ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಭ್ರೂಣ ಭಾಷ್ಯ – ನರೇಶ್ ಮಯ್ಯ ಕವಿತೆ

ಭ್ರೂಣ ಭಾಷ್ಯ – ನರೇಶ್ ಮಯ್ಯ ತುಂಬು ತಿಂಗಳ ಬೆಳಕಲ್ಲಿ ಆ ರಾತ್ರಿ ಸುಖಿಸಿದ್ದ ಅದೇ ಅಂಗಳದಲ್ಲಿ ಇನ್ನೂ ಚೆಲ್ಲಿಕೊಂಡಿವೆ ನಮ್ಮೀರ್ವರ ನಗ್ನ ನಾಚಿಕೆಗಳು.   ಆ ಅಹೋರಾತ್ರಿ ಅರೆಬೆಂದ ನನ್ನ ಮನವ ನಿನ್ನತ್ತ ಬಿಸುಟಿದ್ದೆನಲ್ಲ ಅದಿನ್ನೂ ನತರ್ಿಸುತ್ತಲೇ ಇದೆ ನಗುಮೊಗವನ್ನೊತ್ತು ಅದೇ ಆ ನಸುಗತ್ತಲಲ್ಲಿ.   ಬಿಸಿಯುಸಿರ ಭ್ರಾಂತಿಯೋ ಭೀಭತ್ಸ್ಯ ಹತ್ಯೆಯೋ ಅಂತೂ ಕಾರಣವೊಂದಾಯಿತು ಈ ತಾಯ ಬಸಿರ ಬ್ರೂಣಕ್ಕೆ.   ಸುಖಿಸಿಲ್ಲ ಅಹಹಾ. . ಸಖೀ. . ಎಂದೆ ಬೆಂದೂ ಕಾಯಲಿಲ್ಲವೆಂದೆ ಏಕೆಂಬೆ?   ಒಳತಳದ ತುದಿಯೊಳಗೆ ಇನ್ನೂ ಕಾದುಕೂತಿದೆ ಕರಿದೊಗಲ ಕ್ರೂರ ಕೆಂಕಾಳಿ ಮಾಂಕಾಳಿ ಮೂದೇವಿ ಮಾರಿ.   ಬಯಸುತ್ತೀಯಾ ಇನ್ನೂ ?   ಅದೇ ಆ ಸುಖದ ಸಖನೊಡನೆ ಕಂಡ ಆ ಅದ್ಭುತದ ಮತ್ತೊಂದು ಮಿಲನ   ಎಚ್ಚರಿಕೆ !   ಅಪ್ಪಂದಿರೆಲ್ಲ ಅಮ್ಮನ ಅರೆನಗ್ನಗೊಳಿಸಿ ಹಾಲೆರೆದ ಅವಳದೇ ಆ ಎದೆಯನ್ನು ಚಪ್ಪರಿಸಿ ತಿನುವನಕ ನಿನಗಿಲ್ಲ ಆಸೆಗೂ ಸ್ವಾತಂತ್ರ್ಯ.   ಏಕೆಂದರೆ   ನೀನು ಈ ಮಣ್ಣ ಮಗು. ನಾನೂ.   ಅದಕ್ಕೆ ಈ ತೆರಿಗೆ ತೆರುತ್ತಲೇ ಇರಬೇಕು ಜನ್ಮಾಂತರ.  ]]>

‍ಲೇಖಕರು G

14 January, 2012

3 Comments

  1. Pramod ambekar

    Very nice Katu Satyad Matidu,
    E Kahi Stay Ariyuvad ellarigu idu Nitya
    Ambekar Pramod

  2. Rahamath Tarikere

    oh. NAresh, it is a heart touching poem, wondrfull really.
    there is command on both feeling and rythm of peom.
    congrats

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading