photo courtesy: Churumuri? Karnataka Photo News
-ನಾ ದಿವಾಕರ
ವಿಕಿಲೀಕ್ಸ್ನಿಂದ ಬಯಲಾಗುತ್ತಿರುವ ಘೋರ ವಾಸ್ತವಗಳು, ಏರುತ್ತಿರುವ ಅವಶ್ಯ ವಸ್ತುಗಳ ಬೆಲೆಗಳು, ದೇಶದೆಲ್ಲೆಡೆ ಪಕ್ಷಾತೀತವಾಗಿ ನಡೆಯುತ್ತಿರುವ ಭೂಹಗರಣ ಪ್ರಕರಣಗಳು, ಎಲ್ಲ ಕ್ಷೇತ್ರಗಳಲ್ಲೂ ಮಾಫಿಯಾಗಳ ಉಗಮ ಮತ್ತು ವೃದ್ಧಿ, ಸೇನಾಪಡೆಯಿಂದ ಹಿಡಿದು ಗ್ರಾಮ ಪಂಚಾಯತಿಯ ಕಾರಖೂನನವರೆಗೆ ಪಸರಿಸಿರುವ ಲಂಚಗುಳಿತನ, ಆದರ್ಶ, ಕಾಮನ್ವೆಲ್ತ್, 2ಜಿ ತರಂಗಾಂತರ ಮುಂತಾದ ಬೃಹದಾಕಾರದ ಹಗರಣಗಳು, ಚುನಾವಣೆಗಳಲ್ಲಿ ನೀರಿಗಿಂತಲೂ ಯಥೇಚ್ಚವಾಗಿ ಹರಿಯುತ್ತಿರುವ ಕಪ್ಪುಹಣ, ಭೂತಾಯಿಯ ಒಡಲಲ್ಲಿ ದೊರೆಯುವ ಮರಳಿನಿಂದಲೂ ಲಾಭಗಳಿಸುವ ಮರಳು ಗಣಿಗಾರಿಕೆಯ ದಂಧೆ, ರಾಜ್ಯ-ದೇಶದ ಬೊಕ್ಕಸವನ್ನೇ ಬರಿದುಮಾಡುತ್ತಿರುವ ಅದಿರು ರಫ್ತು ವ್ಯಾಪಾರ ಮತ್ತು ಗಣಿ ಉದ್ಯಮ, ಅರಣ್ಯ ಮತ್ತು ಜಲಸಂಪತ್ತನ್ನು ಸ್ವಾಧೀನಪಡಿಸಿಕೊಂಡು ಮೂಲ ನಿವಾಸಿಗಳ ಮೂಲೋತ್ಪಾಟನೆ ಮಾಡುತ್ತಿರುವ ಕಾಪರ್ೋರೇಟ್ ಉದ್ಯಮಿಗಳು, ಪರಾಕಾಷ್ಠೆಗೆ ತಲುಪಿರುವ ರಾಜಕೀಯ ಭ್ರಷ್ಟತೆ, ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತ ಮತ್ತು ಅಧಿಕಾರಶಾಹಿ ಧೋರಣೆ, ಅಧಿಕಾರ ರಾಜಕಾರಣ ಎಂದರೆ ಭೂ ಸ್ವಾಧೀನ ಮತ್ತು ಡಿ ನೋಟಿಫಿಕೇಷನ್ ಪ್ರಕ್ರಿಯೆ ಎಂದು ಅರ್ಥ ಮೂಡಿಸುವ ರಾಜಕೀಯ !
ಈ ಮೇಲಿನ ಎಲ್ಲ ವಿದ್ಯಮಾನಗಳನ್ನು ಒಂದೆರಡು ಪದಗಳಲ್ಲಿ ವಣರ್ಿಸಲು ಸಾಧ್ಯವೇ ? ಸಾಧ್ಯವಿದೆ ! ಇದು ನಮ್ಮ ಭಾರತ ಇನ್ನೇನು ಕೆಲವೇ ದಿನಗಳಲ್ಲಿ ರಾಷ್ಟ್ರದ ಅಪ್ರತಿಮ ನಾಯಕ, ಸಂವಿಧಾನ ಕತರ್ೃ ಡಾ. ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಿದ್ದೇವೆ. ಸಂವಿಧಾನವನ್ನು ಕುರಿತು, ಅಂಬೇಡ್ಕರ್, ಗಾಂಧಿ ಮತ್ತು ಭಾರತದ ಸಾಮಾಜಿಕ ಸ್ಥಿತ್ಯಂತರವನ್ನು ಕುರಿತು ಪುಂಖಾನುಪುಂಖವಾಗಿ ಭಾಷಣ ಮಾಡಲು ಈಗಾಗಲೇ ಸಿದ್ಧತೆಗಳೂ ನಡೆದಿರುತ್ತವೆ. ಇದೇ ಸಂದರ್ಭದಲ್ಲಿ ರಾಜಕೀಯ ಭ್ರಷ್ಟಾಚಾರದ ವಿರುದ್ಧ ಸೆಟೆದು ನಿಲ್ಲುವ ಪಣ ತೊಟ್ಟು ಅಂಬೇಡ್ಕರ್ ಪ್ರತಿಮೆಯ ಮುಂದೆ ಪ್ರಮಾಣ ಮಾಡುವ ಸಿದ್ಧತೆಗಳೂ ನಡೆದಿರುತ್ತವೆ. ಈ ನಡುವೆಯೇ ಖ್ಯಾತ ಸಮಾಜ ಸೇವಕ ಮತ್ತು ಹೋರಾಟಗಾರ ಗಾಂಧಿವಾದಿ ಅಣ್ಣಾ ಹಜಾರೆ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ. ಒಂದು ಸುದೀರ್ಘ ಹೋರಾಟಕ್ಕೆ ಮೊದಲ ಹೆಜ್ಜೆ ಅನಿವಾರ್ಯ ಎನ್ನುವಂತೆ ಹಜಾರೆ ಪ್ರಥಮ ಸೋಪಾನಕ್ಕೆ ನಾಂದಿ ಹಾಡಿದ್ದಾರೆ. ದೇಶದ ಜನತೆಯೂ ಈ ಹೋರಾಟಕ್ಕೆ ಸ್ಪಂದಿಸುತ್ತಿದೆ. ಎಲ್ಲೆಡೆ ಜನರು ತಮ್ಮ ಅಸ್ಮಿತೆಗಳನ್ನು ಬದಿಗಿಟ್ಟು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಇದು ಸ್ವಾಗತಾರ್ಹ ಬೆಳವಣಿಗೆ.
ಜನ ಲೋಕಪಾಲ್ ಮಸೂದೆಯನ್ನು ಜಾರಿಗೊಳಿಸಲು ಮತ್ತು ಈ ಮಸೂದೆಯ ರೂಪುರೇಷೆಗಳನ್ನು ನಿರ್ಧರಿಸಲು ಒಂದು ನಿಷ್ಪಕ್ಷಪಾತ ಸಮಿತಿಯನ್ನು ರಚಿಸಲು ಹಜಾರೆ ಆಗ್ರಹಿಸಿದ್ದಾರೆ. 42 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಈ ಮಸೂದೆಗೆ ಕಾಯಕಲ್ಪ ನೀಡುವ ಮೂಲಕ ತನ್ನ ನೈತಿಕತೆಯನ್ನು ನಿರೂಪಿಸಲು ಹೊರಟಿರುವ ಯುಪಿಎ ಸಕರ್ಾರಕ್ಕೆ ಇದು ದೊಡ್ಡ ಸವಾಲೇ ಸರಿ. ಆದರೆ ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಭಾಜಪ ಮತ್ತಿತರ ಬೂಷ್ವರ್ಾ ಪಕ್ಷಗಳ ನೈತಿಕತೆಯೂ ಇಲ್ಲಿ ಪರಾಮಶರ್ೆಗೊಳಗಾಗಬೇಕಿದೆ. ಏಕೆಂದರೆ 42 ವರ್ಷಗಳಲ್ಲಿ ಭಾರತವನ್ನು ಎಲ್ಲ ರಾಜಕೀಯ ಪಕ್ಷಗಳೂ ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಆಳಿವೆ. ಯಾವುದೇ ಸಕರ್ಾರವೂ ಲೋಕಪಾಲ್ ಬಗ್ಗೆಯಾಗಲೀ, ಭ್ರಷ್ಟಾಚಾರ ನಿಮೂರ್ಲನೆಯ ಬಗ್ಗೆಯಾಗಲೀ ಸಕಾರಾತ್ಮಕ ಕ್ರಮ ಕೈಗೊಂಡಿಲ್ಲ.. ಇದು ಸಾರ್ವತ್ರಿಕ ಸತ್ಯ. ಕಾರಣ ಹುಡುಕಬೇಕಿಲ್ಲ.
ಭಾರತದ ರಾಜಕೀಯ-ಸಾಮಾಜಿಕ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಅಡಗಿರುವುದು ಪ್ರಾಬಲ್ಯ ಮತ್ತು ಶ್ರೀಮಂತಿಕೆಗಳಲ್ಲಿ. ಈ ಪ್ರವೃತ್ತಿಗಳು ಚುನಾವಣೆಯಲ್ಲಿ ಪರಿಣಾಮ ಬೀರುವಂತೆಯೇ ಆಡಳಿತದಲ್ಲೂ ಬೀರುತ್ತವೆ. ಪ್ರಜಾತಂತ್ರ ವ್ಯವಸ್ಥೆಯ ಮೂಲ ಬೇರು ಚುನಾವಣೆ ಮತ್ತು ಸಾಮಾಜಿಕ ನ್ಯಾಯ. ಈ ಎರಡೂ ವಿದ್ಯಮಾನಗಳು ಭ್ರಷ್ಟರ ಕೈವಶವಾಗಿ ಹಲವು ದಶಕಗಳೇ ಕಳೆದಿವೆ. ಹಾಗಾಗಿಯೇ ಇಲ್ಲಿನ ಕಾನೂನುಗಳು ಪ್ರಬಲ ವರ್ಗಗಳ ಪರವಾಗಿಯೇ ಇರುತ್ತವೆ. ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ಮರೆತು ಸಮಾಜದ ಸ್ವಾಸ್ಥ್ಯವನ್ನೇ ಕೆಡಿಸುವ ವ್ಯಕ್ತಿಗಳು ಗಣ್ಯರೆನಿಸಿಕೊಳ್ಳುತ್ತಾರೆ. ಅಥವಾ ನಿರಂತರ ವಿಚಾರಣಾಧೀನರಾಗಿಯೇ ಉಳಿದುಬಿಡುತ್ತಾರೆ. ಆದರೆ ತಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಡುವ ಶೋಷಿತರು ಶಿಕ್ಷಾರ್ಹರಾಗಿಬಿಡುತ್ತಾರೆ. ಅಪರಾಧಿಗಳಾಗಿಬಿಡುತ್ತಾರೆ. ಮಿತ್ತಲ್ ಹೀರೋ ಆದರೆ ಆದಿವಾಸಿಗಳು ವಿಲನ್ಗಳಾಗುತ್ತಾರೆ.
ಈ ಪರಿಸ್ಥಿತಿಗೆ ಕಾರಣ ಪ್ರಜಾತಂತ್ರದ ಬುನಾದಿಯಾದ ಚುನಾವಣೆಗಳೇ ಎಂದು ಹೇಳಬೇಕಿಲ್ಲ. ಚುನಾವಣೆಗಳಲ್ಲಿ ಹರಿಯುವ ಕಪ್ಪುಹಣದ ಹೊಳೆಯೇ ಐಪಿಎಲ್ನಲ್ಲೂ ಹರಿಯುತ್ತದೆ. ಅದೇ ಬಂಡವಾಳ ವಿಶ್ವಕಪ್ ಕ್ರಿಕೆಟ್ನಲ್ಲೂ ಹರಿದಾಡುತ್ತದೆ. ಇದೇ ಧನಭಂಡಾರ ಬಾಲಿವುಡ್ನಲ್ಲೂ ರಾರಾಜಿಸುತ್ತದೆ. ಈ ಕಪ್ಪು ಹಣದ ಮೂಲ ಕೇವಲ ರಾಜಕಾರಣದಲ್ಲಿ ಇದೆ ಎಂದು ಭಾವಿಸುವುದು ತಪ್ಪಾಗುತ್ತದೆ. ಭಾರತದ ಸಾಮಾಜಿಕ ಜೀವನದಲ್ಲಿ ಭ್ರಷ್ಟಾಚಾರ ಮತ್ತು ಜಾತೀಯತೆ ಒಂದು ನಾಗರೀಕತೆಯಾಗಿಯೇ ಬೆಳೆದುಬಂದಿದ್ದು ಜನಮಾನಸದಲ್ಲಿ ಹಾಸುಹೊಕ್ಕಾಗಿದೆ. ಈ ಮೂಲ ಸೆಲೆಯನ್ನು ತನ್ನ ವಶಕ್ಕೆ ತೆಗೆದುಕೊಂಡು ಭ್ರಷ್ಟ ಪರಂಪರೆಯ ವ್ಯಾಪ್ತಿ ಮತ್ತು ವಿಸ್ತೀರ್ಣವನ್ನು ಹೆಚ್ಚಿಸುತ್ತಿರುವುದು ನವ ಉದಾರವಾದ ಮತ್ತು ಅದು ಸೃಷ್ಟಿಸುವ ಬಂಡವಾಳದ ಹೊರೆ. ಈ ಮೂಲ ಬೇರುಗಳನ್ನು ಕಿತ್ತೊಗೆಯದೆ ಲೋಕಪಾಲ್-ಲೋಕಾಯುಕ್ತ ಎಂಬ ಸಕರ್ಾರಿ ನಿಯಂತ್ರಿತ ಸಂಸ್ಥೆಗಳನ್ನೇ ಆಶ್ರಯಿಸುವುದು ಮೀನು ಹಿಡಿಯುವ ಆತುರದಲ್ಲಿ ತಿಮಿಂಗಿಲದ ಬಾಯಿಗೆ ಆಹಾರವಾದಂತಾಗುತ್ತದೆ.
ಅಣ್ಣಾ ಹಜಾರೆಯವರ ಆಂದೋಲನವನ್ನು ಸ್ವಾಗತಿಸುತ್ತಲೇ ದೇಶದ ಅಂತರಿಕ ವ್ಯವಸ್ಥೆಯನ್ನೇ ಶಿಥಿಲಗೊಳಿಸುತ್ತಿರುವ ಭ್ರಷ್ಟ ಪರಂಪರೆಯ ಮೂಲ ಬೇರುಗಳನ್ನು ಕಿತ್ತೊಗೆಯುವ ಸಂಕಲ್ಪ ಮಾಡದೆ ಹೋದಲ್ಲಿ, ನವ ಉದಾರವಾದದ ಭ್ರಮೆ ಈ ಜನಾಂದೋಲನವನ್ನೂ ನುಂಗಿಹಾಕಿಬಿಡಬಹುದು.







0 Comments