಜೆ ಐದೂವರೆಗೆ ಮಂಗಳೂರಿನ ಡಾನ್ ಬಾಸ್ಕೋ ಹಾಲಿನಲ್ಲಿ (ರಂಗಸಂಗಾತಿ (ರಿ), ಮಂಗಳೂರು ಇವರ ಆಶ್ರಯದಲ್ಲಿ) ಜನಮನದಾಟ ತಂಡದಿಂದ ಕನ್ನಡ ನಾಟಕ ಊರುಕೇರಿ (ಡಾ|ಸಿದ್ಧಲಿಂಗಯ್ಯನವರ ಆತ್ಮಕಥಾಧಾರಿತ). ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನ ಎಂ ಗಣೇಶ್. ಪ್ರವೇಶ ಧನ ರೂ ಐವತ್ತು

ಅವಶ್ಯ ಬನ್ನಿ, ಆಸಕ್ತರಿಗೆಲ್ಲಾ ತಿಳಿಸಿ, ಮಿತ್ರಬಳಗವನ್ನು ಕಟ್ಟಿಕೊಂಡು ನೀವೂ ಬಂದು ನೋಡಲು ಮರೆಯಬೇಡಿ.

ಇಂತು ವಿಶ್ವಾಸಿ

ಅಶೋಕವರ್ಧನ

 

‍ಲೇಖಕರು G

25 June, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading